ಗಡ್ಡಪ್ಪಗಳೇ ಗ್ರೇಟು!

ಹುಡ್ಗೀರು ಹೇಳಿದ ಮಾತು...

Team Udayavani, Nov 20, 2019, 6:13 AM IST

gaddappa

ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಹುಡುಗಿಯರ ಅಭಿರುಚಿಗಳೂ ಬದಲಾಗಿವೆ. ಈಗ ಕುರುಚಲು ಗಡ್ಡವಲ್ಲ, ಉದ್ದ ಗಡ್ಡದ ಹುಡುಗರೇ ಹ್ಯಾಂಡ್‌ಸಮ್‌ ಅನ್ನುತ್ತಿದ್ದಾರೆ ಯುವತಿಯರು…

ಚೆಲುವ, ನಿನ್ನ ಗುಳಿ ಕೆನ್ನೆ ಮುಚ್ಚಿದರೂ ಪರವಾಗಿಲ್ಲ, ಮುದ್ದು ಮುಖದ ತುಂಬಾ ಪೊಗದಸ್ತಾಗಿ ಹರಡಿರುವ ಗಡ್ಡ ತೆಗೆಯಬೇಡ. ಗಾಳಿಗೆ ಹಾರುವ ನನ್ನ ಮುಂಗುರುಳನ್ನು ನೀನು ಬೆರಳುಗಳಿಂದ ಸರಿಸಿ ಖುಷಿ ಪಡುವಂತೆ, ನಾನೂ ನಿನ್ನ ಮುಖದ ಮೇಲೆ ಕೈಯಾಡಿಸಿ, ಚುಚ್ಚುವ ಗಡ್ಡದ ಮೇಲೊಂದು ಮುತ್ತಿನ ಮುದ್ರೆಯೊತ್ತುತ್ತೇನೆ…  ಇದು ಹುಚ್ಚುಕೋಡಿ ಮನಸ್ಸಿನ ಒಬ್ಬಳ ಕನವರಿಕೆಯಲ್ಲ. ಈಗೀಗ ಹರೆಯದ ಹುಡುಗಿಯರಿಂದ ಹಿಡಿದು, ಮಧ್ಯ ವಯಸ್ಸಿನ ಹೆಂಗಸರಿಗೂ “ಗಡ್ಡ ಅನ್ನೋದು’ ತಲೆಕೆಡಿಸಿಬಿಟ್ಟಿದೆ. ಕಪ್ಪನೆಯ ಗಡ್ಡದಿಂದ ಹಿಡಿದು ಬೆಳ್ಳಿ ಗೆರೆಗಳು ಮೂಡಿದಂತೆ ಕಾಣುವ “ಸಾಲ್ಟ… ಅಂಡ್‌ ಪೆಪ್ಪರ್‌’ವರೆಗೂ ಗಡ್ಡ ಟ್ರೆಂಡ್‌ ಸೃಷ್ಟಿಸಿದೆ.

ಮೊದಲೆಲ್ಲ ಗಡ್ಡ ಬಿಟ್ಟವರನ್ನು ಕಂಡ್ರೆ “ಏನೋ, ಲವ್‌ ಫೇಲ್ಯೂರಾ? ಹೆಂಡತಿ ಗರ್ಭಿಣೀನಾ?’ ಅಂತ ಕೇಳ್ಳೋ ವಾಡಿಕೆ ಇತ್ತು. ಆದರೆ ಈಗ ಗಡ್ಡ ಬಿಡದೇ ಇರೋರನ್ನು ಕಾಣೋದೇ ಅಪರೂಪ. ಗಡ್ಡ ಬಿಟ್ಟವರನ್ನೇ ಹುಡುಗಿಯರು ಜಾಸ್ತಿ ಇಷ್ಟಪಡುತ್ತಾರೆ ಎಂದು ತಿಳಿದ ಮೇಲಂತೂ, ದಾಡಿ ಬಿಡೋರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಅಂದಹಾಗೆ ಯಾಕಪ್ಪ ದಾಡಿ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಅಂತ ಕೇಳ್ತಿದ್ದೀರಾ? ಹೇಳಿ ಕೇಳಿ ಇದು ನೋ ಶೇವ್‌ ನವಂಬರ್‌. ವಾರಕ್ಕೊಂದು ವಿಶೇಷ ಆಚರಿಸುವ ಈ ದಿನಗಳಲ್ಲಿ, ಇಡೀ ನವಂಬರ್‌ ತಿಂಗಳನ್ನು “ಶೇವ್‌ ಮಾಡದ ತಿಂಗಳಾಗಿ’ ಆಚರಿಸಲಾಗುತ್ತದೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೋ ಶೇವ್‌ ನವಂಬರ್‌ ಆಚರಣೆಗೆ ಬಂತು.

ಆದ್ರೆ ಗಡ್ಡವನ್ನು ಕೆರೆದು ಅದರ ಇತಿಹಾಸವನ್ನು ನೋಡಿದಾಗ ಈಜಿಪ್ಟ್ ದೇಶದೊಳಕ್ಕೆ ಕರೆದುಕೊಂಡು ಹೋಗುತ್ತೆ. ಅಲ್ಲಿ ಉನ್ನತ ಶ್ರೇಣಿಯಲ್ಲಿದ್ದ ಪುರುಷರು ಹಾಗೂ ರಾಜರು ತಮ್ಮ ಗೌರವಕ್ಕೋಸ್ಕರ ದಾಡಿ ಬಿಡುವ ಪದ್ಧತಿ ಇತ್ತು. ಈಜಿಪ್ಟ್ನಲ್ಲೂ ಗಡ್ಡಪ್ಪಗಳಿಗೆ ವಿಶೇಷ ಮನ್ನಣೆ ಸಿಗ್ತಿತ್ತು ಅನ್ನುತ್ತೆ ಇತಿಹಾಸ. ಮಧ್ಯ ಯುಗದಲ್ಲಿ ದಾಡಿ ಬೇರೆಯದ್ದೇ ಸ್ವರೂಪ ಪಡೆದುಕೊಳು¤. ಆದ್ರೆ ಅಲೆಕ್ಸಾಂಡರ್‌ ಸೇರಿದಂತೆ ಬೇರೆ ಬೇರೆ ರಾಜರ ಕಾಲದಲ್ಲಿ ಗಡ್ಡ ಬಿಟ್ಟ ಸೈನಿಕರು ನಂಬಿಕೆಗೆ ಅರ್ಹರಲ್ಲ ಎಂಬ ಭಾವನೆಯಿತ್ತಂತೆ.

ವರ್ತಮಾನದಲ್ಲಿ, ಗಡ್ಡ ಅಂದ್ರೆ ಸ್ಟೈಲ್‌ನ ದ್ಯೋತಕ. ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುವ ಹುಡುಗರ ಫೋಟೊಗಳನ್ನು ಗಮನಿಸಿ, ಅವರಲ್ಲಿ ಬಹಳಷ್ಟು ಜನರು ಗಡ್ಡ ಬಿಟ್ಟು ಮೆರೆಯುತ್ತಿರುವವರೇ ಆಗಿರುತ್ತಾರೆ. ಗಡ್ಡದ ಮೇಲೆ ಅನೇಕ ಅಧ್ಯಯನಗಳೂ ನಡೆದಿವೆ, ಗೊತ್ತಾ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಡ್ಡದ ಕೂದಲಿನ ಉದ್ದದ ಆಧಾರದ ಮೇಲೆ ಆ ವ್ಯಕ್ತಿಯ ಗುಣ ಸ್ವಭಾವ ತಿಳಿಯುವ ಕುರಿತಾದ ಅಧ್ಯಯನವೂ ಆಗಿಬಿಟ್ಟಿದೆ. ಆಕರ್ಷಣೆ, ಅರೋಗ್ಯ, ಹಾಗೂ ವ್ಯಕ್ತಿಯ ಸಾಮರ್ಥ್ಯ ಎಷ್ಟಿದೆ ಅನ್ನೋದನ್ನು ಗಡ್ಡದ ಅಳತೆಯ ಆಧಾರದ ಮೇರೆಗೆ ನಿರ್ಧರಿಸುತ್ತಾರಂತೆ. ಕ್ಲೀನ್‌ ಶೇವ್‌ ಮಾಡುವವರಿಗಿಂತ, ಟ್ರಿಮ್‌ ಮಾಡುವವರಿಗಿಂತ, ಉದ್ದ ಗಡ್ಡದವರೇ ಹೆಚ್ಚು ಆಕರ್ಷಣೀಯರಂತೆ.

ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಕೆನ್ನೆಯ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಅಭಿರುಚಿಗಳೂ ಬದಲಾದವು. ಪಿಯುಸಿ ದಾಟುತ್ತಿದ್ದಂತೆ ಚಿಗುರು ಮೀಸೆ ಹುಡುಗರು, ತಮಗೆ ಯಾವಾಗಪ್ಪಾ ಗಡ್ಡ ಬರುತ್ತೆ? ಅಂತ ಕನ್ನಡಿ ಮುಂದೆ ನಿಂತು ಮುಖಾವಲೋಕನ ಮಾಡುತ್ತಿರುತ್ತಾರೆ. ಆಗಲೇ ಗಡ್ಡ-ಮೀಸೆ ಚಿಗುರಿದ ಹೈದರು, ಸ್ಟೈಲಾಗಿ ಗಡ್ಡ ಬಿಟ್ಟು, ಅದನ್ನು ಪೋಷಿಸಿ (ಹುಡುಗಿಯರು ತಮ್ಮ ಕೂದಲಿನ ಬಗ್ಗೆ ಕೇರ್‌ ತೆಗೆದುಕೊಳ್ಳುವಷ್ಟೇ ಹುಡುಗರು ಗಡ್ಡದ ಬಗ್ಗೆ ಕಾಳಜಿ ಮಾಡ್ತಾರೆ) ಹುಡುಗಿಯರ ಚಿತ್ತವನ್ನು ತಮ್ಮೆಡೆಗೆ ಸೆಳೆಯುತ್ತಿರುತ್ತಾರೆ.

ಇವೆಲ್ಲದರ ಮಧ್ಯೆ, ಅಪ್ಪ- ಅಮ್ಮಂಗೆ ತಲೆನೋವು, ಮಗನ ಬಗೆಗೇನೋ ಸಣ್ಣ ಅನುಮಾನ. ಇವನ ಗಡ್ಡದ ಹಿಂದಿನ ಮರ್ಮವೇನು? ಮಗ ಯಾರನ್ನಾದ್ರೂ ಲವ್‌ ಮಾಡ್ತಿರಬಹುದಾ? ಪ್ರೀತಿಸಿದ ಹುಡುಗಿ ಮೋಸ ಮಾಡಿಬಿಟ್ಳಾ, ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟನಾ, ಮೊದಲಿನಂತೆ ಈಗ ಇವನಿಗೆ ಯಾವುದ್ರಲ್ಲೂ ಯಾಕೆ ಆಸಕ್ತಿಯಿಲ್ಲ, ಏನಾದ್ರೂ ಕೆಟ್ಟ ದಾರಿ ಹಿಡಿದುಬಿಟ್ಟನಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಧುತ್ತನೆ ಎದ್ದು ನಿಂತು ಕಾಡತೊಡಗುತ್ತವೆ. ಆದ್ರೆ, ಮಗನ ಗಡ್ಡದ ಮೇಲಿನ ವ್ಯಾಮೋಹ ಅವರಿಗೆ ಅರ್ಥವೇ ಆಗೋದಿಲ್ಲ. ಅವರ ಪಾಲಿಗೆ ಗಡ್ಡ ಅನ್ನೋದು, ಜೀವನದ ಮೇಲಿನ ನಿರಾಸಕ್ತಿ, ಅನಾರೋಗ್ಯದ ಸಂಕೇತ.

ಇಂದು ಗಡ್ಡ ಬಿಟ್ಟವನು, ನಾಳೆ ಎಲ್ಲವನ್ನೂ ಬಿಟ್ಟು ಸನ್ಯಾಸಿ ಆಗಿಬಿಟ್ಟರೆ ಅಂತ ಅವರಿಗೆ ಭಯ. ಅಮ್ಮನಂತೂ ಮಗನಿಗೆ ದಿನಾ, “ಗಡ್ಡ ತೆಗೆಯೋ’ ಅಂತ ಪರಿಪರಿಯಾಗಿ ಬೇಡಿಕೊಂಡರೂ, ನಯವಾಗಿ ಗದರಿದರೂ, ಮುನಿಸು ತೋರಿದರೂ ಮಗನ ಮನಸ್ಸು ಬದಲಾಗುವುದು ಕಷ್ಟ. ಯಾಕೆ ಹೇಳಿ, ಕ್ಲಾಸ್‌ನಲ್ಲಿ ಸುಮಾರು ಹುಡುಗಿಯರು ತನ್ನತ್ತ ಮೆಚ್ಚುಗೆಯ ನೋಟ ಬೀರುವುದು ಗಡ್ಡದ ಕಾರಣದಿಂದಲೇ ಅಂತ ಅವನಿಗೂ ಗೊತ್ತಾಗಿ ಹೋಗಿದೆ.

ಹಾಗಾದ್ರೆ, ಹುಡುಗಿಯರಿಗ್ಯಾಕೆ ಗಡ್ಡ ಇಷ್ಟ? ಗಡ್ಡ ಬಿಟ್ಟ ಹುಡುಗರು ಬುದ್ಧಿವಂತರು, ಹೆಚ್ಚು ಸಾಮರ್ಥ್ಯವುಳ್ಳವರು, ಪ್ರಬುದ್ಧರು ಅನ್ನೋದು ಹಲವು ಹುಡುಗಿಯರ ಬಲವಾದ ನಂಬಿಕೆ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರವಿಲ್ಲ. ಮಾನವರ ವಿಕಾಸವನ್ನು ಗಮನಿಸಿದರೆ, ಸ್ತ್ರೀಯರು ತಮ್ಮನ್ನು ಹಾಗೂ ಮಕ್ಕಳನ್ನು ಕಾಪಾಡುವ ಸಮರ್ಥ ಪುರುಷನನ್ನೇ ಸಂಗಾತಿಯಾಗಿ ಹುಡುಕ್ತಿದ್ರು. ಅಂದ ಹಾಗೆ, ಈ ಫೇಶಿಯಲ್‌ ಹೇರ್‌, ಗಂಡಸಿನ ಟೆಸ್ಟೊ ಸ್ಟಿರೋನ್‌ ಹಾರ್ಮೋನ್‌ ಚೆನ್ನಾಗಿದೆ ಅನ್ನೋದಕ್ಕೆ ಹಿಡಿದ ಕನ್ನಡಿಯೂ ಹೌದು. ಎಷ್ಟೋ ಕಾಲಗಳಿಂದ ಮೀಸೆ ಪ್ರಪಂಚವನ್ನು ಆಳಿರೋ ಜಟ್ಟಿ ಮೀಸೆ, ಗಿರಿಜಾ ಮೀಸೆ ಈಗ್ಲೂ ಚಾಲ್ತಿಯಲ್ಲಿದೆ. ಹಾಗೆ ಅದಕ್ಕೀಗ ಗಡ್ಡವೂ ಸೇರಿಕೊಂಡಿದೆ.

ಹಿಂದೆಲ್ಲ ಮದುವೆಯ ದಿನ ಮದುಮಗ ಶೇವ್‌ ಮಾಡಿಯೋ ಅಥವಾ ಬರೀ ಮೀಸೆ ಬಿಟ್ಟು ಡಿಸೇಂಟ್‌ ಆಗಿ ಕಾಣುತ್ತಿದ್ದ. ಆದರೀಗ, ಮದುಮಗನೂ ಗಡ್ಡ ಬಿಟ್ಟು ಮಿಂಚುತ್ತಾನೆ. ಶುಭ ಸಂದರ್ಭದಲ್ಲೂ ಗಡ್ಡ ಬಿಡಬೇಕಾ ಅಂತ ಹಿರಿಯರು ಗದರಿದರೂ ಆತ ಕ್ಯಾರೆ ಅನ್ನುವುದಿಲ್ಲ. ಹೀಗೆ ಗಡ್ಡದ ಪುರಾಣ ಹೇಳ್ತಾ ಹೋದ್ರೆ ಮುಗಿಯುವ ಕಥೆಯಂತೂ ಅಲ್ಲ. ಗಡ್ಡ ಬಿಡಲು ನವೆಂಬರೇ ಆಗಬೇಕಿಲ್ಲ. ಈಗಿನ ಹುಡುಗರು 365 ದಿನಗೂ ಗಡ್ಡಪ್ಪಗಳೇ. ಮುಖದಲ್ಲಿ ಗಡ್ಡ ಸೊಂಪಾಗಿ ಬರುತ್ತಿಲ್ಲ ಅಂದ್ರೆ ಹುಡುಗರಿಗದು ಮುಜುಗರದ ವಿಚಾರವೂ ಹೌದು. ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು ಅನ್ನೋ ಕಾಲ ಹೋಗಿ, ಗಡ್ಡ ಬಿಟ್ಟವನೇ ಗ್ರೇಟು ಅನ್ನುವಂತಾಗಿದೆ.

* ಕ್ಷಮಾ ಭಾರದ್ವಾಜ್‌

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.