ಧೋತಿ ಜತೆ ದೋಸ್ತಿ

Team Udayavani, Jan 31, 2018, 2:28 PM IST

31-38.jpg

ಹಿಂದಿನ ಕಾಲದಲ್ಲಿ ಧೋತಿ ಅಥವಾ ಕಚ್ಚೆ ಎಂಬುದು ಗಂಡಸರಿಗೆ ಮೀಸಲಾಗಿತ್ತು. ಆದರೀಗ ಅದೇ ಧೋತಿ ಹೊಸ ರೂಪ ಪಡೆದು, ಮಹಿಳೆಯರ ದಿರಿಸೂ ಆಗಿದೆ. ಪಂಜಾಬಿ ಸೂಟ್‌, ಪಟಿಯಾಲ ಪ್ಯಾಂಟ್‌, ಹ್ಯಾರೆಮ್‌ ಪ್ಯಾಂಟ್‌ನಂತೆಯೇ ಈ ಧೋತಿಯನ್ನು ಮಹಿಳೆಯರು ತೊಡಬಹುದಾಗಿದೆ…

ಫ್ಯಾಶನ್‌ನಲ್ಲಿ ಪುರುಷ-ಮಹಿಳೆಯರ ವೈವಿಧ್ಯಗಳಲ್ಲಿನ ಅಂತರ ಕ್ರಮೇಣ ಕಡಿಮೆಯಾಗುತ್ತಿದೆ. ಪುರುಷರು ಧರಿಸುವ ಅನೇಕ ಉಡುಪುಗಳು ಕೆಲವು ಮಾರ್ಪಾಡುಗಳೊಂದಿಗೆ ಇದೀಗ ಹೆಣ್ಮಕ್ಕಳ ವಾರ್ಡ್‌ರೋಬ್‌ ಸೇರುತ್ತಿವೆ. ಅಂಥಾ ಒಂದು ದಿರಿಸು “ಧೋತಿ’.
ಹಿಂದಿನ ಕಾಲದಲ್ಲಿ ಧೋತಿ ಅಥವಾ ಕಚ್ಚೆ ಎಂಬುದು ಗಂಡಸರಿಗೆ ಮೀಸಲಾಗಿತ್ತು. ಆದರೀಗ ಅದೇ ಧೋತಿ ಹೊಸ ರೂಪ ಪಡೆದು, ಮಹಿಳೆಯರ ದಿರಿಸೂ ಆಗಿದೆ. ಪಂಜಾಬಿ ಸೂಟ್‌, ಪಟಿಯಾಲ ಪ್ಯಾಂಟ್‌, ಹ್ಯಾರೆಮ್‌ ಪ್ಯಾಂಟ್‌ನಂತೆಯೇ ಈ ಧೋತಿಯನ್ನು ಮಹಿಳೆಯರು ತೊಡಬಹುದಾಗಿದೆ. ಕಚ್ಚೆ ಕಟ್ಟಬೇಕಾಗಿಲ್ಲ, ಇದು ರೆಡಿಮೇಡ್‌. ಲಾಡಿ, ವೆಲೊðà, ಎಲಾಸ್ಟಿಕ್‌, ಬಟನ್‌ (ಗುಂಡಿ), ಹುಕ್‌ ಮತ್ತು ಬಕಲ… ಆಯ್ಕೆಗಳಲ್ಲಿ ಇವು ಲಭ್ಯವಿವೆ. ಆದ್ದರಿಂದ ಇವುಗಳನ್ನು ಕುರ್ತಾ, ಕಮೀಜ… ಮತ್ತು ಇತರ ಅಂಗಿಯ ಜೊತೆ ತೊಟ್ಟುಕೊಳ್ಳಬಹುದು. 

ಟೂ ಇನ್‌ ಒನ್‌ ಆದ ಧೋತಿ
ಫ್ಯಾಷನ್‌ ಲೋಕದಲ್ಲಿ ಈ ಧೋತಿಯನ್ನು ಸಾಂಪ್ರದಾಯಿಕ ಉಡುಗೆಗಳ ಜೊತೆ ಪರಿಚಯಿಸಲಾಗಿತ್ತು. ಆದರೀಗ ಇದನ್ನು ಇತರ ವೆಸ್ಟರ್ನ್ (ಪಾಶ್ಚಾತ್ಯ) ಪ್ಯಾಂಟ್‌ನಂತೆಯೇ ಬಳಸಲಾಗುತ್ತಿದೆ. ಟೀ ಶರ್ಟ್‌ ಜೊತೆ, ಜಾಕೆಟ್‌ ಜೊತೆ, ಕಾಲರ್‌ ಇರುವ ಶರ್ಟ್‌ (ಅಂಗಿ) ಜೊತೆ ಮತ್ತು ಕ್ರಾಪ್‌ ಟಾಪ್‌ ಜೊತೆಗೂ ಈ ಧೋತಿಯನ್ನು ತೊಡಲಾಗುತ್ತಿದೆ. ಸಾಂಪ್ರದಾಯಿಕ ಉಡುಗೆಗಳ ಜೊತೆ ತೊಡುವಾಗ ಇದರ ಮೇಲೆ ಶಾಲು ಅಥವಾ ದುಪಟ್ಟಾವನ್ನು ಹಾಕಿಕೊಳ್ಳಬಹುದು.

ಮಿಕ್ಸ್‌ ಮ್ಯಾಚ್‌ ಮಾಡಿ
ಈ ಟ್ರೆಂಡ್‌ ಅನ್ನು ಹಲವು ಚಿತ್ರ ನಟಿಯರು ಫಾಲೋ ಮಾಡಿದ್ದನ್ನು ನೀವು ನೋಡಿರುತ್ತೀರ. ಆದ್ದರಿಂದಲೇ ಇದು ಕಾಲೇಜು ವಿದ್ಯಾರ್ಥಿನಿಯರಲ್ಲಿ ಜನಪ್ರಿಯವಾಗಿದೆ. ಪ್ರಯೋಗ ಮಾಡಲು ಸಿದ್ಧವಿರುವ ಮಹಿಳೆಯರು ಇಂಥ ಧೋತಿ ಜೊತೆ ಮಿಕÕ… ಅಂಡ್‌ ಮ್ಯಾಚ್‌ ಮಾಡಿ ನೋಡಬಹುದು. ಅಂದರೆ ಒಂದು ಬಣ್ಣದ ಮೇಲುಡುಪು, ಬೇರೊಂದು ಬಣ್ಣದ ಧೋತಿ ಹಾಗೂ ಮಗದೊಂದು ಬಣ್ಣದ ಶಾಲು, ಸ್ಕಾಫ್ì ಅಥವಾ ದುಪಟ್ಟಾ. ರವಿಕೆ ಜೊತೆ ಈ ಧೋತಿ ತೊಟ್ಟು, ಮೇಲೊಂದು ದಾವಣಿ ಹಾಕಿ, ಕಚ್ಚೆ ಸೀರೆಯಂತೆಯೂ ಉಡುವ ಫ್ಯಾಷನ್‌ ಟ್ರೆಂಡ್‌ ಆಗ್ತಿದೆ. ಈ ದಿರಿಸಿನ ಜೊತೆಗೆ ಸೊಂಟಕ್ಕೊಂದು ಬೆಲ್ಟ್ ಕೂಡ ತೊಟ್ಟು, ಕಾಲಿಗೆ ಹೈ ಹೀಲ್ಡ್ ಚಪ್ಪಲಿ ಹಾಕಿ ಸ್ಟೈಲ್ ಸ್ಟೇಟ್‌ಮೆಂಟ್‌ ಮಾಡಿದ್ದಾರೆ ಹಲವಾರು ಸಿನಿಮಾ ತಾರೆಯರು, ನಿರೂಪಕಿಯರು ಹಾಗೂ ಧಾರಾವಾಹಿಯ ನಟಿಯರು.

ಮೋದಿ ಜಾಕೆಟ್‌ ಧರಿಸಿ
ಅತ್ತ ಇಂಡಿಯನ್‌ ಉಡುಪಿನ ಜೊತೆಗೂ ಒಪ್ಪುವ, ಇತ್ತ ವೆಸ್ಟರ್ನ್ ಉಡುಗೆಗೂ ಒಪ್ಪುವ ಈ ಧೋತಿ ತುಂಬ ವರ್ಸಟೈಲ… ಆಗಿದೆ. ಚಿಕ್ಕ ಟಾಪ್‌ (ಮೇಲುಡುಪು) ಜೊತೆ ಧೋತಿ ತೊಟ್ಟು, ಉದ್ದನೆಯ ಶ್ರಗ್‌ (ಬಟನ್‌ ರಹಿತ ತೆಳ್ಳಗಿನ ಕೋಟು) ಕೂಡ ಧರಿಸಬಹುದು. ಇದು ಕೂಡ ಸದ್ಯಕ್ಕೆ ಟ್ರೆಂಡ್‌ ಆಗುತ್ತಿದೆ. ಇಲ್ಲವೇ, “ಮೋದಿ ಜಾಕೆಟ್‌’ ಎಂದು ಪ್ರಸಿದ್ಧವಾಗಿರುವ ಮೇಲುಡುಪನ್ನೂ ಧೋತಿ ಜೊತೆ ಧರಿಸಬಹುದು. ಟೀ ಶರ್ಟ್‌ ಜೊತೆ ಧೋತಿ ಉಟ್ಟು ಹಿಂದಿ ಸಿನಿಮಾ “ಜಬ್‌ ವಿ ಮೆಟ್‌’ನಲ್ಲಿ ನಾಯಕಿ ಕರೀನಾ ಕಪೂರ್‌ ಈ ಟ್ರೆಂಡ್‌ ಶುರು ಮಾಡಿದ್ದು, ಇದು ಇಂದಿಗೂ ಯುವತಿಯರ ಫೇವರಿಟ್‌ ಆಗಿದೆ.

ಎವರ್‌ಗ್ರೀನ್‌ ಟ್ರೆಂಡ್‌…
ನಂತರದ ಬಹುತೇಕ ಚಿತ್ರಗಳಲ್ಲಿ ಎಲ್ಲ ನಾಯಕಿಯರೂ ಈ ರೀತಿಯ ಧೋತಿಯನ್ನು ಒಂದಲ್ಲ ಒಂದು ಸೀನ್‌ನಲ್ಲಿ ಉಟ್ಟಿ¨ªಾರೆ. ಎಲ್ಲೂ ಇಲ್ಲ ಎಂದರೆ, ಕನಿಷ್ಠ ಒಂದು ಹಾಡಿನಲ್ಲಾದರೂ ಧೋತಿ ತೊಟ್ಟು ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಟ್ರೆಂಡ್‌ ಇನ್ನೂ ಚಾಲ್ತಿಯಲ್ಲಿದೆ. ಈ ದಿರಿಸು ಸಡಿಲವಾಗಿರುವ ಕಾರಣ, ಮಹಿಳೆಯರು ಧೋತಿಯನ್ನು ಯೋಗ ತರಗತಿ ಹಾಗೂ ಜಿಮ್‌ನಲ್ಲೂ ಧರಿಸುತ್ತಾರೆ. ಸ್ಟೈಲ್ ಜೊತೆ ಆರಾಮವನ್ನೂ ನೀಡುತ್ತದೆ ಈ ಧೋತಿ! ತಮ್ಮ ನೆಚ್ಚಿನ ಕಲಾವಿದರನ್ನು ಅನುಕರಿಸುವ ಕಾಲೇಜು ವಿದ್ಯಾರ್ಥಿನಿಯರು ಮತ್ತು ಯುವತಿಯರಿಂದ ಧೋತಿ ಇನ್ನೂ ಕೆಲ ಕಾಲ ಸುದ್ದಿಯಲ್ಲಿ ಇದ್ದೇ ಇರುತ್ತದೆ.

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.