Udayavni Special

ಒಡವೆ ವಸ್ತ್ರ; ಮ್ಯಾಚಿಂಗ್‌ನ ಕಲೆ ಅರಿಯಿರಿ

Team Udayavani, Mar 25, 2020, 4:47 AM IST

ಒಡವೆ ವಸ್ತ್ರ

ಚಂದದ ದಿರಿಸಿಗೆ ಅಂದದ ಒಡವೆ ಧರಿಸಿದರೇ ಚೆನ್ನ. ಒಡವೆ ಅಂದರೆ ಬಂಗಾರದ್ದೇ ಆಗಬೇಕಿಲ್ಲ. ಚಿನ್ನವನ್ನೇ ನಾಚಿಸುವಷ್ಟು ಚೆನ್ನಾಗಿರುವ ಕೃತಕ ಆಭರಣಗಳು ಈಗ ಎಲ್ಲರ ಮೆಚ್ಚುಗೆ ಪಡೆದಿವೆ. ಹೆಣ್ಣಿನ ಅಂದವನ್ನು ಹೆಚ್ಚಿಸುವ ಒಡವೆಗಳನ್ನು, ಧರಿಸುವ ವಸ್ತ್ರಕ್ಕೆ ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಯಾವ ಉಡುಪಿಗೆ ಯಾವ ಬಗೆಯ ಜ್ಯುವೆಲರಿ ಅಂತ ಹೊಂದಿಸುವುದೂ ಕಲಾತ್ಮಕತೆಯೇ…

-ಮ್ಯಾಚಿಂಗ್‌ ಮ್ಯಾಚಿಂಗ್‌ ಬೇಡ
ಹಿಂದೆಲ್ಲಾ, ಉಡುಪಿಗೆ ತಕ್ಕಂತೆ ಜ್ಯುವೆಲರಿ ಧರಿಸುವ ಟ್ರೆಂಡ್‌ ಇತ್ತು. ಈಗ, ವಿರುದ್ಧ ಬಣ್ಣದ ಬಳೆ, ಸರ, ಕಿವಿಯೋಲೆ ಧರಿಸುವುದೇ ಸ್ಟೈಲ್‌. ಬಟ್ಟೆ ಹಾಗೂ ಒಡವೆಯನ್ನು ಮಿಕ್ಸ್‌ ಅಂಡ್‌ ಮ್ಯಾಚ್‌ ಮಾಡಿ, ಲುಕ್‌ಗೊಂದು ಹೊಸ ಸ್ಪರ್ಶ ನೀಡಿ.

-ತಿಳಿ ಬಣ್ಣ ಹುಡುಕಿ
ಧರಿಸಿರುವ ಉಡುಪು, ಮಲ್ಟಿ ಕಲರ್‌ (ಒಂದಕ್ಕಿಂತ ಹೆಚ್ಚು ಬಣ್ಣ)ನದ್ದಾಗಿದ್ದರೆ, ಅದರಲ್ಲಿ ತಿಳಿಯಾದ ಬಣ್ಣ ಯಾವುದೋ, ಆ ಬಣ್ಣದ ಜ್ಯುವೆಲರಿ ಧರಿಸಿ. ಒಂದು ವೇಳೆ, ತಿಳಿಯಾದ ಬಣ್ಣವೇ ಬಟ್ಟೆಯ ತುಂಬೆಲ್ಲಾ ಆವರಿಸಿದ್ದರೆ, ಬಟ್ಟೆಯನ್ನು ಅತಿ ಕಡಿಮೆ ಆವರಿಸಿರುವ ಬಣ್ಣದ ಜ್ಯುವೆಲರಿ ಧರಿಸಿದರೆ ಚೆನ್ನ. ( ಗಾಢ ಹಸಿರು ಬಣ್ಣದ ಚಿತ್ತಾರವಿರುವ ಬಿಳಿ ಬಣ್ಣದ ಬಟ್ಟೆಗೆ ಹಸಿರು ಬಣ್ಣದ ಜ್ಯುವೆಲರಿ, ಹಳದಿ, ಕೆಂಪು, ನೀಲಿ ಬಣ್ಣದ ಬಟ್ಟೆಗೆ ಹಳದಿ ಆ್ಯಕ್ಸೆಸರೀಸ್‌ ಒಪ್ಪುತ್ತದೆ)

-ಪ್ರದರ್ಶನ ಬೇಡ
ಊಟಕ್ಕೆ ಉಪ್ಪಿನಕಾಯಿ ಹೇಗೋ, ದಿರಿಸಿಗೆ ಆಭರಣಗಳೂ ಹಾಗೆಯೇ. ಹೆಚ್ಚೆಚ್ಚು ಒಡವೆಗಳನ್ನು, ಅದ್ಧೂರಿ ಎನಿಸುವಂಥ ಆ್ಯಕ್ಸೆಸರೀಸ್‌ಗಳನ್ನು ಧರಿಸಿದರೆ ಪ್ರದರ್ಶನದ ಗೊಂಬೆಯಂತೆ ಕಾಣಿಸಬಹುದು. ಡ್ರೆಸ್‌ನ ಅಂದವನ್ನೇ ಒಡವೆ ನುಂಗಿಬಿಡುವುದೂ ಉಂಟು.

-ಸಂದರ್ಭಕ್ಕೆ, ದಿರಿಸಿಗೆ ತಕ್ಕಂತೆ ಧರಿಸಿ
ಆಫೀಸ್‌ ಪಾರ್ಟಿಗೆ ಯಾವ ಒಡವೆ, ಮದುವೆಗೆ ಯಾವ ಬಗೆಯ ಆಭರಣ, ಕಿಟಿ ಪಾರ್ಟಿಗೆ ಯಾವುದು ಅಂತ ಅರಿತುಕೊಳ್ಳುವುದು ಅಗತ್ಯ. ಸಿಂಪಲ್‌ ದಿರಿಸಿಗೆ ಅದ್ಧೂರಿ ಸರ-ಕಿವಿಯೋಲೆ, ಅದ್ಧೂರಿ ಡ್ರೆಸ್‌ಗೆ ಸಿಂಪಲ್‌ ಒಡವೆ ಧರಿಸಿದರೆ ಚೆನ್ನ.

-ಮೈ ಬಣ್ಣ ಮರೆಯದಿರಿ
ಬಗೆ ಬಗೆ ಬಣ್ಣಗಳ ಜೊತೆ ಪ್ರಯೋಗ ಮಾಡುವುದು ಫ್ಯಾಷನ್‌ನ ಮೂಲ ಮಂತ್ರ. ಆದರೆ, ಮೈ ಬಣ್ಣಕ್ಕೆ ತಕ್ಕಂತೆ ವಸ್ತ್ರ-ಒಡವೆ ಧರಿಸುವುದು ಜಾಣತನ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

avalu-tdy-6

ಹೇಮಾ ಮಾಲಿನಿ ಥರ ಇದ್ದೀಯ.

avalu-tdy-05

ಜೇಬ್ ಪ್ಲೀಸ್..!

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!

avalu-tdy-3

ಬದಲಾಗಲಿ ಜನ ಬದಲಾಗಲಿ ಮನ

ದೇವಿ ಮಹಾತ್ಮೆ : ಸ್ತ್ರೀ ಶಕ್ತಿಗೆ ಶರಣು

ದೇವಿ ಮಹಾತ್ಮೆ : ಸ್ತ್ರೀ ಶಕ್ತಿಗೆ ಶರಣು

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

avalu-tdy-6

ಹೇಮಾ ಮಾಲಿನಿ ಥರ ಇದ್ದೀಯ.

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

08-April-40

ಗಡಿ ಭಾಗದ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಕ್ರಮ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ