ಹೊಸ ಚರ್ಚೆ: “ಋತು ವಿರಾಮ’


Team Udayavani, Aug 16, 2017, 12:35 PM IST

16-AVALU-1.jpg

ಕಡೇಪಕ್ಷ, ಫ‌ಸ್ಟ್‌ ಡೇ ರಜೆ ಕೊಡಿ…
ಸುಜಲಾ ಘೋರ್ಪಡೆ 

ಹೆಂಗಸರಿಗೆ ಋತುಸ್ರಾವದ ಆ ದಿನಗಳಲ್ಲಿ ವಿಶ್ರಾಂತಿ ಅಗತ್ಯ ಬಹಳ ಇರುತ್ತದೆ. ಇದರಿಂದ ಆಕೆಯ ಮುಟ್ಟಿನ ದಿನ ಜಗಜ್ಜಾಹೀರಾಗುವುದು ದಿಟವೇ ಆದರೂ, ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಋತುಚಕ್ರದ ವೇಳೆಗೆ ರಜೆ ಇಲ್ಲದೆಯೂ, ಹೆಣ್ಣು ತನಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು. 

ಋತುಚಕ್ರದ ವೇಳೆ ಎಲ್ಲ ಸ್ತ್ರೀಯರಿಗೂ ಒಂದೇ ರೀತಿಯ ಸಮಸ್ಯೆ ಇರುವುದಿಲ್ಲ. ಕೆಲವರಿಗೆ ವಿಪರೀತ ಸ್ರಾವವಾಗಿ ಕಷ್ಟವಾದರೆ, ಮತ್ತೆ ಕೆಲವರು ಆ ದಿನಗಳನ್ನೂ ಆರಾಮದಿಂದಲೇ ಕಳೆಯುತ್ತಾರೆ. ಇನ್ನೂ ಕೆಲವರಿಗೆ ಈ ಮೊದಲನೇ ದಿನವೆಂಬುದು ಯಮಯಾತನೆಯ ಪರಿಸ್ಥಿತಿ. ಯಾರಲ್ಲೂ ಹೇಳಿಕೊಳ್ಳಲಾಗದಂಥದ್ದು. ನಮ್ಮ ಕಾಲದಲ್ಲಿ ಹೆಣ್ಮಕ್ಕಳು ಬಲಿಷ್ಠರಾಗಿದ್ದರಿಂದ, ಆ ನೋವನ್ನೆಲ್ಲ ತಡೆದುಕೊಳ್ಳುವ ಶಕ್ತಿ ಇರುತ್ತಿತ್ತು. ಎಲ್ಲರ ಮುಂದೆ ಚಾಪೆ- ಚೊಂಬಿನ ಜೊತೆ ಮೂಲೆಯಲ್ಲಿ ಕುಳಿತರೂ, ಏನೂ ಅನ್ನಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅದು ಗುಟ್ಟಿನ ವಿಚಾರವೇ ಆಗಿಹೋಯಿತು. ಹೊರಗೆ ಕೂರದೇ, ಒಳಗಡೆ ಇದ್ದು, ಹಿರಿಯರ ದೃಷ್ಟಿಯಲ್ಲಿ ಅಪರಾಧಿಯಾದರೂ ನಾಚಿಕೆಯಿಂದ ಸುಮ್ಮನೆ ಇರಬೇಕಾಯಿತು.

ಆದರೆ, ಈಗ ಔದ್ಯೋಗಿಕ ಮಹಿಳೆಗೆ ಮಾನಸಿಕ ಒತ್ತಡ ಹೆಚ್ಚು. ಈ ಮಾನಸಿಕ ಒತ್ತಡದ ಜತೆಗೆ ಕೆಲಸದ ಒತ್ತಡವೂ ಸೇರಿ ಆಕೆ ಕಳೆಗುಂದಿದಂತೆ ಅನ್ನಿಸುತ್ತಾಳೆ. ಇದರೊಂದಿಗೆ ನೋವು ಕೂಡ ಜತೆಯಾದರೆ, ಕಚೇರಿ ಕೆಲಸದ ಹೆಣ್ಣು ಸಿಡಿಮಿಡಿಗೊಳ್ಳುವುದು ಸಹಜ. ಹಿಂದಿನ ಕಾಲದವರು ಮಾಡಿದ ಎಲ್ಲ ನಿರ್ಧಾರಗಳೂ ವೈಜ್ಞಾನಿಕ ದೃಷ್ಟಿಯಿಂದ ಸರಿಯಾಗಿಯೇ ಇತ್ತು. ಆ ದಿನಗಳಲ್ಲಿ ಸ್ತ್ರೀಯರು ಸುಮ್ಮನೆ ಕುಳಿತೋ ಅಥವಾ ಮಲಗಿಯೋ ಆ ಮೂರು ದಿನಗಳನ್ನು ಕಳೆಯಬಹುದಿತ್ತು. ಆದರೆ, ಈಗ ಹಾಗಾಗುವುದಿಲ್ಲ. ಮೊದಲಿನಂತೆ ಈಗ ಅವಿಭಕ್ತ ಕುಟುಂಬಗಳೂ ಇಲ್ಲ. ಇಲ್ಲಿ ಎಲ್ಲವನ್ನೂ ಆ ಮನೆಯೊಡತಿಯೇ ನಿಭಾಯಿಸಬೇಕಾಗುತ್ತದೆ. ಬೇರೆ ದೇಶಗಳಲ್ಲಿ ಇರುವಂತೆ, ನಮ್ಮ ಭಾರತದಲ್ಲೂ “ಋತುವಿರಾಮ’ವನ್ನು ಜಾರಿಗೆ ತಂದರೆ, ಅದು ಖುಷಿಯ ಸಂಗತಿ. ಕಡೆಯ ಪಕ್ಷ ಋತುಚಕ್ರದ ಮೊದಲನೇ ದಿನಕ್ಕಾದರೂ ರಜೆ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ.

ಟಾಪ್ ನ್ಯೂಸ್

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ 38.53 ಲಕ್ಷ ರೂ. ಮೌಲ್ಯದ ಚಿನ್ನ ವಶ,

ಮಂಗಳೂರು ವಿಮಾನ ನಿಲ್ದಾಣದಲ್ಲಿ 38.53 ಲಕ್ಷ ರೂ. ಮೌಲ್ಯದ ಚಿನ್ನ ವಶ

ಜಪಾನ್‌ನತ್ತ ಉ.ಕೊರಿಯಾ ಕ್ಷಿಪಣಿ : ಭಾರತ ಖಂಡನೆ

ಜಪಾನ್‌ ಕಡೆಗೆ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ : ಭಾರತ ಖಂಡನೆ

CM-@-4

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಧಾನಿಗಳಿಂದ ಉದ್ಘಾಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

ಹೊಸ ಸೇರ್ಪಡೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-sddsdsad

ಸಿಎಂ ಕೃಪೆಯಿಂದಾದರೂ ಕುಷ್ಟಗಿ ಮುಖ್ಯ ರಸ್ತೆ ಅಭಿವೃದ್ಧಿ ಹೊಂದುವುದೇ?

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.