ನಾರಿ ಮೆಚ್ಚಿದ ಸ್ಯಾರಿ

Team Udayavani, Oct 2, 2019, 3:06 AM IST

ಹೆಣ್ಣು ಮತ್ತು ಹೂವು ಇವೆರಡೂ ಜೋಡಿ ಪದಗಳು. ಚೆಲುವು ಹೂವಿನಧ್ದೋ, ಹೂವು ಮುಡಿದ ಹೆಣ್ಣಿನಧ್ದೋ ಎಂಬುದು ಕವಿಗಳ ಜಿಜ್ಞಾಸೆ. ಹೀಗೆ ಹೆಣ್ಣಿನೊಂದಿಗೆ ನಡೆದು ಬಂದ ಹೂವು, ಫ್ಯಾಷನ್‌ ಲೋಕದಲ್ಲೂ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದೆ. ಹೂವುಗಳಿಲ್ಲದ ಜಗತ್ತನ್ನು ಹೇಗೆ ಊಹಿಸಲು ಸಾಧ್ಯವಿಲ್ಲವೋ, ಹಾಗೆಯೇ, ಫ್ಲೋರಲ್‌ ಪ್ರಿಂಟ್‌ ಇಲ್ಲದ ಫ್ಯಾಷನ್‌ ಲೋಕವನ್ನೂ ಊಹಿಸಲಾಗದು. ಯಾಕಂದ್ರೆ, ಹೆಣ್ಣು ಮೆಚ್ಚಿಕೊಳ್ಳುವ ಬಹುತೇಕ ಫ್ಯಾಷನ್‌ ವಸ್ತುಗಳ ಮೇಲೆ ಹೂವಿನ ವಿನ್ಯಾಸ ಇದ್ದೇ ಇರುತ್ತದೆ. ಫ್ಲೋರಲ್‌ ಪ್ರಿಂಟ್‌ನ ಸೀರೆಗಳು ಕೂಡಾ ಹೆಣ್ಮಕ್ಕಳಿಗೆ ಅಚ್ಚುಮೆಚ್ಚು.

ಬೇಸಿಗೆಗೆ ಸೂಕ್ತವಾದ ಶೈಲಿಯ ಈ ಉಡುಗೆಯ ಸುದ್ದಿ ಈಗ್ಯಾಕೆ? ಫ್ಲೋರಲ್‌ಪ್ರಿಂಟ್‌ನ ಸೀರೆಗಳು ಮಾರ್ಕೆಟ್‌ಗೆ ಬಂದು ಎಷ್ಟೋ ಕಾಲವಾಗಿದೆ, ಮತ್ಯಾಕೆ ಈ ವಿಷಯ ಬಂತು ಎಂದಿರಾ? ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ, ಸಿನಿಮಾ ಪ್ರಚಾರದ ವೇಳೆ, ಕಪ್ಪುಬಣ್ಣದ ಫ್ಲೋರಲ್‌ ಪ್ರಿಂಟ್‌ ಸೀರೆಯುಟ್ಟು, ಟ್ರೆಂಡ್‌ ಸೃಷ್ಟಿಸಿದ್ದಾರೆ. ರಾಧಿಕಾ ಆಪ್ಟೆ, ಮಲಯಾಳಿ ನಟಿ ಅಹಾನ ಕೃಷ್ಣ ಕೂಡಾ ಹೂವಿನ ಪ್ರಿಂಟ್‌ನ ಸೀರೆಯುಟ್ಟು ಗಮನ ಸೆಳೆದಿರುವುದು, ಈ ಸೀರೆಗಳು ಟ್ರೆಂಡ್‌ ಆಗಲು ಮತ್ತೂಂದು ಕಾರಣ.

ಎಲ್ಲ ಸೀರೆಗೂ ಓಕೆ: ಫ್ಲೋರಲ್‌ ಪ್ರಿಂಟ್‌ ಅನ್ನು ಇಂಥದ್ದೇ ಬಗೆಯ ಸೀರೆಗಳ ಮೇಲೆ ಮೂಡಿಸಬೇಕು ಎಂಬ ನಿಯಮವಿಲ್ಲ. ರೇಷ್ಮೆ, ಶಿಫಾನ್‌, ಫ್ಯಾನ್ಸಿ, ಹತ್ತಿ, ಸ್ಯಾಟಿನ್‌, ಚೈನಾ ಸಿಲ್ಕ್, ಹೀಗೆ ಎಲ್ಲ ಮಟೀರಿಯಲ್‌ನ ಸೀರೆಗಳ ಮೇಲೆ ಈ ವಿನ್ಯಾಸ ಹೊಂದಿಕೆಯಾಗುತ್ತದೆ. ಕಸೂತಿ, ಚಿತ್ರಕಲೆ, ಡೈ, ಬ್ಲಾಕ್‌ ಪ್ರಿಂಟ್‌ ಹೀಗೆ ಹಲವು ರೀತಿಯಲ್ಲಿ ವಿನ್ಯಾಸ ಮೂಡಿಸಬಹುದು.

ಬ್ಲೌಸ್‌ ಮ್ಯಾಚ್‌ ಮಾಡಿ: ಸೀರೆ ತುಂಬಾ ಹೂವಿನ ಆಕೃತಿಯ ಚಿಹ್ನೆಗಳೇ ಇದ್ದರೆ, ಸೀರೆಯ ಬಣ್ಣಕ್ಕೆ ಹೋಲುವ ಪ್ಲೇನ್‌ ರವಿಕೆ ತೊಡುವುದು ಉತ್ತಮ. ಕೆಲವೇ ಕೆಲವು ಕಡೆಗಳಲ್ಲಿ ಹೂವಿನ ಚಿಹ್ನೆಗಳಿರುವ ಸೀರೆಯನ್ನು, ಅದೇ ಪ್ರಿಂಟ್‌ ಇರುವ ರವಿಕೆಯ ಜೊತೆಗೆ ತೊಡಬಹುದು. ಸಿಂಗಲ್‌ ನೆರಿಗೆ (ನೆರಿಗೆ ಇಲ್ಲದ ಸೆರಗು) ಉಡುವುದಾದರೆ ಮಾಮೂಲಿ ರವಿಕೆ ಬದಲಿಗೆ ಹಾಲ್ಟರ್‌ನೆಕ್‌ ರವಿಕೆ, ಆಫ್ ಶೋಲ್ಡರ್‌ ರವಿಕೆ, ಸ್ಲಿàವ್‌ಲೆಸ್‌ ರವಿಕೆ, ಕೋಲ್ಡ್‌ ಶೋಲ್ಡರ್‌ ರವಿಕೆ, ಬ್ಯಾಕ್‌ಲೆಸ್‌ ರವಿಕೆ, ಚೈನೀಸ್‌ ಕಾಲರ್‌ ರವಿಕೆ, ಶರ್ಟ್‌ ಬ್ಲೌಸ್‌ ಅಥವಾ ಜಾಕೆಟ್‌ ಬ್ಲೌಸ್‌ ತೊಡಬಹುದು. ಪಾರದರ್ಶಕ ಸೀರೆಗೆ ಡಿಸೈನರ್‌ ರವಿಕೆ ತೊಟ್ಟರೆ ಚೆನ್ನ.

ಹೂವೂ, ಬಣ್ಣವೂ: ಗಾಢ ಬಣ್ಣದ ಸೀರೆಗಳ ಮೇಲೆ ತಿಳಿಬಣ್ಣದ ಹೂವುಗಳ ಪ್ರಿಂಟ್‌, ತಿಳಿಬಣ್ಣದ ಸೀರೆಯ ಮೇಲೆ ಗಾಢಬಣ್ಣದ ಹೂವಿನ ಪ್ರಿಂಟ್‌ ಚೆನ್ನಾಗಿ ಕಾಣುತ್ತದೆ. ಆಫೀಸ್‌ ಪಾರ್ಟಿ, ಕಾಲೇಜ್‌ ಡೇಯಂಥ ಸಮಾರಂಭಗಳಲ್ಲಿ ಫ್ಲೋರಲ್‌ ಪ್ರಿಂಟ್‌ ಸೀರೆ ಉಡಬಹುದು.

ಫ್ಲೋರಲ್‌ ಫೇರ್‌ವೆಲ್‌: ಕಾಲೇಜಿನ ಫೇರ್‌ವೆಲ್‌ ಡೇ ದಿನ ಹುಡುಗಿಯರೆಲ್ಲ ಸೀರೆ ಉಡಲು ಇಷ್ಟಪಡುತ್ತಾರೆ. ಆ ದಿನಕ್ಕೆ ಪಫೆìಕ್ಟ್ ಆಗಿ ಹೊಂದುವುದು, ಫ್ಲೋರಲ್‌ ಪ್ರಿಂಟ್‌ ಹಾಗೂ ಫ್ರಿಲ್ಸ್‌ ಇರುವ ಶಿಫಾನ್‌ ಸೀರೆಗಳು. ತಿಳಿಬಣ್ಣದ ಶಿಫಾನ್‌ ಸೀರೆ, ಬಿಳಿ ಬಣ್ಣದ ಕ್ಲಚ್‌, ಬಿಳಿ ಹೈ ಹೀಲ್ಸ್‌ ಹಾಗೂ ಮುತ್ತಿನ ಕಿವಿಯೋಲೆ- ಇವು ಕಳೆದ ವರ್ಷ ಟ್ರೆಂಡ್‌ ಸೃಷ್ಟಿಸಿರುವ ಫೇರ್‌ವೆಲ್‌ ಡ್ರೆಸ್‌ ಅಂತೆ.

ಇಂಗ್ಲಿಷ್‌ ವಿಂಗ್ಲಿಷ್‌ ಸೀರೆ: ಶ್ರೀದೇವಿ ಅಭಿನಯದ ಇಂಗ್ಲಿಷ್‌ ವಿಂಗ್ಲಿಷ್‌ ಸಿನಿಮಾ ನೋಡಿದ್ದೀರಾದರೆ, ಅದರಲ್ಲಿ ಶ್ರೀದೇವಿ ಫ್ಲೋರಲ್‌ ಪ್ರಿಂಟ್‌ನ ಶಿಫಾನ್‌ ಸೀರೆ ಉಟ್ಟಿರುವುದನ್ನು ಗಮನಿಸಿರಬಹುದು. ಅಂದ್ರೆ, ಈ ಟ್ರೆಂಡ್‌ ಹಳೆಯದಾದರೂ, ಎಂದಿಗೂ ಹಳೆಯದಾಗದು ಅಂತ ಅರ್ಥ. ಅಷ್ಟೇ ಅಲ್ಲ, ಹೂವಿನ ವಿನ್ಯಾಸದ ಸಿಂಪಲ್‌ ಸೀರೆಗಳು ಎಲ್ಲ ವಯೋಮಾನದವರಿಗೂ ಸೂಟ್‌ ಆಗುತ್ತ‌ವೆ.

ಸೀರೆ ಆಯ್ಕೆಯ ಸಿಂಪಲ್‌ ಟಿಪ್ಸ್‌
-ನಿಮ್ಮ ಎತ್ತರವನ್ನು ಗಮನದಲ್ಲಿಟ್ಟುಕೊಂಡು ಫ್ಲೋರಲ್‌ ಪ್ರಿಂಟ್‌ ಸೀರೆಗಳನ್ನು ಆರಿಸಿಕೊಳ್ಳಬೇಕು.

-ಕುಳ್ಳಗಿರುವವರು ಸಣ್ಣ ಪ್ರಿಂಟ್‌ ಇರುವ ಶಿಫಾನ್‌ ಸೀರೆಗಳನ್ನು, ಎತ್ತರವಿರುವವರು ಬೋಲ್ಡ್‌ ಫ್ಲೋರಲ್‌ ಪ್ರಿಂಟ್‌ನ ಸೀರೆಯುಟ್ಟರೆ ಚೆಂದ.

-ಹೂವಿನ ಬಣ್ಣ ಮತ್ತು ವಿನ್ಯಾಸ ಬೋಲ್ಡ್‌ ಆಗಿದ್ದಾಗ, ಕಡಿಮೆ ಮೇಕಪ್‌ ಮಾಡಿಕೊಳ್ಳಿ.

-ಫ್ಲೋರಲ್‌ ಪ್ರಿಂಟ್‌ನ ಶಿಫಾನ್‌ ಸೀರೆಗಳ ಮೇಲೆ ಕಸೂತಿ ಅಥವಾ ಸೀಕ್ವಿನ್‌ಗಳಂಥ ಹೆಚ್ಚಿನ ಅಲಂಕಾರ ಬೇಡ.

-ದೊಡ್ಡ ಪ್ರಿಂಟ್‌ನ ಹೂವುಗಳಿ­ದ್ದಾಗ ಬಾರ್ಡರ್‌ ಚಿಕ್ಕದಾಗಿದ್ದರೆ ಚೆನ್ನ.

-ಫ್ಲೋರಲ್‌ ಶಿಫಾನ್‌ ಸೀರೆಗಳನ್ನು ಸಿಂಗಲ್‌ ಪಿನ್‌ ಹಾಕಿ ಉಟ್ಟರೆ ಚೆನ್ನಾಗಿ ಕಾಣುವುದು.

-ದೊಡ್ಡ ಹೂವುಗಳ ಡಿಸೈನ್‌ ರೆಟ್ರೋ ಲುಕ್‌ನಂತೆ ಕಾಣಿಸಿದರೂ, ಈಗಲೂ ಟ್ರೆಂಡ್‌ನ‌ಲ್ಲಿದೆ.

* ಅದಿತಿ ಮಾನಸ ಟಿ. ಎಸ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಗಳು ಬಂದಮೇಲೆ ಬಾಳಿಗೊಂದು ಅರ್ಥ ಬಂತು. ಮಗಳು ಮನೆ ತುಂಬಿದ ಮೇಲೆ ನನ್ನಲ್ಲೂ ತುಂಬಾ ಬದಲಾವಣೆ ಆಯ್ತು ಎನ್ನುವ ಅಪ್ಪಂದಿರುಂಟು. ಮಗಳನ್ನು- ತಾಯಿ , ದೇವತೆ, ಮಹಾಲಕ್ಷ್ಮಿ...

  • ಹಿಂದೆಲ್ಲಾ ಬಟ್ಟೆ ಖರೀದಿಸುವುದೇ ಒಂದು ಮಹಾ ಹಬ್ಬ. ವರ್ಷಕ್ಕೊಮ್ಮೆ ಬರುವ ದೊಡ್ಡ ಹಬ್ಬಕ್ಕೆ ಒಮ್ಮೆ ಖರೀದಿಸಿದರೆ ಮುಗೀತಿತ್ತು. ಮತ್ತೆ ಬಟ್ಟೆ ಕೊಳ್ಳುವುದು...

  • ಪಕ್ಕದ ತಟ್ಟೆಗೆ ಕೈ ಹಾಕಿ, ತಲೆಯೆತ್ತದೇ ಎರಡು ದೊಡ್ಡ ತುಂಡು ಬಾಯಿಗಿಳಿಸಿ, ಮಗನ ಅಭಿಪ್ರಾಯ ಕೇಳಲು ತಲೆ ಎತ್ತಿ ನೋಡಿದೆ. ಮಗ ಗರ ಬಡಿದವನಂತೆ ಅವಾಕ್ಕು! "ಏನಾಯ್ತೋ?...

  • ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನದ ಪದಕ ಗಳಿಸುವುದೇ ಅತಿ ಕಷ್ಟದ ವಿಷಯ. ಅದರಲ್ಲೂ, ನೂರು ಮೀಟರ್‌ ಓಟದಲ್ಲಿ ಸೆಕೆಂಡ್‌ಗಳ ಅಂತರದಲ್ಲಿ ಪದಕ ಮಿಸ್‌ ಆಗಿಬಿಡುತ್ತದೆ....

  • ದಸರಾ ರಜೆ ಇರೋದ್ರಿಂದ ನೆಂಟರು ಮನೆಗೆ ಬಂದಿದ್ದಾರೆ. ಅವರು ಮೆಚ್ಚುವಂಥ ತಿಂಡಿ ಮಾಡಬೇಕು. ಏನು ಮಾಡ್ಹೋದು ಎಂದು ಬಹಳಷ್ಟು ಮಹಿಳೆಯರು ಯೋಚನೆಯಲ್ಲಿದ್ದಾರೆ. ದಸರೆಯ...

ಹೊಸ ಸೇರ್ಪಡೆ