ಮೇಕಪ್‌ ರಿಮೂವರ್‌

Team Udayavani, Sep 4, 2019, 5:00 AM IST

ತಾನು ಚಂದ ಕಾಣಿಸಬೇಕು ಎಂಬ ಆಸೆಯಿಂದಲೇ ಎಲ್ಲ ಹುಡುಗಿಯರೂ ಮೇಕಪ್‌ ಇಷ್ಟಪಡುತ್ತಾರೆ. ಕಾಲೇಜಿಗೋ, ಆಫೀಸಿಗೋ ಹೊರಡುವ ಮುನ್ನ ಗಂಟೆಗಟ್ಟಲೆ ತಿದ್ದಿ ತೀಡಿ ಮೇಕಪ್‌ ಮಾಡಿದರೆ ಸಾಲದು, ಸಂಜೆ ಮನೆಗೆ ಬಂದಮೇಲೆ ಅದನ್ನು ತೊಳೆದು ತೆಗೆಯಬೇಕು. ಆದರೆ, ಈ ವಿಷಯದಲ್ಲಿ ಕೆಲವರು ಚೂರು ಉದಾಸೀನ ಮಾಡುತ್ತಾರೆ. ಅಬ್ಟಾ, ಸುಸ್ತಾಗಿದೆ ಅಂತ ಮುಖ ತೊಳೆಯದೆ ಮಲಗುವುದು, ಚರ್ಮವನ್ನು ಉಜ್ಜಿ ಮೇಕಪ್‌ ತೆಗೆಯುವುದು… ಹೀಗೆಲ್ಲಾ ಮಾಡುತ್ತಾರೆ. ಅಂಥವರಿಗಾಗಿ ಕೆಲವು ಸಲಹೆಗಳು.

– ಮೇಕಪ್‌ ಎಷ್ಟೇ ಗಾಢವಾಗಿದ್ದರೂ, ನೇರವಾಗಿ ಚರ್ಮವನ್ನು ಉಜ್ಜಬೇಡಿ. ಮೊದಲು ಕೊಬ್ಬರಿ ಎಣ್ಣೆ ಅಥವಾ ಮೇಕಪ್‌ ರಿಮೂವರ್‌ ಬಳಸಿ.
– ಮೇಕಪ್‌ ರಿಮೂವ್‌ ಮಾಡಿದ ನಂತರ ಎರಡೆರಡು ಬಾರಿ ಮುಖ ತೊಳೆಯಬೇಕು. ಮೊದಲು ಮಾಯಿಶ್ಚರೈಸರ್‌ ಅಂಶವಿರುವ ಕ್ಲೆನ್ಸರ್‌ನಿಂದ ತೊಳೆದು, ಆಮೇಲೆ ಸೋಪ್‌/ಫೇಸ್‌ವಾಶ್‌ ಉಪಯೋಗಿಸಿ.
-ದಿನವೂ ಗಾಢವಾಗಿ ಮೇಕ್‌ಅಪ್‌ ಮಾಡುವವರಾದರೆ, ರಾಸಾಯನಿಕಗಳಿಂದ ಚರ್ಮ ಬೇಗ ಕಳೆಗುಂದುವ ಅಪಾಯ ಇರುತ್ತದೆ. ಹಾಗಾಗಿ ನಿತ್ಯವೂ ಒಳ್ಳೆಯ ಮಾಯಿಶ್ಚರೈಸರ್‌ನಿಂದ ತ್ವಚೆಗೆ ಆರೈಕೆ ಮಾಡಿ.
-ಮೇಕ್‌ಅಪ್‌ ತೆಗೆದ ನಂತರ ಕೊಬ್ಬರಿ ಎಣ್ಣೆ ಸವರಿದರೆ ಉತ್ತಮ.
-ಮೇಕ್‌ಅಪ್‌ ನಂತರ ಮುಖವನ್ನಷ್ಟೇ ಅಲ್ಲ, ಮೇಕ್‌ಅಪ್‌ಗೆ ಬಳಸುವ ಬ್ರಷ್‌ ಅನ್ನು ಕೂಡಾ ತೊಳೆದು ಸ್ವತ್ಛವಾಗಿಡಬೇಕು. ಆ ಬ್ರಷ್‌ಗಳನ್ನು ದೀರ್ಘ‌ಕಾಲ ತೊಳೆಯದೇ ಇದ್ದರೆ ಚರ್ಮದ ಅಲರ್ಜಿ ಉಂಟಾಗಬಹುದು.
-ಅವಧಿ ಮೀರಿದ (ಎಕ್ಸ್‌ಪೈರ್‌ ಆದ) ಸೌಂದರ್ಯವರ್ಧಕಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.
-ಮೇಕ್‌ಅಪ್‌ ಮಾಡಿಕೊಂಡಾಗ ಮುಖದ ಮೇಲೆ ಗುಳ್ಳೆ, ಕಜ್ಜಿ, ಉರಿ ಕಂಡುಬಂದರೆ ಆ ಉತ್ಪನ್ನದ ಬಳಕೆ ನಿಲ್ಲಿಸಿ.
-ನಿಮ್ಮ ಮೇಕ್‌ಅಪ್‌ ವಸ್ತುಗಳನ್ನು ಬೇರೆಯವರೊಂದಿಗೆ ಶೇರ್‌ ಮಾಡಬೇಡಿ. ಇಲ್ಲದಿದ್ದರೆ, ಚರ್ಮ ಸಂಬಂಧಿ ರೋಗಗಳು ಹರಡಬಹುದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

  • ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು...

  • ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ....

  • ಹೆತ್ತವರ ಕಷ್ಟಕ್ಕೆ ಹೆಣ್ಣುಮಕ್ಕಳು ಬೇಗ ಕರಗುತ್ತಾರೆ. ಅಪ್ಪ-ಅಮ್ಮನನ್ನು ಮಗನಿಗಿಂತ, ಮಗಳೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವುದು ನೂರಕ್ಕೆ ನೂರು ಸತ್ಯ....

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...