ಫ್ಲೇರ್ಡ್‌ ಅಯಂಡ್ ಲವ್ಲಿ!

Team Udayavani, Jan 30, 2019, 12:30 AM IST

e-4.jpg

ಸದ್ಯ ಟ್ರೆಂಡ್‌ ಆಗುತ್ತಿರುವ ದಿರಿಸು ಫ್ಲೇರ್ಡ್‌ ಪ್ಯಾಂಟ್‌(Flared pant). ತುದಿಯಲ್ಲಿ  ಅಗಲವಾಗಿರುವುದಕ್ಕೆ ಇದಕ್ಕೆ ಫ್ಲೇರ್‌ ಎನ್ನಲಾಗುತ್ತದೆ. ನೋಡಲು ಬೆಲ್‌ ಬಾಟಮ್‌ ಪ್ಯಾಂಟ್‌ನಂತೆ ಇದ್ದರೂ ಇವು ಅದಕ್ಕಿಂತ ಭಿನ್ನ. ಹೇಗೆ ಎಂದು ಕೇಳುವುದಾದರೆ ಈ ಪ್ಯಾಂಟ್‌ನ ಬುಡ ಅಗಲವಾಗಿರುತ್ತದೆ ನಿಜ, ಆದರೆ ಅದು ಬೆಲ್‌ (ಗಂಟೆ) ಆಕಾರದಲ್ಲಿ ಇರುವುದಿಲ್ಲ. ಈ ಪ್ಯಾಂಟ್‌ ತೊಡುವುದರಿಂದ ಪಾದಗಳು ಬಹುತೇಕ ಮುಚ್ಚಿಹೋಗುತ್ತವೆ. ಇದು 60ನೇ ದಶಕದಲ್ಲಿ ಜನಪ್ರಿಯತೆ ಗಳಿಸಿದ್ದ ಉಡುಪು!

ತೊಡುವುದು ಹೇಗೆ?
ಪ್ಯಾಂಟ್‌ ಸೂಟ್‌ ತೊಡುವವರು ಈ ಫ್ಲೇರ್ಡ್‌ ಪ್ಯಾಂಟ… ಸ್ಟೆçಲ್‌ ಅನ್ನು ಅನುಸರಿಸಬಹುದು. ಅಂದರೆ ಒಳ್ಳೆ ಫಿಟ್ಟಿಂಗ್‌ ಇರುವ ಕೋಟು (ಸ್ಟ್ರಕ್ಚರ್ಡ್‌ ಬ್ಲೇಝರ್‌) ಜೊತೆ ಈ ಪ್ಯಾಂಟ್‌ ಧರಿಸುವುದು. ಈ ಕೋಟಿನ ಕೆಳಗೆ ಶರ್ಟ್‌ (ಅಂಗಿ) ತೊಡಬೇಕಿಲ್ಲ. ಕೋಟು, ಪ್ಯಾಂಟು ಎಲ್ಲ ಸಾಲಿಡ್‌ ಕಲರ್ಡ್‌ ಅಂದರೆ ಒಂದೇ ಬಣ್ಣದ್ದಾಗಿರುತ್ತದೆ. ಪ್ಯಾಂಟ್‌ ಸೂಟ್‌ ಜೊತೆ ಫ್ಲೇರ್ಡ್‌ ಪ್ಯಾಂಟ್‌ ತೊಡುವ ಈ ಶೈಲಿಯನ್ನು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಟ್ರೆಂಡ್‌ ಆಗುವಂತೆ ಮಾಡಿದ್ದರು. 

ಬಹಳ ಅಗಲವಾದ ಅಂದರೆ ಸಿಕ್ಕಾಪಟ್ಟೆ ಫ್ಲೇರ್‌ ಇರುವ ಪ್ಯಾಂಟ್‌ ಜೊತೆ ಬಹಳ ಸಡಿಲವಾದ ಕೋಟು (ಓರ್ವ ಸೈಜ್‌) ಜಾಕೆಟ್‌ ತೊಟ್ಟು ಕೋಟಿನ ಕೆಳಗೆ ಟರ್ಟಲ್‌ ನೆಕ್‌ (ಕುತ್ತಿಗೆ ಮುಚ್ಚುವ) ಅಂಗಿಯನ್ನು ಧರಿಸಬಹುದು. ಈ ಬಗೆಯ ಉಡುಪಿನಲ್ಲೂ ಅಂಗಿ, ಕೋಟು, ಪ್ಯಾಂಟು ಎಲ್ಲ ಸಾಲಿಡ್‌ ಕಲರ್ಡ್‌, ಅಂದರೆ ಒಂದೇ ಬಣ್ಣದ್ದಾಗಿರುತ್ತದೆ. 

ಅಂಗನೆಯರ ಅಂದ
ಕಿತ್ತಳೆ ಬಣ್ಣದ ಸಡಿಲವಾದ ಕೋಟು, ಫ್ಲೇರ್ಡ್‌ ಪ್ಯಾಂಟು ಮತ್ತು ಕುತ್ತಿಗೆ ಸಂಪೂರ್ಣವಾಗಿ ಮುಚ್ಚುವ ಅಂಗಿಯನ್ನು ಬಾಲಿವುಡ್‌ ನಟಿ ಸೋನಂ ಕಪೂರ್‌ ತೊಟ್ಟಿದ್ದೇ ತಡ, ಅಭಿಮಾನಿಗಳೂ ಇದೇ ತರಹದ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲೆಲ್ಲ ತಮ್ಮ ಸೆಲ್ಫಿ ಗಳನ್ನು ಶೇರ್‌ ಮಾಡುತ್ತಿದ್ದಾರೆ.

ಅಮೆರಿಕಾದ ಟಾಪ್‌ಮಾಡೆಲ್‌ ಕೆಂಡಾಲ್‌ ಜೆನ್ನರ್‌ ಬೂದಿ ಬಣ್ಣದ ಉದ್ದ ತೋಳಿನ ಬಿಗಿಯಾದ ಅಂಗಿ ಜೊತೆ ಪಾದದ ಕಿೈಲು ಕಾಣುವಂಥ ಬೂದಿ ಬಣ್ಣದ ಫ್ಲೇರ್ಡ್‌ ಪ್ಯಾಂಟ್‌ ತೊಟ್ಟು, ಬೂದಿ ಬಣ್ಣದ ಲಾಂಗ್‌ ಲೈನ್‌ ಜಾಕೆಟ್‌ (ಮೊಣಕಾಲಿನ ವರೆಗೆ ಬರುವ ಗುಂಡಿ ಅಥವಾ ಜಿಪ್‌ ಇರದ ಕೋಟು) ಮತ್ತು ಅದೇ ಬಣ್ಣದ ಹೈ ಹೀಲ್ಸ… ಹಾಕಿದ ಚಿತ್ರ ಫ್ಯಾಷನ್‌ ಪ್ರಿಯರಿಂದ ಮೆಚ್ಚುಗೆ ಪಡೆದಿತ್ತು.

ಇವರೆಲ್ಲಾ ಸುದ್ದಿ ಮಾಡುತ್ತಿರುವಾಗ ನಟಿ ಪ್ರಿಯಾಂಕಾ ಚೋಪ್ರಾ ಹಿಂದೆ ಉಳಿಯಲು ಸಾಧ್ಯವೇ! ತಿಳಿ ಹಸಿರು ಬಣ್ಣದ ಬಿಗಿಯಾದ ಅಂಗಿ. ಸಡಿಲವಾದ ಕೋಲ್ಡ… ಶೋಲ್ಡರ್‌ ತೋಳುಗಳು. ಇದರ ಜೊತೆ ಅದೇ ಬಣ್ಣದ ಫ್ಲೇರ್ಡ್‌ ಪ್ಯಾಂಟ್‌ ತೊಟ್ಟು ಪ್ರಿಯಾಂಕಾ ಚೋಪ್ರಾ, ತಾನು ಸ್ಟೈಲ್‌ ಐಕಾನ್‌ ಎಂಬುದನ್ನು ದೃಢಪಡಿಸಿ¨ªಾರೆ. ನಿಯಾನ್‌ (ಕಣ್ಣಿಗೆ ಕುಕ್ಕುವಂಥ ಬಣ್ಣ) ಗುಲಾಬಿ ಬಣ್ಣದ ಅಂಗಿ ಜೊತೆ ಅದೇ ಬಣ್ಣದ ಹೈಹೀಲ್ಸ… ಮತ್ತು ತುದಿಯಲ್ಲಿ ಸ್ವಲ್ಪ ಕಟ್‌ ಇರುವ ಅದೇ ಬಣ್ಣದ ಫ್ಲೇರ್ಡ್‌ ಪ್ಯಾಂಟ್‌ ತೊಟ್ಟು ಕಾಣಿಸಿಕೊಂಡಿದ್ದರು.  

ಸಾರಾ ಜಮಾನ
ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ನ ಮೊದಲ ಮಗಳು ಸಾರಾ ಅಲಿ ಖಾನ್‌ ಕೂಡ ಈ ಟ್ರೆಂಡ್‌ಗೆ ತನ್ನ ಕೊಡುಗೆ ನೀಡಿದ್ದಾಳೆ. ಕಸರತ್ತು ಮಾಡಿ, ವಾಶ್‌ ಬೋರ್ಡ್‌ ಆಬ್ಸ… ಹೊಂದಿರುವ ಕಾರಣ ಅವುಗಳನ್ನು ತೋರಿಸಲು ಕಪ್ಪು ಬಣ್ಣದ ಉದ್ದ ತೋಳಿನ ಬಿಗಿಯಾಗಿ ಕ್ರಾಪ್‌ ಟಾಪ್‌ (ಹೊಟ್ಟೆ ಕಾಣುವಂಥ ಅಂಗಿ) ಜೊತೆ ಪಳ-ಪಳ ಹೊಳೆಯುವ ಅನಿಮಲ್‌ ಪ್ರಿಂಟ್‌ ಇರುವ ಗುಲಾಬಿ ಹಾಗು ಗೋಲ್ಡ… (ಸ್ವರ್ಣ) ಬಣ್ಣದ ಫ್ಲೇರ್ಡ್‌ ಪ್ಯಾಂಟ್‌ ತೊಟ್ಟಿರುವುದು ಫ್ಯಾಷನ್‌ ಲೋಕದಲ್ಲಿ  ಸುದ್ದಿಯಾಗುತ್ತಿದೆ. 

ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.