Udayavni Special

ಸ್ಟ್ರೀಟ್‌ ಸ್ಟೈಲ್‌ ಸುಂದರಿ

Team Udayavani, Feb 24, 2021, 6:50 PM IST

ಸ್ಟ್ರೀಟ್‌ ಸ್ಟೈಲ್‌ ಸುಂದರಿ

ಸಾಂದರ್ಭಿಕ ಚಿತ್ರ

ಫ್ಯಾಷನ್‌ ಲೋಕದಲ್ಲಿ ಹೊಸ ಅಲೆ ಎಬ್ಬಿಸಿರುವ ಟ್ರೆಂಡ್‌ – ಸ್ಟ್ರೀಟ್‌ ಸ್ಟೈಲ್‌ ಲುಕ್‌. ಏನಿದು? ಹೊಸ ಫ್ಯಾಷನ್‌ ಎಂದು ಯೋಚಿಸಿದಿರಾ? ಮನೆಯಲ್ಲಿ ತೊಡುವ ಉಡುಗೆಯನ್ನು ಮನೆಯಿಂದ ಹೊರಗೆ ಹೋದಾಗಲೂ ಸ್ಟೈಲ್‌ ಬದಲಿಸಿಕೊಂಡು ತೊಡುವುದು! ಸಡಿಲವಾದ ಅಂಗಿ, ಸಡಿಲವಾದ ಪ್ಯಾಂಟ್‌, ಸಡಿಲವಾದ ಮೇಲುಡುಪು, ಇವೆಲ್ಲದರ ಜೊತೆಗೆ ಸ್ಟೈಲಿಶ್‌ ಬೆಲ್ಟ್ (ಸೊಂಟಪಟ್ಟಿ), ಶೂಸ್‌, ಬ್ಯಾಗ್‌, ತಂಪು ಕನ್ನಡಕಗಳು ಹಾಗೂ ಇನ್ನಿತರ ಆಕ್ಸೆಸರೀಸ್‌. ಇವಿಷ್ಟಿದ್ದರೆ ಸ್ಟ್ರೀಟ್‌ ಸ್ಟೈಲ್‌ ಲುಕ್‌ ರೆಡಿ! ಏಕೆಂದರೆ “ಓವರ್‌ ಸೈಜ್ಡ್ ಈಸ್‌ ದ ನ್ಯೂ ಫಿಟ್‌!”

ನಿಮ್ಮ ದೇಹದ ಗಾತ್ರ ಮೀಡಿಯಂ ಆಗಿದ್ದರೆ ಲಾರ್ಜ್‌ ಸೈಜ್‌ನ ಹೂಡಿ ತೊಡುವುದು. ಲಾರ್ಜ್‌ ಆಗಿದ್ದರೆ ಎಕ್ಸ್ ಎಲ್‌ ಸೈಜ್‌ನ ಹೂಡಿ ತೊಡುವುದು. ಹೂಡಿ ಅಷ್ಟೇ ಅಲ್ಲ, ಅಂಗಿ, ಟಿ ಶರ್ಟ್‌, ಕ್ರಾಪ್‌ ಟಾಪ್‌, ಟ್ಯಾಂಕ್‌ ಟಾಪ್‌, ಮತ್ತಿತರ ಬಗೆಯ ಮೇಲುಡುಪು ತೊಡಬಹುದು, ಸಡಿಲವಾದ ಬ್ಯಾಗೀ ಪಾಂಟ್ಸ್‌, ಪಲಾಝೋ, ಹೈ ವೇಸ್ಟ್ ಡೆನಿಮ್‌ ಅಥವಾ ಫ್ಲೇರ್ಡ್‌ ಪಾಂಟ್ಸ್‌ನೊಂದಿಗೆ. ಈ ಗೆಟ್‌ ಅಪ್‌ ನೊಂದಿಗೆ ಮ್ಯಾಚ್‌ ಆಗುವ ಸ್ನೀಕರ್ಷ್‌, ಶೂಸ್‌ ಅಥವಾ ಬೂಟ್ಸ್‌ ಹಾಗೂ ಸನ್‌ ಗ್ಲಾಸ್‌ ತೊಟ್ಟರಾಯಿತು. ತೊಟ್ಟ ಅಂಗಿ- ಪ್ಯಾಂಟ್‌ ಅಥವಾ ಸ್ಕರ್ಟ್‌ ಜೊತೆ ಜಾಕೆಟ್‌ ಬಳಸುವು ದಾದರೆ ಅದನ್ನು ತೊಡಬೇಕಿಲ್ಲ. ಹಾಗೇ ಸುಮ್ಮನೆ ಭುಜಗಳ ಮೇಲೆ ಹಾಕಿಕೊಂಡರೆ ಆಯಿತು. ಇದೂ ಒಂದು ಸ್ಟೈಲೇ! ಇದರಲ್ಲಿ ಕಂಡು ಬರುವ ಇನ್ನೊಂದು ಪ್ರಕಾರ ಏನೆಂದರೆ, ಸ್ಲೀವ್‌ ಲೆಸ್‌ ಡ್ರೆಸ್‌. ಅಂದರೆ, ತೋಳುಗಳು ಇಲ್ಲದ ಡ್ರೆಸ್‌ ಜೊತೆ ಟಿ ಶರ್ಟ್‌ ತೊಡುವುದು!

ಮಾಸ್ಕ್ ಕಡ್ಡಾಯ :

ಹೌದು, ಮೊದಲಿಗೆ ಟಿ ಶರ್ಟ್‌ ತೊಟ್ಟು ಅದರ ಮೇಲೆ ಸ್ಲೀವ್‌ ಲೆಸ್‌ ಡ್ರೆಸ್‌ ತೊಟ್ಟು, ಮ್ಯಾಚಿಂಗ್‌ ಸ್ನೀಕರ್ಷ್‌, ಹೈ ಹೀಲ್ಡ್ ಪಾದರಕ್ಷೆ ತೊಟ್ಟರೆ ಸ್ಟ್ರೀಟ್‌ ಸ್ಟೈಲ್‌ ಲುಕ್‌ನ ಇನ್ನೊಂದು ಪ್ರಕಾರ! ಪ್ಲೇನ್‌ ಟಿ ಶರ್ಟ್‌ ಜೊತೆ ಅನಿಮಲ್‌ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌ ಅಥವಾ ಇಂಡಿಯನ್‌ ಪ್ರಿಂಟ್‌ ಉಳ್ಳ ಸ್ಲೀವ್‌ ಲೆಸ್‌ ಡ್ರೆಸ್‌ ತೊಟ್ಟರೆ, ಪ್ರಿಂಟೆಡ್‌ ಟಿ ಶರ್ಟ್‌ ನೊಂದಿಗೆ ಪ್ಲೇನ್‌ ಸ್ಲೀವ್‌ಲೆಸ್‌ ಡ್ರೆಸ್‌ ತೊಡುವುದು ಉತ್ತಮ. ಸಡಿಲವಾದ ಶರ್ಟ್‌ ಡ್ರೆಸ್‌ ತೊಡುವುದಾದರೆ ಎದ್ದು ಕಾಣುವಂಥ ಬೆಲ್ಟ್ ತೊಟ್ಟು, ಸ್ನೀಕರ್ಷ್‌ ಅಥವಾ ಹೈ ಹೀಲ್ಡ್ ಪಾದರಕ್ಷೆ, ತಂಪು ಕನ್ನಡಕ, ಓವರ್‌ ಸೈಜ್ಡ್ ಬ್ಯಾಗ್‌ ಹಾಗೂ ಭುಜಗಳ ಮೇಲೆ ಜಾಕೆಟ್‌ ಇದ್ದರೆ ಲುಕ್‌ ಕಂಪ್ಲೀಟ್‌! ಆದರೆ ನೆನಪಿಡಿ. ಯಾವುದೇ ಕಾಂಬಿನೇಶನ್‌ ಟ್ರೈ ಮಾಡಿದರೂ ಎಲ್ಲದರ ಜೊತೆ ಮಾಸ್ಕ್ ಕಡ್ಡಾಯ!

ನೀವೂ ಟ್ರೈ ಮಾಡಿ! :  

ಈ ಲುಕ್‌ ಇಷ್ಟೊಂದು ಮೆಚ್ಚುಗೆ ಪಡೆಯಲು ಕಾರಣವೇ ಈ ಕೋವಿಡ್‌ 19! ಲಾಕ್‌ ಡೌನ್‌ ಮತ್ತು ವರ್ಕ್‌ ಫ್ರಮ್‌ ಹೋಂ ಕಾರಣದಿಂದ ಜನರು ಮನೆ ಉಡುಗೆಯಲ್ಲೇ ಕೆಲಸ ಮಾಡುತ್ತ, ಅವುಗಳಲ್ಲಿ ಆರಾಮ ಮತ್ತು ಸ್ಟೈಲ್‌ ಎರಡನ್ನೂ ಕಂಡುಕೊಂಡರು! ಹಾಗಾಗಿ ಅವುಗಳನ್ನೇ ಈಗ ಹೊರಗಡೆಯೂ ಹಾಕಿಕೊಂಡು ಓಡಾಡುತ್ತಿದ್ದಾರೆ. ಸಿನಿಮಾ ತಾರೆಯರು, ರೂಪದರ್ಶಿಯರು, ಕ್ರೀಡಾಪಟುಗಳು ಸೇರಿದಂತೆ ಸೆಲೆಬ್ರೆಟಿಗಳು ಸ್ಟ್ರೀಟ್‌ ಸ್ಟೈಲ್‌ ಲುಕ್‌ ನಲ್ಲಿ ಫೋಟೋ ಕ್ಲಿಕ್ಕಿಸಿಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ಈ ಲುಕ್‌ ಟ್ರೆಂಡ್‌ ಆಗುವಂತೆ ಮಾಡಿದ್ದಾರೆ. ನೀವೂ ಸ್ಟ್ರೀಟ್‌ ಸ್ಟೈಲ್‌ ಲುಕ್‌ ಟ್ರೆ„ ಮಾಡಿ. ಜೊತೆಗೆ ಮ್ಯಾಚಿಂಗ್‌ ಮಾಸ್ಕ್ ಕೂಡ ತೊಟ್ಟುಕೊಳ್ಳಿ. ಆಗ ಆರಾಮ, ಸ್ಟೈಲ್‌ ಮತ್ತು ಸುರಕ್ಷೆ, ಎಲ್ಲವೂ ಇದ್ದಂತೆ ಆಗುತ್ತದೆ!

– ಅದಿತಿಮಾನಸ ಟಿ ಎಸ್‌

ಟಾಪ್ ನ್ಯೂಸ್

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ಲಾಕ್‌ಡೌನ್‌ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ

ಲಾಕ್‌ಡೌನ್‌ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

ಪೋಷಕರೇ, ಈ ಕಿವಿಮಾತನ್ನು ಕೇಳಿಸಿಕೊಳ್ಳಿ : ಶಿಸ್ತಿನ ಪಾಠವನ್ನು ಹುಡುಗರಿಗೂ ಕಲಿಸಬೇಕು!

ಪೋಷಕರೇ, ಈ ಕಿವಿಮಾತನ್ನು ಕೇಳಿಸಿಕೊಳ್ಳಿ : ಶಿಸ್ತಿನ ಪಾಠವನ್ನು ಹುಡುಗರಿಗೂ ಕಲಿಸಬೇಕು!

ಅಮ್ಮನ ಚಾಕರಿಯನ್ನು ಯಾರು ಮಾಡ್ತಾರೆ?

ಅಮ್ಮನ ಚಾಕರಿಯನ್ನು ಯಾರು ಮಾಡ್ತಾರೆ?

ಏನು ತಿಂಡಿ?ಇವತ್ತೂ ಉಪ್ಪಿಟಾ!

ಏನು ತಿಂಡಿ?ಇವತ್ತೂ ಉಪ್ಪಿಟಾ!

Untitled-1

ಮಕ್ಕಳಿವರೇನಮ್ಮ ಮಕ್ಕಳಿವರಾ…

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.