Udayavni Special

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!


Team Udayavani, Apr 8, 2020, 4:45 PM IST

ಲಾಕ್ ಡೌನ್ ಕತೆಗಳು : ಉಪಾಯಂ ಕಾರ್ಯ ಸಾಧನಂ!

ಹೇಗಿದ್ದೀರಿ ಎಲ್ಲರೂ? ಅಷ್ಟೇನೂ ಚೆನ್ನಾಗಿಲ್ಲ ಅಂತ ಗೊತ್ತಿದೆ ಬಿಡಿ..! ಸದ್ಯಕ್ಕಿದು ಮನೆ ಮನೆ ಕತೆ ಅಲ್ಲವೇ..? ಹೇಗೆ ದಿನ ದೂಡೋದು ಅಂತ ನನಗೂ ಚಿಂತೆಯಾಗಿತ್ತು. ಹೇಗೂ ಒಂದು ಗಂಡಾಳು, ಒಂದು ಹೆಣ್ಣಾಳು (ಅಂದರೆ ಗಂಡ ಮತ್ತು ಮಗಳು) ಜೊತೆಗಿವೆಯಲ್ಲ ಅಂದುಕೊಂಡೆ. ಸಾಮಾನ್ಯವಾಗಿ, ಏಪ್ರಿಲ್‌ ಮೊದಲ ವಾರದ ತನಕ, ಆಫೀಸ್‌ ಕೆಲಸದಲ್ಲಿ ಬ್ಯುಸಿಯಾಗಿ ಇರುತ್ತಿದ್ದೆ. ಆಮೇಲೆಯೇ ಮನೆ ಕಡೆ ಗಮನ ಕೊಡಲು ಆಗುತ್ತಿದ್ದುದು. ಆದರೆ, ಈಗ ಒಂದೆರಡು ವಾರ ಮೊದಲೇ ಬಿಡುವು ಸಿಕ್ಕಿದೆ.

“ಒಂದೊಂದಾಗಿ ಮನೆ ಒಪ್ಪ- ಓರಣ ಮಾಡೋಣವೇ?’ ಅಂತ ಅರ್ಜಿ ಇಟ್ಟೆ. ಅಪ್ಪ, ಮಗಳು ಇಬ್ಬರೂ ಒಳ್ಳೆ ಕಯಿಂಡ್ಲೆ ಕಾಯಿ (ಸವತೆಕಾಯಿಯ ಜಾತಿಯದ್ದೇ ಆದರೆ ಬಲು ಕಹಿ) ರುಚಿ ನೋಡಿದವರ ಹಾಗೆ ಮುಖ ತಿರುಗಿಸಿಬಿಟ್ಟರು.

ಮಗಳು “ಕಾಲೇಜಿಗೇನೋ ರಜೆ. ಆದ್ರೆ ಒಂದೆರಡು ಥೀಸಿಸ್‌ ಬರೆದು ಸಬ್ಮಿಟ್ ಮಾಡೋದಿದೆ. ಪ್ರಾಜೆಕ್ಟ್ ವರ್ಕ್‌ ಅದು.. ನಿಂಗೊತ್ತಾಗಲ್ಲ..’ ಅಂತ ನುಣುಚಿಕೊಂಡಳು. ಇನ್ನು ರಾಯರು. ಅವರಿಗೂ ಆಫೀಸಿಲ್ಲ. ಆದರೆ, ಅವರು ವಿಪರೀತ ಬ್ಯುಸಿ. ಅವ್ರಿಗೆ ಟಿವಿಲಿ ನ್ಯೂಸ್‌ ನೋಡೋದಿರುತ್ತೆ. ಇರುವ ನಾಲ್ಕು ಸಾಲು ಸುದ್ದಿಯನ್ನೇ ತಿರುಚೀ ಮುರುಚೀ ಅರ್ಧ ಗಂಟೆ ಹೇಳುವ ಚಾನೆಲ್‌ ಗಳೆಂದರೆ ನನಗೆ ಇರಿಸುಮುರಿಸು. ಆದರೆ ರಾಯರು ಮಾತ್ರ, ಪ್ರತಿ ಬಾರಿಯೂ ಅದೇನೋ ಹೊಸ ಹೊಸ ವಿಷಯ ಹೇಳ್ತಿದ್ದಾರೆ ಅನ್ನುವ ಭಂಗಿಯಲ್ಲಿ ಕೂತು ಜವಾಬ್ದಾರಿಯಿಂದ ಕೇಳಿಸಿಕೊಳ್ಳುತ್ತಾರೆ!

“ಅದೇನೂಂತ ನೋಡ್ತೀರೋ ಟಿವಿಯವರ ವ್ಯರ್ಥ ಪ್ರಲಾಪವನ್ನ..’ ಅಂದುಬಿಟ್ಟೆ. ಇವರನ್ನ ಅಂದಿದ್ರೆ ಅಷ್ಟಾಗಿ ಬೇಜಾರು ಆಗುತ್ತಿರಲಿಲ್ಲವೇನೋ.. ಹೇಗೂ ಅಭ್ಯಾಸವಿದೆಯಲ್ಲ..! ಆ ಟಿವಿಯವರ ಬಗ್ಗೆ ಒಂದು ಮಾತು ಅಂದಿದ್ದೇ ತಪ್ಪಾಗೋಯ್ತು. ಆಯಕ್ಕಿಲ್ಲ ಅಂದ್ರೆ ಆಯಕ್ಕಿಲ್ಲ ಅಂತ ಪಟ್ಟು ಹಿಡಿದು ಕೂತವರ ಹಾಗೆ ಮುಖ ಗಂಟಿಕ್ಕಿಬಿಟ್ಟರು. ಆಗ ಜ್ಞಾನೋದಯವಾಯಿತು ನನಗೆ. ಇದು ಸಿಟ್ಟಿಗೆ, ಜಗಳಕ್ಕೆ ಹೊತ್ತಲ್ಲ. ಉಪಾಯವಾಗಿ ಬುದ್ಧಿ ಬಳಸಿ ಕೆಲಸ ಮಾಡಬೇಕು ಅಂತ. ಅವತ್ತು ಸುಮ್ಮನಿದ್ದು, ಮರುದಿನ ಬೆಳಗ್ಗೆ ಒಂದು ‘ಮಧ್ಯಂತರ ಟೀ’ ಸಪ್ಲೆç ಮಾಡಿ ಮೆಲ್ಲಗೆ  ಅಹವಾಲಿಟ್ಟೆ.

“ರೀ, ನಾವು ಹೀಗೆ ಏನೂ ಕೆಲಸ ಮಾಡದೆ, ಮನೆಯೊಳಗೆ ಉಂಡು- ತಿಂದು ಮಾಡಿಕೊಂಡಿದ್ದರೆ ಖಂಡಿತ ತೂಕ ಹೆಚ್ಚಿಸಿಕೊಳ್ತೀವಿ. ಮನೆಯ ಎಲ್ಲ ಕಂಬಗಳ ಮೇಲೆ ಹೆಚ್ಚು ಭಾರ ಆಗುತ್ತೆ ಅಲ್ವೇ… ಒಂದು ಕೆಲಸ ಮಾಡೋಣ. ಬೇಡದೆ ಇರೋ ವಸ್ತುಗಳನ್ನೆಲ್ಲ ಮುಲಾಜಿಲ್ಲದೆ ಹೊರಕ್ಕೆ ಹಾಕೋಣ. ಮುಂದೆ ಬೇಕಾಗಬಹುದು ಅಂತ ಇಟ್ಟುಕೊಂಡು ಮನೆ ಎಲ್ಲ ತುಂಬಿ ಹೋಗಿದೆ. ಸೋಚಿ ಹಗುರ ಮಾಡಿಬಿಡೋಣವೇ…’ ಅಂದೆ. ಮನೆಗೆ ಅಪಾಯ ಅಂದಿದ್ದೇ, ವರ್ಕ್‌ ಔಟ್‌ ಆಯಿತು!

ಹೌದೌದು ಅಂತ ಒಪ್ಪಿಗೆಯ ಠಸ್ಸೆ ಒತ್ತಿಯೇಬಿಟ್ಟರು. ಹೂವಿನ ಸರ ಎತ್ತಿದಷ್ಟು ಸುಸೂತ್ರವಾಯಿತು ಅನ್ನುತ್ತಾರಲ್ಲ… ಹಾಗಾಯಿತು. ವಾರ್ಡ್‌ ರೂಮ್, ಬಾಲ್ಕನಿ ಗಾರ್ಡನ್‌ ಕೆಲಸ, ಕಿಟಕಿ- ಬಾಗಿಲು ಧೂಳು ಹೊಡೆಯುವುದು… ಇತ್ಯಾದಿ ಎಲ್ಲವೂ ಒಂದೊಂದಾಗಿ ಮುಗಿದೇ ಬಿಟ್ಟಿತು.

ಈ ಕೋವಿಡ್ 19 ಮಾರಿ ಬಂದಿದ್ದೇ ಬಂದಿದ್ದು, ಅದೆಷ್ಟು ಪಾಠಗಳನ್ನು ಕಲಿಸಿಬಿಟ್ಟಿತು..! ­

 

-ಸುಮನಾ ಮಂಜುನಾಥ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ವೇಳೆ ಎಸಿಯಲ್ಲಿ ಬೆಂಕಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ವೇಳೆ ಎಸಿಯಲ್ಲಿ ಬೆಂಕಿ

ವಿಶ್ವಶ್ರೇಷ್ಠ ಬ್ಯಾಟ್ಸಮನ್ ಗಳ ಸಾಲಿನಲ್ಲಿ ತೆಂಡೂಲ್ಕರ್ ಗೆ ಐದನೇ ಸ್ಥಾನ ನೀಡಿದ ಅಕ್ರಮ್

ವಿಶ್ವಶ್ರೇಷ್ಠ ಬ್ಯಾಟ್ಸಮನ್ ಗಳ ಸಾಲಿನಲ್ಲಿ ತೆಂಡೂಲ್ಕರ್ ಗೆ ಐದನೇ ಸ್ಥಾನ ನೀಡಿದ ಅಕ್ರಮ್

d-ks

ಬಿಜೆಪಿಯನ್ನು ಬೆಂಬಲಿಸಲು ಆಗುತ್ತಾ? ಜಾತ್ಯಾತೀತ ನಿಲುವನ್ನೇ ಬೆಂಬಲಿಸಬೇಕು: ಡಿಕೆ ಶಿವಕುಮಾರ್

ಬ್ರೆಜಿಲ್‌ನಿಂದ WHO ಬಹಿಷ್ಕರಿಸುವ ಬೆದರಿಕೆ

ಬ್ರೆಜಿಲ್‌ನಿಂದ WHO ಬಹಿಷ್ಕರಿಸುವ ಬೆದರಿಕೆ

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

ರೈತರ ಮೇಲೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ: HDK

ರೈತರ ಮೇಲೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ: HDK

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

double-role-suit

ಡಬಲ್‌ ರೋಲ್‌ ಸೂಟ್!‌

naa-neenahe

ನಾ ನಿನಗೆ ನೀ ನನಗೆ…

arrenge love

ಲವ್‌- ಮ್ಯಾರೇಜ್‌ ಮೊದಲು ಮತ್ತು ನಂತರ…

eshtideyo

ಎಷ್ಟಿದೆಯೋ ಅಷ್ಟಕ್ಕೇ ಹೊಂದಿಕೊಂಡು ಬದುಕು

mixy-purana

ಮಿಕ್ಸಿ ಪುರಾಣ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಸಂಗೀತ ಶಿಕ್ಷಣದ ಉಪಯೋಗ

ಸಂಗೀತ ಶಿಕ್ಷಣದ ಉಪಯೋಗ

ಒಂದು ವರ್ಷದ ಯಾವುದೇ ಹೊಸ ಯೋಜಬೆಯಿಲ್ಲ? ನಿಮ್ಮ ಅಭಿಪ್ರಾಯವೇನು ?

ಒಂದು ವರ್ಷದ ಯಾವುದೇ ಹೊಸ ಯೋಜಬೆಯಿಲ್ಲ? ನಿಮ್ಮ ಅಭಿಪ್ರಾಯವೇನು ?

07-June-16

ಪರೀಕ್ಷಾ ಕೇಂದ್ರ ತೆರೆಯಲು ಪೂಜಾರ್‌ ಒತ್ತಾಯ

07-June-15

ವಿದ್ಯಾರಣ್ಯಪುರ ಗ್ರಾಪಂನ ನೂತನ ಮಹಡಿ ಕಟ್ಟಡ ಉದ್ಘಾಟನೆ

07-June-14

ಮದ್ಯದಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.