“ಭಾರಿ’ ಜೋರು ಡ್ರೈವಿಂಗು

Team Udayavani, Mar 8, 2018, 4:35 PM IST

driver.jpg

ಕರಾವಳಿಯಲ್ಲಿ “ವೂ… ವೂ’ ಸದ್ದು ಕೇಳಿತು ಎಂದಾದರೆ, ಆ ಕಾರ್‌ ರೇಸ್‌ ಸ್ಪರ್ಧೆಯಲ್ಲಿ ನಿಲೋಫ‌ರ್‌ ಇಬ್ರಾಹಿಂ ಇರುತ್ತಾರಂತಲೇ ಲೆಕ್ಕ. ಕಡಲ ತೀರದ ಮಂದಿ ಹಾಗೆ ಆಸಕ್ತರಾಗಲು ಕಾರಣ, ಇವರು ಬ್ಯಾರಿ ಸಮುದಾಯದ ಏಕೈಕ ಕಾರ್‌ ರೇಸಿನ ಸ್ಪರ್ಧಾಳು ಅಂತ. ಕಳೆದ 22 ವರ್ಷಗಳಿಂದ ಸ್ಟಿಯರಿಂಗ್‌ ತಿರುಗಿಸುತ್ತಿರುವ ನಿಲೋಫ‌ರ್‌ ತಮ್ಮ ಸಾಹಸಕ್ಕೆ ಬ್ರೇಕ್‌ ಹಾಕಿ, ಸುಮ್ಮನೆ ಕೂತವರಲ್ಲ.

   ನಿಲೋಫ‌ರ್‌ ಅವರಿಗೆ ಯಾರೂ ಕಾರ್‌ ರೇಸ್‌ ಹೇಳಿಕೊಡಲಿಲ್ಲ. ಅವರ ಅರಿವೇ ಅವರಿಗೆ ಗುರು. ದೂರದರ್ಶನದಲ್ಲಿ ಬರುತ್ತಿದ್ದ ಸ್ಪರ್ಧೆಗಳನ್ನು ರೋಮಾಂಚಿತರಾಗಿ ನೋಡುತ್ತಿದ್ದರಂತೆ. ತಾನೂ ಸ್ಟಿಯರಿಂಗ್‌ ಹಿಡಿದು, ಅವರನ್ನೆಲ್ಲ ಓವರ್‌ಟೇಕ್‌ ಮಾಡಬೇಕೆಂಬ ಬಯಕೆ ಅವರಿಗೆ ಆಗಲೇ ಮೂಡಿತಂತೆ. ಆದರೆ, ಒಬ್ಬಳು ಮಹಿಳೆಗೆ ತರಬೇತಿ ನೀಡಿ ಪ್ರೋತ್ಸಾಹಿಸುವ ವ್ಯವಸ್ಥೆಯೇ ಇರಲಿಲ್ಲವೆಂಬ ದುಃಖ ಅವರನ್ನು ಕಾಡುತ್ತಿತ್ತಂತೆ.

  ಕೊನೆಗೂ ಅದೊಂದು ದಿನ ಬಂತು. ಅದು ಮೂಡಬಿದರೆಯಲ್ಲಿ ನಡೆದ 250 ಕಿ.ಮೀ. ದೂರದ ಕ್ರಾಸ್‌ ಕಂಟ್ರಿ ರೇಸ್‌. 40 ಸ್ಪರ್ಧಿಗಳು. ಹಳ್ಳಿಗಳ ಹಾಳಾದ ರಸ್ತೆ, ಕೆಸರು ತುಂಬಿದ ಹೊಲಗಳ ಹಾದಿಯಲ್ಲಿ ಈ ಹೆಣ್ಮಗಳು ಸಿಂಹಿಣಿಯಂತೆ ಕಾರಿನಲ್ಲಿ ಕುಳಿತು ಬರುತ್ತಿದ್ದರು. ಸಡಿಲವಾದ ಧೂಳು ತುಂಬಿದ, ಏರು ತಗ್ಗುಗಳ ಭಯಾನಕ ಮಾರ್ಗ. ನಿಧಾನಕ್ಕೆ ಚಲಿಸಿದರೆ, ಹಿಂದಿನಿಂದ ಕಾರು ಚುಂಬಿಸುವ ಭೀತಿ. ಅಲ್ಲೊಂದು ಹಳ್ಳವಿತ್ತು. ಕೊಟ್ಟಿರುವ ಸೂಚನಾ ಪತ್ರದಲ್ಲಿ ಹಳ್ಳದ ಪ್ರಸ್ತಾವವೇ ಇದ್ದಿರಲಿಲ್ಲ. ಚಕ್ರವು ಹಳ್ಳಕ್ಕೆ ಇಳಿದರೆ, ಕೆಸರಿನಲ್ಲಿ ಹೂತು ಹೋಗುವ ಭಯ. “ಆ ಸವಾಲುಗಳನ್ನು ಎದುರಿಸುವಾಗ ಎದೆ ಬಡಿತದ ನನ್ನ ಕಿವಿಗೆ ಅಪ್ಪಳಿಸುತ್ತಿತ್ತು. ಅಚ್ಚರಿಯೆಂದರೆ, ಅಂದು ನಾನು ದ್ವಿತೀಯ ಸ್ಥಾನವನ್ನು ಗೆದ್ದೆ. ಅವತ್ತೇ ಗೊತ್ತಾಗಿ ಹೋಯ್ತು, ಗೆಲುವಿಗೆ ಬೇಕಾಗಿರೋದು ಕೌಶಲವಲ್ಲ, ಧೈರ್ಯ’ ಎಂದು ನಿಲೋಫ‌ರ್‌ ಹೆಮ್ಮೆ ಪಡುತ್ತಾರೆ.

  ಬೆಂಗಳೂರು- ನಂದಿ ರ್ಯಾಲಿ ಮತ್ತು ಸೌತ್‌ಲೇಕ್‌ ಕನಕಪುರ ರ್ಯಾಲಿಗಳಲ್ಲಿ ಗೆಲುವಿನ ನಗು ಬೀರಿದ ಇವರು, ಇದೀಗ ಬೆಂಗಳೂರು- ಭೂತಾನ್‌ ನಡೆಯುವ 3 ಸಾವಿರ ಕಿ.ಮೀ.ನ ದುರ್ಗಮ ಹಾದಿಯ ಸಾಹಸಕ್ಕೆ ಸಜ್ಜಾಗುತ್ತಿದ್ದಾರೆ.

  ಕಜಕಿಸ್ತಾನ, ಸೌದಿ ಅರೇಬಿಯಾದಲ್ಲಿ ಗಣಿತ ಬೋಧಕಿ ಆಗಿದ್ದ ನಿಲೋಫ‌ರ್‌ ಅವರು, ಸೊಗಸಾಗಿ ಕಲಾಕೃತಿಗಳನ್ನೂ ರಚಿಸುತ್ತಾರೆ. ಪತಿ ಕಾಝಿವ್‌ ನಝೀರ್‌ ಕಜಕಿಸ್ತಾನದಲ್ಲಿ ಫೈನಾನ್ಷಿಯಲ್‌ ಕಂಟ್ರೋಲರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನ ಕಾಕ್ಸ್‌ಟೌನ್‌ ನಿವಾಸಿಯಾಗಿರುವ ನಿಲೋಫ‌ರ್‌ ದಂಪತಿಗೆ ತಯ್ಯಿಬಾ ಮತ್ತು ಸಬೀಹಾ ಎಂಬ ಪುತ್ರಿಯರಿದ್ದಾರೆ.

– ಪ. ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.