ಮಾರ್ಚ್‌ನಲ್ಲಿ ಮಾರ್ಚ್‌ಫಾಸ್ಟ್‌!

ಟೈಂ ಟೇಬಲ್‌ ಸೆಟ್‌ ಮಾಡ್ಕೊಬೇಕು...

Team Udayavani, Mar 27, 2019, 7:31 AM IST

w-26

ಅಬ್ಬಬ್ಟಾ, ಅಂತೂ ಇಂತೂ ಮಾರ್ಚ್‌ ತಿಂಗಳು ಮುಗೀತು. ನಾವು ಇನ್ನಾದರೂ ಸ್ವಲ್ಪ ನೆಮ್ಮದಿಯಿಂದ ಉಸಿರಾಡಬಹುದೇನೋ. ಮಾರ್ಚ್‌ ತಿಂಗಳು ಬಂದರೆ ಗೃಹಿಣಿಯರ ಬದುಕಿನಲ್ಲಿ ಮಾರ್ಚ್‌ ಫಾಸ್ಟ್‌ ಶುರುವಾಗಿ ಬಿಡುತ್ತದೆ. ಅಂದರೆ ಸೈನಿಕರ ಕವಾಯತು ಇದ್ದ ಹಾಗೆ. ಇಷ್ಟೇ ಹೆಜ್ಜೆ, ಹೀಗೇ ಇಡಬೇಕು, ಸಮಯಕ್ಕೆ ಸರಿಯಾಗಿ, ಸಮವಾಗಿ ಇಡಬೇಕು ಎನ್ನುವ ಹಾಗೆ, ನಮ್ಮ ಟೈಮ್‌ ಟೇಬಲ್‌ ಸೆಟ್‌ ಮಾಡಿಕೊಳ್ಳಬೇಕಾದ ಸಮಯವಿದು. ಯಾಕಂತೀರಾ?

ಒಂದೆಡೆ ಮಕ್ಕಳ ಪರೀಕ್ಷೆಯ ಟೈಮ್‌ ಟೇಬಲ್‌ ಅಮ್ಮಂದಿರನ್ನು ಆತಂಕಕ್ಕೆ ನೂಕುತ್ತದೆ. ಪರೀಕ್ಷೆ ಅವರಿಗೆ, ಟೆನನ್‌ ನಮಗೆ. ಇಯರ್‌ ಎಂಡಿಂಗ್‌ ಆಡಿಟ್‌ ಶುರುವಾಗಿದೆ. ಎಲ್ಲಾ ಫೈಲ್‌ ಕ್ಲಿಯರ್‌ ಆಗಬೇಕು. ಯಾರೂ ತಲೆ ತಿನ್ನಬೇಡಿ ಅಂತ ಗಂಡನೂ ಆಫೀಸಿನಿಂದ ಲೇಟಾಗಿ ಬರುತ್ತಾನೆ. ಆಫೀಸಿನ ಟೆನ್ಸ್ ನ್‌ ಅನ್ನು ತಲೆಯಲ್ಲಿ ತುಂಬಿಕೊಂಡು ಬರುವ ಅವರಿಂದ ಯಾವ ಸಹಾಯವನ್ನೂ ಬಯಸುವಂತಿಲ್ಲ. ಮಕ್ಕಳನ್ನು ಓದಿಸುವ ಸಂಪೂರ್ಣ ಜವಾಬ್ದಾರಿ ಅಮ್ಮನ ಮೇಲೆ.

ಮೋಜು-ಮಸ್ತಿ, ಹೋಟೆಲ್‌, ಸಿನಿಮಾ, ಪ್ರವಾಸ, ಟಿ.ವಿ. ಎಲ್ಲವೂ ಬಂದ್‌. ಮತ್ತೂಂದೆಡೆ ಸಾಲು ಸಾಲು ಮದುವೆ ಇನ್ವಿಟೇಶನ್‌ಗಳು ಟೇಬಲ್‌ ಮೇಲೆ. ಗಂಡನ ಮನೆಯ ಕಡೆಯ ಮದುವೆಗೆ ಹೋಗದಿರುವುದು ಮಹಾ ಅಪರಾಧ. ಹಾಗಂತ ತವರಿನ ಕಡೆಯ ಮದುವೆಗಳನ್ನು ತಪ್ಪಿಸಲಾದೀತೆ? ಕೆಲವೊಮ್ಮೆ ಒಂದೇ ದಿನ ಎರಡು ಮದುವೆಗಳು, ಅದೂ ಬೇರೆ ಬೇರೆ ಊರಿನಲ್ಲಿ! ಸದ್ಯ, ಈ ವಾರ ಯಾರ ಮದುವೆಯೂ ಇಲ್ಲ ಅಂತ ನಿರಾಳವಾಗಿರುವ ಛಾನ್ಸೇ ಇಲ್ಲ. ಮದುವೆಯಿಲ್ಲ ಅಂದರೆ ಗೃಹಪ್ರವೇಶದ ಇನ್ವಿಟೇಷನ್‌ ಕಾಯುತ್ತಿರುತ್ತದೆ. ಅವರು ಹೇಗೆ ಮನೆ ಕಟ್ಟಿಸಿದ್ದಾರೆ? ನಾವು ಅವರಿಗಿಂತ ಚೆನ್ನಾಗಿ ಹೇಗೆ ಕಟ್ಟಿಸಬಹುದು ಅನ್ನೋದನ್ನು ತಿಳಿಯಲಿಕ್ಕಾದ್ರೂ ಒಮ್ಮೆ ಹೋಗಿ ಬಾ ಎಂದು ಮನಸ್ಸು ಪಿಸುಗುಟ್ಟುತ್ತಿರುತ್ತದೆ. ಮನಸಿನ ಮಾತನ್ನು ಮೀರಲು ಸಾಧ್ಯವೇ?

ಇನ್ನು ಹಪ್ಪಳ, ಸಂಡಿಗೆ, ಬಾಳಕ, ಚಿಪ್ಸ್‌, ಉಪ್ಪಿನಕಾಯಿ ಡಬ್ಬಿಗಳು ಖಾಲಿಯಾಗಿ, ಸ್ವತ್ಛವಾಗಿ ಮಿರಿಮಿರಿ ಮಿಂಚುತ್ತಾ, ನಮ್ಮ ಹೊಟ್ಟೆ ತುಂಬುವುದು ಯಾವಾಗ ಎಂದು ಅಣಕಿಸುತ್ತಿರುತ್ತವೆ. ಆ ಡಬ್ಬಿಗಳ ಹಸಿವು ನೀಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವ ಕಾಲವಿದು. ಇಷ್ಟಾಗುವ ಹೊತ್ತಿಗೆ ನಾವೊಂದು ಸುತ್ತು ಕಡಿಮೆಯಾಗಿರುತ್ತೇವೆ. ಒಂದೊಂದು ವರ್ಷ ಯುಗಾದಿ ಹಬ್ಬವೂ ಮಾರ್ಚ್‌ನಲ್ಲಿಯೇ ಬಂದು, ಮನೆ ಸ್ವತ್ಛಗೊಳಿಸುವ ಕೆಲಸವನ್ನೂ ಕೈಗಂಟಿಸಿ ಬಿಡುತ್ತದೆ. ಈಗ ಹೇಳಿ, ಗೃಣಿಯರು ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳೋದು ಸುಲಭವಾ? ಅದಕ್ಕೇ ಹೇಳಿದ್ದು, ಮಾರ್ಚ್‌ ತಿಂಗಳು ಅಂದರೆ ಒಂದು ರೀತಿಯ ಕವಾಯತೇ ಸೈ ಅಂತ.

ನಳಿನಿ. ಟಿ. ಭೀಮಪ್ಪ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.