ಕುರ್ತಿ ಯುಗ: ಬೆಡಗಿ ಕಣ್ಣು ಕುರ್ತಿ ಮ್ಯಾಗೆ


Team Udayavani, Nov 28, 2018, 6:00 AM IST

c-6.jpg

ಬೇಸಿಗೆ, ಮಳೆ, ಚಳಿ- ಈ ಮೂರು ಕಾಲಮಾನಕ್ಕೂ ಹೊಂದಿಕೊಳ್ಳುವಂಥ ಡ್ರೆಸ್‌ ಎಂದರೆ ಕುರ್ತಾ. ಜೀನ್ಸ್‌, ಧೋತಿ, ಡೆನಿಮ್‌… ಈ ಯಾವುದರ ಜೊತೆ ಧರಿಸಿದರೂ ಸ್ಟೈಲಿಷ್‌ ಆಗಿ ಕಾಣುವುದು ಕುರ್ತಿಯ ಹೆಚ್ಚುಗಾರಿಕೆ…

ಕುರ್ತಿಗಳನ್ನು ಇದ್ದದ್ದು ಇದ್ದಂಗೆಯೇ ಧರಿಸುವ ಕಾಲವೆಲ್ಲ ಮುಗೀತು. ಈಗೇನಿದ್ದರೂ ಎಲ್ಲರ ಕಣ್ಣು ಕುಕ್ಕುವಂತೆ ಫ್ಯಾಷನೆಬಲ್‌ ಆಗಿ ಕಾಣಿಸುವುದೇ ಮುಖ್ಯ ಎನ್ನುತ್ತಿದ್ದಾರೆ ಹೆಣ್ಣುಮಕ್ಕಳು. ಅದಕ್ಕಾಗಿ ಕುರ್ತಿ ಧರಿಸುವುದಕ್ಕೂ ಬಗೆ ಬಗೆಯ ಶೈಲಿಗಳನ್ನು ಕಂಡುಕೊಳ್ಳಲಾಗಿದ್ದು, ಇದು ಈಗಿನ ಹೊಸ ಟ್ರೆಂಡ್‌ ಆಗಿಯೂ ಕಣ್ಮನ ಸೆಳೆಯುತ್ತಿದೆ. ಹಾಗಿದ್ರೆ, ಈ ಕುರ್ತಿ ಫ್ಯೂಷನ್‌ ಬಗ್ಗೆ ತಿಳಿದುಕೊಳ್ಳೋಣ.

ಕುರ್ತಿ ಮೇಲೊಂದು ಜಾಕೆಟ್‌
ನೀವು ಯಾವುದೇ ಕುರ್ತಿ ಧರಿಸಿ. ಅದರ ಮೇಲೊಂದು ಪುಟ್ಟ ಜಾಕೆಟ್‌ ತೊಟ್ಟುಕೊಂಡರೆ, ಅದರ ಸ್ಟೈಲೇ ಬೇರೆ. ಈಗಂತೂ ಮಾರುಕಟ್ಟೆಗಳಲ್ಲಿ ಜಾಕೆಟ್‌ಗಳಿಗೆ ಬರವಿಲ್ಲ. ಸಾಂಪ್ರದಾಯಿಕ ಕಲೆಗಳುಳ್ಳ ಜೋಧ್‌ಪುರಿ, ಬಂಧಗಾಲಾದಿಂದ ಹಿಡಿದು ಸಿಂಪಲ್‌ ಆಗಿಯೂ, ಪ್ಲೇನ್‌ ಆಗಿಯೂ ಇರುವಂಥ ಜಾಕೆಟ್‌ಗಳು ಲಭ್ಯ ಇವೆ. ಕುರ್ತಿ ಪ್ಲೇನ್‌ ಆಗಿದ್ದರೆ, ವಿನ್ಯಾಸಗಳುಳ್ಳ ಜಾಕೆಟ್‌ ಅನ್ನೂ, ಕುರ್ತಿಯಲ್ಲಿ ಹೆಚ್ಚು ವರ್ಕ್‌ ಇದ್ದರೆ ಪ್ಲೇನ್‌ ಜಾಕೆಟ್‌ ಅನ್ನೂ ಆಯ್ಕೆ ಮಾಡಿಕೊಳ್ಳಬಹುದು.

ಫ್ರಾಕ್‌ ಶೈಲಿ 
ಲಾಂಗ್‌ ಅನಾರ್ಕಲಿಗಳು ಬದಿಗೆ ಸರಿಯುತ್ತಿದ್ದಂತೆ, ಶಾರ್ಟ್‌ ಫ್ರಾಕ್‌-ಶೈಲಿಯ ಕುರ್ತಿಗಳು ಮುಂಚೂಣಿಗೆ ಬರಲಾರಂಭಿಸಿವೆ. ಫ್ರಾಕ್‌ನದ್ದೇ ರೂಪ ಹೊಂದಿರುವ ಫ್ರಿಲ್ಸ್‌ ಇರುವಂಥ ಅಥವಾ ಮಾಮೂಲಿ ಕುರ್ತಿಗಳು ಹದಿಹರೆಯದ ಹೆಣ್ಣುಮಕ್ಕಳನ್ನು ಆಕರ್ಷಿಸುತ್ತಿವೆ. ಇದನ್ನು ಡೆನಿಮ್‌ ಅಥವಾ ಲೆಗ್ಗಿಂಗ್ಸ್‌ ಇಲ್ಲದೆ ಧರಿಸಿದರೂ ಚೆನ್ನಾಗಿಯೇ ಕಾಣುತ್ತದೆ. ಸಾಂಪ್ರದಾಯಿಕ ಸಲ್ವಾರ್‌ ಕುರ್ತಾದಂತೆಯೇ ಕಾಣಬೇಕೆಂದರೆ, ಎಥಿ°ಕ್‌ ಪ್ರಿಂಟ್‌ ಇರುವ ಅಥವಾ ಎಂಬ್ರಾಯಿಡರಿ ವಿನ್ಯಾಸವಿರುವ ಕುರ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಸ್ಕರ್ಟ್‌ ಜತೆ…
ಹಿಂದೆಲ್ಲ, ಉದ್ದ ಲಂಗದ ಜೊತೆಗೆ ರವಿಕೆ ಧರಿಸುವುದನ್ನಷ್ಟೇ ನೋಡಿರುತ್ತೀರಿ. ಈಗ, ಉದ್ದನೆಯ ಸ್ಕರ್ಟ್‌ ಜೊತೆಗೆ ಕುರ್ತಿಯನ್ನೂ ಧರಿಸಬಹುದು. ಕುರ್ತಿಗೆ ಲೆಗ್ಗಿಂಗ್ಸ್‌ ಜೋಡಿಯಾಗುವ ಬದಲು, ಉದ್ದನೆಯ ಲಂಗ ಧರಿಸಿ, ಅದರ ಮೇಲೆ ಮೊಣಕಾಲಿಗಿಂತ ಕೆಳಕ್ಕೆ ಬರುವ ಕುರ್ತಿಗಳನ್ನು ಹಾಕಿಕೊಂಡರೆ, ವಿಶೇಷವಾಗಿ ಕಾಣುವುದರಲ್ಲಿ ಸಂಶಯವಿಲ್ಲ.

ಧೋತಿಗೂ ಕುರ್ತಿಗೂ ನಂಟು
ಧೋತಿಗೂ, ಕುರ್ತಿಗೂ ಏನು ಸಂಬಂಧ ಎಂದು ಕೇಳಬೇಡಿ? ಧೋತಿ ಪ್ಯಾಂಟ್‌ ಜೊತೆಗೂ ಕುರ್ತಿ ಧರಿಸಬಹುದು. ಹಗುರವಾಗಿರುವ, ಹತ್ತಿ ಬಟ್ಟೆಯಿಂದ ಮಾಡಿದ ಧೋತಿ ಧರಿಸಿಕೊಂಡು, ಮೇಲೊಂದು ಶಾರ್ಟ್‌ ಕುರ್ತಿ ತೊಟ್ಟುಕೊಳ್ಳಿ. ಸ್ಲಿವ್‌ಲೆಸ್‌ ಕುರ್ತಿಯೂ ಧೋತಿಗೆ ಚೆನ್ನಾಗಿಯೇ ಕಾಣುತ್ತದೆ.

ದುಪಟ್ಟಾ ಜೋಡಿ
ಸಾಂಪ್ರದಾಯಿಕ ಸಲ್ವಾರ್‌ ಕುರ್ತಾದಲ್ಲಿ ಮಾತ್ರ ಮಿಂಚುತ್ತಿದ್ದ ದುಪಟ್ಟಾಗಳು ಈಗ ಆಧುನಿಕ ಉಡುಗೆಗಳಲ್ಲೂ ತನ್ನದೇ ಪಾತ್ರ ವಹಿಸತೊಡಗಿದೆ. ಫ್ಯಾಷನ್‌ ಫ್ಯೂಷನ್‌ನ ಎಫೆಕ್ಟ್ ಎಂಬಂತೆ, ಕುರ್ತಿಗಳು, ಟಿ-ಶರ್ಟ್‌ಗಳ ಮೇಲೂ ದುಪಟ್ಟಾಗಳು ರಾರಾಜಿಸುತ್ತಿವೆ. ಮಾಡರ್ನ್ ಡ್ರೆಸ್‌ಗಳನ್ನು ಧರಿಸಿದರೂ ಅವುಗಳ ಮೇಲೆ ಭಿನ್ನ ಭಿನ್ನ ಬಗೆಗಳಲ್ಲಿ ದುಪಟ್ಟಾಗಳನ್ನು ತೊಟ್ಟುಕೊಳ್ಳಬಹುದು. 

ಶರ್ಟ್‌ ಮಾದರಿ ಕುರ್ತಿ
ಮುಂಭಾಗದಲ್ಲಿ ಶರ್ಟ್‌ನಂತೆಯೇ ತೋರುವ ಕುರ್ತಿಗಳಿಗೂ ಈಗ ಭಾರೀ ಬೇಡಿಕೆ ಇದೆ. ಪಲಾಜೋ ಪ್ಯಾಂಟ್‌ ಅಥವಾ ಪಟಿಯಾಲಾ ಜೊತೆಗೆ ಈ ಶರ್ಟ್‌ ಶೈಲಿ ಕುರ್ತಿಗಳನ್ನು ಧರಿಸಬಹುದು. ಇವುಗಳು ಕಾಟನ್‌, ಸಿಲ್ಕ್, ವಿಸ್ಕೋಸ್‌ ಇತ್ಯಾದಿಗಳಲ್ಲೂ ಲಭ್ಯ.

ಡೆನಿಮ್‌ ಜೊತೆಗೆ
ಡೆನಿಮ್‌ ಧರಿಸುವುದೆಂದರೆ ಎಲ್ಲರಿಗೂ ಇಷ್ಟ. ಆ ಡೆನಿಮ್‌ ಜೊತೆಗೆ ಕುರ್ತಿಯನ್ನೂ ತಳುಕು ಹಾಕಿಕೊಂಡರೆ ಇನ್ನಷ್ಟು ಚೆಂದ. ಫ್ರಂಟ್‌ ಸ್ಲಿಟ್‌ ಅಥವಾ ಸೈಡ್‌ ಸ್ಲಿಟ್‌ ಕುರ್ತಿಗಳ ಜೊತೆಗಂತೂ ಡೆನಿಮ್‌ ಅದ್ಭುತವಾಗಿ ಕಾಣುತ್ತದೆ. ಗೆಳೆಯರ ಜೊತೆಗೆ ಸಿನಿಮಾಗೋ, ಪಾರ್ಕ್‌ಗೋ, ಪಿಕ್ನಿಕ್‌ಗೊà ಹೋಗುವಾಗ ಟ್ರೆಂಡಿಯಾಗಿಯೂ, ಆರಾಮದಾಯಕವೂ ಇರುವ ಡೆನಿಮ್‌- ಕುರ್ತಿ ಧರಿಸಬಹುದು.

ಹಲೀಮತ್‌ ಸ ಅದಿಯಾ  

ಟಾಪ್ ನ್ಯೂಸ್

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.