ಬೆರಳ್‌ಗೆ “ಕಲರ್‌’


Team Udayavani, Aug 1, 2018, 6:00 AM IST

4.jpg

ಉಗುರಿಗೆ ಬಣ್ಣದ ನೈಲ್‌ಪಾಲಿಶ್‌ ಲೇಪಿಸಿಕೊಂಡು, ಕೈ ಬೆರಳಿಗೆ ಉಂಗುರ ತೂರಿಸಿಬಿಟ್ಟರೆ, ಆ ಭಾಗಕ್ಕೆ ಮತ್ತೆ ಅಲಂಕಾರ ಬೇಡ ಎನ್ನುವುದು ಬಹುತೇಕ ಹೆಣ್ಣಿನ ನಂಬಿಕೆ. ಆದರೆ, ಮದರಂಗಿಯ ರಂಗೋಲಿ, ಬೆರಳನ್ನು ನಾನಾ ವಿಧದಲ್ಲಿ ಅಲಂಕರಿಸುತ್ತದೆ ಅನ್ನೋದು ನಿಮ್ಗೆ ಗೊತ್ತೇ? ಬೆರಳಿಗೆ ತೂರಿಕೊಂಡ ಉಂಗುರದ ಆಕರ್ಷಣೆಯನ್ನೇ ಮರೆಸುವಷ್ಟು ಇದು ಚಿತ್ತಾಕರ್ಷಕ…

ಆ ರಂಗು, ಒಂದು ಸಿಹಿಯಾದ ಕಚಗುಳಿ. ಮದರಂಗಿಯ ಬಣ್ಣಕ್ಕಾಗಿ ಶರೀರವನ್ನೇ ಕ್ಯಾನ್ವಾಸ್‌ ಮಾಡಿಕೊಳ್ಳುವ ಹೆಣ್ಣಿಗೆ, ತನ್ನ ಜೀವನುದ್ದಕ್ಕೂ ಅದರ ಚಿತ್ತಾರ ಅರಳಿಕೊಂಡೇ ಇರಲಿಯೆಂಬ ಇಂಗಿತವೂ ಇರುತ್ತೆ. ಮದರಂಗಿಯು ಪರಂಪರಾಗತವಾಗಿ ಹೆಣ್ಣಿನ ಅಲಂಕಾರದ ಭಾಗವಾಗಿ ಬಂದಿದೆ. ಮದುವೆಯೇ ಇರಲಿ, ಹಬ್ಬ ಹರಿದಿನಗಳೇ ಇರಲಿ, ಅಂಗೈ ಮೇಲೆ ಚಿತ್ತಾರ ಮೂಡಿದರೇನೇ ಸಂಭ್ರಮಕ್ಕೊಂದು ಕಳೆ. ಕಾಲ ಕಳೆದಂತೆ ಬೇರೆಲ್ಲಾ ಹಳೆಯ ಸಂಗತಿಗಳು ಮೂಲೆಗುಂಪಾದರೂ, ಮದರಂಗಿಯ ಕೆಂಪು ಮಾತ್ರ ಮಾಸಿಲ್ಲ, ಮಾಸುವುದೂ ಇಲ್ಲ. ಮಾಡರ್ನ್ ಹುಡುಗಿಯರೂ ರಂಗು ರಂಗಿನ ಚಿತ್ತಾರಕ್ಕೆ ಕೈ ಒಡ್ಡುವುದೇ ಅದಕ್ಕೆ ಸಾಕ್ಷಿ.

  ಮದರಂಗಿ ಹಳತಾಗಿಲ್ಲವಾದರೂ, ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಾ ಬಂದಿದೆ. ಕೆಂಪು, ಕಪ್ಪು, ಗ್ಲಿಟರಿಂಗ್‌… ಹೀಗೆ ಬಣ್ಣ ಬಣ್ಣದ ಮದರಂಗಿ ಕೋನ್‌ಗಳು ಲಭ್ಯವಿದ್ದು, ಸಂದರ್ಭಕ್ಕೆ ಹಾಗೂ ಧರಿಸುವ ಉಡುಪಿಗೆ ತಕ್ಕಂತೆ ಡಿಸೈನ್‌ಗಳೂ ಬದಲಾಗುತ್ತವೆ. ಶುಭ ಸಮಾರಂಭಗಳಲ್ಲಿ ಕೈ ತುಂಬಾ ಚಿತ್ತಾರ ಬಿಡಿಸಿಕೊಳ್ಳುವ ನೀರೆಯರು, ಉಳಿದ ದಿನಗಳಲ್ಲಿ ಕೇವಲ ಬೆರಳುಗಳನ್ನಷ್ಟೇ ಅಲಂಕರಿಸಿಕೊಳ್ಳುತ್ತಾರೆ. ನೋಡೋಕೆ ಸಿಂಪಲ್‌ ಅನ್ನಿಸಬೇಕು, ಆದರೂ ಸುಂದರವಾಗಿ ಕಾಣಬೇಕು ಅನ್ನುವವರು ಪಾಲಿಸುವ ಮೆಹಂದಿ ಟ್ರೆಂಡ್‌ ಇದು.

  ಚೋಟುದ್ದದ ಬೆರಳುಗಳ ಚಿತ್ತಾರದಲ್ಲೂ ಹತ್ತಾರು ಬಗೆಗಳಿವೆ. ಎಲೆ, ಹೂವು, ಬಳ್ಳಿ, ನವಿಲುಗರಿ… ಹೀಗೆ ಸರಳವಾದ ಚಿತ್ತಾರಗಳಿಂದಲೇ ಕೈ ಬೆರಳಿನ ಅಂದವನ್ನು ಹೆಚ್ಚಿಸಬಹುದು. ಆಫೀಸ್‌ಗೆ ಧರಿಸುವ ದಿರಿಸುಗಳಿಗೂ ಈ ಡಿಸೈನ್‌ಗಳು ಒಪ್ಪುತ್ತವೆ. ಉಂಗುರದ ಬದಲು, ಎಲ್ಲ ಬೆರಳುಗಳ ಮೇಲೂ ಉಂಗುರದ ಡಿಸೈನ್‌ ಮೂಡಿಸುವ ಟ್ರೆಂಡ್‌ ಕೂಡ ಇದೆ. ದೊಡ್ಡ ಉಂಗುರವನ್ನು ಧರಿಸಿದಾಗ, ಸಾಂಪ್ರದಾಯಿಕ ಡಿಸೈನ್‌ ಚೆನ್ನ. ಈ ರೀತಿಯ ಸರಳ, ಸುಂದರ ಅನ್ನಿಸುವ ಮದರಂಗಿ ಚಿತ್ತಾರಗಳು ಇಲ್ಲಿವೆ…

– ಬೆರಳುಗಳನ್ನು ಅಲಂಕರಿಸಲು ಉಂಗುರಗಳೇ ಬೇಕಂತಿಲ್ಲ. ಪ್ರತಿ ಬೆರಳಿನ ಮೇಲೂ ಮದರಂಗಿಯಿಂದ ರಿಂಗ್‌ನಂಥ ಡಿಸೈನ್‌ ಬಿಡಿಸಿ. ಸರ್ಕಲ್‌ ಹಾಗೂ ಸಿಂಗಲ್‌ ಲೈನ್‌ನಂಥ ಚಿತ್ತಾರಗಳೂ ಬೆರಳಿಗೆ ಮೆರುಗು ನೀಡುತ್ತವೆ.

– ತೋರುಬೆರಳಿನಿಂದ ಮುಂಗೈ ಮಣಿಕಟ್ಟಿನವರೆಗಿನ ಫ್ಲೋರಲ್‌ ಡಿಸೈನ್‌ (ಹೂವಿನ ಚಿತ್ತಾರ) ಅತ್ಯಂತ ಸುಲಭ ಹಾಗೂ ಸುಂದರವಾದ ಚಿತ್ತಾರ.

– ತೋರುಬೆರಳು ಹಾಗೂ ಉಂಗುರದ ಬೆರಳಿನ ಮೇಲೆ ಮೂಡುವ ಹೂಬಳ್ಳಿಯ ಸೊಬಗು ಕೈಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೂಬಳ್ಳಿಯ ನಡುವೆ ಗುಲಾಬಿಯ ಡಿಸೈನ್‌ ಬಿಡಿಸಿಕೊಳ್ಳಿ. 

– ಬಳ್ಳಿ ಮರವನ್ನು ಅಪ್ಪಿಕೊಂಡಿದ್ದರೆ ಮಾತ್ರ ಚೆಂದ ಅಂದವರಾರು? ಕೈಗಳ ಮೇಲೆಯೂ ಬಳ್ಳಿ ಹಬ್ಬಲಿ. ಚಿಕ್ಕ ಚಿಕ್ಕ ಎಲೆಯನ್ನು ಹರಡಿಕೊಂಡು ಸೌಂದರ್ಯ ಹೆಚ್ಚಿಸಲಿ.

– ಮಧ್ಯದ ಬೆರಳಿನ ಮೇಲೆ ಚಿಕ್ಕ ಚಿಕ್ಕ ಚೌಕಗಳನ್ನು ಬರೆದು, ಅದರೊಳಗೆ ಸಿಂಪಲ್‌ ಡಿಸೈನ್‌ ಮೂಡಿಸಬಹುದು.

– ಅಂಗೈ ಮೇಲಿನ ಗ್ರ್ಯಾಂಡ್‌ ಡಿಸೈನ್‌ಗಳನ್ನೇ ಬೆರಳಿನ ಮೇಲೆಯೂ ಮೂಡಿಸಬಹುದು. ಶುಭ ಸಮಾರಂಭಗಳಲ್ಲಿ ಕೈಗಳ ಎರಡೂ ಬದಿ ಮದರಂಗಿ ಬರೆಯುವಾಗ ಇಂಥ ಡಿಸೈನ್‌ಗಳು ಹೆಚ್ಚು ಸೂಕ್ತ.

– ಪೂರ್ತಿ ಬೆರಳಿನ ಮೇಲೆ ಡಿಸೈನ್‌ ಬೇಡ ಅಂತಿದ್ದರೆ, ಅರ್ಧ ಬೆರಳುಗಳ ಮೇಲೆ ಸಿಂಪಲ್‌ ಗೆರೆಗಳನ್ನು ಎಳೆದು ಡಿಸೈನ್‌ ಬರೆಯಬಹುದು.

– ಬೆರಳುಗಳನ್ನು ಮಾತ್ರ ಸಿಂಗರಿಸಿದರೆ ಸಾಕೇ? ಹಿಂಗೈ ಖಾಲಿ ಖಾಲಿಯಾಗಿ ಕಾಣಿಸಬಾರದೆಂದರೆ, ಒಂದು ವೃತ್ತಾಕಾರದ ಚಿತ್ತಾರ ಬಿಡಿಸಿಕೊಳ್ಳಿ.

– ಸೀರೆ, ಲೆಹೆಂಗಾದಂಥ ದಿರಿಸುಗಳಿಗೆ, ನವಿಲುಗರಿಯಂಥ  ಡಿಸೈನ್‌ ಹೆಚ್ಚು ಸೂಕ್ತ. ಎರಡೂ ಕೈಗಳ ತೋರುಬೆರಳಿನಿಂದ ಹೊರಟ ಚುಕ್ಕಿ ಸಾಲುಗಳಿಂದ ನವಿಲುಗರಿ ಮೂಡಲಿ.

– ನವಿಲುಗರಿಯ ಸುಂದರ ಚಿತ್ತಾರವನ್ನು ಹಿಂಗೈ ಮೇಲೆ ಮೂಡಿಸಿದರೆ, ಮದರಂಗಿ ಗ್ರ್ಯಾಂಡ್‌ ಆಗಿ ಕಾಣಿಸುತ್ತದೆ. ಆಗ ಎಲ್ಲಾ ಬೆರಳುಗಳ ಮೇಲೆ ಡಿಸೈನ್‌ ಮೂಡಿಸುವ ಅಗತ್ಯವೂ ಇಲ್ಲ. 

– ನಾಲ್ಕು ಬೆರಳುಗಳ ಮೇಲೆ ಒಂದೇ ರೀತಿಯ ಗ್ರ್ಯಾಂಡ್‌ ಡಿಸೈನ್‌ ಬರೆದು, ಉಂಗುರದ ಬೆರಳಿಗೆ ಹೂಬಳ್ಳಿಯ ಚಿತ್ತಾರ ಬರೆದರೆ ಕೈ ಮೇಲೊಂದು ಸುಂದರ ಕಲೆ ಅರಳುತ್ತದೆ.

– ನೀವು ಪ್ರಕೃತಿ ಪ್ರಿಯರಾಗಿದ್ದರೆ, ಎಲೆಗಳಿಲ್ಲದ ಬಳ್ಳಿಯಿಂದ ಹೂವು ಅರಳಿದಂತೆ ಕಾಣಿಸುವ ಡಿಸೈನ್‌ ನಿಮಗೆ ಇಷ್ಟವಾಗಬಹುದು.

– ಕಾಕ್ಟೇಲ್‌ ಸೀರೆಯನ್ನುಟ್ಟಾಗ, ಮೂರು ಬೆರಳುಗಳ ಮೇಲೆ ಈ ರೀತಿಯ ಮುದ್ದಾದ ಚಿತ್ತಾರವನ್ನು ಮೂಡಿಸಬಹುದು.

– ಅರೇಬಿಕ್‌ ಶೈಲಿಯ ಈ ಡಿಸೈನ್‌ ಬೋಲ್ಡ್‌ ಹಾಗೂ ಗ್ರ್ಯಾಂಡ್‌ ಆಗಿದ್ದು, ಅದ್ಧೂರಿ ದಿರಿಸುಗಳಿಗೆ ಚೆನ್ನಾಗಿ ಒಪ್ಪುತ್ತದೆ.

– ಲೆಹೆಂಗಾ ಹಾಗೂ ಗೌನ್‌ನಂಥ ಡ್ರೆಸ್‌ಗಳನ್ನು ಧರಿಸಿದಾಗ, ಉಂಗುರ ಬೆರಳನ್ನು ಹೀಗೆ ಸಿಂಗರಿಸಬಹುದು.

– ಒನ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿ ಆಗಿ, ದೊಡ್ಡ ಉಂಗುರವನ್ನು ಧರಿಸಿದಾಗ ಬೆರಳಿನ ಮೇಲೆ ಸಾಂಪ್ರದಾಯಕವಾದ ಡಿಸೈನ್‌ ಮೂಡಿಸಿ. 

– ಪ್ರಿಯಾಂಕಾ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.