ಸೌಖ್ಯ ಸಂಧಾನ

Team Udayavani, Apr 24, 2019, 6:05 AM IST

ನನ್ನ ಪ್ರಶ್ನೆ ಏನೆಂದರೆ, ನನ್ನ ಗೆಳತಿಗೆ ಮದುವೆಯಾಗಿ ಒಂದು ವರ್ಷ 6 ತಿಂಗಳು ಆಗಿರುತ್ತದೆ. ಅವಳು ಇನ್ನೂ ಪ್ರಗ್ನೆಂಟ್‌ ಆಗಿಲ್ಲ. ಅದಕ್ಕೆ ಕಾರಣ ಸಂಭೋಗ ಸರಿಯಾಗಿ ನಡೆಸದೇ ಇರುವುದು. ಏಕೆಂದರೆ ಅವಳ ಜನನಾಂಗದ ಮಾರ್ಗವು ಚಿಕ್ಕದಾಗಿದ್ದು ಅವರಿಗೆ ಒಂದಾಗಲು ತುಂಬಾ ಕಷ್ಟವಾಗುತ್ತದಂತೆ. ಅದಕ್ಕೆ ಜೆಲ್‌ ಅಥವಾ ಬೇರೆ ಏನಾದರೂ ಪರಿಹಾರವಿದೆಯಾ ತಿಳಿಸಿ. ಇಲ್ಲದಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯಾ ಎನ್ನುವುದನ್ನೂ ದಯವಿಟ್ಟು ತಿಳಿಸಿ.
– ವೀಣಾ, ಉಡುಪಿ

ನಿಮ್ಮ ಗೆಳತಿಗೆ ಇನ್ನೂ ಮಿಲನ ಕ್ರಿಯೆಯೇ ಆಗಿಲ್ಲ ಎಂದಿದ್ದೀರಿ. ಕೆಲವರಿಗೆ ಬೆಳವಣಿಗೆಯಿಂದಲೇ ಗಟ್ಟಿ ಜನನಾಂಗದ ಪೊರೆ ಇರುತ್ತದೆ. ಅರಿವಳಿಕೆ ಕೊಟ್ಟು ಅದನ್ನು ಸರಿಮಾಡಬೇಕಾಗುತ್ತದೆ. ಕೆಲವರಲ್ಲಿ ಜನನಾಂಗ ಸೆಡೆತದ ತೊಂದರೆ ಇರುತ್ತದೆ. ಇದಕ್ಕೆ ಚಿಕಿತ್ಸೆ ಇದ್ದು ದಂಪತಿಗಳಿಬ್ಬರೂ ಒಮ್ಮೆ ವೈದ್ಯರನ್ನು ಭೆಟ್ಟಿಯಾಗಿ ಪರೀಕ್ಷೆ ಮಾಡಿಸಿ­ಕೊಳ್ಳಬೇಕು.

ನನಗೆ 54 ವರ್ಷ ಪ್ರಾಯ. ಪ್ರತಿ ತಿಂಗಳು ಮುಟ್ಟು ಆದಾಗ 8, 9 ದಿವಸ ಬ್ಲೀಡಿಂಗ್‌ ಆಗುತ್ತಿತ್ತು. ಮತ್ತೆ 12ನೇ ದಿವಸದಿಂದ ಪುನಃ ಬ್ಲೀಡಿಂಗ್‌ ಶುರುವಾಗುತ್ತಿತ್ತು. ವೈದ್ಯರಲ್ಲಿ ತೋರಿಸಿದಾಗ, ಅವರು ಮದ್ದು ಕೊಟ್ಟಾಗ ಕಮ್ಮಿ ಆಗುತ್ತಿತ್ತು. ಸ್ವಲ್ಪಸಮಯದ ಬಿಟ್ಟು ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅದಕ್ಕೆ ವೈದ್ಯರು ಗರ್ಭಕೋಶವನ್ನೇ ತೆಗೆಯಲಿಕ್ಕೆ ಹೇಳಿದ್ದರು. ಅವರು ಹೇಳಿದ ಹಾಗೆ ಆಪರೇಷನ್‌ ಮಾಡಿಸಿ ಗರ್ಭಕೋಶ ತೆಗೆಸಿದ್ದೇವೆ. ಆಪರೇಷನ್‌ ಆಗಿ 6 ತಿಂಗಳಾ­ಯಿತು. ಇನ್ನು ನಾನು ಭಾರದ ವಸ್ತು ಎತ್ತಬಹುದೇ? ನನ್ನ ದೈನಂದಿನ ಕೆಲಸ ಮಾಡಬಹುದೇ? ಹಾಗೆಯೇ ನನ್ನ ಪತಿಯವರಿಗೆ ಲೈಂಗಿಕ ಕ್ರಿಯೆ ನಡೆಸಲು ತುಂಬಾ ಆಸಕ್ತಿ. ನಾವು ಲೈಂಗಿಕ ಕ್ರಿಯೆ ನಡೆಸಿದರೆ ನನಗೆ ತೊಂದರೆ ಆಗಬಹುದೆ? ನನಗೆ ಬಿ.ಪಿ. ಮತ್ತು ಮಧುಮೇಹ ಇಲ್ಲ. ನನ್ನ ಪ್ರಶ್ನೆಗೆ ಉತ್ತರಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ.
– ಗಿರಿಜಾ, ಬೆಂಗಳೂರು

ನಿಮಗೆ ಆಪರೇಷನ್‌ ಆಗಿ 6 ತಿಂಗಳಾಗಿದೆ ಎಂದಿದ್ದೀರಿ. ಆದ್ದರಿಂದ ನೀವು ಎಲ್ಲ ಕೆಲಸವನ್ನೂ
ಸಹಜವಾಗಿ ಮಾಡಿಕೊಳ್ಳಬಹುದು. ಆಪರೇಷನ್‌ ಆದ ಎರಡು ತಿಂಗಳಿಂದಲೇ ಮತ್ತೆ ಲೈಂಗಿಕ ಕ್ರಿಯೆ ಪ್ರಾರಂಭಿಸಬಹುದು. ಈ ವಿಷಯಗಳನ್ನು ನಿಮ್ಮ ವೈದ್ಯರಲ್ಲಿ ಚರ್ಚಿಸಬೇಕು. ಮುಜುಗರಪಟ್ಟುಕೊಳ್ಳಬಾರದು. ನೀವು ಈಗ ಎಲ್ಲ ಕೆಲಸಗಳನ್ನೂ ಮಾಡಬಹುದು.

ನನ್ನ ವಯಸ್ಸು 35. ನನಗೆ ಡೈವೋರ್ಸ್‌ ಆಗಿ ಒಂದು ವರ್ಷವಾಯಿತು. ಕೆಲವೊಮ್ಮೆ ಮಿಲನ ಕ್ರಿಯೆ ನೆನಪಾಗಿ ನನ್ನ ಎದೆ ತುಂಬಾ ಭಾರವಾಗುತ್ತದೆ. ನಾನೇ ತುಂಬಾ ಒತ್ತಿಕೊಳ್ಳುತ್ತೇನೆ. ಆದರೂ ಸಮಾಧಾನ ಆಗುವುದಿಲ್ಲ. ಈಗ ಕೆಲವು ದಿನಗಳ ಹಿಂದೆ ನನ್ನ ಪ್ರೇಮಿಯೊಬ್ಬರ (ವಿವಾಹಿತ) ಜೊತೆ ಮಿಲನಕ್ರಿಯೆ ನಡೆಸಿರುವೆ. ಆದರೂ, ಸೆಕ್ಸ್‌ ವೇಳೆ ಎದೆ ತುಂಬಾ ಭಾರವಾಯಿತು. ಹೀಗೆ ಭಾರ ಅನಿಸಿದಾಗೆಲ್ಲ ಏನು ಮಾಡಲಿ ಮೇಡಂ? ನಾನು ಮಾಡಿದ್ದು ತಪ್ಪುಎನಿಸಿದರೂ ನನಗೆ ನನ್ನ ಪ್ರೇಮಿಯ ಸುಖ ಮತ್ತೆ ಮತ್ತೆ ಬೇಕೆನಿಸುತ್ತದೆ. ನನ್ನ ಈ ಸ್ಥಿತಿಗೆ ಪರಿಹಾರ ತಿಳಿಸುವಿರಾ?
– ಪ್ರತಿಮಾ, ಚಿಕ್ಕಮಗಳೂರು

ಲೈಂಗಿಕವಾಗಿ ಉದ್ರೇಕವಾದಾಗ ಸ್ತನಗಳು ಭಾರವಾ­ದಂತೆ ಮತ್ತು ಸ್ತನಗಳ ತೊಟ್ಟು ನಿಮಿರುವಂತಾಗುವುದು ಸಹಜ. ನಿಮಗೆ ಉದ್ರೇಕವೆನಿಸಿದಾಗ ಹಸ್ತಮೈಥುನ ಮಾಡಿಕೊಳ್ಳಬಹುದು. ಅಪಾಯಕಾರಿ ಲೈಂಗಿಕ ಸಂಪರ್ಕಗಳಿಗೆ ಒಳಗಾಗಬೇಡಿ. ವಿವಾಹಿತರೊಡನೆ ಸಂಬಂಧವಿಟ್ಟು­ಕೊಳ್ಳುವುದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತವೆ. ಸಾಧ್ಯ­ವಾದರೆ ಸರಿಯಾದ ಸಂಗಾತಿಗಾಗಿ ಹುಡುಕಿ ವಿವಾಹವಾಗಿ. ಅದರಿಂದ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.

ನನ್ನ ವಯಸ್ಸು 28 ವರ್ಷ. ಅವಿವಾಹಿತ, ನನ್ನ ಸಮಸ್ಯೆಯೇನೆಂದರೆ ನನ್ನ ಕೈಗಳ ಮೇಲ್ಭಾಗ ಮತ್ತು ಕೆಳಭಾಗ, 2 ಕಾಲುಗಳ ಪಾದ ಮತ್ತು ಮೇಲ್ಭಾಗಗಳಲ್ಲಿ ಮಾತ್ರ ತೀವ್ರವಾಗಿ ಯಾವಾಗಲೂ ಬೆವರುತ್ತದೆ. ಕಾಲುಗಳ ಬೆವರುವಿಕೆ ಕೆಟ್ಟ ವಾಸನೆಯನ್ನು ಬೀರುತ್ತದೆ. ಈ ಸಮಸ್ಯೆಯಿಂದ ನನ್ನ ವೃತ್ತಿಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಜೊತೆಗೆ ಮನೆಯವರೊಂದಿಗೆ ಮತ್ತು ಬಂಧುಮಿತ್ರರೊಡನೆ ಸರಿಯಾಗಿ ಬೆರೆಯಲು ಕೂಡಾ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಸುಮಾರು ವರ್ಷಗಳಿಂದಲೂ ಇದೆ. ಆದರೆ ಕಳೆದ 3- 4 ವರ್ಷಗಳಿಂದ ಹೆಚ್ಚಾಗಿದೆ. ಈ ಬಗ್ಗೆ ಕಳೆದ ವರ್ಷ ವೈದ್ಯರನ್ನು ಭೇಟಿಯಾದಾಗ ಹೃದಯಬಡಿತ ಸ್ವಲ್ಪಕಡಿಮೆ ಇದೆ ಎಂಬುದು ತಿಳಿದು ಬಂತು. ಹೃದ್ರೋಗತಜ್ಞರನ್ನು ಭೇಟಿಮಾಡಿ ಅವರು ಹೇಳಿದ Indernal- 10mg ÊÜáñÜᤠzebiforte ಎಂಬ ಎರಡು ಮಾತ್ರೆಗಳನ್ನು ಬೆಳಿಗ್ಗೆ, ರಾತ್ರಿ ಪ್ರತಿದಿನದಂತೆ ಕಳೆದ 1 ವರ್ಷದಿಂದ ತೆಗೆದುಕೊಳ್ಳುತ್ತಿದ್ದೇನೆ. ಆದರೂ ಇದರಿಂದ ಯಾವುದೇ ವ್ಯತ್ಯಾಸ ನನ್ನಲ್ಲಿ ಕಾಣುತ್ತಿಲ್ಲ. ಈ ಸಮಸ್ಯೆಯಿಂದ ನಾನು ಮಾನಸಿಕವಾಗಿ ತುಂಬಾ ಕುಗ್ಗಿರುತ್ತೇನೆ. ಇದಕ್ಕೆ ಯಾವುದಾದರೂ ಒಳ್ಳೆಯ ಮಾತ್ರೆ ಅಥವಾ ಔಷಧವಿದ್ದರೆ ತಿಳಿಸಿ ಮತ್ತು ಯಾವ ತಜ್ಞರನ್ನು ಭೇಟಿಮಾಡಬೇಕೆಂದು ತಿಳಿಸಿ.
– ಸತೀಶ್‌, ಮಂಗಳೂರು
ನಿಮಗೆ ಬಹುಶಃ ಆತಂಕದ (Anxiety) ತೊಂದರೆ ಇರಬಹುದು. ನೀವು ಯಾವುದಕ್ಕಾದರೂ ಆತಂಕ ಪಟ್ಟುಕೊಳ್ತೀರಾ? ಕೆಲಸಗಳನ್ನು ಸರಿಯಾಗಿ ಯೋಚಿಸಿ ಮನಸ್ಸು ಕೊಟ್ಟು ಮಾಡಿ. ಕೈಕಾಲುಗಳನ್ನು ಆಗಾಗ ತೊಳೆದುಕೊಳ್ಳಿ. ಸಾಧ್ಯವಾದರೆ Psychiatrist ಬಳಿ ಒಂದು ಸಲ ಚಿಕಿತ್ಸೆ ತೆಗೆದುಕೊಳ್ಳಬಹುದು.

— ಡಾ. ಪದ್ಮಿನಿ ಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ