ಎಮೋಜಿ ಉಗುರು

Team Udayavani, Sep 11, 2019, 5:00 AM IST

ಎಮೋಜಿಗಳು ಗೊತ್ತಲ್ಲ? ಹಾಸ್ಯ, ಶೃಂಗಾರ, ಕೋಪ, ಭಯಾನಕ, ಶಾಂತ… ಹೀಗೆ ನವರಸಗಳನ್ನೂ ಅಕ್ಷರಗಳ ನೆರವಿಲ್ಲದೆ ವ್ಯಕ್ತಪಡಿಸುವ ತಾಕತ್ತುಳ್ಳ ಪುಟ್ಟ ಗೊಂಬೆಗಳು. ಹೆಣ್ಣುಮಕ್ಕಳೇ ಅವುಗಳನ್ನು ಜಾಸ್ತಿ ಬಳಸುವುದು ಅಂತ ಹೇಳಲಾಗುತ್ತದೆ. ಈ ಮಾತನ್ನು ನಿಜ ಮಾಡುವಂತೆ, ಇಲ್ಲಿಯವರೆಗೆ ಬೆರಳ ತುದಿಯಲ್ಲಿದ್ದ ಎಮೋಜಿಗಳೀಗ ಹೆಣ್ಮಕ್ಕಳ ಉಗುರನ್ನು ಅಲಂಕರಿಸುತ್ತಿವೆ. ನೇಲ್‌ ಆರ್ಟ್‌ನಲ್ಲಿ ಈಗ ಎಮೋಜಿ ಟ್ರೆಂಡ್‌ ಮುಂಚೂಣಿಯಲ್ಲಿದೆ.

ಉಗುರುಗಳಿಗೆ ಹಳದಿ ಬಣ್ಣ ಹಚ್ಚಿ, ಅವುಗಳ ಮೇಲೆ ಎಮೋಜಿ ಮೂಡಿಸುವುದು ಈಗ ಹೊಸದೊಂದು ಫ್ಯಾಷನ್‌ ಆಗಿ ಚಾಲ್ತಿಯಲ್ಲಿದೆ. ಅಳು, ನಗು, ಸಿಟ್ಟು, ಪ್ರೀತಿ ಎಲ್ಲವನ್ನೂ ಉಗುರಿನ ತುದಿಯಲ್ಲೇ ಪ್ರಕಟಿಸಬಹುದು. ನೇಲ್‌ ಪಾಲಿಶ್‌ ಬಳಸಿ ಎಮೋಜಿಗಳನ್ನು ಮೂಡಿಸುವುದು ಒಂದು ಬಗೆಯಾದರೆ, 3 ಡಿ ನೇಲ್‌ಆರ್ಟ್‌ ಸ್ಟಿಕರ್‌ಗಳು ಕೂಡಾ ಲಭ್ಯ. ಅಷ್ಟೇ ಅಲ್ಲ, ವ್ಯಕ್ತಿಯ ಭಾವಚಿತ್ರವನ್ನು, ಮಿನಿಯನ್‌, ಪಿಕಾಚು ಮುಂತಾದ ಕಾರ್ಟೂನ್‌ ಕ್ಯಾರೆಕ್ಟರ್‌ಗಳನ್ನೂ ಉಗುರಿನ ಮೇಲೆ ಬಿಡಿಸಬಹುದು.

-ಉಮ್ಮೆ ಅಸ್ಮ ಕೆ. ಎಸ್‌.


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ