ಲೈಫ್ ಈಸ್‌ “ಬುಟ್ಟಿ’ಫ‌ುಲ್‌!

Team Udayavani, Sep 27, 2017, 12:22 PM IST

27-STATE–31.jpg

ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ…

ರಸ್ತೆಯಲ್ಲಿ ನಡೆದು ಹೋಗುವಾಗ ಸುತ್ತಮುತ್ತಲಿನ ಘಟನೆಗಳು, ಚಿತ್ರಣಗಳು ಮನಸ್ಸಿನಲ್ಲಿ ಅನೇಕ ಭಾವನೆಗಳನ್ನು ಮೂಡಿಸುತ್ತವೆ. ಕೆಲವು ಸಂಗತಿಗಳು ಕಣ್ಣಿಗೆ ಆನಂದ ನೀಡಿದರೆ, ಇನ್ನು ಹಲವು ಮನಸ್ಸಿಗೆ ನಾಟುತ್ತವೆ. ದಾರಿಯಲ್ಲಿ ಸಿಗುವ ಅನೇಕರು ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ, ಹಾಗೇ ಅವರು ಕಲಿಸುವ ಜೀವನಪಾಠವೂ. 

ನಾನು ರಸ್ತೆಯಲ್ಲಿ ಸಾಗುತ್ತಿದ್ದಾಗ, ಹಣ್ಣಣ್ಣು ಮುದುಕಿಯೊಬ್ಬಳು ಬುಟ್ಟಿ ಹೆಣೆಯುತ್ತಾ ಕುಳಿತಿದ್ದನ್ನು ನೋಡಿದೆ. ಆಕೆಯ ಸ್ವಾಭಿಮಾನಕ್ಕೆ ತಲೆ ಬಾಗುತ್ತಾ, ಇಳಿವಯಸ್ಸಿನಲ್ಲೂ ಕಷ್ಟಪಡಬೇಕಾದ ಆಕೆಯ ಸ್ಥಿತಿಗೆ ಮರುಗುತ್ತಾ ಆ ಅಜ್ಜಿಯನ್ನು ಮಾತಾಡಿಸಿದೆ. “ಏನಜ್ಜಿ ನಿನ್‌ ಹೆಸರು? ಯಾವೂರು?’ ಅಂತೆಲ್ಲ ಕೇಳಿದಾಗ, ಆಕೆ ತನ್ನಿಡೀ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ …

ನನ್ನ ಹೆಸರು ಮರಿಯಮ್ಮ ಕಣಮ್ಮ. ನಾನು ಶಾಲೆಗೇನೂ ಹೋಗಿಲ್ಲ. ಆದ್ರೆ ಈ ಬುಟ್ಟಿ ಮಾರಿ ಬಂದ ಹಣಾನ ಎಣಿಸೋಷ್ಟು ಲೆಕ್ಕ ಗೊತ್ತೈತೆ ನಂಗೆ. ನನ್ನೂರು ಮೈಸೂರು. ನನಗೆ 13 ವರ್ಷಕ್ಕೇ ಮದುವೆ ಮಾಡಿದ್ರು. ಆಗ ನಂಗೆ ಗೊತ್ತಿದ್ದಿದ್ದು ಅಪ್ಪ- ಅಮ್ಮ ಕಲಿಸಿದ ಈ ಕೆಲಸ ಮಾತ್ರ. ಆವತ್ತಿಂದ ನಂದು ಇದೇ ಕಸುಬು. ನಂಗೀಗ 67 ವರ್ಷ. 48 ವರ್ಷದಿಂದ ಕೆ.ಆರ್‌. ರಸ್ತೆಯಲ್ಲೇ ಬುಟ್ಟಿ ಮಾರೋದು ನಾನು. 

ಪಾರ್ವತಿಪುರದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು. ಎಲಿÅಗೂ ಮದುವೆಯಾಗಿದೆ. ನನ್ನೊಬ್ಬ ಮಗ ಸತ್ತೋದ. ಹಂಗಾಗಿ ನಾನು, ನನ್ನ ಯಜಮಾನ, ಸೊಸೆ, ಮೊಮ್ಮಕ್ಕಳೆಲ್ಲಾ ಜೊತ್ಯಾಗೇ ಇದೀವಿ. ನಮ್ಮವೂÅ ಕೂಲಿಗೆ ಹೋಗ್ತಾರೆ. ಮೊಮ್ಮಕ್ಕಳು ಓದಿ¤ದಾರೆ. ಸೊಸೆ ಮನೆ ಕೆಲಸಕ್ಕೆ ಹೋಗ್ತಾಳೆ. ಜೀವ° ನಡೀಬೇಕಲ್ಲ? ನಂಗೆ ಈ ಕೆಲ್ಸ ಬಿಟ್ಟು ಬೇರೆ ಏನೂ ಬರಾಕಿಲ್ಲ. ಮಾಡ್ತೀನಿ ಅಂದ್ರೂ, ನಂಗ್ಯಾರು ಕರೆದು ಕೆಲಸ ಕೊಡ್ತಾರೆ?

ಒಂದಿನಕ್ಕೆ ಹೆಚ್ಚಂದ್ರೆ ಮೂರ್‍ನಾಲ್ಕು ಬುಟ್ಟಿ ಹೆಣೀಬೋದು. ಹೂವಿನಬುಟ್ಟಿ, ತರಕಾರಿ ಬುಟ್ಟಿ… ಹಿಂಗೆ ಬೇರೆ ಬೇರೆ ಬುಟ್ಟಿಗೆ ಬೇರೆ ಬೇರೆ ರೇಟು. ಒಂದಕ್ಕೆ 50-100 ರೂಪಾಯ್‌ ಸಿಗುತ್ತೆ. ಯಾರಾದ್ರೂ ಆರ್ಡರ್‌ ಕೊಟ್ರೆ, ಹೆಣೆದು ಕೊಡ್ತೀನಿ. ಈಗ ಮೊದಲಿನಷ್ಟು ಕಡಿಮೆ ದರದಲ್ಲಿ ಬಿದಿರು ಸಿಗೋದಿಲ್ಲ. ಏನೂ ಗಿಟ್ಟಲ್ಲ ಅಂದ್ರೂ, ದುಡಿಲೇಬೇಕಾದ ಅನಿವಾರ್ಯತೆ. ಒಂದು ಬಿದಿರಿಗೆ 300 ರೂ. ಕೊಡ್ಬೇಕು ನನ್ನವ್ವಾ. ಅದು ಬೆಳಗಾವಿಯಿಂದ ಬಂಬೂ ಬಜಾರಕ್ಕೆ ಬರುತ್ತೆ, ಅಲ್ಲಿಂದ ತಗೊಂಡು ಬಂದು ನಾವಿಲ್ಲಿ ಬುಟ್ಟಿ ಹೆಣೆಯೋದು. 

ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ. ಅದ್ಕೆ ದೇಹ ದಣಿದ್ರೂ ಇಲ್ಲಿ ಬಂದು ಬುಟ್ಟಿ ಹೆಣೆಯೋದು. ಸ್ವಲ್ಪ ಸಾಲ ಬೇರೆ ಕುತೆ ಮೇಲಿದೆ. ಇದರಿಂದ ಬರೋ ದುಡ್ಡಲ್ಲಿ ಅದನ್ನಾ ತೀರಿಸಬೇಕು. ಜೀವ° ನಡೆಸೋಕೆ ಗೊತ್ತಿರೋದು ಇದೊಂದೇ ದಾರಿ.  ಕಷ್ಟಾನೋ, ಸುಖಾನೋ, ಜೀವನ ನಡೀಬೇಕಲ. ಲಾಭ ಬಂದ್ರೆ ಖುಷಿ, ಇಲ್ಲ ಅಂದ್ರೆ ಬ್ಯಾಸ್ರ. ಇದ್ರಲ್ಲಿ ಇಷ್ಟೇ ಹಣ ಬರುತ್ತೆ ಅಂತ ಹೇಳಕಾಗಲ್ಲ. ಹೊಟ್ಟೆಪಾಡಿಗೆ ಏನಾದೊದು ಮಾಡ್ಲೆಬೇಕಲ್ಲ ತಾಯಿ. ಕಲಿತ ವಿದ್ಯೆನೆ ಕೈ ಹಿಡೀತಿರೋದು. ಮಳೆ ಬಂದ್ರೆ ವ್ಯಾಪಾರ ಮಾಡೋಕಾಗಲ್ಲ. ಹಂಗಂತ ಮನೇಲಿ ಬೆಚ್ಚಗೆ ಇರೋಕಾಗತ್ತಾ? ಜೀವನ ಬಂದಂಗೆ ಬಾಳ್ವೆ ನಡೆಸಬೇಕು ಕಣವ್ವಾ. 

ಚೈತ್ರ ಹೆಚ್‌.ಜಿ.

ಟಾಪ್ ನ್ಯೂಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.