Udayavni Special

ಮನೋರಥ


Team Udayavani, May 2, 2018, 12:35 PM IST

manoratha-(2).jpg

ನನಗೀಗ ನಲವತ್ತೆಂಟು ವರ್ಷ ವಯಸ್ಸು. ಮೊದಲೆಲ್ಲ ಚುರುಕಾಗಿಯೇ ಓಡಾಡಿಕೊಂಡಿರುತ್ತಿದ್ದ ನನಗೆ ಈಗ ಒಂದು ಆರು ತಿಂಗಳಿಂದ ಎಲ್ಲೆಂದರಲ್ಲಿ ನೋವು ಕಾಣಿಸಿಕೊಂಡಂತಾಗುತ್ತದೆ! ಕುತ್ತಿಗೆ, ಭುಜ, ಬೆನ್ನು, ಕೈ-ಕಾಲುಗಳ ಕೀಲುಗಳಲ್ಲಿ ನೋವು, ಸೆಳೆತೆ, ಬಿಗಿದುಕೊಂಡಂಥ ಅನುಭವ ಕೂಡ ಆಗುತ್ತದೆ. ಇದಕ್ಕಾಗಿ ಮೂಳೆ ತಜ್ಞರಲ್ಲಿ ತೋರಿಸಿದಾಗ, ಅವರು ಹಲವಾರು ಪರೀಕ್ಷೆಗಳನ್ನೆಲ್ಲಾ ಮಾಡಿಸಿದರು. ನಂತರ ಸ್ವಲ್ಪಮಾತ್ರೆಯನ್ನು ಕೊಟ್ಟರು. ಆದರೆ ಏನೂ ಪ್ರಯೋಜನವೇ ಆಗಲಿಲ್ಲ. ಮಾಡಿದ ಪರೀಕ್ಷೆಗಳಲ್ಲಿ ಎಲ್ಲೂ ಏನೂ ದೋಷ ಕಾಣಿಸುತ್ತಿಲ್ಲ. ನಿಮಗೆ ಮೂಳೆ ಅಥವಾ ನರ ಸಂಬಂಧಿ ಕಾಯಿಲೆ ಏನೂ ಇದ್ದಂತೆ ತೋರದು. “ನೀವ್ಯಾಕೆ ಒಮ್ಮೆ ಮನೋವೈದ್ಯರನ್ನು ನೋಡಬಾರದು?’ ಎಂಬ ಸಲಹೆ ಇತ್ತರು! ನನಗೆ ಅದನ್ನು ಕೇಳಿ ಇನ್ನಷ್ಟು ಗಾಬರಿಯಾಯಿತು! ಮೈ-ಕೈ ನೋವು ಅಂತ ಹೇಳಿದರೆ ಮಾನಸಿಕ ರೋಗ ಅಂತ ಇವರು ಅನ್ನುತ್ತಾರಲ್ಲಾ ಅಂತ ಆಶ್ಚರ್ಯವೂ ಆಯಿತು! ಇದರ ಬಗ್ಗೆ ಸ್ವಲ್ಪ ಸ್ಪಷ್ಟನೆ ತಿಳಿಸುವುವಿರಾ? 
-ಶರ್ಮಿಳಾ, ಮಡಿಕೇರಿ 

ಶರ್ಮಿಳಾರವರೇ, ತಮ್ಮ ಗಾಬರಿ ಹಾಗೂ ಆಶ್ಚರ್ಯ ಎರಡೂ ಸಮರ್ಪಕವಾದುದೇ! ನಿಮ್ಮ ಜಾಗದಲ್ಲಿ ಯಾರೇ ಇದ್ದರೂ, ಅವರಿಗೂ ಹೀಗೇ ಅನಿಸುವುದಂತೂ ನಿಜ! ಆದರೆ ನೀವು ಇಲ್ಲಿ ಒಂದು ವಿಚಾರವನ್ನು ಸ್ವಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ದೇಹ ಹಾಗೂ ಮನಸ್ಸು ಎಂಬ ಬೇರೆ ಬೇರೆ ಅಂಶಗಳು ಮನುಷ್ಯನಲ್ಲಿ ಬೇರೆ ಬೇರೆಯಾಗಿ ಅಸ್ತಿತ್ವದಲ್ಲಿಲ್ಲ; ದೇಹವಿಲ್ಲದ ಮನಸ್ಸು ಇರಲಾರದು; ಹಾಗೆಯೇ ಮನಸ್ಸಿಲ್ಲದ ದೇಹವಿರಲಾರದು! ಹಾಗಿದ್ದಾಗ ಒಂದರಲ್ಲಿ ಕಾಯಿಲೆ ಉಂಟಾದಾಗ ಅದು ಇನ್ನೊಂದರಲ್ಲಿ ವ್ಯಕ್ತಗೊಳ್ಳುವುದೂ ಅಸಹಜವಲ್ಲವಷ್ಟೆ !

ಕೆಲವೊಮ್ಮೆ ಈ ರೀತಿಯ ನೋವುಗಳು ಉಂಟಾದಾಗ, ದೇಹದ ಕೂಲಂಕಷ ಪರಿಶೀಲನೆಯ ನಂತರವೂ ನೋವುಗಳಿಗೆ ಸ್ಪಷ್ಟ ಕಾರಣಗಳು ಗೋಚರಿಸದಿದ್ದಾಗ, ಅದಕ್ಕೆ ಮನಸ್ಸಿನ ಮೂಲ ಇರಬಹುದು ಎಂಬ ಸಂಶಯ ವೈದ್ಯರಿಗೆ ಮೂಡುವುದು ಸರಿಯೇ! ಈ ರೀತಿಯ ಕಾಯಿಲೆಗಳನ್ನು ಮನೋ-ಶಾರೀರಿಕ ಕಾಯಿಲೆಗಳ ಪಟ್ಟಿಯ ಕೆಳಗೆ ಹಾಕಬಹುದು. ಅದರಲ್ಲೂ ಮಾಂಸಖಂಡಗಳ, ನರಗಳ ನೋವುಗಳಿಗೆ Fibromyalgia (ಫೈಬ್ರೋಮೈಲ್ಜಾಯಾ) ಎಂದೂ ಕರೆಯುತ್ತಾರೆ.

ಈ ಕಾಯಿಲೆಯ ಗುಣಸ್ವರೂಪ ಅನಿರ್ದಿಷ್ಟ ರೀತಿಯದ್ದಾಗಿದ್ದು, ಇದರಲ್ಲಿ ರೋಗಿಗೆ ನಾನಾ ಹರಡಿದಂತಿರುವ ದೂರುಗಳು ಇರುತ್ತದೆ. ಸ್ನಾಯುಗಳಲ್ಲಿ, ಮಾಂಸಖಂಡಗಳಲ್ಲಿ, ಎಲುಬುಕೀಲುಗಳಲ್ಲಿ, ನೋವು ಸೆಳೆತೆ, ಬಿಗಿತನ ಕಾಣಿಸಿಕೊಂಡು, ಅದರಿಂದ, ಅತೀವ ಸುಸ್ತು, ಮನೋವ್ಯಾಕುಲತೆ, ನಿದ್ರಾ ಉಪದ್ರವವೂ ಕಾಡಬಹುದು. ಇದರಲ್ಲಿ ಎಲುಬು ಕೀಲುಗಳ ಹಾಗೂ ದೇಹದ ಮಾಂಸಖಂಡಗಳಲ್ಲಿ ನೋವು ಹದಿನೆಂಟರಲ್ಲಿ ಹನ್ನೊಂದು ಜಾಗಗಳಿಂತಲೂ ಅಧಿಕ ಜಾಗಗಳಲ್ಲಿ, ಮುಟ್ಟಿದರೆ ನೋವು ಕಾಣಿಸಿಕೊಳ್ಳುವಿಕೆ;

ಈ ಭಾಗಗಳಲ್ಲಿ ಪ್ರಮುಖವಾಗಿದ್ದದ್ದು, ಎರಡೂ ಕಡೆಯ ತಲೆಯ ಕೆಳಭಾಗ, ಕೆಳಕುತ್ತಿಗೆಯ ಭಾಗ, ಬೆನ್ನು, ಎರಡನೇ ಕಿಬ್ಬೆಲುಬಿನ ಜಾಗ, ಮೊಣಕೈ ಭಾಗ, ತೊಡೆಯಭಾಗ, ಹಾಗೂ ಮೊಣಕಾಲಿನ ಭಾಗವೂ ಸೇರ್ಪಡೆಯಾಗಿದೆ ಈ ಭಾಗಗಳನ್ನು ಒತ್ತಿ ಹಿಡಿದಾಗ, ಕನಿಷ್ಟ ಪಕ್ಷ ಹನ್ನೊಂದು ಜಾಗಗಳಲ್ಲಾದರೂ, ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ, ಸುಸ್ತು, ನಿದ್ರೆಯಲ್ಲಿ ಏರುಪೇರು, ಉದರ ಸಂಬಂಧಿ ಕಾಯಿಲೆ, ತೀವ್ರ ತಲೆನೋವು, ಹಾಗೂ ಗ್ರಂಥಿಗಳ ಉತ್ಪನ್ನಗಳಲ್ಲಿ ಏರುಪೇರು ಇವೆಲ್ಲವೂ ಕಾಣಿಸಬಹುದು!

ಪರೀಕ್ಷೆ ಮಾಡಿದಾಗ ಯಾವುದೇ ರೀತಿಯ ಸೋಂಕು ಅಥವಾ ಊತ ಮಾತ್ರ ಕಾಣಸಿಗುವುದಿಲ್ಲ! ಎರಡರಿಂದ ಐದರಷ್ಟು ಶೇಕಡಾ ಜನಕ್ಕೆ ಈ ಕಾಯಿಲೆ ಇರಬಹುದು! ಇದಕ್ಕೆ ಸ್ಪಷ್ಟ ಕಾರಣಗಳು ಗೊತ್ತಿಲ್ಲದಿದ್ದರೂ, ಇದರ ಹಿಂದೆ ನರ ರಾಸಾಯಿನಿಕಗಳ ಏರುಪೇರು ಹಾಗೂ ಮಿದುಳಿನ ಕೆಲವು ಭಾಗಗಳಿಗೆ ಕಡಿಮೆಯಾದ ರಕ್ತ ಪೂರೈಕೆ ಕಾರಣವಿರಬಹುದು ಅನ್ನುತ್ತದೆ ಈಗಿನ ವಿಜಾnನ. ಈ ಕಾಯಿಲೆಯ ಉಪಸ್ಥಿತಿಯನ್ನು ಖಚಿತವಾಗಿ ಹೇಳಲು ನುರಿತ ವೈದ್ಯರುಗಳಿಗೂ ಕೆಲವೊಮ್ಮೆ ಕಷ್ಟವೇ.

ಯಾಕೆಂದರೆ ಇದರ ಜೊತೆ ಬೇರೆ ಕಾಯಿಲೆಗಳನ್ನು ಹೋಲುವ ಗುಣಲಕ್ಷಣಗಳೂ ಮೇಳೈಸಿಕೊಂಡು ಜೊತೆ ಜೊತೆಗೇ ಇರುತ್ತವೆ. ಉದಾಹರಣೆಗೆ, ಸುಸ್ತು, ತಲೆನೋವು, ಅತಿಯಾದ ಚಳಿಯಾಗುವಿಕೆ, ಕೈ-ಕಾಲುಗಳಲ್ಲಿ ಜೋಮು, ಊತ, ಕಾಲುಗಳ ಅದರುವಿಕೆ, ದೇಹ ಶ್ರಮ ಸಹಿಸದಿರುವಿಕೆ, ಮಲ ಹಾಗೂ ಮೂತ್ರದ ಅಭ್ಯಾಸ ಹಾಗೂ ನಿಯಂತ್ರಣದಲ್ಲಿ ಏರುಪೇರು- ಇತ್ಯಾದಿ ಶರೀರ ಸಂಬಂಧಿ ಕಾಯಿಲೆಯ ಗುಣಲಕ್ಷಣಗಳೂ ಇರಬಹುದು. ಜೊತೆಗೆ ಮಾನಸಿಕ ರೋಗಗಳಾದ ಖನ್ನತೆ, ಆತಂಕ ಮನೋಬೇನೆಯಂಥ ಕಾಯಿಲೆಯ ಚಿಹ್ನೆಗಳೂ ಗೋಚರಿಸಬಹುದು!

ಇದರಂತೆಯೇ ವ್ಯಕ್ತವಾಗುವ ಇನ್ನೂ ಹಲವಾರು ಶಾರೀರಿಕ ಹಾಗೂ ಮಾನಸಿಕ ರೋಗಗಳು ಇರುವ ಕಾರಣ, ಈ ಕಾಯಿಲೆಯ ಸ್ವಷ್ಟ ದೃಢೀಕರಣ ಸ್ವಲ್ಪ ಕಷ್ಟ ಸಾಧ್ಯವೇ! ಹಾಗಿದ್ದಾಗ ರೋಗಿಯನ್ನು ಒಮ್ಮೆ ಮನೋವೈದ್ಯರೂ ನೋಡಿ, ಪರಿಶೀಲನೆ ಮಾಡಿದರೆ, ಒಳಿತೇ ಹೊರತು, ಕೆಡುಕಂತೂ ಖಂಡಿತ ಇಲ್ಲ! ಈ ಕಾಯಿಲೆ ಇದೆ ಅಂತಲೇ ಆದರೆ, ಅದಕ್ಕೆ ಅನುಗುಣವಾಗಿ, ಬೆಂಬಲಾತ್ಮಕವಾದ ಸಮಾಲೋಚನಕರ ಚಿಕಿತ್ಸೆ, ಯೋಚನಾ ಧಾಟಿಯನ್ನೇ ತಿದ್ದುವ ಸಮಾಲೋಚನೆ ಚಿಕಿತ್ಸೆ , ಶಿಕ್ಷಣ, ದೈಹಿಕ ವ್ಯಾಯಮ ಹಾಗೂ ಚಟುವಟುಕೆ, ಮಾಂಸಖಂಡಗಳನ್ನು

ಸಡಿಲಿಸುವ ಹಾಗೂ ಮನಸ್ಸನ್ನು ಖನ್ನತೆಯ ಕೂಪದಿಂದ ಹೊರತರುವ ಕೆಲವೊಂದು ನಿರ್ದಿಷ್ಟ ಔಷಧೋಪಚಾರ, ನಿದ್ದೆಯನ್ನು ಸರಿಯಾಗಿಸಿ, ನೋವನ್ನು ಕುಗ್ಗಿಸುವ ಹಲವಾರು ಚಿಕಿತ್ಸೆ… ಇವೆಲ್ಲವನ್ನೂ ತಜ್ಞ ವೈದ್ಯರಾದವರು ನಿಮಗೆ ನೀಡಿ, ನೀವು ಗುಣಮುಖರಾಗುವಂತೆ ಮಾಡಬಲ್ಲರು. ದೇಹ ಹಾಗೂ ಮನಸ್ಸು, ತತ್ವ ವಿಚಾರಗಳಲ್ಲಿ ಬೇರೆ ಬೇರೆಯೇ ಹೊರತು, ವಾಸ್ತವದಲ್ಲಿ ಎರಡೂ ಒಂದರ ಮೇಲೆ ಇನ್ನೊಂದು ಅವಲಂಬಿತವಾಗಿರುವ ಅಂಗಗಳೇ ಆಗಿದ್ದು, ಒಂದರಲ್ಲಿ ಅಸೌಖ್ಯವಿದ್ದರೆ ಇನ್ನೊಂದರಲ್ಲಿ ತೋರಿಬರುವ ಸಾಧ್ಯತೆ ಇದ್ದೇ ಇರುತ್ತದೆ ಎಂಬ ಅರಿವು ಇಲ್ಲಿ ಅತಿಮುಖ್ಯ! 

* ಡಾ.ಅರುಣಾ ಯಡಿಯಾಳ್

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Capitals-New-01

ಚೇಸಿಂಗ್ ನಲ್ಲಿ ಮುಗ್ಗರಿಸಿದ ಡೆಲ್ಲಿ ; ಸನ್ ರೈಸರ್ಸ್ ಗೆ 15 ರನ್ ಜಯ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅವಳಿಗೂ ಒಂದು ದಿನ ಇರಬೇಕಿತ್ತು…

ಅವಳಿಗೂ ಒಂದು ದಿನ ಇರಬೇಕಿತ್ತು…

avalu-tdy-4

ಅಕ್ಕನೆಂಬ ಅಮ್ಮ ತಂಗಿ ಎಂಬ ಕಂದ!

aVALU-TDY-3

ಕೋವಿಡ್ ಬಂದು ಬಾಗಿಲು ತಟ್ಟಿತು!

avalu-tdy-2

ಆನ್‌ ಲೈನ್‌ ಪಾಠಕೆ ಮೊಬೈಲೇ ಆಟಿಕೆ!

ಕಸವುಕನ್ಯೆ! ಸೀರೆಯಲ್ಲಿ ಸುಂದರಾಂಗಿ…

ಕಸವು ಕನ್ಯೆ! ಸೀರೆಯಲ್ಲಿ ಸುಂದರಾಂಗಿ…

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

ವಿಶೇಷ ವರದಿ: ಪುತ್ತೂರು ಎಪಿಎಂಸಿ: 1,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೋದಾಮು

ವಿಶೇಷ ವರದಿ: ಪುತ್ತೂರು ಎಪಿಎಂಸಿ: 1,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೋದಾಮು

ಬಗೆಹರಿಯದ ಮೆಸ್ಕಾಂ ಮೀಟರ್‌ ರೀಡಿಂಗ್‌ ಗುತ್ತಿಗೆ ಬಿಕ್ಕಟ್ಟು

ಬಗೆ ಹರಿಯದ ಮೆಸ್ಕಾಂ ಮೀಟರ್‌ ರೀಡಿಂಗ್‌ ಗುತ್ತಿಗೆ ಬಿಕ್ಕಟ್ಟು

ಬಸ್ರೂರು ಬಸ್‌ ನಿಲ್ದಾಣ ಸಮೀಪ ಅಪಾಯಕಾರಿ ತಿರುವು

ಬಸ್ರೂರು ಬಸ್‌ ನಿಲ್ದಾಣ ಸಮೀಪ ಅಪಾಯಕಾರಿ ತಿರುವು

ಕೊಡವೇತರ ವಿವಾಹ ಕೊಡವ ಸಮಿತಿ ಮಹತ್ವದ ನಿರ್ಣಯ

ಕೊಡವೇತರ ವಿವಾಹ ಕೊಡವ ಸಮಿತಿ ಮಹತ್ವದ ನಿರ್ಣಯ

ಶಾಲೆ ಆರಂಭದ ಗೊಂದಲ ನಿವಾರಿಸಿ: ಶಾಸಕ ಖಾದರ್‌

ಶಾಲೆ ಆರಂಭದ ಗೊಂದಲ ನಿವಾರಿಸಿ: ಶಾಸಕ ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.