ಬೇಡ ಕೃಷ್ಣ ರಂಗಿನಾಟ


Team Udayavani, Jul 18, 2018, 6:00 AM IST

3.jpg

ಗಂಡ ತನ್ನೊಬ್ಬನ ಬಳಿ ಮಾತ್ರ ಸಲುಗೆಯಿಂದ ಇರಬೇಕು ಅನ್ನೋದು ಎಲ್ಲ ಹೆಂಡತಿಯರು ಬಯಸುವ ದಾಂಪತ್ಯ ತತ್ವ. ಓರಗೆಯ ಮಹಿಳೆಯರು ಸಿಕ್ಕಾರ ಗಂಡ ಫ್ಲರ್ಟ್‌ ಮಾಡಿದರೆ, ಅದನ್ನು ಹೆಂಡತಿ ಹೇಗೆ ಸ್ವೀಕರಿಸುತ್ತಾಳೆ? ಇಲ್ಲಿ ಯಾರ ವ್ಯಕ್ತಿತ್ವ ತಪ್ಪು, ಗಂಡನದ್ದಾ? ಪೊಸೆಸಿವ್‌ನೆಸ್‌ ಇಟ್ಕೊಂಡಿರೋ ಹೆಂಡತಿಯದ್ದಾ?

ರಾಹುಲ್‌ ಶ್ರೀಮಂತ ಮನೆಯ ಹುಡುಗನಾಗಿದ್ದ. ಕೆಲಸದ ನಿಮಿತ್ತ ಎರಡು ವರ್ಷ ಅಮೆರಿಕದಲ್ಲಿ ವಾಸವಿದ್ದ. ಆಧುನಿಕ ಜೀವನಶೈಲಿಯನ್ನು ಮೈಗೂಡಿಸಿಕೊಂಡಿದ್ದ ರಾಹುಲ್‌ ಗೌರಮ್ಮನಂತಿದ್ದ ವಸುಮತಿಗೆ ಇಷ್ಟವಾಗಿದ್ದು ಹೇಗೆ ಎನ್ನುವುದು ಇಲ್ಲಿಯವರೆಗೂ ಅನೇಕರಿಗೆ ಬಿಡಿಸಲಾಗದ ಒಗಟು. ಎರಡು ವಿರುದ್ಧ ಧೃವಗಳು ಒಂದನ್ನೊಂದು ಆಕರ್ಷಿಸುತ್ತವೆ ಎನ್ನುವುದು ಅವರಿಬ್ಬರ ಪಾಲಿಗೆ ಸತ್ಯವಾದ ಮಾತಾಗಿತ್ತು. ಮದುವೆ ನಂತರ ರಾಹುಲ್‌, ಫೋನ್‌ನಲ್ಲಿ ಅವನ ಬಾಲ್ಯದ ಗೆಳತಿ ಚಿತ್ರಾ ಜೊತೆ ಮಾತಾಡುವುದನ್ನು ಕೇಳಿಸಿಕೊಂಡಿದ್ದಳು. ಅವರಿಬ್ಬರೂ ಬೆಸ್ಟ್‌ ಫ್ರೆಂಡ್ಸ್‌ ಎನ್ನುವುದು ವಸುಮತಿಗೆ ಗೊತ್ತಿತ್ತು. ಆದರೆ, ಬೇರೆ ಯಾರಾದರೂ ರಾಹುಲ್‌ನ ಮಾತನ್ನು ಕೇಳಿಸಿಕೊಂಡಿದ್ದರೆ ರಾಹುಲ್‌ ಬಗ್ಗೆ ಅಪಾರ್ಥ ಮಾಡಿಕೊಳ್ಳುವಂತಿತ್ತು ಅವನ ಮಾತುಕತೆ. ಆಗಲೂ ಅವರಿಬ್ಬರು ಕ್ಲೋಸ್‌ಫ್ರೆಂಡ್ಸ್‌ ಅಲ್ವಾ ಅಂತ ಸುಮ್ಮನಾಗಿದ್ದಳು ವಸುಮತಿ. ಆದರೆ, ರಾಹುಲ್‌ ಅನೇಕ ಮಹಿಳೆಯರೊಂದಿಗೆ ಅದೇ ರೀತಿ ಮಾತಾಡುವುದನ್ನು ಕಂಡಾಗ ವಸುಮತಿಗೆ ಆಘಾತವಾಗಿತ್ತು. ಆ ಮಹಿಳೆಯರು ತಮಗೆ ಇರಿಸು ಮುರಿಸಾದರೂ ತಡೆದುಕೊಂಡು ಸುಮ್ಮನಿದ್ದರು. ಇತ್ತ ತನ್ನ ದುಗುಡವನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ವಸುಮತಿ ಒಳಗೊಳಗೇ ಚಡಪಡಿಸುತ್ತಿದ್ದಳು. ತನ್ನ ಗಂಡ ಎಲ್ಲ ಹೆಂಗಸರೊಡನೆ ಫ್ಲರ್ಟ್‌ ಮಾಡುತ್ತಾನೆ ಎಂದು ಯಾವ ಹೆಣ್ಣು ತಾನೇ ಬಾಯಿಬಿಟ್ಟು ಹೇಳಿಕೊಳ್ಳುತ್ತಾಳೆ? ಅದೂ ಪ್ರೀತಿಸಿ ಮದುವೆಯಾದವಳು!

ಸಮಸ್ಯೆಯ ಮೂಲ
ವಸುಮತಿ ಸೀದಾ ಹೋಗಿದ್ದು ಮನೋವೈದ್ಯೆಯ ಬಳಿಗೆ. ತನ್ನ ನೋವೆಲ್ಲವನ್ನೂ ಅವರಲ್ಲಿ ಹೇಳಿಕೊಂಡು ಅತ್ತು ಕಣ್ಣೀರಾಗಿದ್ದಳು. ವೈದ್ಯರು ಅವಳ ಸಮಸ್ಯೆಯನ್ನು ಸಮಾಧಾನದಿಂದ ಆಲಿಸಿದರು. ಅವರಿಗೆ ಎರಡು ರೀತಿಯ ಸಮಸ್ಯೆಗಳು ಕಂಡುಬಂದವು. ಒಂದು ವಸುಮತಿಯ ಕಡೆಯಿಂದ, ಇನ್ನೊಂದು ರಾಹುಲ್‌ ಕಡೆಯಿಂದ. ವಸುಮತಿ ಮುಂಚಿನಿಂದಲೂ ಸ್ವಲ್ಪ ಪೊಸೆಸಿವ್‌, ಅಂದರೆ ತನ್ನ ವಸ್ತು ಬೇರೆ ಯಾರ ಪಾಲಾಗುವುದನ್ನೂ ಸಹಿಸಳು ಎನ್ನುವುದನ್ನು ವೈದ್ಯರು ತಿಳಿದುಕೊಂಡರು. ನಿಜ ಹೇಳಬೇಕೆಂದರೆ, ಪೊಸೆಸಿವ್‌ನೆಸ್‌ ಕಾಯಿಲೆ ಏನಲ್ಲ. ಭೂಮಿ ಮೇಲೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಪೊಸೆಸಿವ್‌ ಆಗಿರುತ್ತಾರೆ. ತನ್ನ ಗಂಡ ಎಲ್ಲಾ ಹೆಂಗಸರೊಡನೆ ಫ್ಲರ್ಟ್‌ ಮಾಡುತ್ತಾನೆ ಅನ್ನೋದು ವಸುಮತಿಯ ಮನಸ್ಸಿಗೆ ಘಾಸಿ ತಂದಿತ್ತು. ತನ್ನದೊಬ್ಬಳದೇ ಆಗಬೇಕಿದ್ದ ಸ್ವತ್ತು ಇತರರ ಪಾಲಾಗುತ್ತಿರುವುದರ ನೋವು ಒಂದೆಡೆಯಾದರೆ, ಓರಗೆಯ ಹೆಂಗಸರ ನಡುವೆ ತನ್ನ ಗಂಡ ಕೆಟ್ಟ ಹೆಸರು ಪಡೆಯುತ್ತಿದ್ದಾನಲ್ಲ ಎಂಬ ಆಘಾತ ಇನ್ನೊಂದೆಡೆ. 

ಪರಿಹಾರ ಸಿಕ್ಕಿತ್ತು!
ರಾಹುಲ್‌ನ ಫ್ಲರ್ಟಿಂಗ್‌ ಬಗ್ಗೆ ವಸುಮತಿ ಈ ಹಿಂದೆ ಅವನಲ್ಲಿ ಮಾತಾಡಿದ್ದರೂ ಅವನದನ್ನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. ಅವನ ಪ್ರಕಾರ ಅದು ಆರೋಗ್ಯಕರ, ಹಾಸ್ಯಭರಿತ ಮಾತುಕತೆ ಅಷ್ಟೇ. ಆದರೆ, ಅವನು ಒಂದು ವಿಚಾರವನ್ನು ಗಮನಿಸಲು ಸೋತಿದ್ದ. ತಮ್ಮ ಮಾತು ಇತರರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಗ್ರಹಿಸಲು ರಾಹುಲ್‌ ಸೋತಿದ್ದ. ಇದನ್ನು ಕಂಡುಕೊಂಡ ವೈದ್ಯರಿಗೆ ವಸುಮತಿಯ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ರಾಹುಲ್‌ನ ಜೋಕು, ಮಾತುಗಳನ್ನು ತನ್ನ ಗೆಳತಿಯರು, ಸಹೋದ್ಯೋಗಿ ಹೆಂಗಸರು ಕಾಮಿಡಿ ಎಂದು ಪರಿಗಣಿಸುತ್ತಿಲ್ಲ, ಅವರಿಗೆ ಇರಿಸುಮುರಿಸಾಗುತ್ತಿದೆ ಎನ್ನುವುದನ್ನು ಹೇಗಾದರೂ ಮಾಡಿ ವಸುಮತಿ ಸಾಬೀತು ಪಡಿಸಿದರೆ ರಾಹುಲ್‌ ಮುಂದೆಂದೂ ಆ ರೀತಿ ವರ್ತಿಸುವುದಿಲ್ಲ ಎನ್ನುವುದು ವೈದ್ಯರ ಸಲಹೆಯಾಗಿತ್ತು. ಅವರ ಸಲಹೆ ಸರಿಯಾಗಿ ಕೆಲಸ ಮಾಡಿತು. ರಾಹುಲ್‌ ಯಾರ ಬಳಿಯೂ ಆ ರೀತಿ ಮಾತಾಡುವುದಿಲ್ಲ. ನಾವು ಮನುಷ್ಯರು ರೇಡಿಯೋ ಥರ ಅಲ್ಲ. ರಿಸೀವರ್‌ಗೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಶಬ್ದತರಂಗಗಳನ್ನು ಬಿತ್ತರಿಸುತ್ತೇವೆ ಎನ್ನುವುದು ಕಡೆಗೂ ರಾಹುಲ್‌ಗೆ ಅರ್ಥವಾಗಿತ್ತು.

ಹವನ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.