ಮನೆಯೇ ಮಂತ್ರಾಲಯ
Team Udayavani, Jul 1, 2020, 4:57 AM IST
ಪ್ರತಿ ಕೆಲಸ ಮಾಡುವ ಮುನ್ನ ಗಣಪತಿಯನ್ನು ನೆನೆಯುವುದು ಸಂಪ್ರದಾಯ. ಯಾಕೆಂದರೆ, ಆತ ಪ್ರಥಮ ಪೂಜಿತ ದೇವ ಎಂಬ ನಂಬಿಕೆಯಿದೆ.
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|
ನಿರ್ವಿಘ್ನಂ ಕುರುಮೇದೇವ ಸರ್ವ ಕಾಯೇìಷು ಸರ್ವದಾ||
ಶ್ಲೋಕದ ಅರ್ಥ: ವಕ್ರವಾದ ಸೊಂಡಿಲು, ದೊಡ್ಡ ಆಕಾರದ ಶರೀರ, ಕೋಟಿ ಸೂರ್ಯರ ಪ್ರಕಾಶಕ್ಕೆ ಸಮನಾದ, ಎಲ್ಲ ವಿಘ್ನಗಳನ್ನು ನಿವಾರಿಸುವ ಶ್ರೀ ಗಜಾನನನಿಗೆ, ಕಾರ್ಯಸಿದ್ಧಿಯಾಗಲೆಂದು ಬೇಡುತ್ತಾ ನಮಸ್ಕರಿಸುತ್ತೇನೆ.