ಅಡುಗೆ ಡಬ್ಬಿಯ ಲಹರಿ


Team Udayavani, Dec 19, 2018, 6:00 AM IST

35.jpg

ಹೆಂಗಸರ ಕುಶಲೋಪರಿಯಲ್ಲಿ ಅಡುಗೆಯ ವಿಷಯ ಇಣುಕದಿದ್ದರೆ ಏನೋ ಗಹನವಾದ ಮಾತುಕತೆ ನಡೆಯುತ್ತಿದೆ ಎಂದೇ ಅರ್ಥ! ಅಡುಗೆಯನ್ನು ಮೆಚ್ಚಿಕೊಂಡವರು, ಅಡುಗೆಯಿಂದಾಗಿ ಇತರರ ಮೆಚ್ಚುಗೆ ಪಡೆದುಕೊಂಡವರ ನಡುವೆ “ಅಡುಗೆಯೇ? ಅಯ್ಯೋ, ಕರ್ಮ’ ಎನ್ನುವ ನನ್ನಂಥವರು ಕೆಲವರಾದರೂ ಇರುತ್ತಾರೆ…

ನನ್ನ ಅಕ್ಕ ಫೋನ್‌ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್‌ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್‌ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್‌ ವೆರೈಟಿಗಳ ಬದಲು ಇಂಟರ್ನೆಟ್‌ನಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ, ಟಿವಿ ಚಾನೆಲ್‌ಗ‌ಳ ಅಡುಗೆ ಕಾರ್ಯಕ್ರಮಗಳ ರೆಸಿಪಿಗಳನ್ನು ಬರೆದಿಟ್ಟುಕೊಂಡು ವೈವಿಧ್ಯಮಯ ಅಡುಗೆ ತಯಾರಿಸುತ್ತಿದ್ದಳು. ಜೊತೆಗೆ, ಅದನ್ನು ಮಾಡುವ ಕ್ರಮವನ್ನು ನನಗೆ ವಿವರಿಸಿ, “ನೀನೂ ಟ್ರೈ ಮಾಡು’ ಎನ್ನುತ್ತಿದ್ದಳು. ಗೊತ್ತಿರುವ ಅಡುಗೆ ಮಾಡಲು ಸಮಯವಿಲ್ಲ ಎನ್ನುವ ಸ್ಥಿತಿಯಲ್ಲಿರುವ ನಾನು, “ಏನಾದರೊಂದು ಅಡುಗೆ ಮಾಡಿ, ನನ್ನ ಮೂವರು ಪುಟ್ಟ ಮಕ್ಕಳಿಗೆ ತಿನ್ನಿಸಿ ಶಾಲೆಗೆ ಹೊರಡಿಸಿ, ನಾನೂ ಸಮಯಕ್ಕೆ ಸರಿಯಾಗಿ ಹೊರಡುವಂತಾದರೆ ಸಾಕು’ ಎಂದು ಬೇಡುತ್ತಿ¨ªೆ. 

ಅವಳ ಮಾತಿಗೆ “ಹಾ, ಹೂಂ’ ಎಂದು ಫೋನಿಟ್ಟರೆ ತಂಗಿಯ ಫೋನ್‌ ಬಂತು. ಅವಳಿಗೂ ಹೀಗೇ ಏನಾದರೊಂದು ಹೊಸರುಚಿ ಪರೀಕ್ಷಿಸುವ ಹುಚ್ಚು. ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಇವರಿಬ್ಬರೂ ಹೀಗೇ ಮನೆಯನ್ನು ಲಕಲಕ ಹೊಳೆಯುವಂತಿಟ್ಟು, ರುಚಿರುಚಿಯಾದ ಅಡುಗೆಯನ್ನು ಖುಷಿಯಿಂದ ಮಾಡುತ್ತಾ ತಮ್ಮ ಗಂಡ, ಅವರ ಗೆಳೆಯರು, ನೆಂಟರು ಹೀಗೇ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದರು. ಶಿಕ್ಷಕ ವೃತ್ತಿಯಲ್ಲಿರುವ ನಾನು ಹಾಗೂ ನನ್ನ ದೊಡ್ಡಕ್ಕನ ಪಾಡು ನಾಯಿಪಾಡು. ಹಾಗೂ ಹೀಗೂ ಏಗುತ್ತಾ ಜಟ್‌ಪಟ್‌ ಎಂದು ಅಡುಗೆ ಮಾಡಿ, ಉಳಿದ ಮನೆಕೆಲಸ ಮುಗಿಸಿ ಕೆಲಸಕ್ಕೆ ಹೋಗುವ ಧಾವಂತ. 

ಇತ್ತೀಚೆಗೆ ನನ್ನ ಅಕ್ಕನಿಗೆ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ಮಕ್ಕಳೊಂದಿಗೆ ಮುಂಬೈನಿಂದ ಬೆಂಗಳೂರಿಗೆ ಶಿಫr… ಆಗಿ ಕೆಲಸಕ್ಕೆ ಸೇರಿದ ಅಕ್ಕನಿಗೆ ಈಗ ಕೆಲಸದ ಒತ್ತಡ ಹಾಗೂ ಇತರ ಕಾರಣಗಳಿಂದ ಅಡುಗೆಯ ಮೇಲೆ ಮೊದಲಿದ್ದ ಆಸಕ್ತಿ ಹೊರಟು ಹೋಗಿದೆ. ಈಗ ಅವಳ ಫೋನ್‌ ಮಾತುಕತೆಯಲ್ಲಿ ಅಡುಗೆಯ ಪ್ರಸ್ತಾಪವೇ ಇಲ್ಲ. ನನ್ನ ತಂಗಿಗೂ ಎರಡನೇ ಮಗು ಹುಟ್ಟಿತು. ಇಬ್ಬರು ಮಕ್ಕಳ ಲಾಲನೆ- ಪಾಲನೆ, ಮನೆಕೆಲಸ, ಜೊತೆಗೆ ಗಂಡನ ಕಚೇರಿಯ ಕೆಲಸಗಳಲ್ಲಿ ಸಹಕಾರ ಇಷ್ಟಾದಾಗ ಅವಳಿಗೂ ಅಡುಗೆಯ ಮೇಲೆ ಮೊದಲಿದ್ದ ಅದಮ್ಯ ಆಸಕ್ತಿ ಸ್ವಲ್ಪ ಕಡಿಮೆಯಾಯಿತು. ನನ್ನ ತವರು ಮನೆಯಲ್ಲಿ ನನ್ನ ಅಮ್ಮನಿಗೆ ಅಡುಗೆ ಕೋಣೆಯಲ್ಲಿ ಕೆಲಸವಿಲ್ಲದಿದ್ದ ಸಮಯವೇ ವಿರಳ. ನನ್ನ ತವರೂರಲ್ಲಿರುವ ನೆಂಟರಿಷ್ಟರು, ನೆರೆಯವರ ಮನೆಗಳಲ್ಲೂ ಹೆಂಗಸರು ದಿನವಿಡೀ ತರಹೇವಾರಿ ಅಡುಗೆಗಳ ತಯಾರಿಯಲ್ಲಿ ಮುಳುಗಿರುತ್ತಿದ್ದುದನ್ನು ಬಹಳಷ್ಟು ಸಾರಿ ನೋಡಿ¨ªೆ. ಅವರಿಗೆಲ್ಲ ಅಡುಗೆ, ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ. ಅವರ ಐಡೆಂಟಿಟಿಯೇ ಅಡುಗೆಯೊಂದಿಗೆ ಥಳುಕು ಹಾಕಿಕೊಂಡಿದೆ ಎನಿಸುತ್ತದೆ. ನಮ್ಮ ಊರಲ್ಲಿ (ಬಹುಶಃ ಎಲ್ಲ ಊರುಗಳಲ್ಲೂ) ಹೆಂಗಸರ ಕುಶಲೋಪರಿಯಲ್ಲಿ ಅಡುಗೆಯ ವಿಷಯ ಇಣುಕದಿದ್ದರೆ ಅದು ಏನೋ ಗಹನವಾದ ಮಾತುಕತೆ ಎಂದೇ ಅರ್ಥ. ಅಡುಗೆಯನ್ನು ಮೆಚ್ಚಿಕೊಂಡವರು, ಅಡುಗೆಯಿಂದಾಗಿ ಇತರರ ಮೆಚ್ಚುಗೆ ಪಡೆದುಕೊಂಡವರ ನಡುವೆ “ಅಡುಗೆಯೇ? ಅಯ್ಯೋ, ಕರ್ಮ’ ಎನ್ನುವ ನನ್ನಂಥವರು ಕೆಲವರಾದರೂ ಇರುತ್ತಾರೆ.

ಅಡುಗೆಯ ಬಗ್ಗೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ವಿಶೇಷ ಆಸಕ್ತಿ, ಅಭಿರುಚಿ ಇರುತ್ತದೆ. ಕೆಲವು ಗಂಡು ಮಕ್ಕಳಿಗೂ ಅಡುಗೆ ಮಾಡುವುದೆಂದರೆ ಇಷ್ಟ. ನಮ್ಮಲ್ಲಿ ಬಹುತೇಕರು ಸಣ್ಣವರಿರುವಾಗ ಅಡುಗೆಯಾಟ ಆಡಿದವರೇ. ಆದರೆ, ಅಡುಗೆಯ ಬಗೆಗಿದ್ದ ಆ ತೀವ್ರ ಆಸಕ್ತಿ ಹೊರಟು ಹೋಗಲು ಕಾರಣವಾದದ್ದು ಜಂಜಡದ ಜೀವನ. ಕೆಲಸವೂ ಬೇಕು, ಕೌಟುಂಬಿಕ ಜೀವನವೂ ಬೇಕು ಎಂದು ಎರಡನ್ನೂ ಸಂಭಾಳಿಸಲು ಹೆಣಗಾಡುವಾಗ, ಸಮಯವೆಂಬುದು ಪ್ರಪಂಚದ ಇನ್ಯಾವುದೇ ವಸ್ತುವಿಗಿಂತ ಅಮೂಲ್ಯವಾದದ್ದು ಅನಿಸುವಾಗ ಅಡುಗೆ ಖುಷಿ ಕೊಡಲು ಹೇಗೆ ಸಾಧ್ಯ? ಹಾಗಾಗಿ ಉದ್ಯೋಗಿ ಮಹಿಳೆಯರಿಗೆ ಅಡುಗೆಯೆಂಬುದು ಯಾವತ್ತಿಗೂ ಒಂದು ಕರ್ಮ. ಸಮಯವೊಂದಿದ್ದರೆ ಬಹುಶಃ ಉದ್ಯೋಗಕ್ಕೆ ಹೋಗುವ ಮಹಿಳೆಯರೂ ಅಡುಗೆ ಕೆಲಸವನ್ನು ಇಷ್ಟಪಟ್ಟಾರು. ರಜಾದಿನಗಳಲ್ಲಿ ನಮ್ಮಂಥವರು ಮನಸ್ಸಿಟ್ಟು ಅಡುಗೆ ಕೆಲಸದಲ್ಲಿ ನಿರತರಾಗುತ್ತೇವೆ. ಉಳಿದ ದಿನಗಳಲ್ಲಿ ಒಂದು ದಿನದ ಕೆಲಸ ಮುಗಿಸುವಾಗ ಪುನಃ ಮರುದಿನಕ್ಕೆ ಏನು ಮಾಡುವುದು, ಸುಲಭದ ಅಡುಗೆ ಯಾವುದು ಎಂಬುದರತ್ತ ನಮ್ಮ ಚಿತ್ತ ಹರಿಯುತ್ತದೆ.

ಮನೆಯ ಸದಸ್ಯರೂ ಅಡುಗೆಮನೆ ನಿರ್ವಹಣೆಯಲ್ಲಿ ಕೈಜೋಡಿಸುವುದರಿಂದ ಉದ್ಯೋಗಕ್ಕೆ ಹೋಗುವ ಮಹಿಳೆಗೆ ಅದೆಷ್ಟೋ ಸಹಾಯವಾಗುತ್ತದೆ. ನನ್ನ ಗಂಡ ಒಮ್ಮೊಮ್ಮೆ ಅಡುಗೆ ಕೆಲಸ ತಾವಾಗಿ ಮಾಡುವುದುಂಟು ಅಥವಾ ನನಗೆ ಸಣ್ಣಪುಟ್ಟ ಸಹಾಯ ಮಾಡುವುದುಂಟು. ಅವರಾಗಿ ಅಡುಗೆ ಮಾಡಿದರೆಂದರೆ ನನಗೆ ಅಡುಗೆ ಮನೆಯನ್ನು ಪೂರ್ವಸ್ಥಿತಿಗೆ ತರುವುದೂ ಒಂದು ಕೆಲಸವಾಗುತ್ತದೆ. ಈರುಳ್ಳಿ ಸಿಪ್ಪೆ, ಇತರ ತರಕಾರಿಗಳನ್ನು ಕತ್ತರಿಸಿದಾಗ ಉಳಿದ ಕಸ ಎÇÉಾ ಅÇÉೇ ಬಿದ್ದಿರುತ್ತದೆ. ಡಬ್ಬಗಳೆಲ್ಲ ಸ್ಥಾನಪಲ್ಲಟವಾಗಿರುತ್ತವೆ. ಆದರೂ ಅವರ ಪುಟ್ಟ ಸಹಾಯದಿಂದಲೂ ನನಗೆ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಸಿಗುತ್ತದೆ. ಮನೆಯ ಇತರ ಸದಸ್ಯರ ಅಳಿಲು ಸೇವೆ ಇದ್ದರೆ ಅಡುಗೆ ಎಂಬ ಕರ್ಮ ಎಲ್ಲಾ ಹೆಂಗಸರಿಗೂ ಖುಷಿ ತರಬಲ್ಲುದು. 

ಓ ಗಂಡಸರೇ, ಅಡುಗೆ ಮಾಡಿ…
ಅಡುಗೆ ಮನೆಯ ಕೆಲಸವೆಂದರೆ ಕೇವಲ ಬೇಯಿಸುವುದಷ್ಟೇ ಅಲ್ಲ. ತರಕಾರಿಗಳನ್ನು ಹೆಚ್ಚುವುದು, ಮಸಾಲೆ, ಹಿಟ್ಟು ಇತ್ಯಾದಿಗಳನ್ನು ತಯಾರಿಸುವುದು, ಪಾತ್ರೆ ತೊಳೆಯುವುದು, ವಸ್ತುಗಳನ್ನು ಒಪ್ಪ ಓರಣವಾಗಿಡುವುದು, ಗುಡಿಸಿ, ಒರೆಸುವುದು, ಮಾಡಿಟ್ಟ ಅಡುಗೆಯನ್ನು ಬಡಿಸುವುದು- ಹೀಗೆ ಅಡುಗೆ ಕೆಲಸದ ಹಿಂದೆಯೇ, ಹನುಮಂತನ ಬಾಲದಂತೆ ನೂರಾರು ಕೆಲಸಗಳಿರುತ್ತವೆ.
ಅಷ್ಟಕ್ಕೂ ಈ ಅಡುಗೆ ಕೆಲಸ ಹೆಂಗಸರಿಗೇ ಮೀಸಲು ಎಂದು ಜನ ಭಾವಿಸುವುದೇಕೋ? ಮಹಿಳೆ ಉದ್ಯೋಗಕ್ಕೂ ಹೋಗಿ, ಕುಟುಂಬದ ಆರ್ಥಿಕ ವ್ಯವಹಾರಗಳಲ್ಲೂ ಪಾಲುದಾರಳಾಗುವಾಗ ಗಂಡಸರು ಮನೆಯ ಅಡುಗೆ ಕೆಲಸದಲ್ಲಿ ಪಾಲುದಾರರಾಗಬೇಕಲ್ಲವೇ?

ದೀಪಿಕಾ ಅಡುಗೆ ಪ್ರಸಂಗ

“ಗಂಡನ ಹೃದಯದ ಬಾಗಿಲು ಆತನ ಹೊಟ್ಟೆಯಲ್ಲಿರುತ್ತದೆ’ ಎಂಬ ಮಾತಿದೆ. ಅದಕ್ಕೇ ಇರಬೇಕು, ಮದುವೆಗೆ ಸಿದ್ಧವಾಗಿರೋ ಎಲ್ಲ ಹುಡುಗಿಯರಿಗೆ ಮೊದಲು ಎದುರಾಗೋ ಪ್ರಶ್ನೆಯೇ, “ನಿಂಗೆ ಅಡುಗೆ ಮಾಡೋಕೆ ಬರುತ್ತಾ?’. ಈ ಪ್ರಶ್ನೆ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಹಸೆಮಣೆಗೇರಿದ ದೀಪಿಕಾ ಪಡುಕೋಣೆಯ ಬಗ್ಗೆಯೂ ಹಲವರು ಈ ಕುತೂಹಲ ವ್ಯಕ್ತಪಡಿಸಿದ್ದರು. ದೀಪಿಕಾ ಕೈ ಅಡುಗೆ ಸವಿಯೋ ಭಾಗ್ಯ ರಣವೀರ್‌ ಸಿಂಗ್‌ಗೆ ಇದೆಯಾ ಅನ್ನೋದು ಎಲ್ಲರ ಸಹಜ ಕುತೂಹಲ. ಆದರೆ, ದೀಪಿಕಾ ನಟನೆಯಲ್ಲಿ ಎಷ್ಟು ಪರಿಣತೆಯೋ, ಅಡುಗೆಯಲ್ಲೂ ಅಷ್ಟೇ ಜಾಣೆ.

ತನ್ನ ಮೊದಲ ಹಾಲಿವುಡ್‌ ಸಿನಿಮಾ “ಎಕ್ಸ್‌ಎಕ್ಸ್‌ಎಕ್ಸ್‌: ರಿಟರ್ನ್ ಆಫ್ ಕ್ಸಾಡರ್‌ ಕೇಜ್‌’ ಚಿತ್ರೀಕರಣದ ವೇಳೆ ದೀಪಿಕಾ ನಾಲ್ಕು ತಿಂಗಳು ಕೆನಡಾದಲ್ಲಿ ಇದ್ದರು. ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಾಡಿಗೆಗೆ ಇದ್ದ ದೀಪಿಕಾ, ಶೂಟಿಂಗ್‌ ಮುಗಿಸಿ ಮನೆಗೆ ಬಂದ ಮೇಲೆ ಸಾಮಾನ್ಯಳಂತೆ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದರಂತೆ. ಕೆನಡಾದಲ್ಲಿದ್ದ ಇಂಡಿಯನ್‌ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನವು, ಕೇವಲ ಉತ್ತರ ಭಾರತೀಯ ಶೈಲಿಗೆ ಸೀಮಿತವಾಗಿದ್ದವು. ಹಾಗಾಗಿ ತನ್ನಿಷ್ಟದ ಸೌತ್‌ ಇಂಡಿಯನ್‌ ಖಾದ್ಯಗಳನ್ನು ಕೈಯಾರೆ ಮಾಡಿ ಸವಿಯುತ್ತಿದ್ದೆ ಎಂದು ದೀಪಿಕಾ ಖುಷಿಯಿಂದ ಹೇಳಿಕೊಂಡಿದ್ದಾರೆ. ನನ್ನ ದೇಹ ಪ್ರಕೃತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಯಾವ ಸ್ಥಳದಲ್ಲಿದ್ದಾಗ ಯಾವ ಆಹಾರವನ್ನು ಸೇವಿಸಿದರೆ ತೂಕದಲ್ಲಿ ಏರುಪೇರಾಗುತ್ತದೆ ಅಂತಲೂ ಗೊತ್ತಿದೆ. ಆದ್ದರಿಂದ, ನನ್ನ ಡಯಟ್‌ನ ಪ್ರಕಾರವೇ ಊಟ- ತಿಂಡಿ ಮಾಡುತ್ತೇನೆ ಎನ್ನುವ ದೀಪಿಕಾಗೆ, ದಕ್ಷಿಣ ಭಾರತೀಯ ಶೈಲಿಯ ಆಹಾರಗಳೆಂದರೆ ಪಂಚಪ್ರಾಣವಂತೆ. ಯಾವುದೇ ದೇಶದಲ್ಲಿದ್ದರೂ, ನಾಲಿಗೆ ಸೌತ್‌ ಇಂಡಿಯನ್‌ ಆಹಾರಕ್ಕಾಗಿ ಹಂಬಲಿಸುತ್ತದೆ. ಆಗೆಲ್ಲಾ ಸೌಟು ಹಿಡಿದು ಬಾಣಸಿಗನ ಪಾತ್ರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ದೀಪಿಕಾ.

ಹಾಗಾದ್ರೆ, ರಣವೀರ್‌ ಸಿಂಗ್‌ಗೆ ಉಪ್ಪಿಟ್ಟು, ದೋಸೆ, ಅನ್ನ- ರಸಂ ಸವಿಯುವ ಅದೃಷ್ಟ ಸಿಕ್ಕಿದೆ ಅಂತಾಯ್ತು. ಮನೆಗೆ ಸ್ನೇಹಿತರು- ಬಂಧುಗಳು ಬಂದಾಗ ಅವರಿಗೆ ಸ್ವಯಂ ಪಾಕದ ರುಚಿ ಉಣಬಡಿಸುವ ದೀಪಿಕಾ, ಸೆಲೆಬ್ರಿಟಿಯಾದರೂ ಪಕ್ಕಾ ಗೃಹಿಣಿಯೂ ಆಗಬಲ್ಲರು ಎಂಬುದರಲ್ಲಿ ಅನುಮಾನವಿಲ್ಲ. ದೀಪಿಕಾ ಅಡುಗೆಯನ್ನೂ ಒಂದು ಕಲೆಯಂತೆ, ಎಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ ಅಂದರೆ, 2016ರಲ್ಲಿ ಇಟಲಿ ಪ್ರವಾಸಕ್ಕೆ ಹೋದಾಗ ತನ್ನ ತಂಗಿ ಜೊತೆ, ಒಂದು ವಾರದ ಇಟಾಲಿಯನ್‌ ಅಡುಗೆ ತರಗತಿಗೂ ಸೇರಿದ್ದರು. 

ಅದೇನೇ ಇರಲಿ, “ಹೆಂಡ್ತಿಗೆ ಅಡುಗೆ ಬರೋಲ್ಲ’ ರಣವೀರ್‌ ಎಲ್ಲೂ ದೂರುವ ಹಾಗಿಲ್ಲ. ದೀಪಿಕಾಳ ಕೈಚಳಕಕ್ಕೆ ಆತ ಈಗಾಗಲೇ ಫಿದಾ ಆಗಿದ್ದಿರಲೂಬಹುದು.

– ಜೆಸ್ಸಿ ಪಿ.ವಿ.

ಟಾಪ್ ನ್ಯೂಸ್

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.