ಫ್ರೀಡಂ ಟು ಫೀಡ್‌!

ಇದೂ ಒಂದು ಹೋರಾಟ...

Team Udayavani, Sep 11, 2019, 5:45 AM IST

ಹಸಿವಾದಾಗ ತಿನ್ನುವುದು ಸಹಜ ಅನ್ನುವ ನಾವು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವಾಗಲೂ ಅಸಹ್ಯ ಪಡದ ನಾವು, ತಾಯಿ ಎದೆಹಾಲು ಉಣಿಸುವುದನ್ನು ವಿಚಿತ್ರವಾಗಿ ನೋಡುವುದೇಕೆ?

ಆಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಕಿಕ್ಕಿರಿದ ಜನಸಂದಣಿಯ ನಡುವೆ ಹೇಗೋ ಅಡ್ಜಸ್ಟ್‌ ಮಾಡಿಕೊಂಡು ಸೀಟ್‌ನಲ್ಲಿ ಕೂತಿದ್ದಳು. ಪಕ್ಕದಲ್ಲಿ ಕೂತ ಹೆಂಗಸು ಆಕೆಯನ್ನೇ ದುರುಗುಟ್ಟಿ ನೋಡತೊಡಗಿದಳು, ಆ ಕಡೆ ಸೀಟಿನ ಹೆಂಗಸರು ಮುಖ ತಿರುಗಿಸಿ ಕೂತರು. ಕೆಲವರು ಗುಸುಗುಸು ಮಾತಾಡಿದರೆ ಇನ್ನೂ ಕೆಲವು ಕಣ್ಣುಗಳು ಕದ್ದು ಮುಚ್ಚಿ ಆಕೆಯನ್ನು ನೋಡತೊಡಗಿದವು. ಇದರಿಂದ ಆಕೆಗೆ ಸಾಕಷ್ಟು ಮುಜುಗರವಾಯ್ತು.

ಆದರೆ, ಸುತ್ತಲಿನವರ ಬಗ್ಗೆ ಗಮನ ನೀಡದೆ ಅನಿವಾರ್ಯವಾಗಿ ತನ್ನ ಕಾರ್ಯವನ್ನು ಮುಂದುವರಿಸಿದಳು. ಅಷ್ಟಕ್ಕೂ ಆಕೆ ಮಾಡಿದ್ದೇನೆಂದರೆ, ತನ್ನ ಮೂರು ತಿಂಗಳ ಹಸುಗೂಸಿಗೆ ಹಾಲುಣಿಸಿದ್ದು. ಪುಟ್ಟ ಮಗು ಎಲ್ಲಿ, ಯಾವಾಗ ಹಸಿವು ಅನುಭವಿಸುತ್ತದೋ ದೇವರೇ ಬಲ್ಲ. ಆಗ ಮಗುವಿಗಿಂತ ಹೆಚ್ಚು ಚಡಪಡಿಸುವುದು ತಾಯಿ. ಪ್ರಯಾಣಿಸುವ ಬಸ್ಸಿನಲ್ಲಿ, ಶಾಪಿಂಗ್‌ಗೆ ಹೋದ ಮಾಲ್‌ನಲ್ಲಿ, ಅಥವಾ ಸಮಾರಂಭಕ್ಕೆ ಹೋದಾಗ…ಹೀಗೆ, ಮಕ್ಕಳು ಹಸಿವಿನಿಂದ ಅಳತೊಡಗಿದರೆ ತಾಯಿಯ ಕಸಿವಿಸಿ, ಹಿಂಸೆ ಹೇಳತೀರದ್ದು. ಯಾಕಂದ್ರೆ, ಎದೆಹಾಲೂಡುವ ತಾಯಿಯನ್ನೂ ಸಮಾಜದ ವಕ್ರ ದೃಷ್ಟಿ ಬಿಡುವುದಿಲ್ಲ.

ಹಸಿವಾದಾಗ ದೊಡ್ಡವರು ತಿನ್ನುವುದು ಸಹಜ ಅನ್ನುವ ನಾವು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವಾಗಲೂ ಅಸಹ್ಯ ಪಡದ ನಾವು, ಒಬ್ಬ ತಾಯಿ ತನ್ನ ಮಗುವಿಗೆ ಎದೆಹಾಲು ಉಣಿಸುವುದನ್ನು ವಿಚಿತ್ರವಾಗಿ ನೋಡುವುದು ವಿಪರ್ಯಾಸ. ಸಣ್ಣ ಮಗುವಿರುವ ತಾಯಂದಿರು ಮನೆಯಿಂದ ಹೊರಗೆ ಕಾಲಿಡುವುದಕ್ಕೇ ಅಂಜುವುದು ಇದೇ ಕಾರಣಕ್ಕೆ. ಸ್ತನ್ಯಪಾನದ ಮಹತ್ವವನ್ನು ಅರ್ಥ ಮಾಡಿಸುವ ಪ್ರಯತ್ನಗಳ ಜೊತೆಜೊತೆಗೇ, ಈ ಕುರಿತೂ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಬಾಲಿವುಡ್‌ ನಟಿ ನೇಹಾ ದೂಫಿಯಾ, ಸೋಶಿಯಲ್‌ ಮೀಡಿಯಾದಲ್ಲಿ “ಫ್ರೀಡಂ ಟು ಫೀಡ್‌’ ಎಂಬ ಅಭಿಯಾನ ಶುರು ಮಾಡಿದ್ದಾರೆ. ಹಲವು ತಾಯಂದಿರು ಅಭಿಯಾನಕ್ಕೆ ಬೆಂಬಲ ಸೂಚಿಸಿ, ಎದೆಹಾಲು ಉಣಿಸುವಾಗ ತಾವು ಅನುಭವಿಸಿದ ಮುಜುಗರವನ್ನು ಮುಕ್ತವಾಗಿ ಹಂಚಿಕೊಂಡಿರುವುದು ಸ್ವಾಗತಾರ್ಹ. ಹೀಗೆ, ತಾಯಂದಿರ ಧ್ವನಿಗೊಂದು ವೇದಿಕೆ ಸಿಕ್ಕಿದರೆ, ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ. ಜಾಗತಿಕವಾಗಿ ಎಷ್ಟೇ ಜಾಗೃತಿ ಮೂಡಿಸಿದರೂ, ನಮ್ಮನ್ನು ನಾವು ಜಾಗೃತಗೊಳಿಸದಿದ್ದರೆ ಯಾವ ಅಭಿಯಾನವೂ ಯಶಸ್ವಿಯಾಗದು. ಇನ್ನಾದರೂ ಎದೆ ಹಾಲುಣಿಸುವ ಸಂಗತಿಯನ್ನು ವಿಚಿತ್ರವೆಂಬಂತೆ ನೋಡುವುದನ್ನು ಬಿಡುವ ಮನಸ್ಸು ಎಲ್ಲರಿಗೂ ಬರಲಿ.

-ದೀಪ್ತಿ ಉಜಿರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪರೀಕ್ಷೆ ಎಂದರೆ, ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಆತಂಕದ ವಿಚಾರ. ಓದಿದ್ದೆಲ್ಲ ಪರೀಕ್ಷೆ ದಿನ ನೆನಪಾಗುತ್ತೋ ಇಲ್ಲವೋ ಎಂದು ಮಕ್ಕಳು ಹೆದರಿದರೆ, ಅವರು ಸರಿಯಾಗಿ...

  • ವಯಸ್ಸಾದ ಮೇಲೆ ಮಕ್ಕಳ ಮನೆಯಲ್ಲಿದ್ದುಕೊಂಡು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಬದುಕಬೇಕೆಂಬುದು ಹೆಚ್ಚಿನವರ ಕನಸು. ಆದರೆ, ಅಂದುಕೊಂಡಂತೆಯೇ ಬಾಳುವ ಅದೃಷ್ಟ...

  • ಎಸ್ಸೆಸ್ಸೆಲ್ಸಿವರೆಗಷ್ಟೇ ಓದಿರುವ ಸುಬ್ಬಲಕ್ಷ್ಮಿ, ಕುಟುಂಬ ನಿರ್ವಹಣೆಗಾಗಿ ಅವಲಕ್ಕಿ ತಯಾರಿಸಿ ಮಾರಲು ಆರಂಭಿಸಿದರು. ಅದೀಗ, ಒಂದು ಫ್ಯಾಕ್ಟರಿಯಾಗಿ ಬೆಳೆದಿದೆ... ಅಕ್ಕಿ...

  • ಕಾಮನಬಿಲ್ಲು ಇದಕೆ ಸಾಟಿಯಲ್ಲ, ಋಷಿಗಳ ಸಂಯಮವೂ ಇದರ ಮುಂದೆ ನಿಲ್ಲೋದಿಲ್ಲ ಅಂತ ಕವಿಗಳಿಂದ ಹೊಗಳಿಸಿಕೊಂಡ ಆಭರಣ ಬಳೆ. ಕೈಗೆ ಸಿಂಗಾರವಾಗಿ, ಶುಭದ ಸಂಕೇತವಾದ ಈ ಬಳೆಗಳನ್ನು...

  • ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ...

ಹೊಸ ಸೇರ್ಪಡೆ