Udayavni Special

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ…


Team Udayavani, Oct 9, 2019, 4:05 AM IST

attegondu

ಅತ್ತೆ-ಮಾವ, ಸೊಸೆಯನ್ನು ವಾತ್ಸಲ್ಯದಿಂದ ನಡೆಸಿಕೊಂಡರೆ, ಭವಿಷ್ಯದಲ್ಲಿ ಅವರಿಗೂ ಸೊಸೆಯಿಂದ ಮಗಳ ಪ್ರೀತಿಯೇ ದಕ್ಕುತ್ತದೆ. ಅದರ ಬದಲು, ಸೊಸೆಗೆ ಇವರು ಎರಡೇಟು ಹಾಕಿ ಶಕ್ತಿ ತೋರಿಸಿದರೆ, ಮುಂದೊಮ್ಮೆ ಆಕೆ ಮಾತೇ ಆಡಿಸದೆ ಬಾಕಿ ತೀರಿಸುತ್ತಾಳೆ!

ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗ-ಸೊಸೆಯರ ಬಗೆಗಿನ ಸಾಕಷ್ಟು ಕತೆಗಳು, ವೃದ್ಧರ ಬವಣೆಗಳನ್ನು ಬಿಂಬಿಸುವ ಚಿತ್ರಗಳು, ಧಾರಾವಾಹಿಗಳನ್ನು ನೋಡುತ್ತಿರುತ್ತೇವೆ. ನಮ್ಮದೇ ಪರಿಚಿತರ, ಬಂಧುಗಳ ಮನೆಯಲ್ಲಿ ಇಂಥ ಘಟನೆಗಳು, ನಡೆಯುತ್ತಿರಬಹುದು. ಇದರ ಮೂಲಕಾರಣ ಏನಿರಬಹುದು ಅಂತ ಯಾವಾಗಲೂ ನನ್ನಲ್ಲಿ ಪ್ರಶ್ನೆ ಇತ್ತು. ಆದರೆ, ಕೆಲವೊಂದಷ್ಟು ಘಟನೆಗಳು ಆ ಪ್ರಶ್ನೆಯನ್ನು ಮತ್ತೂಂದು ದೃಷ್ಟಿಕೋನದಿಂದ ನೋಡುವಂತೆ ಮಾಡಿದವು.

ಆಶಾ, 18 ವರ್ಷಕ್ಕೇ ಓದು ನಿಲ್ಲಿಸಿ ಗಂಡನ ಮನೆ ಸೇರಿದಳು. ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ. ಹೊಟ್ಟೆ ತುಂಬ ಊಟ-ತಿಂಡಿಯೂ ಇಲ್ಲ. ಕೆಲಸಗಳು ಮಾಡಿದಷ್ಟೂ ಮುಗಿಯವು. ಮಕ್ಕಳ ಲಾಲನೆ ಪಾಲನೆಗೂ ಕೂಡುಕುಟುಂಬದಲ್ಲಿ ಸಮಯವಿಲ್ಲ. ಕಡೆಗೊಂದು ದಿನ ಇವಳ ಅತ್ತೆ ಮಾವಂದಿರು ಹಾಸಿಗೆ ಹಿಡಿದರೆ, ಅವರ ಬಗ್ಗೆ ಯಾವ ಪ್ರೀತಿ, ಕನಿಕರ ಇವಳಲ್ಲಿ ಮೂಡಲು ಸಾಧ್ಯ? ಇವಳೇಕೆ ಅವರ ಸೇವೆ ಮಾಡಬೇಕು?

ಲಕ್ಷ್ಮೀಗೆ 22ನೇ ವಯಸ್ಸಿನಲ್ಲಿ ಮದುವೆಯಾಯ್ತು. ಎರಡು ವರ್ಷದೊಳಗೆ ಮುದ್ದಾದ ಮಗಳಿಗೆ ತಾಯಿಯಾದಳು. ಚಿಕ್ಕ ಚೊಕ್ಕ ಸಂಸಾರ. ಮಗುವಿಗೆ ಒಂದು ವರ್ಷವಾಗುವುದರೊಳಗೆ ಗಂಡ ಅಪಘಾತದಲ್ಲಿ ತೀರಿಕೊಂಡ. ಅವಳ ಅತ್ತೆ-ಮಾವ ಸಾಕಷ್ಟು ವಿದ್ಯಾವಂತರಾಗಿದ್ದೂ, ಸೊಸೆಗೆ ದೊರಕಬೇಕಾಗಿದ್ದ ದುಡ್ಡೆಲ್ಲವನ್ನೂ ಕಿತ್ತುಕೊಂಡು, ಮದುವೆಯಲ್ಲಿ ಅವಳ ತಾಯಿ ಮನೆಯವರು ನೀಡಿದ್ದ ಬಂಗಾರವನ್ನೂ ಎಗರಿಸಿ, ತಮ್ಮ ಮೂಲಮನೆಗೆ ಮರಳಿದರು.

ಸೊಸೆ – ಮಗುವಿನ ಜವಾಬ್ದಾರಿ ತಮ್ಮದೆಂದು ತಿಳಿಯಲೇ ಇಲ್ಲ. ಆದರೆ, ಲಕ್ಷ್ಮಿಯ ಅದೃಷ್ಟ ಚೆನ್ನಾಗಿತ್ತು. ತಂದೆ-ತಾಯಿ, ಸೋದರಮಾವಂದಿರ ಸಹಕಾರದಿಂದ ಆಕೆ ನೌಕರಿ ಹಿಡಿದು, ತನ್ನ ಜೀವನವನ್ನು ಹೊಸದಾಗಿ ಪ್ರಾರಂಭಿಸಿದಳು. ಈಗ ಕಾಲಚಕ್ರ ಉರುಳಿದೆ, “ನಮಗೆ ವಯಸ್ಸಾಗಿದೆ, ಇದ್ದೊಬ್ಬ ಮಗನ ಹೆಂಡತಿ ನಮ್ಮನ್ನು ನೋಡಿಕೊಳ್ಳಲಿ’ ಅಂತ ಆಕೆಯ ಅತ್ತೆ-ಮಾವ ಇವಳ ಮನೆಗೆ ಬಂದಿದ್ದಾರೆ. ಕಹಿ ನೆನಪುಗಳು ಎದೆಯೊಳಗೇ ಉಳಿದಿರುವಾಗ, ಅತ್ತೆ-ಮಾವನ ಸೇವೆ ಮಾಡಬೇಕೆಂಬ ಮನಸ್ಸು ಲಕ್ಷ್ಮಿಗೆ ಬರಲು ಸಾಧ್ಯವಾ?

ಸುಜಾತಾ ಬಹಳ ಚುರುಕು, ಬುದ್ಧಿವಂತೆ. ವೈದ್ಯಕೀಯ ಪದವಿಯ ನಂತರ ಮದುವೆಯಾಯಿತು. ಮುಂದೆ ಮಕ್ಕಳಾದಾಗ ನೋಡಿಕೊಳ್ಳಲು ಯಾರೂ ಇಲ್ಲವೆಂದು ಕೆಲಸ ಬಿಟ್ಟಳು. ಅತ್ತೆ-ಮಾವ, ತಮ್ಮ ಬೇರೆ ಮಕ್ಕಳಿಗೆ ಬೇಕಾಗುವ ಸೌಲಭ್ಯಗಳನ್ನೆಲ್ಲ ಇವಳ ಗಂಡನಿಂದ ಮಾಡಿಸಿಕೊಳ್ಳುತ್ತಿದ್ದರು. ಹೆಣ್ಮಕ್ಕಳಿಗೆ ಒಡವೆ, ಸೀರೆಗಳನ್ನು ಕೊಳ್ಳುವಾಗ ಸೊಸೆಗೆ ಕೊಡಿಸಲು ಅವರಿಗೆ ಮನಸು ಬರುತ್ತಿರಲಿಲ್ಲ. ಈಗ ಅತ್ತೆಮಾವಂದಿರು ಅಶಕ್ತರಾಗಿದ್ದಾರೆ. ಸುಜಾತಳಿಗೆ ಹಳೆಯದೆಲ್ಲ ಚೆನ್ನಾಗಿ ನೆನಪಿದೆ. ಸೊಸೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತ ಅವರೀಗ ದೂರುತ್ತಿದ್ದಾರೆ!

ಈ ರೀತಿಯ ಉದಾಹರಣೆ ಗಳು ಸಾಕಷ್ಟಿವೆ. ಇಂಥದ್ದನ್ನೆಲ್ಲ ನೋಡಿ ನೋಡಿ, ಇತ್ತೀಚಿನ ಹುಡುಗಿಯರು ಗಂಡನ ಮನೆಯವರಿಂದ ಸ್ವಲ್ಪ ದೂರವೇ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂಚಿನಂತೆ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ, ಮಗ-ಸೊಸೆ ಒಂದು ಕಡೆ, ಅತ್ತೆ-ಮಾವ ಬೇರೊಂದು ಕಡೆ ಅಂತ ಆಗಿರುವುದಕ್ಕೆ, ಸೊಸೆಯನ್ನು ಹೊರಗಿನವರಂತೆ ಕಾಣುವ ಗಂಡನ ಮನೆಯವರ ನಡವಳಿಕೆಯೇ ಕಾರಣ ಅಂದರೂ ತಪ್ಪಲ್ಲ. ಮದುವೆಯಾದ ಹೊಸತರಲ್ಲಿ ಸೊಸೆಯನ್ನು ಮನೆಯವಳಂತೆ ಕಾಣದೆ, ವೃದ್ಧಾಪ್ಯದಲ್ಲಿ ಅವಳಿಂದ ಆರೈಕೆಯನ್ನು ಬಯಸುವುದು ಎಷ್ಟು ಸರಿ? ನೀವೇ ಹೇಳಿ…

* ಡಾ. ಉಮಾಮಹೇಶ್ವರಿ ಎನ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pathagalu

ಕೋವಿಡ್‌ 19 ಕಲಿಸಿದ ಪಾಠಗಳು

ammana-dasa

ಅಮ್ಮನ‌ ದಶಾವತಾರ!

agbekku

ಐ ಲವ್‌ ಬೆಂಗಳೂರು

ashcgartya

ಇಂಥದ್ದೆಲ್ಲ ನಡೆಯುತ್ತೆ ಅಂದುಕೊಂಡಿರಲಿಲ್ಲ!

navella pg

ನಾನು ಆಮ್‌ ಆದ್ಮಿ ಪಾರ್ಟಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಲಾಕ್ ಡೌನ್ ಬಳಿಕ ಆದಿತ್ಯ ಅಭಿನಯದ “ಮುಂದುವರೆದ ಅಧ್ಯಾಯ’ ತೆರೆಗೆ

ಲಾಕ್ ಡೌನ್ ಬಳಿಕ ಆದಿತ್ಯ ಅಭಿನಯದ “ಮುಂದುವರೆದ ಅಧ್ಯಾಯ’ ತೆರೆಗೆ

Mother-n-Daughter

ಥ್ಯಾಂಕ್ಸ್… :ನನ್ನ ಕನಸಿಗೆ ನೀರೆರೆಯುವ ಅಮ್ಮ

ಇಟಲಿಯ ಲೊಂಬಾರ್ಡಿಗೆ ಕಂಟಕವಾದ ಕೋವಿಡ್‌!

ಇಟಲಿಯ ಲೊಂಬಾರ್ಡಿಗೆ ಕಂಟಕವಾದ ಕೋವಿಡ್‌!

31-May-10

ಸುಂಕಸಾಲೆ ಶಾಲೆಗೆ ಶಾಸಕ ಕುಮಾರಸ್ವಾಮಿ ಭೇಟಿ

ರಸ್ತೆ ಕಾಮಗಾರಿಗೆ ಭೂಮಿಪೂಜೆ

ರಸ್ತೆ ಕಾಮಗಾರಿಗೆ ಭೂಮಿಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.