ಮ್ಯಾಂಗೊ ಮೂಡ್‌

Team Udayavani, May 22, 2019, 6:00 AM IST

ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ ಸವಿದು ಸಂಭ್ರಮಿಸಬಹುದು. ಜೊತೆಗೆ ಜ್ಯೂಸು, ಹಲ್ವ, ರಸಾಯನ ಮುಂತಾದ ಸಿಹಿ ಪದಾರ್ಥಗಳನ್ನೂ ಮಾಡಬಹುದು. ಇನ್ನು ಕಾಯಿಯಿಂದಲೂ ಅಷ್ಟೇ ವಿಧಧ ವ್ಯಂಜನಗಳನ್ನು ತಯಾರಿಸಲು ಸಾಧ್ಯವಿದೆ.

1.ಮಾವಿನಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಸಿಪ್ಪೆ, ಓಟೆ ತೆಗೆದ ಮಾವಿನಕಾಯಿ, ಅಚ್ಚ ಖಾರದ ಪುಡಿ, ಅರಿಶಿನ, ಚಿಟಿಕೆ ಇಂಗು, ಒಂದು ಚಮಚ ಹೆರೆದ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಮಾವಿನ ತಿರುಳನ್ನು ತುಸು ನೀರು ಹಾಕಿ ಕುಕ್ಕರ್‌ನಲ್ಲಿ, ಒಂದು ವಿಸಿಲ… ಕೂಗಿಸಿ ಬೇಯಿಸಿಕೊಳ್ಳಿ. ಬೆಂದ ತಿರುಳನ್ನು ಚೆನ್ನಾಗಿ ಕಿವುಚಿ. ನಂತರ, ಸಾಸಿವೆ ಸಿಡಿಸಿ, ಅರಿಶಿನ ಪುಡಿ, ಇಂಗು ಹಾಕಿ ಒಗ್ಗರಣೆ ಸಿಡಿಸಿ. ಅದಕ್ಕೆ ಮಾವಿನ ತಿರುಳು, ಅಚ್ಚ ಖಾರದ ಪುಡಿ, ಉಪ್ಪುಹಾಕಿ ಚೆನ್ನಾಗಿ ಕೈಯಾಡಿಸಿ, ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಕುದಿಯಲು ಬಿಡಿ. ಖಾರದ ಘಾಟು ಹೋಗುತ್ತಿದ್ದಂತೆಯೇ, ಬೆಲ್ಲದ ಪುಡಿ ಬೆರೆಸಿ, ಮತ್ತೂಂದು ಸುತ್ತು ಕೈಯಾಡಿಸಿ, ಬಾಣಲಿ ಮುಚ್ಚಿ, ಉರಿ ನಂದಿಸಿ. ಹದವಾದ ಗೊಜ್ಜನ್ನು ಅನ್ನ, ದೋಸೆ, ಚಪಾತಿ ಜೊತೆಗೆ ಸವಿಯಬಹುದು.

2. ಮಾವಿನಕಾಯಿ ತೊವ್ವೆ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಮಾವಿನಕಾಯಿ, ಹೆಸರುಬೇಳೆ- ಕಾಲು ಕಪ್‌, ತೊಗರಿಬೇಳೆ- ಕಾಲು ಕಪ್‌, ಸಣ್ಣಗೆ ಹೆಚ್ಚಿದ ಟೊಮೇಟೊ-ಕಾಲು ಕಪ್‌, ಹಸಿ ಮೆಣಸು- 4, ಅರಿಶಿನಪುಡಿ, ಚಿಟಿಕಿ ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ : ಕುಕ್ಕರ್‌ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ ಸಿಡಿಸಿ, ಅರಿಶಿನ, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು, ಮಾವಿನಕಾಯಿ, ಟೊಮೇಟೊ, ಹಸಿಮೆಣಸು ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಹೆಸರು ಮತ್ತು ತೊಗರಿ ಬೇಳೆಗಳನ್ನು ನೀರಿನಲ್ಲಿ ತೊಳೆದು ಕುಕ್ಕರ್‌ಗೆ ಹಾಕಿ, ಉಪ್ಪು ಸೇರಿಸಿ ಮೂರು ಕಪ್‌ ನೀರುಹಾಕಿ ಚೆನ್ನಾಗಿ ಬೆರೆಸಿ, ಕುಕ್ಕರ್‌ ಮುಚ್ಚಿ, ಮಧ್ಯ ಉರಿಯಲ್ಲಿ ಮೂರು ವಿಷಿಲ್‌ ಕೂಗಿಸಿ.

3.ಮಾವು-ಸಿಹಿಕುಂಬಳ ಹಸಿಕೂಟು
ಬೇಕಾಗುವ ಸಾಮಗ್ರಿ: ಮಾವಿನ ಹೋಳು- 1 ಕಪ್‌, ಸಿಹಿ ಕುಂಬಳಕಾಯಿ ಹೋಳು- 1 ಕಪ್‌, ಹೆಸರು ಕಾಳು- 1 ಕಪ್‌, ತೆಂಗಿನ ತುರಿ- ಕಪ್‌, ಕಾಳುಮೆಣಸು- 1/2 ಚಮಚ, ಜೀರಿಗೆ- 1ಚಮಚ, ಉಪ್ಪು.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಮಾವು, ಕುಂಬಳಕಾಯಿ, ಹೆಸರುಕಾಳು ಹಾಕಿ, ಐದು ಲೋಟ ನೀರು ಹಾಕಿ ಬೇಯಿಸಿ. ತೆಂಗಿನತುರಿ ಯೊಂದಿಗೆ ಮೆಣಸು, ಜೀರಿಗೆ ಸೇರಿಸಿ ರುಬ್ಬಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬೆಂದ ಪದಾರ್ಥಕ್ಕೆ ಅರೆದ ಹಸಿಖಾರವನ್ನು ಸೇರಿಸಿ ಮಧ್ಯ ಉರಿಯಲ್ಲಿ ಹತ್ತು ನಿಮಿಷ ಕುದಿಸಿ, ಉರಿ ನಂದಿಸಿ. ನಂತರ ಅದಕ್ಕೆ ಕೊತ್ತಬರಿಸೊಪ್ಪು ಹಾಕಿ.

4. ಮಾವಿನಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ : ತುರಿದ ಮಾವಿನಕಾಯಿ- ಕಾಲು ಕಪ್‌, ಕಡಲೆಬೇಳೆ- ಅರ್ಧ ಕಪ್‌, ಒಣಮೆಣಸು- 8, ಉಪ್ಪು.

ಮಾಡುವ ವಿಧಾನ: ಬಾಣಲಿಗೆ ಎಣ್ಣೆ ಹಾಕದೆ, ಕಡಲೆಬೇಳೆ, ಒಣಮೆಣಸು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಂಡು ಒಂದು ತಟ್ಟೆಯಲ್ಲಿ ಆರಲು ಬಿಡಿ. ಅದೇ ಬಾಣಲೆಯ ಬಿಸಿಯಲ್ಲೇ ತುರಿದ ಮಾವಿನಕಾಯಿ ಹಾಕಿ ಬಾಡಿಸಿ, ಬೇಳೆಯ ಮಿಶ್ರಣಕ್ಕೆ ಸೇರಿಸಿ. ತಣಿದ ನಂತರ ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಅರೆದರೆ ಮಾವಿನ ಕಾಯಿ ಚಟ್ನಿ ರೆಡಿ. ಇದಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಕೊಟ್ಟರೆ ರುಚಿ ಹೆಚ್ಚುತ್ತದೆ.

5. ದಿಢೀರ್‌ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ- 1 ಕಪ್‌, ಎರಡು ಚಮಚ ಅಚ್ಚ ಖಾರದ ಪುಡಿ, ಪುಡಿ ಉಪ್ಪು, ಸಾಸಿವೆ, ಎಣ್ಣೆ, ಇಂಗು.

ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಮಾವಿನಕಾಯಿಯನ್ನು ಪಿಂಗಾಣಿ ಪಾತ್ರೆಗೆ ಹಾಕಿಡಿ. ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ. ನಂತರ ಒಂದು ಸೌಟು ಅಡುಗೆ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ, ಒಂದು ಚಮಚ ಇಂಗು ಸೇರಿಸಿ, ಈ ಒಗ್ಗರಣೆಯನ್ನು ಖಾರದ ಪುಡಿಯ ಮೇಲೆ ಹಾಕಿ, ತೇವಾಂಶವಿರದ ಚಮಚದಿಂದ ಉಪ್ಪು, ಖಾರ, ಮಾವಿನ ಹೋಳುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ, ಅರ್ಧ ಗಂಟೆ ಮುಚ್ಚಿಟ್ಟು ಬಿಡಿ. ಉಪ್ಪಿನಕಾಯಿ ವಾರಗಳ ಕಾಲ ಉಳಿಯುತ್ತದೆ.

-ಕೆ.ವಿ.ರಾಜಲಕ್ಷ್ಮೀ, ಬೆಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ,...

  • ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ,...

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

ಹೊಸ ಸೇರ್ಪಡೆ

  • ಬಾಗಲಕೋಟೆ: ಕಳೆದ ತಿಂಗಳ ಮೂರು ನದಿಗಳ ಪ್ರವಾಹದಿಂದ ತತ್ತರಿಸಿದ ಜಿಲ್ಲೆಯ ಜನರು ಈಗ ಡೆಂಘೀ ಜ್ವರ ಉಲ್ಬಣಗೊಂಡಿರುವುದರಿಂದ ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ.ಜಿಲ್ಲೆಯಲ್ಲಿ...

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...