ಆಫೀಸಿನಲ್ಲಿ ನಿಮ್ಗೆ ಅವರು ಕ್ಲೋಸಾ?

Team Udayavani, Mar 14, 2018, 6:21 PM IST

3.jpg

ಕಾಲು ಸೋತು ಧಸಕ್‌ ಎಂದು ಕುರ್ಚಿಯಲ್ಲಿ ಕುಸಿದು, ಅಳುತ್ತಾ ಕುಳಿತಳು. “ಸಾಯೋದಿಕ್ಕೆ ಹೊರಟ ನನ್ನಂಥವರನ್ನ ಬಹಳ ನೋಡಿರ್ತೀರಿ ಅಲ್ವಾ? ದಯವಿಟ್ಟು ನನಗೆ ಸಾಯುವ ಮಾರ್ಗವನ್ನು ತಿಳಿಸಿಕೊಡಿ, ಬದುಕಿಸಬೇಡಿ’ ಎಂದವಳೇ ಮತ್ತೆ ಅಳುವುದಕ್ಕೆ ಶುರು. ಇಂಥವರೊಂದಿಗೆ ಮಾತಾಡುವುದು ತಾಳ್ಮೆಯಲ್ಲ, ತಪಸ್ಸು. ಆ ಕ್ಷಣಕ್ಕೆ ಅವರಿಗೆ ತೃಪ್ತಿಯಾಗುವವರೆಗೆ ನಾವು ಅವರ ನೋವಿನ ಆಳವನ್ನು ಅರ್ಥಮಾಡಿಕೊಳ್ಳಬೇಕು. ಮನೋವೈದ್ಯರಾದ ವಿಕ್ಟರ್‌ ಫ್ರಾಂಕೆಲ… ಪ್ರಕಾರ, ಹತಾಶೆಯಲ್ಲಿದ್ದವರಿಗೆ ನಾವು ಸಮಯವನ್ನು ಮುಖ್ಯವಾಗಿ ನೀಡಬೇಕು.

 ಇಂಥವರಿಗೆ ಜೀವನದ ಬಗ್ಗೆ ದ್ವೇಷವಿರುವುದಿಲ್ಲ. ಬದುಕಲು ಹೆಮ್ಮರದ ಮಹತ್ವಾಕಾಂಕ್ಷೆ. ಆದರೆ, ಕ್ಲಿಷ್ಟ ಪರಿಸ್ಥಿತಿಯಲ್ಲಿ ದಿಕ್ಕು ತೋಚದೆ, ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಕುಟುಂಬ, ಸ್ನೇಹಿತರು ಮತ್ತು ಆಫೀಸಿನಲ್ಲಿ ಎಲ್ಲರ ಮುಂದೆಯೂ ಇವಳು ಭಾವನಾತ್ಮಕ
ನಗ್ನತೆ (emotional nudity) ಒಳಗಾಗಿ ಈ ರೀತಿ ಪ್ರಲಾಪಿಸುತ್ತಾಳೆ. ಈಗ ಎಲ್ಲಾ ಕಳಕೊಂಡು ಶೂನ್ಯಭಾವ ಡಿಗ್ರಿಯಲ್ಲಿ ಚಿನ್ನದ ಪದಕ ಪಡೆದ ಬುದ್ಧಿವಂತೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಮನೆಯ ಸಾಲ ತೀರಿಸಲು ಯತ್ನಿಸುತ್ತಿದ್ದಳು. ಕೆಲಸದಲ್ಲಿ ಅಚ್ಚುಕಟ್ಟುತನ, ಚುರುಕು ಮತ್ತು ಕಲಾವಂತಿಕೆ ಸೇರಿ,  ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ನಾಲ್ಕೈದು ವರ್ಷಗಳಲ್ಲಿ ಬಹಳ ಬೇಗ ಬೆಳೆದಿದ್ದಳು. ಮಧ್ಯಮ ವರ್ಗದ ಹುಡುಗಿ, ಮದುವೆ ಗೊತ್ತಾದರೆ ಎಷ್ಟು ಸಾಲ ಮಾಡಬೇಕು ಎಂಬ ಲೆಕ್ಕವನ್ನೂ
ಹಾಕಿಕೊಂಡಿದ್ದಳು.

ಲಿಫ್ಟ್ನಲ್ಲಿ ಒಂದು ದಿನ ಮ್ಯಾನೇಜರ್‌ ಸಿಕ್ಕಿ, ಭೇಟಿಯಾಗಲು ತಿಳಿಸಿದ್ದಾರೆ. ಅತ್ಯಂತ ತಾಳ್ಮೆಯಿಂದ ಇವಳಿಗೆ ಸಮಯ ಕೊಟ್ಟು, ಇವಳ
ಯಶೋಗಾಥೆಯ ಕಥೆಗೆ ಕಿವಿಯಾದರು. ಇವಳಿಗೂ ಹುಮ್ಮಸ್ಸು ದುಪ್ಪಟ್ಟಾಯಿತು. ಪ್ರಾಜೆಕ್ಟ್ ಅನ್ನು ಯಶಸ್ವಿ ಮಾಡಿಕೊಟ್ಟಿದ್ದಕ್ಕೆ, ಚಿಕ್ಕ ಪ್ರೊಮೋಶನ್‌ ಕೂಡ ಸಿಕ್ಕಿತು.

ಆಫೀಸಿನಲ್ಲಿ ಮ್ಯಾನೇಜರ್‌ ಜೊತೆಗೆ ವೈಯಕ್ತಿಕ ಪರಿಚಯ ಯಾವಾಗಲೂ ಒಳ್ಳೆಯದಲ್ಲ. ವೈಯಕ್ತಿಕ ವಿಚಾರಗಳಿಗೆ ಹೋದಷ್ಟೂ ಕಿರಿಕಿರಿ ಜಾಸ್ತಿ. ಇವಳಿಗೂ ಕಿರಿಕಿರಿಯಾಗಿದೆ. ಆಫೀಸಿನ ನಿಯಮದ ಪ್ರಕಾರ, ಮ್ಯಾನೇಜರ್‌ ಜೊತೆಗೆ ವೈಯಕ್ತಿಕ ಸಂಬಂಧ ಹೊಂದಬಾರದೆಂದು ಗೊತ್ತಿದ್ದೂ ಇವಳು ಆತ್ಮೀಯವಾಗಿದ್ದರಿಂದ, ಇವಳು ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಾಗ, ಇವಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.

ಈಗಿನ ಕಾಲದಲ್ಲಿ ಮಹಿಳೆಯರಿಗೆ ಕೆಲಸದಷ್ಟೇ ಸಂಬಳವೂ ಅನಿವಾರ್ಯ. ಆದ್ದರಿಂದ ನಿಮ್ಮ ಕೆಲಸಕ್ಕೆ ಗೌರವ ಕೊಡಿ. ಕೆಲಸವನ್ನು ಬಿಟ್ಟು ಬೇರೆ ವಿಚಾರಗಳಿಗೆ, ಆಫೀಸಿನ ಗಾಸಿಪ್‌ಗೆ ಗಮನ ಕೊಡಬೇಡಿ. ಮ್ಯಾನೇಜರ್‌ ಎಷ್ಟೇ ಒಳ್ಳೆಯವರಾಗಿದ್ದರೂ ಕಾರಿನಲ್ಲಿ ಡ್ರಾಪ್‌
ತೆಗೆದುಕೊಳ್ಳುವ ಮುಂಚೆ ಯೋಚಿಸಿ. ಪ್ರಾಜೆಕ್ಟ್ ಪಾರ್ಟಿಗಳಲ್ಲಿ ಕುಡಿಯಬೇಡಿ. ನಿಮ್ಮ ಆಫೀಸಿನ ನಿಯಮಾವಳಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಪರಿಶ್ರಮದ ಹಿಂದೆ ನಿಮ್ಮ ಕುಟುಂಬವಿರುತ್ತದೆ. ಎಲ್ಲಾ ವಿಚಾರಗಳನ್ನೂ ಕುಟುಂಬದವರೊಂದಿಗೆ
ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಫೀಸಿನಲ್ಲೇ ಇರುವ ಮನೋವಿಜ್ಞಾನಿಗಳ ಸಲಹೆಯನ್ನೂ ಪಡೆಯಿರಿ.

 ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.