ರಂಗು ರಂಗಾದ ಮದರಂಗಿ

Team Udayavani, Sep 4, 2019, 5:12 AM IST

“ನೋಡೇ, ಮದರಂಗಿ ಎಷ್ಟು ಕೆಂಪಾಗಿ ಮೂಡಿದೆ. ತುಂಬಾ ಪ್ರೀತಿಸುವ ಗಂಡ ಸಿಗ್ತಾನೆ ನಿಂಗೆ…’ ಅಂತ ಹೇಳ್ಳೋದನ್ನು ಕೇಳಿದ್ದೀರ ಅಲ್ವಾ? ಮದರಂಗಿಯ ಬಣ್ಣಕ್ಕೂ, ಗಂಡನ ಪ್ರೀತಿಗೂ ನೇರ ಸಂಬಂಧ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬೇರೆ ಎಲ್ಲರಿಗಿಂತ ತನ್ನ ಕೈ ಬಣ್ಣವೇ ಗಾಢವಾಗಿರಲಿ ಅಂತ ಎಲ್ಲ ಹೆಣ್ಮಕ್ಕಳೂ ಆಸೆಪಡೋದಂತೂ ನಿಜ. ಕೆಲವೊಮ್ಮೆ ಮದರಂಗಿ, ಬಣ್ಣ ಮೂಡಿಸದೆಯೇ ನಮ್ಮನ್ನು ಸತಾಯಿಸುತ್ತದೆ. ಚಂದದ ಚಿತ್ತಾರಗಳು ಸ್ಪಷ್ಟವಾಗಿ ಮೂಡದೆ, ಎರಡೇ ದಿನಕ್ಕೆ ಮಸುಕಾಗುತ್ತದೆ. ಹಾಗಾಗದಿರಲು ಏನು ಮಾಡಬೇಕು ಗೊತ್ತಾ?

– ಮದರಂಗಿ ಹಚ್ಚಿದ ಮೇಲೆ 7-8 ಗಂಟೆ ಕೈ ತೊಳೆಯಬೇಡಿ.
-ಲಿಂಬೆರಸ ಮತ್ತು ಸಕ್ಕರೆಯನ್ನು ಬೆರೆಸಿ, ಆ ಮಿಶ್ರಣವನ್ನು ಹತ್ತಿಯಿಂದ ಕೈಗೆ ಲೇಪಿಸಿದರೆ ಮೆಹಂದಿಯ ಬಣ್ಣ ಗಾಢವಾಗುತ್ತದೆ.
– ಸ್ವಲ್ಪ ಲವಂಗ ಅಥವಾ ಏಲಕ್ಕಿಯನ್ನು ಪಾತ್ರೆಗೆ ಹಾಕಿ, ಸಣ್ಣ ಉರಿಯಲ್ಲಿ ಹುರಿಯುತ್ತಾ ಆ ಶಾಖಕ್ಕೆ ಕೈಗಳನ್ನೊಡ್ಡಿ. ಲಿಂಬೆ-ಸಕ್ಕರೆ ಮಿಶ್ರಣ ಹಚ್ಚಿದ ನಂತರ, ಹೀಗೆ ಮಾಡಿದರೆ ಉತ್ತಮ.
-ಮದರಂಗಿ ಹಚ್ಚಿದ ಕೈಯನ್ನು ಸೋಪು ಹಾಕಿ ತೊಳೆಯಬೇಡಿ.
-ಮದರಂಗಿ ಒಣಗಿದ ಮೇಲೆ ಕೊಬ್ಬರಿಎಣ್ಣೆಯನ್ನು ಸವರಿ.
-ಗೋರಂಟಿ ಸೊಪ್ಪನ್ನು ಅರೆದು ಹಚ್ಚುವುದಾದರೆ, ಅರೆಯುವಾಗ ವೀಳ್ಯದೆಲೆಯನ್ನು ಸೇರಿಸಿ.

ಹಚ್ಚಿದ 2-3 ದಿನಗಳೊಳಗೆ ಮದರಂಗಿಯ ಬಣ್ಣ ಕಪ್ಪಾಗುವುದುಂಟು. ಆಗ, ಈ ಬಣ್ಣ ಕೈಯಿಂದ ಒಮ್ಮೆ ಹೋದ್ರೆ ಸಾಕಪ್ಪಾ ಅನ್ನಿಸುತ್ತದೆ. ಆಗ ಕೆಳಗಿನ ಟಿಪ್ಸ್‌ಗಳನ್ನು ಅನುಸರಿಸಬಹುದು.
-ಟೂತ್‌ಪೇಸ್ಟ್‌ ಅನ್ನು ಹಚ್ಚಿ ಕೈ ತೊಳೆಯುತ್ತಿದ್ದರೆ ಮೆಹಂದಿಯ ಬಣ್ಣ ಹೋಗುತ್ತದೆ.
– ದಿನಕ್ಕೆ 2-3 ಬಾರಿ ಆಲಿವ್‌ ಎಣ್ಣೆಗೆ ಉಪ್ಪನ್ನು ಸೇರಿಸಿ ಕೈಗೆ ಸವರಿ, ಹತ್ತು ನಿಮಿಷದ ನಂತರ ಕೈ ತೊಳೆಯಿರಿ.
– ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಮಿಶ್ರಣ ಮಾಡಿ, ಕೈಗಳಿಗೆ ಉಜ್ಜಿ, ಒಣಗಿದ ನಂತರ ಕೈ ತೊಳೆಯಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದು ದಿನ ಮಗಳು, ಯಾರನ್ನೋ ತಮ್ಮ ಮುಂದೆ ತಂದು ನಿಲ್ಲಿಸಿ "ನಿಮ್ಮ ಅಳಿಯ' ಎಂದುಬಿಟ್ಟರೆ.. ಬರಿಯ ವಿಚಾರವೇ ಸಹ್ಯವಾಗುತ್ತಿಲ್ಲ. ಒಬ್ಬಳೇ ಮಗಳ ಮದುವೆ ಯನ್ನು ವಿಜೃಂಭಣೆಯಿಂದ...

  • ಎಲ್ಲರೂ ಧಾವಂತದ ಜೀವನ ನಡೆಸುತ್ತಿರುವಾಗ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಒಂದು ಕಾರ್ಯಕ್ರಮಕ್ಕಾದರೂ ಕಡ್ಡಾಯ ಹಾಜರಿ ಹಾಕುವುದನ್ನು ಹೆಚ್ಚಿನವರು...

  • ಗಡಿಬಿಡಿಯಿಂದ ಒಳಗೆ ಹೋಗಿ ಲಗುಬಗೆಯಿಂದ ನೀಲಿಸೀರೆ ಉಟ್ಟು, ಅಳ್ಳಕವಾಗಿ ಜಡೆ ಹೆಣೆದು, ಹೂ ಮುಡಿದು ಮುಖಕ್ಕೆ ರೆಮಿ ಸ್ನೋ, ಲ್ಯಾಕ್ಟೋ ಕ್ಯಾಲಮೈನ್‌ ಲೇಪಿಸಿಕೊಂಡು...

  • ಹಿಂದಿನ ತಲೆಮಾರಿನ ಜನ, ಈಗಿನವರ ಥರ, "ಅಯ್ಯೋ ಬಿಸಿಲ್ಗೆ ಹೋದ್ರೆ ಸನ್‌ ಬರ್ನ್ ಆಗುತ್ತೆ. ಅದಿಕ್ಕೆ ಅಂಬ್ರೆಲಾ ತಗೊಂಡೇ ಹೋಗೋದು ನಾನು' ಅಂತಿದ್ದಿಲ್ಲ.ಸನ್‌ ಸ್ಕ್ರೀನ್‌...

  • ಲೇಡಿಸ್‌ ಕ್ಲಬ್‌ ಅಂದಾಕ್ಷಣ, ಹರಟೆ ಹೊಡೆಯಲು, ಮೋಜು ಮಸ್ತಿ ಮಾಡಲು ಮಹಿಳೆಯರು ಒಂದೆಡೆ ಸೇರುವ ತಾಣ ಎಂಬ ಕಲ್ಪನೆ ಕೆಲವರಿಗೆ ಇದೆ. ಅಂಥ ಕ್ಲಬ್‌ಗಳಿಂದ ಏನೂ ಪ್ರಯೋಜನವಿಲ್ಲ...

ಹೊಸ ಸೇರ್ಪಡೆ