ಹಲಸು ತಿನಿಸು

Team Udayavani, Jun 5, 2019, 6:00 AM IST

ಜೇನುತುಪ್ಪದಲ್ಲಿ ಅದ್ದಿಕೊಂಡು, ಕಲ್ಲುಸಕ್ಕರೆಯೊಂದಿಗೆ ಮಿಕ್ಸ್‌ ಮಾಡಿಕೊಂಡು, ಬೆಲ್ಲ-ಸಕ್ಕರೆಯ ಜೊತೆಯಲ್ಲೇ ರುಚಿ ಹೆಚ್ಚಿಸಿಕೊಂಡು ಹಲಸಿನ ಹಣ್ಣು ತಿನ್ನುವುದು ಎಲ್ಲರಿಗೂ ಗೊತ್ತಿದೆ. ಹಲಸಿನ ಹಣ್ಣಿಂದ ಮಾಡಬಹುದಾದ ಬಗೆಬಗೆಯ ಖಾದ್ಯದ ಬಗ್ಗೆ ಗೊತ್ತುಂಟಾ?

1. ಹಲಸಿನಕಾಯಿ ತೊಳೆ ಪಲ್ಯ (ಉಪ್ಪಡ ಪಚ್ಚಿರ್‌)
ಬೇಕಾಗುವ ಸಾಮಗ್ರಿ: ಉಪ್ಪಿಗೆ ಹಾಕಿದ ಹಲಸಿನ ತೊಳೆ- 1 ಕಪ್‌, ಸಾಸಿವೆ-1ಚಮಚ, ಉದ್ದಿನ ಬೇಳೆ-1 ಚಮಚ, ಎಣ್ಣೆ- 2 ಚಮಚ, ತೆಂಗಿನ ತುರಿ -3 ಚಮಚ, ಕರಿಬೇವಿನ ಸೊಪ್ಪು.
ಮಾಡುವ ವಿಧಾನ: ಉಪ್ಪಿಗೆ ಹಾಕಿದ ಹಲಸಿನ ತೊಳೆಯನ್ನು ತೊಳೆದು, ಉದ್ದಕ್ಕೆ ಹೆಚ್ಚಿಡಿ. ಬಾಣಲೆಗೆ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ. ಅದಕ್ಕೆ ಕತ್ತರಿಸಿದ ಹಲಸಿನ ತೊಳೆ ಮತ್ತು ಸ್ವಲ್ಪ ನೀರು ಹಾಕಿ ಮಂದ ಉರಿಯಲ್ಲಿ 5 ನಿಮಿಷ ಬೇಯಿಸಿ. ನಂತರ ಅದಕ್ಕೆ ತೆಂಗಿನತುರಿಯನ್ನು ಸೇರಿಸಿದರೆ, ರುಚಿಯಾದ ಹಲಸಿನ ತೊಳೆ ಪಲ್ಯ ಸಿದ್ಧ. (ಹಲಸಿನಕಾಯಿ ತೊಳೆಯನ್ನು ಉಪ್ಪಿನಲ್ಲಿ ಹಾಕಿ ಶೇಖರಿಸಿದ ಕಾರಣ ಪುನಃ ಉಪ್ಪು ಸೇರಿಸುವ ಅಗತ್ಯವಿಲ್ಲ)

ಶೇಖರಿಸುವ ವಿಧಾನ: ಚೆನ್ನಾಗಿ ಬೆಳೆದ ಹಲಸಿನಕಾಯಿಯ ತೊಳೆಯನ್ನು ಒಂದು ದೊಡ್ಡ ಡಬ್ಬಿಯಲ್ಲಿ ಹಾಕಿ, ಸ್ವಲ್ಪ ಉಪ್ಪು ಹಾಕಿ ಶೇಖರಿಸಿಡಬಹುದು. (ಡಬ್ಬಿಯಲ್ಲಿ ಸ್ವಲ್ಪವೂ ನೀರಿನ ಅಂಶ ಇರಬಾರದು. ನೀರಿನ ಅಂಶ ಇದ್ದಲ್ಲಿ ಹಲಸಿನಕಾಯಿ ಹಾಳಾಗುತ್ತದೆ)

2. ಹಲಸಿನ ಹಣ್ಣಿನ ಇಡ್ಲಿ
ಬೇಕಾಗುವ ಸಾಮಗ್ರಿ: ಹಲಸಿನ ತೊಳೆ- 2 ಕಪ್‌, ತೆಂಗಿನ ತುರಿ -1 ಕಪ್‌, ಅಕ್ಕಿ-1 ಕಪ್‌, ಬೆಲ್ಲ- 1 ಕಪ್‌, ಉಪ್ಪು.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು, ಹದಿನೈದು ನಿಮಿಷ ಹಾಗೆಯೇ ಇಡಿ. ನಂತರ, ಅಕ್ಕಿಯನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿ, ಒಂದು ಪಾತ್ರೆಯಲ್ಲಿ ಹಾಕಿ. ಹಣ್ಣಿನಿಂದ ಬೀಜವನ್ನು ಬೇರ್ಪಡಿಸಿ, ತೊಳೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಅದಕ್ಕೆ ತೆಂಗಿನತುರಿ ಮತ್ತು ತುರಿದ ಬೆಲ್ಲವನ್ನು ಸೇರಿಸಿ ಪುನ: ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು, ಅಕ್ಕಿಯ ಮಿಶ್ರಣಕ್ಕೆ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಇಡ್ಲಿ ಪಾತ್ರೆಯಲ್ಲಿ ಹಾಕಿ ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ.

ಸೂಚನೆ: ಹಲಸಿನ ಹಣ್ಣು ಕಡಿಮೆ ಇದ್ದಲ್ಲಿ, ತೆಂಗಿನ ತುರಿಯನ್ನು ಹಣ್ಣಿನ ಎರಡರಷ್ಟು ಹಾಕಬೇಕು. ಒಂದುವೇಳೆ ಹಣ್ಣು ಜಾಸ್ತಿ ಇದ್ದಲ್ಲಿ ತೆಂಗಿನ ತುರಿಯನ್ನು ಕಡಿಮೆ ಹಾಕಬೇಕು. ಈ ರೀತಿ ಮಾಡಿದರೆ ಇಡ್ಲಿ ಮೃದುವಾಗುತ್ತದೆ.

3. ಹಲಸಿನ ಹಣ್ಣಿನ ಮುಳ್ಕ
ಬೇಕಾಗುವ ಸಾಮಗ್ರಿ: ಹಲಸಿನ ಹಣ್ಣು- 2 ಕಪ್‌, ತುರಿದ ಬೆಲ್ಲ-1 ಕಪ್‌, ಅಕ್ಕಿ- 1/2 ಕಪ್‌, ತೆಂಗಿನ ತುರಿ- 1/4 ಕಪ್‌, ಚಿರೋಟಿ ರವೆ- ಸ್ವಲ್ಪ, ಉಪ್ಪು, ಎಣ್ಣೆ- ಕರಿಯಲು.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಯಲು ಬಿಡಿ. ಅಕ್ಕಿ ನೆನೆದ ನಂತರ, ಹಲಸಿನ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನೆನೆದ ಅಕ್ಕಿ, ತುರಿದ ಬೆಲ್ಲ, ತೆಂಗಿನ ತುರಿ, ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಿ. (ರುಬ್ಬುವಾಗ ನೀರನ್ನು ಸೇರಿಸಬಾರದು) ರುಬ್ಬಿದ ಮಿಶ್ರಣ ದಪ್ಪವಾಗಿರಬೇಕು. ಮಿಶ್ರಣ ತೆಳುವಾದರೆ, ಸ್ವಲ್ಪ ರವೆ ಸೇರಿಸಿ, 5 ನಿಮಿಷ ಹಾಗೇ ಬಿಡಿ. ನಂತರ ಆ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ ಹೊಂಬಣ್ಣ ಬರುವವರೆಗೂ ಎಣ್ಣೆಯಲ್ಲಿ ಕರಿಯಿರಿ.

4.ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿ: ಹಲಸಿನ ಹಣ್ಣಿನ ತೊಳೆ- 6, ಹಾಲು- 1/2 ಲೀ., ಬೆಲ್ಲ- 1 ಕಪ್‌, ತೆಂಗಿನ ತುರಿ- 1/2 ಕಪ್‌, ಚಿರೋಟಿ ರವೆ- 2 ಚಮಚ, ತುಪ್ಪ-5 ಚಮಚ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಏಲಕ್ಕಿಪುಡಿ, ನೀರು- 1/2 ಕಪ್‌.
ಮಾಡುವ ವಿಧಾನ: ಬಾಣಲೆಯಲ್ಲಿ ಚಿರೋಟಿ ರವೆ ಹುರಿಯಿರಿ. ನಂತರ ತುಪ್ಪ ಹಾಕಿ, ಡ್ರೈ ಫ‌ೂಟ್ಸ್‌ ಅನ್ನು ಹುರಿದು, ತೆಗೆದಿಡಿ. ಅದೇ ತುಪ್ಪದಲ್ಲಿ, ಚಿಕ್ಕದಾಗಿ ಕತ್ತರಿಸಿದ ಹಲಸಿನ ತೊಳೆಯನ್ನು ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಅದಕ್ಕೆ ಹಾಲು ಹಾಕಿ ಕೈಯಾಡಿಸುತ್ತಿರಿ. ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿ, ಬೇಯುತ್ತಿರುವ ಪದಾರ್ಥಕ್ಕೆ ಸೇರಿಸಿ. ಹುರಿದ ಚಿರೋಟಿ ರವೆ ಮತ್ತು ಬೆಲ್ಲ ಹಾಕಿ, ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಬೇಕು. ಕುದಿ ಬಂದ ನಂತರ ಏಲಕ್ಕಿಪುಡಿ ಮತ್ತು ಡ್ರೈಫ‌ೂಟ್ಸ್‌ ಹಾಕಿ.

-ಸುಷ್ಮಾ ಪೈ, ಬೆಂಗಳೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಕ್ಕಳ ಪರೀಕ್ಷೆಗಳು ಮುಗಿಯುತ್ತಾ ಬಂದವು. ಮುಂದಿನ ಎರಡು ತಿಂಗಳು ಅವರನ್ನು ಹಿಡಿಯುವುದೇ ಕಷ್ಟ. ಎಷ್ಟು ಹೇಳಿದರೂ ಕೇಳುವುದಿಲ್ಲ, ಮೊಬೈಲ್‌-ಕಂಪ್ಯೂಟರ್‌ ಮುಂದೆ...

  • ಚಲನಚಿತ್ರಗೀತೆಗಳು ಪ್ರಸಾರವಾಗುವಾಗ ಎಸ್‌.ಪಿ.ಬಿ. ಜೊತೆಯಲ್ಲಿ ಹಾಡಿ ನಾನೂ ಎಸ್‌. ಜಾನಕಿ, ವಾಣಿ ಜಯರಾಂ ಆದ ಹಾಗೆ ಖುಷಿಪಡ್ತಾ ಇದ್ದಿದ್ದು. ಅಷ್ಟೇ ಅಲ್ಲ, ವಾಣಿ...

  • ಮದುವೆ ಎನ್ನುವುದು ಹೆಣ್ಣಿನ ಬದುಕಿನ ಅಸಲೀ ತಿರುವು. ತಾನು ಎನ್ನುವ ಸ್ವಂತಿಕೆಯನ್ನು ಬದಿಗಿಟ್ಟು, ತನ್ನದು ಎನ್ನುವುದಕ್ಕೆ ಜೋತು ಬೀಳಬೇಕಾದ ಸಂಧಿಕಾಲ. ಮದುವೆ,...

  • ಹೆಣ್ಣಿನ ಬಾಳಿನಲ್ಲಿ ತಾಯ್ತನದ ಘಟ್ಟ ಬಹಳ ಮುಖ್ಯವಾದುದು. ತಾಯ್ತನ ಅಂದರೆ, ಆ ನವಮಾಸವಷ್ಟೇ ಅಲ್ಲ. ಅದರ ನಂತರದ ಬಾಣಂತನದಲ್ಲೂ ತಾಯಿ-ಮಗುವನ್ನು ಮುಚ್ಚಟೆಯಿಂದ ಕಾಪಾಡಬೇಕು....

  • ಸಂಜೆ ನಾಲ್ಕು ಗಂಟೆಯಾದರೂ ಹುಡುಗನ ಕಡೆಯವರು ಬರದೇ ಇದ್ದಾಗ, ಮನೆಯಲ್ಲಿ ನೆರೆದವರು ತಲೆಗೊಂದು ಮಾತನಾಡತೊಡಗಿದರು. ಲವ್‌ ಮಾಡಿದರೆ ಹೀಗೇ ಆಗುವುದು. ಹುಡುಗ ನಂಬಿಸಿ...

ಹೊಸ ಸೇರ್ಪಡೆ