ನಾನು ಅವನಲ್ಲ, ಅವಳು!


Team Udayavani, Apr 26, 2017, 3:50 AM IST

25-AVALU-5.jpg

ಈಗಿನ ಹುಡುಗಿಯರ ವಾರ್ಡ್‌ರೋಬ್‌ಗ ಕೈ ಹಾಕಿದ್ರೆ ಅಲ್ಲಿ ಸಿಗೋದು ಹುಡುಗರ ಬಟ್ಟೆಗಳೇ! ಪುರುಷರ ವೇಷಭೂಷಣಕ್ಕೆ ಹೋಲುವ ಫ್ಯಾಶನ್‌ ಟ್ರೆಂಡ್‌ ಆ್ಯಂಡ್ರೋಜಿನಸ್‌. ಟಿ ಶರ್ಟಿನಿಂದ ಶುರುವಾಗುವ ಈ ಟ್ರೆಂಡ್‌ ಈಗ ಸೀರೆಯನ್ನೂ ಬಿಟ್ಟಿಲ್ಲ…

ನಗುವಿನಲ್ಲಿ, ನಾಚಿಕೆಯಲ್ಲಿ ಅವಳು ಹುಡುಗಿಯೇ. ಆದರೆ, ಡ್ರೆಸ್‌ ವಿಚಾರದಲ್ಲಿ ಆಕೆ ಕಾಂಪ್ರಮೈಸ್‌ ಆಗೋದಿಲ್ಲ. ಔಟಿಂಗ್‌ ಹೊರಟಳು ಅಂದ್ರೆ ಟಿ ಶರ್ಟು, ಪ್ಯಾಂಟು ಅವಳ ಬ್ಯೂಟಿಯನ್ನು ಅಟ್ಟಕ್ಕೇರಿಸುತ್ತವೆ. ನಾಲ್ಕು ಮಂದಿ ಹುಡುಗರ ಮುಂದೆ ನಿಂತಳು ಅಂದ್ರೆ ಈಕೆಯೂ ಹುಡುಗನೇ ಅಂತನ್ನಿಸುವಷ್ಟು ಅವಳ ಡ್ರೆಸ್ಸು ಪುರುಷರೂಪಿ ಆಗಿರುತ್ತೆ. ಇನ್ನು ಕೆಲವೊಮ್ಮೆ ಅರ್ಧ ಪುರುಷ, ಅರ್ಧ ಸ್ತ್ರೀ ವೇಷ ಅವಳದ್ದಾಗಿರುತ್ತೆ! ಹೌದು, ಈಗಿನ ಹುಡುಗಿಯರ ವಾರ್ಡ್‌ರೋಬ್‌ಗ ಕೈ ಹಾಕಿದ್ರೆ ಅಲ್ಲಿ ಸಿಗೋದು ಹುಡುಗರ ಬಟ್ಟೆಗಳೇ! ಈಗ ಹುಡ್ಗಿàರು ಎಲನ್ನೂ ಕನ್‌ಫ್ಯೂಶನ್‌ಗೆ ತಳ್ಳುತ್ತಲೇ ಇದ್ದಾರೆ. ಹುಡುಗರಂತೆ ಇರಲು ಬಯಸುವ ಲಲನೆಯರಿಗೆ ಫ್ಯಾಶನ್‌ ಡಿಸೈನರ್‌ಗಳು ಗಿಫ್ಟ್ ಆಗಿ ನೀಡಿರೋದು ಆ್ಯಂಡ್ರೋಜಿನಸ್‌ (ಉಭಯರೂಪಿ) ವಿನ್ಯಾಸಗಳು! ಪುರುಷರ ವೇಷಭೂಷಣಕ್ಕೆ ಹೋಲುವ ಫ್ಯಾಶನ್‌ ಟ್ರೆಂಡ್‌ ಇದು.

ಅದು ಬ್ಲೌಸ್‌ ಅಲ್ಲ, ಅಂಗಿ!
ಟಿ ಶರ್ಟಿನಿಂದ ಶುರುವಾದ ಆ್ಯಂಡ್ರೋಜಿನಸ್‌ ಟ್ರೆಂಡ್‌ ಈಗ ಭಾರತೀಯ ಪರಂಪರೆಯ ಸೀರೆಯ ತನಕವೂ ತಲುಪಿದೆ. ಉಡುವುದು ಮಾಮೂಲಿ ಸೀರೆಯನ್ನೇ. ಆದ್ರೆ, ಬ್ಲೌಸ್‌ ಮೇಲೆ ಒಂದು ಅನುಮಾನ ಹುಟ್ಟುತ್ತೆ. ಬ್ರೆಟಾನ್‌ ಸ್ಟ್ರಿಪ್ಡ್ ಬ್ಲೌಸ್‌ಗಳು ಆ್ಯಂಡ್ರೋಜಿನಸ್‌ ಫ್ಯಾಶನ್‌ಗೆ ವಿಶಿಷ್ಟ ಖದರ್ರನ್ನೇ ನೀಡಿವೆ. ಈ ಉದ್ದ ತೋಳಿನ ಬ್ಲೌಸ್‌ಗಳು ಹೆಚ್ಚಾಕಮ್ಮಿ ಪುರುಷರ ಅಂಗಿಯನ್ನು ನೆನಪಿಸುತ್ತವೆ. ಸೀರೆಯನ್ನೂ ಕಚ್ಚೆಯ ರೀತಿ ಉಡುವ ಟ್ರೆಂಡೂ ಜೋರಾಗಿದೆ. 

ಇವೆಲ್ಲ ಮ್ಯಾಚ್‌ ಆಗ್ತವೆ!
ಜೀನ್ಸ್‌ಗೆ ದೊಡ್ಡ ಸೈಜಿನ ಟಿ ಶರ್ಟು, ಪ್ಯಾಂಟ್‌ ಮತ್ತು ಜಂಪ್‌ಸೂಟ್‌, ಬ್ಲೇಝರ್‌ ಮತ್ತು ಜಾಕೆಟ್‌ಗಳು ಯುವತಿಯರಿಗೆ ಸ್ಪೆಷೆಲ್‌ ಇಮೇಜ್‌ ಅನ್ನೇ ನೀಡುತ್ತವೆ. ಅದರಲ್ಲೂ ಜೀನ್ಸು- ಟಿ ಶರ್ಟಿನೊಂದಿಗೆ ಕ್ಲಾಸಿಕ್‌ ಜಾಕೆಟ್‌ ಧರಿಸಿದ್ರೆ ಆಕರ್ಷಣೆ ಹೆಚ್ಚು. ಹಾಗಾಗಿ ನೀವು ಬಾಯ್‌ಫ್ರೆಂಡ್‌ ಬ್ಲೇಝರ್ಸ್‌, ಅಥ್ಲೆಟಿಕ್‌ ಜಾಕೆಟ್‌, ಪುಲ್‌ಓವರ್ಸ್‌ ಮೇಲೊಂದು ಕಣ್ಣಿಟ್ಟಿರಿ. ಇವುಗಳೊಂದಿಗೆ ನೀವು ಪಿವಿಸಿ ಪ್ಯಾಂಟ್‌ ಇಲ್ಲವೇ ಫ್ಲರ್ಟಿ ಸ್ಕರ್ಟ್‌ ತೊಟ್ಟರೂ ಅದು ಆ್ಯಂಡ್ರೋಜಿನಸ್‌ ಫ್ಯಾಶನ್ನೇ ಆಗುತ್ತೆ. ಕ್ರಿಸ್‌³ ಶರ್ಟಿನ ಮೇಲೆ ಬ್ಲೇಝರ್ಸ್‌ ಧರಿಸಿದರೆ ಸಖತ್‌ ಹಾಟ್‌ ಲುಕ್‌ ನಿಮ್ಮದಾಗುತ್ತೆ. ಇದರಲ್ಲಿ ಕ್ಲಾಸಿಕ್‌ ಲುಕ್‌ ಹೊಂದಲು ಕ್ರಿಸ್‌³ ವೈಟ್‌ ಶರ್ಟಿನ ಮೇಲೆ ಬ್ಲ್ಯಾಕ್‌ ಸೂಟ್‌ ಧರಿಸಬೇಕು. ಇನ್ನೂ ಕೆಲವರು ಇದೇ ಶರ್ಟಿನ ಮೇಲೆ ಟೈ ಕಟ್ಟುವವರೂ ಇದ್ದಾರೆ. ಇವೆಲ್ಲವಕ್ಕೂ ಸ್ಕಿನ್ನಿ ಜೀನ್ಸ್‌ ಇದ್ದರೆ ನಿಮ್ಮ ಸೌಂದರ್ಯಕ್ಕೆ ನಿಜಕ್ಕೂ ಬೋನಸ್‌ ಆಗುತ್ತೆ.

ಪೇಜ್‌ 3 ಪಾರ್ಟಿಗಳಲ್ಲಿ ಈಗ ಲುಂಗಿಯ ಟ್ರೆಂಡೂ ಜೋರಾಗಿದೆ. ದೀಪಿಕಾ ಪಡುಕೋಣೆ ಲುಂಗಿ ಡ್ಯಾನ್ಸ್‌ ಮಾಡಿದ ಮೇಲೆ ಭಾರತದಲ್ಲಿ ಲುಂಗಿಯ ಗುಂಗು ಇನ್ನೂ ಹೆಚ್ಚಿದೆ. ಆದರೆ, ಲುಂಗಿಗೆ ಟಿ ಶರ್ಟ್‌ ಆಗಲೀ, ಜಾಕೆಟ್‌ ಆಗಲೀ ಹೊಂದಿಕೆ ಆಗದು. ಇದಕ್ಕೆ ಮ್ಯಾಚ್‌ ಆಗೋದು ಬಾಯ್‌ಫ್ರೆಂಡ್‌ ಅಂಗಿಗಳೇ. ನೀವು ಇಷ್ಟೆಲ್ಲ ಪುರುಷರಂತೆ ಡ್ರೆಸ್‌ ತೊಟ್ಟು, ಕೆಲವೊಂದು ಯಡವಟ್ಟು ಮಾಡ್ಕೊಳ್ಳೋಕೆ ಹೋಗ್ಬೇಡಿ. ಈ ವೇಳೆ ಜಡೆ ಹಾಕಿದ್ರೆ ಪ್ರಯೋಜನವಿಲ್ಲ. ಫ್ರೀ ಹೇರ್‌ ಇರಲಿ. ಮೇಕಪ್‌ ಕೂಡ ಗ್ರಾಂಡ್‌ ಬೇಡ. ನಾರ್ಮಲ್‌ ಆಗಿರಲಿ. ಜಿವೆಲ್ಸ್‌ ಅನ್ನು ದೂರ ಇಟ್ಟರೂ ನಿಮ್ಮ ಲುಕ್ಕಿಗೇನೂ ದಕ್ಕೆ ಬರೋದಿಲ್ಲ. 

ಇದೇ ರೀತಿ ಮಹಿಳೆಯರ ಡ್ರೆಸ್ಸನ್ನೂ ಪುರುಷರೂ ತೊಡುತ್ತಾರೆ. ಅಷ್ಟಕ್ಕೂ ಈ ಆ್ಯಂಡ್ರೋಜಿನಸ್‌ ಫ್ಯಾಶನ್‌ ಹೇಗೆ ಬಂತು ಎಂಬ ಪ್ರಶ್ನೆ ನಿಮ್ಗೆ ಹುಟ್ಟಬಹುದು. ಇದು ಭಾರತದ ಕೊಡುಗೆ ಅಂತೆ. ಹಿಂದಿನ ಕಾಲದ ಅರಸರ ಅಂಗರಕ್ಷಕರನ್ನು ನೆನಪಿಸಿಕೊಳ್ಳಿ. ಅವರ ಉಡುಪು ಪುರುಷರಂತೆ ಇರಲೇ ಇಲ್ಲ! ಇದೂ ಹಾಗೆಯೇ!
 

ಟಾಪ್ ನ್ಯೂಸ್

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.