ರಜೆ ಕಾಣದ ಗೃಹಿಣಿ


Team Udayavani, Oct 24, 2018, 6:00 AM IST

x-2.jpg

ಉಳಿದವರಿಗೆಲ್ಲಾ ಭಾನುವಾರದ ನೆಪದಲ್ಲಾದರೂ ಒಂದು ದಿನ ರಜೆ ಸಿಗುತ್ತದೆ. ಆದರೆ, “ಗೃಹಿಣಿ’ಗೆ ಅಂಥ ಅದೃಷ್ಟವಿಲ್ಲ…

ಹೆಂಗಸರ ಕೆಲಸಗಳೇ ಹಾಗೆ. ಮನಸ್ಸಿಲ್ಲದ ಮನಸ್ಸಿನಿಂದ ಬೆಳಗಿನ ಜಾವ ಎದ್ದು, ಗಡಿಬಿಡಿಯಲ್ಲಿಯೇ ತಿಂಡಿ, ಬಿಸಿ ಬಿಸಿ ಟೀ ರೆಡಿ ಮಾಡಿ, ಹಾಸಿಗೆಯ ಮೇಲೆ ಹೊರಳಾಡುತ್ತಿರುವ ಮಗನನ್ನು ಎಬ್ಬಿಸಿ, ಹಾಸಿಗೆಯಲ್ಲೇ ಮಲಗಿದ್ದು “ಲೇ.. ತಿಂಡಿ ರೆಡಿ ಆಯೆ¤àನೇ? ಆಫೀಸ್‌ಗೆ ಹೋಗಬೇಕು..’ ಎಂದು ಕೂಗುವ ಮನೆಯವರ ಸ್ನಾನಕ್ಕೆ ನೀರು ಕಾಯಿಸಿ, ಅವರಿಗೆ ತಿಂಡಿ ಹಾಕಿ, ಮಧ್ಯಾಹ್ನದ ಊಟ ಕಳುಹಿಸಿ, ಮಗನಿಗೆ ಶಾಲೆಗೆ ಹೋಗಲು ರೆಡಿ ಮಾಡಿ… ಅಬ್ಟಾ, ಒಂದೇ ಎರಡೇ? ಯಾವ ಸಾಫ್ಟ್ವೇರ್‌ ಎಂಜಿನಿಯರ್‌ ಕೂಡ ಮಾಡದಷ್ಟು ಕೆಲಸ “ಗೃಹಿಣಿ’ ಅನ್ನಿಸಿಕೊಂಡ ಹೆಂಗಸಿನದ್ದು.  

ಇಷ್ಟಾದರೆ ಮುಗಿಯಿತೇ? ವಯಸ್ಸಾದ ಅತ್ತೆ-ಮಾವನನ್ನು ಎಬ್ಬಿಸಿ, ಅವರ ಆರೈಕೆ ಮಾಡಿ, ತಿಂಡಿ ಬಡಿಸಿದಾಗ, ಕೆಲವೊಂದು ಮನೆಗಳಲ್ಲಿ ಅತ್ತೆ ರೇಗುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಮಾತು ಹೀಗಿರುತ್ತದೆ- “ಇದೇನೆ? ಇದ್ಯಾವ ಚಪಾತಿ? ಈ ಥರ ಗಟ್ಟಿ ಇದೆ. ಇದನ್ನಾ ಹೇಗೆ ತಿನ್ನೋದು? ಬೇಕು ಅಂತಾನೇ ಈ ತರಹದ ತಿಂಡಿ ಮಾಡ್ತೀಯಾ?’ ಹೀಗೆಲ್ಲಾ ಬೈಯದಿದ್ರೆ ಕೆಲವು ಅತ್ತೆಯರಿಗೆ ಚಪಾತಿ ಗಂಟಲಿನಲ್ಲಿ ಇಳಿಯಲ್ಲ ಅನ್ಸತ್ತೆ. ಪ್ರತಿದಿನವೂ ಇಂಥ ಬೈಗುಳವೇ ನನಗೆ ಸುಪ್ರಭಾತ.

ಕೊನೆಯಲ್ಲಿ ನಾನು ತಿಂಡಿ ತಿಂದು, ಅಡುಗೆ ಮನೆಯನ್ನು ನೋಡಿದ್ರೆ, ಎಲ್ಲಾ ಚೆಲಾಪಿಲ್ಲಿ! ಅವುಗಳನ್ನೆಲ್ಲ ನೀಟಾಗಿ ಜೋಡಿಸಿ, ಪಾತ್ರೆ ತೊಳೆದು ಅಡುಗೆ ಮನೆಯನ್ನು ಕ್ಲೀನ್‌ ಮಾಡುವಷ್ಟರಲ್ಲಿ ಬೆವರಿಳಿದಿರುತ್ತೆ. ಉಸ್ಸಪ್ಪಾ! ಎಂದು ಒಂದು ಲೋಟ ನೀರು ಕುಡಿದು ಖುರ್ಚಿಯ ಮೇಲೆ ಕೂರುವಷ್ಟರಲ್ಲಿ ಗಂಟೆ ಹನ್ನೆರಡು. ಮತ್ತೆ ಮಧಾಹ್ನದ ಅಡುಗೆ, ಊಟ ಬಡಿಸುವುದು, ಪಾತ್ರೆ ತೊಳೆಯವುದು.. ಕಡೆಗೆ ಬಟ್ಟೆ ಒಗೆದು, ಅವನ್ನು ಒಣಗಲು ಹಾಕುವ ವೇಳೆಗೆ ಮತ್ತದೇ ಸುಸ್ತು.

ಕೆಲಸಗಳನ್ನೆಲ್ಲಾ ಮುಗಿಸಿ ಸ್ವಲ್ಪ ಹೊತ್ತು ಮಲಗಿ ಏಳುವಷ್ಟರಲ್ಲಿ, ಸಮಯ ನಾಲ್ಕು ಗಂಟೆ. ಅತ್ತೆ-ಮಾವನಿಗೆ ಟೀ, ಸ್ನ್ಯಾಕ್ಸ್‌ ಮಾಡಿಕೊಟ್ಟು, ಮಗನನ್ನು ಶಾಲೆಯಿಂದ ಕರೆದುಕೊಂಡು ಬಂದು, ಅವನಿಗೆ ತಿಂಡಿ ಕೊಟ್ಟು, ಹೋಂ ವರ್ಕ್‌ ಬರೆಸುತ್ತಿರುವಾಗಲೇ, ಮನೆಯವರು ಆಫೀಸ್‌ನಿಂದ ಬಂದು, “ಲೇ… ತುಂಬಾ ತಲೆನೋವು ಕಣೇ! ಒಂದು ಕಪ್‌ ಕಾಫಿ ಕೊಡೇ..’ ಅಂತ ರಾಗ ಎಳೀತಾರೆ. ಅವರಿಗೆ ಕಾಫಿ-ತಿಂಡಿ ಮಾಡಿ ಕೊಟ್ಟು, ಪಾತ್ರೆಗಳನ್ನೆಲ್ಲಾ ತೊಳೆದು, ಅಡುಗೆ ಮನೆಯನ್ನು ಜೋಡಿಸುವಾಗ ರಾತ್ರಿ ಊಟದ ಸಮಯ ಆಗಿರುತ್ತದೆ. ಅತ್ತೆಯಂತೂ ಟಿ.ವಿ. ಮುಂದೆ ಕುಳಿತು ಧಾರಾವಾಹಿಯ ಪಾತ್ರಗಳಿಗೆ ಬೈಯ್ಯುತ್ತಾ, ಟಿ.ವಿ.ಯಲ್ಲಿ ದೇವರನ್ನು ತೋರಿಸಿದರೆ ಅಲ್ಲಿಯೇ ದೇವರ ನಾಮ ಹಾಡುತ್ತಾರೆ. “ಅತ್ತೇ, ಊಟಕ್ಕಾಯ್ತು ಬನ್ನಿ’ ಅನ್ನೋ ಹಾಗೂ ಇಲ್ಲ. “ಇರೇ, ಇದೊಂದು ಸೀರಿಯಲ್‌ ಮುಗಿಸಿ ಬರ್ತೀನಿ’ ಅಂತಾರೆ. ಇವರಿಗೆಲ್ಲಾ ಊಟ ಬಡಿಸಿ, ನಂತರ ಮಗನನ್ನು ಮಲಗಿಸಿ, ನಾನೂ ಊಟ ಮಾಡಿ, ಉಳಿದ ಕೆಲಸಗಳನ್ನು ಮುಗಿಸಿ ಮಲಗುವ ವೇಳೆಗೆ ರಾತ್ರಿ ಹನ್ನೊಂದಾಗಿರುತ್ತದೆ. ಮತ್ತೆ ಬೆಳಿಗ್ಗೆ ಅದೇ ಕೆಲಸ.. ಅದೇ ರಾಗ.. ಅದೇ ಹಾಡು..ಉಳಿದವರಿಗೆಲ್ಲಾ ಭಾನುವಾರದ ನೆಪದಲ್ಲಾದರೂ ಒಂದು ದಿನದ ರಜೆ ಸಿಗುತ್ತದೆ. ಆದರೆ, ಗೃಹಿಣಿಯರ ಕಥೆ ಹಾಗಿರುವುದಿಲ್ಲ. ಅವಳಿಗೆ ಭಾನುವಾರವೂ ರಜೆ ಸಿಗುವುದಿಲ್ಲ…

ಶ್ರುತಿ ಹೆಗಡೆ ಹುಳಗೋಳ

ಟಾಪ್ ನ್ಯೂಸ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.