Udayavni Special

ಮಮತೆಯ ಚಿತ್ರಕಲೆ

ಮರಳುಗಾಡಿನಲ್ಲಿ ಅರಳಿದ ಕಲಾಕುಸುಮ

Team Udayavani, Jul 24, 2019, 5:00 AM IST

x-5

ಮನಸ್ಸಿನ ಎಲ್ಲ ಭಾವನೆಗಳಿಗೂ ಬಣ್ಣ ನೀಡಿ, ಚಿತ್ರವಾಗಿಸಲು ಕಲಾಕಾರನಿಗೆ ಮಾತ್ರ ಸಾಧ್ಯ. ಕಲೆ, ಕೆಲವರಿಗೆ ರಕ್ತಗತವಾಗಿ ಒಲಿದರೆ, ಇನ್ನೂ ಕೆಲವರು ಅದನ್ನು ಪರಿಶ್ರಮದಿಂದ ಸಿದ್ಧಿಸಿಕೊಳ್ಳುತ್ತಾರೆ. ಹಾಗೆ, ಸಂಪೂರ್ಣ ಸಮರ್ಪಣಾ ಭಾವದಿಂದ ಕಲೆಗೆ ಶರಣಾಗಿರುವವರು ದುಬೈನ ಮಮತಾ ಕೋಟ್ಯಾನ್‌.

ಮೂಲತಃ ಮಂಗಳೂರಿನವರಾದ ಮಮತಾ, ಎಳವೆಯಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಶಾಲಾದಿನಗಳಲ್ಲಿ ಬಹುಮಾನಗಳನ್ನೂ ಗಳಿಸಿದ್ದರು. ಆದರೆ, ಹೆಚ್ಚಿನ ಮಾರ್ಗದರ್ಶನ, ತರಬೇತಿಗೆ ಪೂರಕ ವಾತಾವರಣವಿರಲಿಲ್ಲ. ಆದರೂ, ದೊಡ್ಡ ಚಿತ್ರಗಾರಳಾಗಬೇಕೆಂಬ ಮಹದಾಸೆ ಮಮತಾರ ಮನದಲ್ಲಿತ್ತು.

ಮದುವೆಯಾಗಿ ದುಬೈಗೆ ಹಾರಿದ ನಂತರ, ಮಮತಾರ ಕನಸಿಗೆ ಮತ್ತೆ ರೆಕ್ಕೆಪುಕ್ಕ ಮೂಡಿತು. ಅಲ್ಲಿನ ಮಕ್ಕಳಿಗೆ ಅವರದೇ ಶೈಲಿಯಲ್ಲಿ, ಚಿತ್ರಕಲೆ ಕಲಿಸತೊಡಗಿದರು. ಕಲಿಸುತ್ತಾ, ತಾವೂ ಕಲಿತರು. ಇವರ ಕಲಾ ನೈಪುಣ್ಯವನ್ನು ಕಂಡವರು, ಬಾವಿಯೊಗಿನ ಕಪ್ಪೆಯಂತೆ ಇರಬೇಡ. ನಿನ್ನ ಕಲೆಗೆ ಹೊರ ಪ್ರಪಂಚದಲ್ಲಿ ಮನ್ನಣೆ ಸಿಗುತ್ತದೆ ಎಂದು ಹುರಿದುಂಬಿಸಿದರು. ಆ ಮಾತುಗಳಿಂದ ಸ್ಫೂರ್ತಿ ಪಡೆದ ಮಮತಾ, ಹೆಚ್ಚಿನ ತರಬೇತಿಗಾಗಿ ಚಿತ್ರಕಲಾ ಕ್ಲಾಸ್‌ಗೆ ಸೇರಿದರು.

ಆ ನಂತರ ಮಮತಾ ಹಿಂತಿರುಗಿ ನೋಡಲಿಲ್ಲ, ಆಯಿಲ್‌ ಪೇಂಟಿಂಗ್‌, ಎಕ್ರಿಲಿಕ್‌,ವಾಟರ್‌ ಪೇಂಟಿಂಗ್‌ನಲ್ಲಿ ಸಾಧನೆ ಮಾಡಿದರು. 2013ರಲ್ಲಿ, ದುಬೈನಲ್ಲಿ ನಡೆದ ಮಮತಾರ ಮೊದಲ ಕಲಾ ಪ್ರದರ್ಶನ, ಅಪಾರ ಪ್ರಶಂಸೆಗೆ ಪಾತ್ರವಾಯಿತು.

ಮುಂದೆ, ದುಬೈನ ಕನ್ನಡ ಹಾಗೂ ತುಳು ಸಂಘಟನೆಗಳ ಕಾರ್ಯಕ್ರಮಗಳಲ್ಲಿ, ವಿಶ್ವ ತುಳು ಸಮ್ಮೇಳನದಲ್ಲಿಯೂ ಇವರು ಕಲಾ ಪ್ರದರ್ಶನ ನಡೆಸಿದ್ದರು.

ಸಕಲ ಕಲಾವಲ್ಲಭೆ
ಮಕ್ಕಳ ಚಿತ್ರಕಲಾ ಗುರುವಾಗಿ, ಅವರಿಂದಲೂ ಕಲಾಪ್ರದರ್ಶನ ನಡೆಸಿದ ಖ್ಯಾತಿ ಇವರದ್ದು. ಹೆಂಗಸರಿಗೆ ಉಚಿತವಾಗಿ ಎಂಬ್ರಾಯಿಡರಿ ತರಬೇತಿ ನೀಡುವ ಮಮತಾ, ಚಿತ್ರಕಲೆ ಮಾತ್ರವಲ್ಲದೆ, ಎಂಬ್ರಾಯxರಿ, ರಂಗೋಲಿ, ಅಡಿಕೆ ಹಾಳೆಯಿಂದ, ಭತ್ತದ ಪೈರಿನಿಂದ ಕಲಾಕೃತಿಗಳ ರಚನೆ, ಸುಲಭವಾಗಿ ಸಿಗುವ ವಸ್ತುಗಳಿಂದ ಕ್ರಾಫ್ಟ್, 3ಡಿ ಮಾಡೆಲಿಂಗ್‌ ಆರ್ಟ್‌, ಪೇಪರ್‌ ಫ್ಲವರಿಂಗ್‌ ,ಕ್ವಿಲ್ಲಿಂಗ್‌ ಕಲೆಯಲ್ಲೂ ಸಿದ್ಧ ಹಸ್ತರು. ಅಷ್ಟೇ ಅಲ್ಲದೆ, ಉಚಿತವಾಗಿ ಭಜನಾ ತರಗತಿ, ಶ್ಲೋಕ ಕ್ಲಾಸ್‌ಗಳನ್ನೂ ನಡೆಸುತ್ತಾರೆ.

ಈಕೆ, ಕದ್ರಿಯ ದೇವೇಂದ್ರ ಅಂಚನ್‌- ರೋಹಿಣಿ ಅಂಚನ್‌ರ ಮಗಳು. ಪತಿ ರವಿ ಕೋಟ್ಯಾನ್‌, ಭಾವಿಕ್‌, ದಕ್ಷ ಎಂಬ ಇಬ್ಬರು ಮಕ್ಕಳ ಸುಖೀ ಕುಟುಂಬ ಇವರದ್ದು. ಭವಿಷ್ಯದಲ್ಲಿ ಆರ್ಟ್‌ ಗ್ಯಾಲರಿ ಆರಂಭಿಸುವ ಕನಸು ಹೊಂದಿರುವ ಮಮತಾರ ಕುಂಚಕ್ಕೆ, ಬದುಕಿಗೆ ಇನ್ನಷ್ಟು ಬಣ್ಣಗಳು ತುಂಬಲಿ.

-ರಜನಿ ಭಟ್‌ ಕಲ್ಮಡ್ಕ

ಟಾಪ್ ನ್ಯೂಸ್

jjjjjjjjjjjjjjk

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯ

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯ

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ 19 ಚಿಕಿತ್ಸೆ: ಹಿಮಾಚಲ್ ಸರ್ಕಾರ ಘೋಷಣೆ

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ 19 ಚಿಕಿತ್ಸೆ: ಹಿಮಾಚಲ್ ಸರ್ಕಾರ ಘೋಷಣೆ

ttttttttttttttttttttt

ರಂಜಾನ್ ಹಬ್ಬ : ಸಾಮೂಹಿಕ ಪ್ರಾರ್ಥನೆ ಮಾಡದಂತೆ ಪೊಲೀಸರ ಸೂಚನೆ

ಕುವೆಂಪು ವಿವಿ ಕುಲಪತಿ- ಆಡಳಿತ ಕುಲಸಚಿವರ ನಡುವೆ ಭಿನ್ನಮತ: ಠಾಣೆಯಲ್ಲಿ ದೂರು-ಪ್ರತಿದೂರು

ಕುವೆಂಪು ವಿವಿ ಕುಲಪತಿ- ಆಡಳಿತ ಕುಲಸಚಿವರ ನಡುವೆ ಭಿನ್ನಮತ: ಠಾಣೆಯಲ್ಲಿ ದೂರು-ಪ್ರತಿದೂರು

cv

ಮಹಾರಾಷ್ಟ್ರ ಮತ್ತೆ ಸ್ತಬ್ಧ : ಮೇ 30 ರವರೆಗೆ ಲಾಕ್ ಡೌನ್ ವಿಸ್ತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

udayavani youtube

ಕ್ಯಾಬ್‌ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ!

udayavani youtube

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

udayavani youtube

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ಜಾಮೀನು ಅರ್ಜಿ ವಜಾ

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

ಹೊಸ ಸೇರ್ಪಡೆ

basava jayanti

ಜಾಗತಿಕ ಲಿಂಗಾಯತ ಮಹಾಸಭಾ ಸಾಗರೋತ್ತರ ಘಟಕದಿಂದ ಬಸವ ಜಯಂತಿ ಕಾರ್ಯಕ್ರಮ

kkkkkkkkkkkkk

ಹಳೆಯಂಗಡಿ : ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ

prayer at home

ಹಳೆಯಂಗಡಿ : ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ

jjjjjjjjjjjjjjk

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.