ಬೆಳ್ಳಿ ಚುಕ್ಕಿ ಬಾಲೆ


Team Udayavani, Mar 6, 2019, 12:30 AM IST

z-6.jpg

ಒಂದೇ ಬಣ್ಣದ ಸಾಲಿಡ್‌ ಕಲರ್‌ ಮೇಲೆ ಬೆಳ್ಳಿ ಚುಕ್ಕಿಗಳಿರುವ “ಪೋಲ್ಕಾ ಡಾಟ್ಸ್‌’ ದಿರಿಸು ಮತ್ತೆ ಸದ್ದು ಮಾಡುತ್ತಿದೆ. ಆಕಾಶದ ನಕ್ಷತ್ರಗಳನ್ನು ಸೇರಿಸಿ ಹೊಲಿದಂತಿರುವ ಈ ದಿರಿಸನ್ನು ಸೆಲಬ್ರಿಟಿಗಳು ಜನಪ್ರಿಯಗೊಳಿಸುತ್ತಿದ್ದಾರೆ…

ಪೋಲ್ಕಾ ಡಾಟ್ಸ್‌ ಎಂಬ ಟ್ರೆಂಡ್‌ ಮತ್ತೆ ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿದೆ. ಹಿಂದಿ ಚಿತ್ರನಟಿಯರಾದ ಆಥಿಯಾ ಶೆಟ್ಟಿ, ಪರಿನೀತಿ ಚೋಪ್ರಾ, ನೇಹಾ ಧೂಪಿಯಾ, ಮಾಧುರಿ ದೀಕ್ಷಿತ್‌, ಸಾರಾ ಅಲಿ ಖಾನ್‌, ಜಾಕೆಲಿನ್‌ ಫ‌ರ್ನಾಂಡಿಸ್‌, ಕಂಗನಾ ರನೌತ್‌, ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಬಚ್ಚನ್‌, ಕರೀನಾ ಕಪೂರ್‌, ಅನುಷ್ಕಾ ಶರ್ಮ, ಆಲಿಯಾ ಭಟ್‌, ಮತ್ತಿತರರು ಪೋಲ್ಕಾ ಡಾಟ್ಸ್‌ ಇರುವ ಸೀರೆ, ಮ್ಯಾಕ್ಸಿ, ಗೌನ್‌, ಟೀ ಶರ್ಟ್‌, ಫ್ರಾಕ್‌, ಡ್ರೆಸ್‌, ಚೂಡಿದಾರ, ಕುರ್ತಾ, ಪ್ಯಾಂಟ್‌, ಲಂಗ, ಜಾಕೆಟ್‌, ರವಿಕೆ, ಅಂಗಿ, ಈಜುಡುಗೆ ಮತ್ತು ಜಂಪ್‌ ಸೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇದನ್ನು ಅವರ ಅಭಿಮಾನಿಗಳು ಇಷ್ಟ ಪಟ್ಟು ಅನುಕರಿಸುತ್ತಲೂ ಇದ್ದಾರೆ. 

ಟ್ರೆಂಡ್‌ಸೆಟ್ಟರ್‌
ಚಲನಚಿತ್ರ ಪ್ರಮೋಷನ್‌ಗೆ ಬರುವಾಗ, ಸಿನಿಮಾ ಪ್ರೀಮಿಯರ್‌ ಶೋಗೆ ಹೋಗುವಾಗ, ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವಾಗ ಅಥವಾ ಇತರ ಸಭೆ ಸಮಾರಂಭದಲ್ಲಿ ಭಾಗವಹಿಸುವಾಗ ಸೆಲೆಬ್ರೆಟಿಗಳು ಪೋಲ್ಕಾ ಡಾಟ್ಸ್‌ ಉಡುಪಿನಲ್ಲೇ ಬರುತ್ತಿದ್ದಾರೆ. ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಫೇಸ್‌ಬುಕ್‌, ಇನ್ಸ್ಟಾ ಗ್ರಾಮ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಈ ನಟಿಯರದ್ದೇ ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ ಟ್ಯಾಗ್‌ ಪೋಲ್ಕಾ ಡಾಟ್ಸ್‌ (Polka Dots) ಎಂಬ ವಿಷಯ ಕೂಡ ಟ್ರೆಂಡ್‌ ಆಗುತ್ತಿದೆ. ಕಾಲೇಜು ಹುಡುಗಿಯರು ಇಂಥದ್ದೇ ಉಡುಪನ್ನು ಆನ್‌ಲೈನ್‌ನಲ್ಲಿ ಆಡರ್‌ ಮಾಡಿ, ಕಾಲೇಜಿಗೆ ತೊಡುತ್ತಿದ್ದಾರೆ. ರೂಪದರ್ಶಿ ಮತ್ತು ನಟಿಯರನ್ನು ಅನುಕರಿಸಲು ಇಷ್ಟವಿಲ್ಲದವರು, ಎಲ್ಲರ ಗಮನ ತಮ್ಮತ್ತ ಸೆಳೆಯಬೇಕು ಎನ್ನುವವರು, ತಮ್ಮ ಇಚ್ಛೆಯಂತೆ ಪೋಲ್ಕಾ ಡಾಟ್ಸ್‌ ಉಳ್ಳ ಉಡುಗೆ ತೊಟ್ಟು ಟ್ರೆಂಡ್‌ ಸೆಟ್ಟರ್‌ಗಳಾಗಬಹುದು!

ಬಟ್ಟೆ ಮೇಲೆ ಮಾತ್ರವಲ್ಲ…
ಯಾವುದೇ ಬಣ್ಣದ ಪ್ಲೇನ್‌ ಬಟ್ಟೆಯ ಮೇಲೆ ಕಪ್ಪು ಬಣ್ಣದ ದೊಡ್ಡ ದೊಡ್ಡ ಚುಕ್ಕಿಗಳಿದ್ದರೆ ಆಯಿತು. ವಸ್ತ್ರ ವಿನ್ಯಾಸಕರು ಬಣ್ಣ, ಆಕಾರ ಮತ್ತು ವಿನ್ಯಾಸಗಳ ಜೊತೆ ಪ್ರಯೋಗ ನಡೆಸುತ್ತಾ ಕಪ್ಪು ಬಣ್ಣದ ಬದಲಿಗೆ ಬೇರೆ ಬಣ್ಣಗಳ ಪೋಲ್ಕಾ ಡಾಟ್‌ಗಳನ್ನೂ ತಮ್ಮ ಉಡುಪಿನಲ್ಲಿ ಅಳವಡಿಸಿದ್ದಾರೆ. ಈ ಚುಕ್ಕಿಗಳು ಕೇವಲ ದಿರಿಸಿಗೆ ಮಾತ್ರ ಸೀಮಿತವಾಗದೆ ಹ್ಯಾಟ್‌, ಕಿವಿಯೋಲೆ, ಬ್ರೇಸ್‌ಲೆಟ್‌, ಸಾಕ್ಸ್, ಸ್ಕಾರ್ಫ್, ತಲೆಗೆ ಕಟ್ಟುವ ರಿಬ್ಬನ್‌, ಹೇರ್‌ ಬ್ಯಾಂಡ್‌ ಮತ್ತು ರಬ್ಬರ್‌ ಬ್ಯಾಂಡ್‌, ನೆಕ್‌ ಟೈ, ಸರದಲ್ಲಿನ ಪೆಂಡೆಂಟ್‌, ಪರ್ಸ್‌ಗಳು, ಬ್ಯಾಗ್‌, ಮೊಬೈಲ್‌ ಫೋನ್‌ ಕೇಸ್‌ (ಕವರ್‌)ಗಳು, ಪಾದರಕ್ಷೆ, ಬೆಲ್ಟ…, ಛತ್ರಿ, ರೈನ್‌ ಕೋಟ್‌, ಶಾಲು ಮತ್ತು ಕನ್ನಡಕದ ಪ್ರೆಮ್‌ಗಳಲ್ಲೂ ಕಾಣಿಸಿಕೊಳ್ಳಲು ಶುರುವಾಗಿವೆ. 

ಕೊನೆಯಿಲ್ಲದ ಟ್ರೆಂಡ್‌
ವರ್ಷ ವರ್ಷವೂ ಮರಳಿ ಬರುವ ಈ ಟ್ರೆಂಡಿಗೆ ಕೊನೆಯೇ ಇಲ್ಲ ಎನ್ನಬಹುದು. ಹಾಗಾಗಿ ಕಪಾಟಿನಲ್ಲಿ ಪೋಲ್ಕಾ ಡಾಟ್ಸ್‌ ಇರುವ ದಿರಿಸನ್ನು ಧೈರ್ಯದಿಂದ ಇಟ್ಟುಕೊಳ್ಳಬಹುದು. ಇಂದಲ್ಲ ನಾಳೆ ಪೋಲ್ಕಾ ಡಾಟ್ಸ್‌ ಇರುವ ಉಡುಗೆಯನ್ನು ತೊಟ್ಟು ನೀವು ಫ್ಯಾಷನ್‌ ಸ್ಟೇಟ್ಮೆಂಟ್‌ ಮಾಡಬಹುದು. ಮತ್ಯಾಕೆ ತಡ? ನಿಮ್ಮ ಹಳೇ ಪೋಲ್ಕಾ ಡಾಟ್ಸ್‌ ಉಡುಪನ್ನು, ಸ್ಟೈಲಿಶ್‌ ಆಕ್ಸೆಸರೀಸ್‌ ಜೊತೆ ತೊಟ್ಟು ಈ ಟ್ರೆಂಡಿಗೆ ಹೊಸ ಟ್ವಿಸ್ಟ್ ಕೊಡಿ.

ಉಗುರು ಮೇಲೆ ಪೋಲ್ಕಾ ಚಿತ್ತಾರ
ಜನರಲ್ಲಿ ಈ ಪೋಲ್ಕಾ ಡಾಟ್ಸ್‌ನ ಹುಚ್ಚು ಅದೆಷ್ಟಿದೆಯೆಂದರೆ ತಮ್ಮ ಉಗುರುಗಳಲ್ಲೂ ಇವುಗಳನ್ನು ಮೂಡಿಸುತ್ತಿದ್ದಾರೆ. ಅಂದರೆ ನೈಲ್‌ ಪಾಲಿಶ್‌ ಹಚ್ಚುವಾಗ ಮೊದಲಿಗೆ ಒಂದು ಬಣ್ಣ ಹಚ್ಚಿ, ಅದರ ಮೇಲೆ ಬೇರೊಂದು ಬಣ್ಣದ ಚುಕ್ಕಿಗಳ ನೈಲ್‌ ಆರ್ಟ್‌ ಮಾಡುತ್ತಿದ್ದಾರೆ. ತಿಳಿ ಬಣ್ಣದ ಮೇಲೆ ಗಾಢವಾದ ಬಣ್ಣದ ಚುಕ್ಕಿ ಅಥವಾ ಗಾಢವಾದ ಬಣ್ಣದ ಮೇಲೆ ತಿಳಿ ಬಣ್ಣದ ಚುಕ್ಕಿಗಳನ್ನು ಬಿಡಿಸುತ್ತಿದ್ದಾರೆ.

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಸಿಒಪಿ26 ಶೃಂಗ, ಏನು ಎತ್ತ?

ಸಿಒಪಿ26 ಶೃಂಗ, ಏನು ಎತ್ತ?

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

1-5ನೇ ತರಗತಿ ಇಂದು ಆರಂಭ

1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಇಂದು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.