ಮಗೂ, ದೇಶ ಕಾಯುವೆಯಾ?


Team Udayavani, Feb 20, 2019, 12:30 AM IST

u-8.jpg

ಮಕ್ಕಳು ಹುಟ್ಟುವ ಮುನ್ನವೇ ಡಾಕ್ಟರ್‌ ಓದಿಸುವುದೋ, ಎಂಜಿನಿಯರ್‌ ಓದಿಸುವುದೋ ಎಂಬುದನ್ನು ಹೆತ್ತವರು ನಿರ್ಧರಿಸುವ ಕಾಲವಿದು. ಎಲ್ಲರಿಗೂ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವ ನೀಡುವ ಹುದ್ದೆಗಳತ್ತಲೇ ಗಮನ. ಅದರಿಂದಾಚೆ ಅವರ ಆಸಕ್ತಿ ಹರಿಯುವುದೇ ಇಲ್ಲ. ಎಲ್ಲಾ ತಾಯಂದಿರಂತೆ ನಾನು ಕೂಡಾ ನೀನೇನಾಗಬೇಕೆಂದು ಆಸೆ ಪಟ್ಟಿದ್ದೇನೆ…

ಮಗುವೇ…
ನಿನ್ನ ನಿರೀಕ್ಷೆಗೀಗ ಎಂಟು ತಿಂಗಳು. ಒಳಗೆ ಎಲ್ಲವೂ ಕ್ಷೇಮ ತಾನೇ. ನಾನಿಲ್ಲಿ ಕ್ಷೇಮ. ನನಗೆ ಗೊತ್ತು ಒಳಗಲ್ಲಿ ಕತ್ತಲು. ನಿನಗೆ ಗೊತ್ತೇ? ಇಲ್ಲೂ ಕತ್ತಲು. ನಮ್ಮ ದೇಶದ ಸೈನಿಕರ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆಗೈದಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಮನೆಯಲ್ಲಿ ನನಗೂ, ನಿನ್ನ ತಂದೆಯದೂ ಇದೇ ಮಾತುಕತೆ. ನಿನ್ನ ಚಿಕ್ಕಪ್ಪನೂ ಸೇನೆಯಲ್ಲಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ದಾಳಿ ನಡೆದ ಸ್ಥಳದಿಂದ ಬಹಳ ದೂರವಿಲ್ಲ. ಈ ಕಾರಣಕ್ಕೆ ನಮ್ಮ ದಿಗಿಲು ಇನ್ನೂ ಹೆಚ್ಚಾಗಿದೆ. ಮುಂದಿನಿಂದ ದಾಳಿ ನಡೆಸುವವರನ್ನು ಧೈರ್ಯವಾಗಿ ಎದುರಿಸಿ ಸೆದೆಬಡಿದುಬಿಡಬಹುದು, ಆದರೆ ಹಿಂದಿನಿಂದ, ಕದ್ದು ಮುಚ್ಚಿ ದಾಳಿ ನಡೆಸುವವರದೇ ಚಿಂತೆ. ಅಷ್ಟುಮಾತ್ರಕ್ಕೆ ಜಗತ್ತು ಕೆಟ್ಟಿದೆಯೆಂದು ತಿಳಿಯಬೇಡ. ಜಗತ್ತು ನಿಜಕ್ಕೂ ಸುಂದರವಾಗಿದೆ. ಹುಂ, ಸ್ವಲ್ಪ ಸಮಯವಷ್ಟೇ. ಇನ್ನೇನು ಹೊರಗೆ ಬರುತ್ತೀಯಲ್ಲ. ಆಗ, ಎಲ್ಲವನ್ನೂ ನೀನೇ ನೋಡುವೆಯಂತೆ…

ಈಗ ನನಗೆ ನೆನಪಾಗುತ್ತಿದೆ. ನಿನ್ನ ತಂದೆಯನ್ನು ಮದುವೆಯಾಗುವ ಮೊದಲು ಹಲವು ಸಂಬಂಧಗಳನ್ನು ಮನೆಯವರು ನೋಡಿದ್ದರು. ಯಾವ ಯಾವುದೋ ಕಾರಣಗಳಿಗೆ ಸರಿಬಂದಿರಲಿಲ್ಲ. ಕಡೆಗೆ ನಿನ್ನ ತಂದೆಯ ಕಡೆಯ ಸಂಬಂಧ ನಮ್ಮ ಮನೆಯವರಿಗೆಲ್ಲಾ ಹಿಡಿಸಿದ್ದು ಈಗ ಹಳೆಯ ಕಥೆ. ಈ ಬಗ್ಗೆ ನಿನಗೊಂದು ವಿಚಾರ ಹೇಳಲೇಬೇಕು. ನನ್ನನ್ನು ನೋಡಲು ಬಂದಿದ್ದವರಲ್ಲಿ ಒಬ್ಬರು ಸೈನಿಕರಾಗಿದ್ದರು. ಅವರು ನನ್ನನ್ನು ನೋಡಿ ಇಷ್ಟಪಟ್ಟಿದ್ದರು. ನನಗೂ ಅವರು ಹಿಡಿಸಿದ್ದರು. ಆರಡಿ ಎತ್ತರದ ಆಜಾನುಬಾಹು, ನಾನೋ ಅವರ ಹೆಗಲಿಗಿಂತಲೂ ಕೆಳಕ್ಕೆ ಬರುತ್ತಿದ್ದೆ. ಗೆಳತಿಯರೆಲ್ಲಾ ಈ ಬಗ್ಗೆ ಆಡಿಕೊಂಡಿದ್ದೇ ಆಡಿಕೊಂಡಿದ್ದು. ನನಗೆ ಅವರು ಸೇನೆಯವರೆಂದು ತಿಳಿದು ಅವರ ಮೇಲೆ ಗೌರವ ಮೂಡಿತ್ತು. ಅವರ ಬಳಿ ಮಾತಾಡುವಾಗಲೂ ಅಷ್ಟೆ: ಎಲ್ಲಿ ತಪ್ಪು ತಿಳಿದುಕೊಂಡುಬಿಡುತ್ತಾರೋ ಎಂದು ಪ್ರತಿ ಪದವನ್ನೂ ಅಳೆದು ತೂಗಿ ಆಡುತ್ತಿದ್ದೆ. ಆದರೆ, ಅವರು ನಾನಂದುಕೊಂಡಂತೆ ಅಂಥ ಕಟ್ಟುನಿಟ್ಟಿನ ವ್ಯಕ್ತಿಯಾಗಿರಲಿಲ್ಲ. ಅವರೇ ನನ್ನ ಪತಿಯಾಗುತ್ತಾರೆ ಎಂದುಕೊಂಡೆ. ಆದರೆ, ನಮ್ಮ ಮನೆಯಲ್ಲಿ ಅವರನ್ನು ಒಪ್ಪಲಿಲ್ಲ. ಅವರು  ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕೆ ನಮ್ಮ ಮನೆಯಲ್ಲಿ ವಿರೋಧ ಬಂದಿತು. ನಾನಂತೂ ಸಿದ್ಧಳಿದ್ದೆ. ಅವರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕೇ ಅವರು ನನಗೆ ಹಿಡಿಸಿಬಿಟ್ಟಿದ್ದರು. ಆದರೆ, ಯೋಗ ಕೂಡಿ ಬರಲಿಲ್ಲ. ಅವರೀಗ ಕ್ಷೇಮವಾಗಿದ್ದಾರೆಂದೇ ಆಶಿಸುತ್ತೇನೆ. ಟಿ.ವಿ.ಯಲ್ಲಿ ಸೇನೆ ಮೇಲಿನ ದಾಳಿ ಸುದ್ದಿ ನೋಡಿದಾಗ ಇವೆಲ್ಲಾ ನೆನಪಾಯಿತು.

ಮಕ್ಕಳು ಹುಟ್ಟುವ ಮುನ್ನವೇ ಡಾಕ್ಟರ್‌ ಓದಿಸುವುದೋ, ಎಂಜಿನಿಯರ್‌ ಓದಿಸುವುದೋ ಎಂಬುದನ್ನು ಹೆತ್ತವರು ನಿರ್ಧರಿಸುವ ಕಾಲವಿದು. ಎಲ್ಲರಿಗೂ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವ ನೀಡುವ ಹುದ್ದೆಗಳತ್ತಲೇ ಗಮನ. ಅದರಿಂದಾಚೆ ಅವರ ಆಸಕ್ತಿ ಹರಿಯುವುದೇ ಇಲ್ಲ. ಎಲ್ಲಾ ತಾಯಂದಿರಂತೆ ನಾನು ಕೂಡಾ ನೀನೇನಾಗಬೇಕೆಂದು ಆಸೆ ಪಟ್ಟಿದ್ದೇನೆ. ಅವರಂತೆ ಡಾಕ್ಟರ್‌, ಎಂಜಿನಿಯರ್‌ ಆಗಿಸುವ ಆಸೆಯಿಲ್ಲ. ನಿನ್ನನ್ನು ಸೈನಿಕನನ್ನಾಗಿ ಮಾಡುವ ಆಸೆಯಿದೆ. ದೇಶಕ್ಕಾಗಿ ಹೋರಾಡುವ ಸೈನಿಕನ ಹುದ್ದೆಗಿಂತ ನನಗೆ ಬೇರಾವ ಹುದ್ದೆಯೂ ದೊಡ್ಡದಾಗಿ ಕಾಣುವುದಿಲ್ಲ. ಮುದ್ದೂ, ನನ್ನಾಸೆಯೇ ನಿನ್ನದೂ ಆಗಿರುತ್ತೆ ಎಂಬ ನಂಬಿಕೆ ನನ್ನದು… 

ಇತಿ ನಿನ್ನ
ಅಮ್ಮ

ಭಾರತೀ

ಟಾಪ್ ನ್ಯೂಸ್

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.