“ಆ ಖುಷಿ’ಗಿಂತ ಪುಟ್ಟ ಪುಟ್ಟ ಖುಷಿಗಳೇ ಮೇಲು


Team Udayavani, Nov 28, 2018, 6:00 AM IST

c-1.jpg

ಬಹಳ ಸಂಕೋಚದಿಂದ ಗಂಡ- ಹೆಂಡತಿ ಕುಳಿತಿದ್ದರು. ನಡು ವಯಸ್ಸಿನವರು. ಮುಖ ಮುದುಡಿತ್ತು. ಹೆಂಡತಿ ಧೈರ್ಯ ತೆಗೆದುಕೊಂಡು, “ಸಮಸ್ಯೆ ಏನೂ ಇಲ್ಲಾ ಮೇಡಂ… ಇವರೇ ಕರಕೊಂಡು ಬಂದಿದ್ದಾರೆ’ ಎಂದರು. ಗಂಡನಿಗೆ ರೇಗಿ ಹೋಯಿತು. ಮಾತನಾಡಲು ಅಷ್ಟು ಕಸಿವಿಸಿಯಾಗುವ ವಿಚಾರ ಎಂದರೆ, ದಂಪತಿಯ ನಡುವೆ ಶಾರೀರಿಕ ಸಂಬಂಧದ ಬಗ್ಗೆ ತಕರಾರು ಇರುತ್ತದೆ. ಬೇಗ ಬೇಗ ಮಾತನಾಡಲು ಸಾಧ್ಯವಾಗುವುದಿಲ್ಲ. ಮದುವೆಯಾಗಿ ಹತ್ತು ವರ್ಷಗಳಾಗಿವೆ. ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದಾರೆ. ಸಂಸಾರದಲ್ಲಿ ಎಲ್ಲರ ಜೊತೆಗೂ ಹೆಂಡತಿ ಹೊಂದಿಕೊಂಡಿದ್ದಾಳೆ, ಮನೆಯವರೂ ಇವಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ಹೆಂಡತಿಗೆ ಗಂಡನೊಡನೆ ಕೂಡುವ ಬಗ್ಗೆ ನಿರಾಸಕ್ತಿ ಮೂಡಿದೆ. ಆತನನ್ನು ಹೊರಗೆ ಕಳುಹಿಸಿ, ಆಕೆಯಿಂದ ಮಾಹಿತಿ ಪಡೆದೆ.

  ಎರಡನೇ ಮಗುವಾದ ನಂತರ ಆಕೆಗೆ ಸೆಕ್ಸ್‌ ಬಗ್ಗೆ ಆಸಕ್ತಿ ಇಲ್ಲ. ಮನೆಕೆಲಸ- ಮಕ್ಕಳ ಕೆಲಸ ಜಾಸ್ತಿ. ಬೆಳಗಾಗೆದ್ದು, ಅಡುಗೆಯ ಜೊತೆಗೆ ದೇವರಿಗೆ ಸಲ್ಲುವ ನೈವೇದ್ಯವನ್ನೂ ತಯಾರಿ ಮಾಡಬೇಕು. “ನಂಗೆ ಇವರ ಜೊತೆ ಸೇರಲು ಸಮಯವಿಲ್ಲ ಮೇಡಂ… ರಾತ್ರಿ ಹೊತ್ತಿಗೆ ನಂಗೆ ಸುಸ್ತಾಗಿರುತ್ತೆ. ಬೆಳಗ್ಗೆ ಕೆಲಸದ ಧಾವಂತ’ ಎಂದರು. ವಯಸ್ಸು ಚಿಕ್ಕದು. ತಿರಸ್ಕರಿಸಲು ಬೇರೆ ಕಾರಣವಿರಬೇಕು ಎಂದುಕೊಂಡು, ಆತನ ಮೇಲೆ ಸಿಟ್ಟು ಬರಲು ಕಾರಣ ಕೆದಕಿದೆ.

  ಸೆರಗು ಮುಂದಿಟ್ಟು ಆಕೆ ಅತ್ತುಬಿಟ್ಟರು. ಮದುವೆಯಾದ ಹೊಸತರಲ್ಲಿ ಕಾಮಾತುರದಿಂದ ಕೂಡಿದರೂ, ವರ್ಷಗಳು ಕಳೆದಂತೆ, ಗಂಡ- ಹೆಂಡತಿಯ ನಡುವೆ ಕುಸಿದ ಪರಸ್ಪರ ಆಂತರಿಕ ಸಂಬಂಧಗಳು ಕೂಡುವಿಕೆಗೆ ಸರಹದ್ದು ಹಾಕಿಬಿಡುತ್ತವೆ. ಕೂಡುವಿಕೆಗೆ ಭಾವನಾತ್ಮಕ ಸಂಬಂಧಗಳೂ ಮುಖ್ಯವಾಗುತ್ತವೆ. ಜಾತ್ರೆಯಲ್ಲಿ ಆಕೆ ಗಾಜಿನ ಬಳೆ ಕೊಳ್ಳಲು ಹೋದಾಗ ಈತ ಜಿಪುಣತನ ಮಾಡಿ ಕೊಡಿಸಲೇ ಇಲ್ಲ. ಆಕೆಗೆ ಸುಮಂಗಲಿಯ ಸಂಕೇತವದು. ಎರಡನೇ ಮಗುವಿನ ಬಸುರಿಯಲ್ಲಿ ಸೀರೆ ಇರಲಿ, ದುಂಡು ಮಲ್ಲಿಗೆ ಹೂವನ್ನೂ ಕೊಡಿಸಲಿಲ್ಲ. ಮಸಾಲೆದೋಸೆ ತಿನ್ನಲು ಯಾವತ್ತೂ ಹೋಗಲಿಲ್ಲ. ವ್ಯಾಪಾರದಲ್ಲಿ ಬೇರೆ ಊರಿಗೆ ಹೋದರೆ, ಒಂದು ಫೋನ್‌ ಇರಲಿ, ಮೆಸೇಜನ್ನೂ ಮಾಡುವುದಿಲ್ಲ. ಮೈದುನನು ಮಕ್ಕಳಿಗೆ ಬೈದಾಗ, ಗಂಡ ಪರ ವಹಿಸಿಕೊಳ್ಳುವುದಿಲ್ಲ. ಗಂಡನಿಗಿಂತ ಇವಳಿಗೆ ಮಕ್ಕಳ ಮೇಲೆ ನಿಗಾ ಜಾಸ್ತಿ. ಈ ಮಧ್ಯೆ ಕುಡಿತದ ಚಾಳಿ ಹಿಡಿದಿದೆ ಆತನಿಗೆ. ವಾಸನೆ ತಡೆಯಲಾಗುವುದಿಲ್ಲ.

  ನಾನು ಕೂಡಲೇ ಆತನ ಕೌನ್ಸೆಲಿಂಗ್‌ಗೆ ಹೆಚ್ಚು ಒತ್ತುಕೊಟ್ಟೆ. ಕೂಡಲು ಈಕೆಗೆ ಆಸೆ ಇದೆ. ಮನಸ್ಸಿಲ್ಲ ಎಂಬ ವಿಚಾರ ಆತನಿಗೆ ಗೊತ್ತಾಯಿತು. ಹೆಣ್ಣಿಗೆ ಚಿಕ್ಕ ಚಿಕ್ಕ ವಿಚಾರಗಳಲ್ಲಿ ತೃಪ್ತಿ ಸಿಗದಿದ್ದರೆ, ಮಾನಸಿಕವಾಗಿ ಗಂಡನಿಂದ ದೂರವಾಗುತ್ತಾಳೆ. ಲೈಂಗಿಕ ಕ್ರಿಯೆ ಅನವಶ್ಯಕ ಎನಿಸಿತ್ತದೆ. ಮಕ್ಕಳ ರಕ್ಷಣೆ ಮಾಡದ ಗಂಡನ ಕಾಮಾತುರ ಸಹ್ಯವಾಗುವುದಿಲ್ಲ. ವ್ಯಾಘ್ರನಂತೆ ಕಾಣುತ್ತಾನೆ. ಲಾಲಿತ್ಯದಿಂದ ಕೂಡಿದ ಮಧುರ ಸಂಬಂಧ ಬೆಳೆಸಿಕೊಳ್ಳುವುದು ಕಷ್ಟವಲ್ಲ, ಎಚ್ಚರ ವಹಿಸಿ.

ಶುಭಾ ಮಧುಸೂದನ್‌, ಮನೋಚಿಕಿತ್ಸಾ ವಿಜ್ಞಾನಿ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.