ರೆಪ್ಪೆ ಇದ್ದರೆ ಸಾಕೇ… ಕಣ್ಣಂಚಿನ ಕೃತಕ ಬಳ್ಳಿ…

Team Udayavani, May 29, 2019, 6:12 AM IST

ಗಾಢ ಕಣ್ರೆಪ್ಪೆ ಇರುವ ಹುಡುಗಿಯರು ಮುದ್‌ಮುದ್ದಾಗಿ ಕಾಣುತ್ತಾರೆ. ಕಣ್ರೆಪ್ಪೆಗಳು ದಟ್ಟವಾಗಿಲ್ಲದವರು ಚಿಂತಿಸುವ ಅಗತ್ಯವಿಲ್ಲ, ಅವರಿಗಾಗಿಯೇ ಕೃತಕ ಕಣ್ರೆಪ್ಪೆಗಳೂ ಇವೆ!

ಕವಿಗಳ ಹೋಲಿಕೆಯಲ್ಲಿ ಬರುವ ಕಮಲದಂಥ ಕಣ್ಣುಗಳು ಯಾರಿಗೆ ಬೇಕಿಲ್ಲ? ಯಾಕಂದ್ರೆ, ಕಣ್ಣುಗಳು ಮನಸ್ಸಿನ ಕನ್ನಡಿಯಷ್ಟೇ ಅಲ್ಲ, ಹೆಣ್ಣಿನ ಅಂದದ ಮಾನದಂಡವೂ ಹೌದು. ಗಾಢ ಕಣ್ರೆಪ್ಪೆ ಇರುವ ಹುಡುಗಿಯರ ಕಣ್ಣು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ, ಉಳಿದವರ ಪಾಡು? ಅವರಿಗಾಗಿ, ಕೃತಕ ಕಣ್ರೆಪ್ಪೆಗಳು ಇದ್ದೇ ಇವೆಯಲ್ಲ. ಅದನ್ನು ಬಳಸುವ ವಿಧಾನ ತಿಳಿದಿದ್ದರಾಯ್ತು.

– ಕೃತಕ ಕಣ್ರೆಪ್ಪೆಗಳಲ್ಲಿ ಮೂರು ವಿಧಗಳಿವೆ: ಫ‌ುಲ್‌ ಲ್ಯಾಷಸ್‌, ಹಾಫ್ ಸ್ಟ್ರೈಪ್ಸ್‌ ಮತ್ತು ಇಂಡಿವಿಷುವಲ್‌ ಲ್ಯಾಷಸ್‌.

– ಕೃತಕ ಕಣ್ರೆಪ್ಪೆಗಳನ್ನು ನಿಮ್ಮ ಕಣ್ರೆಪ್ಪೆಯ ಆಕಾರಕ್ಕೆ ತಕ್ಕಂತೆ ಕತ್ತರಿಸಿಕೊಂಡು, ಗಮ್‌ (ಅಂಟು) ಅನ್ನು ಅದರ ಮೇಲೆ ಹಚ್ಚಿ.

– ನಂತರ ನಿಧನವಾಗಿ ಕೃತಕ ರೆಪ್ಪೆಗಳನ್ನು ಕಣ್ಣಿನ ಮೇಲೆ ಅಂಟಿಸಿ.

– ಉತ್ತಮ ಗುಣಮಟ್ಟದ ಅಂಟನ್ನು ಬಳಸಿದರೆ ರೆಪ್ಪೆಗಳು ಜಾರುವ ಭಯವಿರುವುದಿಲ್ಲ.

– ಕೃತಕ ರೆಪ್ಪೆಗಳನ್ನು ಅಂಟಿಸಿದ ನಂತರ, ಅದರ ಮೇಲೆ ಐ ಲೈನರ್‌ ಹಚ್ಚಿಕೊಳ್ಳಿ. ಅದು ಕಣ್ಣುಗಳಿಗೆ ಸಾಫ್ಟ್ ಲುಕ್‌ ಕೊಡುತ್ತದೆ.

– ಈಗ ರೆಪ್ಪೆಯ ಬುಡಕ್ಕೆ (ಲ್ಯಾಷ್‌ ಲೈನ್‌) ಮೊದಲಿಗೆ ತೆಳುವಾಗಿ, ನಂತರ ಗಾಢವಾಗಿ ಕಲರ್‌ ಪೆನ್ಸಿಲ್‌ನಿಂದ ತೀಡಿ. ಇದು ಕಣ್ಣಿಗೆ ನೈಸರ್ಗಿಕ ಹೊಳಪು ನೀಡುತ್ತದೆ.

– ನಿಮ್ಮ ಡ್ರೆಸ್‌ನ ಕಲರ್‌ನದ್ದೇ ಪೆನ್ಸಿಲ್‌ ಬಳಸಿದರೆ, ಫ್ಯಾಷನೆಬಲ್‌ ಆಗಿ ಕಾಣುವಿರಿ.

– ಐ ಶ್ಯಾಡೋ ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಬ್ರಷ್‌ನ ಮೂಲಕವೂ ಹಚ್ಚಬಹುದು.

– ಕಣ್ಣಿನ ರೆಪ್ಪೆಗಳಿಗೆ ಉತ್ತಮ ಆಕಾರ ಕೊಡಲು ಮಸ್ಕರವನ್ನೂ ಬಳಸಬಹುದು.

– ಮಸ್ಕರವನ್ನು ರೆಪ್ಪೆಗಳ ತುದಿಗೆ ಮಾತ್ರ ಹಚ್ಚಬೇಕು.ರೆಪ್ಪೆಯ ಬುಡ ಅತಿ ಸೂಕ್ಷ್ಮವಾಗಿರುವುದರಿಂದ ಸೋಂಕು ಉಂಟಾಗುವ ಅಪಾಯವಿರುತ್ತದೆ.

– ಡ್ರೆಸ್‌ಗೆ ಹೊಂದುವ ಬಣ್ಣದ ಲೆನ್ಸ್‌ ಅನ್ನು ಕೂಡಾ ಧರಿಸಬಹುದು.

– ಲೆನ್ಸ್‌ಗಳನ್ನು ಮೆಡಿಕಲ್‌ ಶಾಪ್‌ನಿಂದ ಖರೀದಿಸುವುದು ಉತ್ತಮ.

– ಕಣ್ಣಿನ ಮೇಕಪ್‌ ತೆಗೆಯುವ ಮುನ್ನ ಮೊದಲು ಲೆನ್ಸ್‌ ತೆಗೆದು, ನಂತರ ಇತರ ಮೇಕಪ್‌ ತೆಗೆಯಬೇಕು.

– ಮೇಘನಾ, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಟ್ಟೆಯ ಯಾವುದಾದರೂ ಒಂದು ಮೂಲೆ ಅಥವಾ ತುದಿಗೆ ದಾರ ಕಟ್ಟಿ, ಬಟ್ಟೆಯನ್ನು ಬಣ್ಣದಲ್ಲಿ ಅದ್ದಿದರೆ, ಬಟ್ಟೆ ಒಣಗಿದ ಬಳಿಕ, ಕಟ್ಟಿದ ಆ ದಾರವನ್ನು ತೆಗೆದಾಗ ಬಟ್ಟೆಯಲ್ಲಿ...

  • ಸ್ವಚ್ಛ ಭಾರತದ ಕೂಗು ಎಲ್ಲೆಡೆ ಎದ್ದಿರುವುದು ಗೊತ್ತೇ ಇದೆ. ಪ್ರಧಾನಿಯವರೇ ಪೊರಕೆ ಹಿಡಿದು ರಸ್ತೆಗಿಳಿದ ಮೇಲಂತೂ, ಎಲ್ಲರೂ ಸ್ವಚ್ಛತೆಯ ಜಪ ಮಾಡುತ್ತಿದ್ದಾರೆ....

  • "ಅಮ್ಮಾ, ತಲೆಯೊಳಗೆ ಏನೋ ಹರಿದಾಡಿದಂಗೆ ಆಗ್ತಾ ಇದೆ...' ಅಂತ ಮಗಳೇನಾದ್ರೂ ರಾಗ ಎಳೆದ್ರೆ ಅದನ್ನ ಕಡೆಗಣಿಸದೆ, ತಕ್ಷಣ ಕಾರ್ಯೋನ್ಮುಖರಾಗಿ. ಇಲ್ಲದಿದ್ದರೆ ಮಗಳ ತಲೆ...

  • "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ' ಎಂಬ ಗಾದೆಯಿದೆ. "ಸಾಸ್‌ ಭೀ ಕಭಿ ಬಹೂ ಥೀ' ಅಂತ ಹಿಂದಿಯಲ್ಲೂ ಹೇಳುತ್ತಾರೆ. ಎರಡರ ಅರ್ಥವೂ ಒಂದೇ! ಆದರೆ, ಸಂಬಂಧ ಸುಧಾರಿಸಲು...

  • ವಯಸ್ಸು ಆಗುತ್ತಾ ಹೋದರೂ ಚರ್ಮ ನೆರಿಗೆಗಟ್ಟಬಾರದು, ದೇಹಾಕೃತಿ ದಪ್ಪ ಆಗಬಾರದು. ಸದಾ ಸ್ಲಿಮ್‌ ಅಂಡ್‌ ಟ್ರಿಮ್‌ ಆಗಿರಬೇಕು ಎಂಬುದು ಎಲ್ಲ ಹೆಂಗಸರ ಆಸೆ. ಹಾಗಾದ್ರೆ,...

ಹೊಸ ಸೇರ್ಪಡೆ