ಜೀವನವೆಲ್ಲಾ ಸುಂದರ ಬೆಸುಗೆ


Team Udayavani, Dec 26, 2018, 10:21 AM IST

shrinath.jpg

ಕನ್ನಡದ ಹ್ಯಾಂಡ್‌ಸಂ ನಟ ಶ್ರೀನಾಥ್‌ರ ಪತ್ನಿ ಗೀತಾ ಶ್ರೀನಾಥ್‌. ಈ ದಂಪತಿ ಮದುವೆಯಾಗಿ 47 ವರ್ಷ, ಪರಸ್ಪರ ಪರಿಚಯವಾಗಿ 50 ವರ್ಷ ಕಳೆದಿದೆ. ಪ್ರಪಂಚ ಬದಲಾಯಿತು, ಬೆಂಗಳೂರು ಬದಲಾಯಿತು, ಆದರೆ ನಾವಿಬ್ಬರು ಮಾತ್ರ ಬದಲಾಗಲೇ ಇಲ್ಲ. ಅದೇ ಪ್ರೀತಿ, ಅದೇ ಸ್ನೇಹ 50 ವರ್ಷಗಳ ಬಳಿಕವೂ ಹಾಗೇ ಇದೆ ಎನ್ನುತ್ತಾರೆ ಗೀತಾ. ವಯಸ್ಸಾಗುವುದು ಕೇವಲ ದೇಹಕ್ಕೆ ಎನ್ನುವ ಇವರು, ಫಿಟ್‌ನೆಸ್‌ ಫ್ರೀಕ್. ದೇಹ ದಂಡಿಸದೇ ಫಿಟ್‌ನೆಸ್‌ ದಕ್ಕುವುದಿಲ್ಲ ಎನ್ನುತ್ತಾರೆ. ಜೊತೆಗೆ ನೃತ್ಯಗಾತಿ ಕೂಡ. ಈ ಜನ್ಮದಲ್ಲಿ ಸಂಗೀತಗಾರ್ತಿಯಾಗಲು ಸಾಧ್ಯವಾಗಲಿಲ್ಲ, ಮುಂದಿನ ಜನ್ಮದಲ್ಲಿ ನಾನು ದೊಡ್ಡ ಸಂಗೀತಗಾರ್ತಿ ಆಗುತ್ತೇನೆ ಎಂದು ತಮ್ಮ ಕನಸಿನ ಕುರಿತೂ ಹೇಳಿಕೊಂಡಿದ್ದಾರೆ.
ಗೀತಾ, ನಟ ಶ್ರೀನಾಥ್‌ ಪತ್ನಿ. 

ನಿಮ್ಮ ಬಾಲ್ಯ ಕಳೆದಿದ್ದು, ಶಾಲೆ ಓದಿದ್ದು ಎಲ್ಲಿ?
ನಾನು ಬೆಂಗಳೂರಿನವಳೇ. ಮಲ್ಲೇಶ್ವರದಲ್ಲೇ ಹುಟ್ಟಿ ಬೆಳೆದಿದ್ದು. ಕ್ಲೂನಿ ಕಾನ್ವೆಂಟ್‌ನಲ್ಲಿ ಶಾಲೆ ಮತ್ತು ಎಂಇಎಸ್‌ ಕಾಲೇಜಿನಲ್ಲಿ ಡಿಗ್ರಿ ಓದಿದೆ. ಶಾಲೆ, ಕಾಲೇಜು ದಿನಗಳಲ್ಲಿ ನಾನು ಸದಾ ಚಟುವಟಿಕೆಯಿಂದ ಇದ್ದ ವಿದ್ಯಾರ್ಥಿನಿ. ನೃತ್ಯ, ನಾಟಕ, ಕ್ರೀಡೆ ಅಂತ ಮಾಡದೇ ಇದ್ದ ಕೆಲಸವೇ ಇರಲಿಲ್ಲ. ಮದುವೆಯಾದ ಮೇಲೆ ಜಯನಗರಕ್ಕೆ ಬಂದೆ. ಬೆಂಗಳೂರು ಉತ್ತರದಿಂದ ಬೆಂಗಳೂರು ದಕ್ಷಿಣಕ್ಕೆ ನನ್ನ ವಾಸಸ್ಥಳ ಬದಲಾಯಿತು ಅಷ್ಟೆ. ಈ ಬೆಂಗಳೂರು ಕಂಡ ಬದಲಾವಣೆಯನ್ನು ನಾನು ಇಂಚಿಂಚೂ ಅನುಭವಿಸಿದ್ದೇನೆ.

ಇಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು ಹೇಗೆ?
ನನ್ನ ತಾಯಿ ಎಡಿಎ ನಾಟ್ಯಸಂಘದ ಸದಸ್ಯರಾಗಿದ್ದರು. ಜೊತೆಗೆ ಅವರಿಗೆ ಕಲೆಯಲ್ಲಿ ಉತ್ತಮ ಅಭಿರುಚಿ ಇತ್ತು.
ನಾನೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಆದರೆ ನಟನೆಯಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅಮ್ಮ ಕಾರ್ಯಕ್ರಮಗಳಿಗೆ ಹೋಗುವಾಗ ನನ್ನನ್ನೂ ಜೊತೆಗೆ ಬರುವಂತೆ ಕರೆಯುತ್ತಿದ್ದರು. ಆದರೆ ನಾನು ಹೋಗಲು
ಒಪ್ಪುತ್ತಿರಲಿಲ್ಲ. ಅವತ್ತು ಶ್ರೀನಾಥ್‌ರನ್ನು ಭೇಟಿಯಾಗಬೇಕು ಅಂತ ವಿಧಿ ಬರೆದಿತ್ತು ಅಂತ ಕಾಣುತ್ತದೆ. ಅಮ್ಮ ಕರೆದ ಕೂಡಲೇ ಒಪ್ಪಿಕೊಂಡು ಅವರ ಜೊತೆಗೆ ಹೋದೆ. ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಆ ಕಾರ್ಯಕ್ರಮಕ್ಕೆ ಶ್ರೀನಾಥ್‌ ಮುಖ್ಯ ಅತಿಥಿಯಾಗಿ ಬಂದಿದ್ದರು. ಅಲ್ಲಿಯೇ ಅವರನ್ನು ಮೊದಲ ಬಾರಿಗೆ ಭೇಟಿಯಾಗಿ, ಮಾತನಾಡಿದ್ದು. ನಿಮ್ಮಿಬ್ಬರಲ್ಲಿ ಮೊದಲು

ಪ್ರಪೋಸ್‌ ಮಾಡಿದ್ದು ಯಾರು?
ನಂಬುತ್ತಿರಾ? ನಾವು ಪರಸ್ಪರ “ಐ ಲವ್‌ ಯೂ’ ಅಂತ ಹೇಳಿಕೊಳ್ಳಲಿಲ್ಲ. ಮೊದಲ ಬಾರಿ ಭೇಟಿಯಾದೆವಲ್ಲ, ಬಹುಶಃ ಅವತ್ತೇ ನಮ್ಮಿಬ್ಬರ ಮಧ್ಯೆ “ಲವ್‌ ಎಟ್‌ ಫ‌ಸ್ಟ್‌ ಸೈಟ್‌’ ಆಗಿತ್ತು ಅಂತ ಕಾಣತ್ತೆ. ಅದು ಫೋನ್‌ ಸಂಭಾಷಣೆ, ಭೇಟಿ ಮೂಲಕ ಮುಂದುವರಿಯಿತು. ಕಡೆಗೆ ಅವರೇ ನನ್ನ ಅಮ್ಮನ ಬಳಿ ಬಂದು, “ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿ’ ಎಂದು ಕೇಳಿದರು. ನಮ್ಮ ಮನೆಯಲ್ಲೂ ಒಪ್ಪಿದರು. ಮದುವೆಯಾದಾಗ ನನಗೆ 20 ವರ್ಷ. 

ಆರಂಭದ ದಿನಗಳಲ್ಲಿ ಶ್ರೀನಾಥ್‌ ಅವರ ಬ್ಯುಸಿ ದಿನಚರಿ ಜೊತೆ ಹೇಗೆ ಹೊಂದಿಕೊಂಡಿರಿ?
ಮದುವೆಯಾದ ಹೊಸತರಲ್ಲಿ ಅವರು ತುಂಬಾ ಬ್ಯುಸಿ ಮತ್ತು ಯಶಸ್ವಿ ನಟ. ದಿನಕ್ಕೆ 3 ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಬಂದಾಗ, ನಮ್ಮದು ಕೂಡು ಕುಟುಂಬ ಆಗಿತ್ತು. ಮನೆ ತುಂಬಾ ಜನರಿದ್ದರೂ ಶ್ರೀನಾಥ್‌ರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಕ್ರಮೇಣ ನಾನೇ ಸೆಟ್‌ಗೆ ಹೋಗಿ ಕುಳಿತುಕೊಳ್ಳಲು ಆರಂಭಿಸಿದೆ. ಔಟ್‌ಡೋರ್‌ ಶೂಟಿಂಗ್‌ ಇದ್ದರೂ ನಾನು ಲಗೇಜ್‌ ಪ್ಯಾಕ್‌ ಮಾಡಿಕೊಂಡು ಹೋಗಿ ಬಿಡುತ್ತಿದ್ದೆ. ಅವೆಲ್ಲಾ ನಮ್ಮ ಜೀವನದ ಮರೆಯಲಾರದ ದಿನಗಳು.

ಶೂಟಿಂಗ್‌ ನೋಡುವಾಗ ಕೆಲವೊಮ್ಮೆ ಮುಜುಗರ ಆಗ್ತಾ ಇರಲಿಲ್ವ?
ಖಂಡಿತಾ ಇಲ್ಲ. ಸಖತ್‌ ಖುಷಿ ಅನ್ನಿಸ್ತಾ ಇತ್ತು. ಆ ದಿನಗಳಲ್ಲಿ ಈಗಿನಂತೆ ಕಲಾವಿದರು ತಮ್ಮ ಕೆಲಸ ಮುಗಿದ ನಂತರ ಕಾರವಾನ್‌ಗೆ ಹೋಗಿ ಕುಳಿತು ಬಿಡುತ್ತಿರಲಿಲ್ಲ. ಎಲ್ಲರೂ ಒಂದೇ ಮನೆಯವರಂತೆ ಒಟ್ಟಿಗೆ ಊಟ ಮಾಡುತ್ತಾ ಹರಟೆ ಹೊಡೆಯುತ್ತಿದ್ದರು. ಹಲವಾರು ಕಲಾವಿದರು ನಮ್ಮ ಮನೆಯ ಸದಸ್ಯರಂತೇ ಆಗಿಬಿಟ್ಟಿದ್ದರು.
ಶ್ರೀನಾಥ್‌ರ ಚಿತ್ರಗಳಲ್ಲಿ ರೊಮ್ಯಾಂಟಿಕ್‌ ದೃಶ್ಯಗಳು ಯಥೇತ್ಛವಾಗಿ ಇರುತ್ತಿದ್ದವು. ನನಗೆ ಒಂದು  ದಿನವೂ ಶೂಟಿಂಗ್‌ ಸೆಟ್‌ನಲ್ಲಿ ಕಿರಿಕಿರಿ ಆಗುತ್ತಿರಲಿಲ್ಲ. ನಾನಿದ್ದೇನೆ ಎಂದು ಅವರು ಕೂಡ ಮುಜುಗರ ಮಾಡಿಕೊಳ್ಳುತ್ತಿರಲಿಲ್ಲ. ನಾನು ಮೆಚ್ಚಿ ಮದುವೆಯಾದ ವ್ಯಕ್ತಿಯ ವ್ಯಕ್ತಿತ್ವ ಏನೆಂದು ನನಗೆ ಗೊತ್ತಿದ್ದ ಮೇಲೆ ಅಸೂಯೆಪಡುವ ಅಗತ್ಯವಾದರೂ ಏನಿರುತ್ತೆ?

ನಿಮ್ಮ ಮನೆಯಲ್ಲಿ ಅಡುಗೆ ಮಾಡುವುದು ಯಾರು?
ನಮ್ಮ ಮನೆಯಲ್ಲಿ ಈಗಲೂ ನಾನೇ ಅಡುಗೆ ಮಾಡುವುದು. ಮನೆಯಲ್ಲಿ ನಾವು ಸಸ್ಯಾಹಾರಿ ಗಳು. ಆಚೆ ರೆಸ್ಟೊರೆಂಟ್‌ಗಳಿಗೆ ಹೋದಾಗ ನಾನ್‌ವೆಜ್‌ ಕೂಡ ತಿನ್ನುತ್ತೇವೆ. ಮನೆಗೆ ತರಕಾರಿ ತರುವುದು ಶ್ರೀನಾಥ್‌. ಅದು ಅವರ ಇಷ್ಟದ ಕೆಲಸ. ಫ್ರೆಶ್‌ ತರಕಾರಿ ತಂದು, ಇಂಥ ಪದಾರ್ಥ ತಯಾರಿಸು ಅಂತ ಹೇಳ್ತಾರೆ. ಅದನ್ನೇ ನಾನು ತಯಾರಿಸುತ್ತೇನೆ. ಅವರಿಗೆ ಆ ಅಡುಗೆ ಇಷ್ಟವಾದರೆ ನನಗೆ ಅದೇ ತೃಪ್ತಿ. ನಾನು ಮಾಡುವ ಕೂಟು ನಮ್ಮ ಮನೆಯಲ್ಲಿ ಎಲ್ಲರಿಗೂ ಫೇವರಿಟ್‌. ದೋಸೆ, ರೊಟ್ಟಿ ಕೂಡ ಎಲ್ಲರಿಗೂ ಇಷ್ಟ. ಹೊರದೇಶಗಳಿಗೆ ಹೋದಾಗ ಅಲ್ಲಿಯ ರಸಸ್ವಾದ ಮಾಡಿ ಬರುತ್ತೇವೆ. ಬೆಂಗಳೂರಿನಲ್ಲೂ ಎಲ್ಲಾ ಬಗೆಯ ಚಾಟ್ಸ್‌, ಕಾಂಡಿಮೆಂಟ್ಸ್‌ ಸವಿಯುತ್ತೇವೆ. ಊಟ ಸೇರಿ ಎಲ್ಲಾ ವಿಚಾರಗಳಲ್ಲೂ ನಮ್ಮಿಬ್ಬರದ್ದು ಒಂದೇ ರೀತಿಯ ಅಭಿರುಚಿ. ನಾವು ಮೇಡ್‌ ಫಾರ್‌ ಈಚ್‌ ಅದರ್‌. 

ಮಕ್ಕಳ ಬಗ್ಗೆ ಹೇಳಿ…

ನಮಗೆ ಇಬ್ಬರು ಮಕ್ಕಳು. ಮಗ ರೋಹಿತ್‌, ಮಗಳು ಅಮೂಲ್ಯ. ಮಕ್ಕಳು ಚಿಕ್ಕವರಿದ್ದಾಗ ನಮ್ಮೆಜಮಾನರು ಅವರ
ಆಟ ಪಾಠಗಳನ್ನು ಬಹಳ ಮಿಸ್‌ ಮಾಡಿಕೊಂಡಿದ್ದಾರೆ. ಆಗ ಕಳೆದುಕೊಂಡಿದ್ದನ್ನೆಲ್ಲಾ ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಮೂಲಕ ಪಡೆದುಕೊಂಡಿದ್ದಾರೆ. ಮಗಳಿಗೆ ಮೂವರು ಮಕ್ಕಳು, ದಿಶಾ, ಅರ್ಚಿಶಾ, ದಿಯಾ ಅಂತ. ಮಗಳ ಕುಟುಂಬ ಅಮೆರಿಕದಲ್ಲಿ ನೆಲೆಸಿದೆ. ಮೊಮ್ಮಕ್ಕಳನ್ನು ನೋಡಲು ವರ್ಷಕ್ಕೊಮ್ಮೆ ಅಮೆರಿಕಕ್ಕೆ ಹೋಗುತ್ತೇವೆ. ಮಗಳಿಗೆ ನನ್ನಿಂದ ನೃತ್ಯ ಬಳುವಳಿಯಾಗಿ ಬಂದಿದೆ. ನಾನು ನೃತ್ಯವನ್ನು ವೃತ್ತಿಯಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅವಳು ಅಮೆರಿಕದಲ್ಲಿ ಡ್ಯಾನ್ಸ್‌ ಸ್ಕೂಲ್‌ ತೆರೆದಿದ್ದಾಳೆ. ನನ್ನಿಂದ ಸಾಧ್ಯವಾಗದೇ ಇರುವುದನ್ನು ಅವಳು ಮಾಡಿದ ಖುಷಿ ನನಗಿದೆ. ಮಗ ರೋಹಿತ್‌, ಸೊಸೆ ಮಂಗಳ. ಅವರ ಮಗಳು ಹಿತಾ. ನಾವೆಲ್ಲರೂ ಒಟ್ಟಿಗೇ ಇದ್ದೇವೆ. ಮೊಮ್ಮಕ್ಕಳು ಅವರ ತಾತನಿಗೆ ಚಿತ್ರರಂಗದ ಬಗ್ಗೆ ಏನಾದರೂ ಕೇಳುತ್ತಿರುತ್ತಾರೆ. ನನಗೆ, ನೀನು ಹೇಗೆ ನಿನ್ನ ತ್ವಚೆಯನ್ನು ಇಷ್ಟು ಚಂದ ಮೇಂಟೇನ್‌ ಮಾಡಿದ್ದೀಯ ಎಂದು ಪ್ರಶ್ನಿಸುತ್ತಿರುತ್ತಾರೆ. ಒಟ್ಟಿನಲ್ಲಿ ನಮ್ಮದು
ಸುಖೀ ಕುಟುಂಬ.

ನಿಮ್ಮ ನೆಚ್ಚಿನ ಹೀರೋ ಯಾರು?
ಶ್ರೀನಾಥ್‌ ಪರಿಚಯವಾದಾಗಿನಿಂದ ಇಲ್ಲಿಯವರೆಗೂ ಅವರೇ ನನ್ನ ನೆಚ್ಚಿನ ಹೀರೊ. ಬೇರೆಯವರ ಸಿನಿಮಾಗಳನ್ನೂ ನೋಡುತ್ತೇನೆ ಆದರೂ, ಶ್ರೀನಾಥ್‌ರಷ್ಟು ಯಾರೂ ನನಗೆ ಹಿಡಿಸಲ್ಲ. ಈಗಲೂ ಅವರ ಚಿತ್ರಗಳು ಟಿ.ವಿ.ಯಲ್ಲಿ ಬರುತ್ತಿದ್ದರೆ 100 ಬಾರಿ ನೋಡಿದ್ದರೂ ಮೊದಲ ಬಾರಿ ನೋಡುತ್ತಿದ್ದೇನೆ ಎಂಬ ಭಾವದೊಂದಿಗೇ ನೋಡುತ್ತೇನೆ. ಅವರ ದೊಡ್ಡ ಫ್ಯಾನ್‌ ನಾನೇ

ಮಂಜುಳಾ ನಮ್ಮ ಮನೆಯ ಮಗು ರೀತಿ ಇದ್ದಳು…
ಶ್ರೀನಾಥ್‌ ಜೊತೆ ರೊಮ್ಯಾಂಟಿಕ್‌ ಆಗಿ ನಟಿಸಿದ ನಾಯಕಿಯರೆಲ್ಲಾ ನನಗೆ ನೆಚ್ಚಿನ ಸ್ನೇಹಿತೆಯರು. ಯಾರ
ಬಗ್ಗೆಯೂ ನನಗೆ ಒಮ್ಮೆಯೂ ಅಸೂಯೆಯಾಗಿಲ್ಲ. ಅದರಲ್ಲೂ ಮಂಜುಳಾ ನಮ್ಮ ಮನೆ ಮಗುವಂತೆ ಇದ್ದಳು.
ಅವಳಿಗೆ ನಾನು-ಶ್ರೀನಾಥ್‌ ಸ್ವಂತ ಅಕ್ಕ, ಅಣ್ಣನೇ ಆಗಿದ್ದೆವು. ಈಗಲೂ ನಮ್ಮದು ದೊಡ್ಡ ಬಳಗ. ಚಿತ್ರರಂಗದ ಹಲವು ಹಿರಿಯ ನಟರು ನಮ್ಮ ಮನೆ ಸದಸ್ಯರಂತೆಯೇ ಇದ್ದಾರೆ. 

ಸತತ 3 ಗಂಟೆ ಡ್ಯಾನ್ಸ್‌ ಮಾಡಬಲ್ಲೆ!

ನಾನು ಶಾಲೆ-ಕಾಲೇಜಿನಲ್ಲಿ ಕ್ರೀಡಾಪಟು ಆಗಿದ್ದೆ. ಆಲ್‌ರೌಂಡರ್‌ ಅಂದರೂ ತಪ್ಪಿಲ್ಲ. ಹೈ ಜಂಪ್‌, ಲಾಂಗ್‌ ಜಂಪ್‌, ಬಾಸ್ಕೆಟ್‌ ಬಾಲ್‌ ಹೀಗೆ ಆಡದೇ ಇದ್ದ ಆಟವೇ ಇಲ್ಲ. ಜೊತೆಗೆ ಭರತನಾಟ್ಯ ನೃತ್ಯಗಾತಿ. 6ನೇ ವಯಸ್ಸಿಗೇ ಭರತನಾಟ್ಯ ಕಲಿಯಲು ಆರಂಭಿಸಿದ್ದೆ. ಮದುವೆಯಾದ ಮೇಲೆ ಡ್ಯಾನ್ಸ್‌ ಅಭ್ಯಾಸ ಸಾಕಷ್ಟು ಕಡಿಮೆಯಾಯಿತು. ಭರತನಾಟ್ಯ ಮಾಡುತ್ತಿದ್ದವರು, ಅದನ್ನು ಏಕಾಏಕಿ ನಿಲ್ಲಿಸಿದರೆ ಬೇಕಾಬಿಟ್ಟಿ ದಪ್ಪಗಾಗುತ್ತಾರೆ. ಆದರೆ ನಾನು ಯಾವತ್ತೂ ಹಾಗೆ ಆಗಲಿಲ್ಲ. ಕಾರಣ, ಮದುವೆಯಾದ ಬಳಿಕವೂ ಕ್ರೀಡೆಗಾಗಿಸಮಯ ಇರಿಸಿಕೊಂಡಿದ್ದೆ. ಇವತ್ತಿನ ವರೆಗೂ ನಾನು ಕ್ರೀಡೆ ಬಿಟ್ಟಿಲ್ಲ. ಕ್ಲಬ್‌ಗ ಹೋಗಿ ಶಟಲ್‌ ಆಡಿ ಬರುತ್ತೇನೆ. ಯೋಗ ಮಾಡುತ್ತೇನೆ. ನೃತ್ಯ
ಕೂಡ ಮಾಡುತ್ತಾ ದೇಹವನ್ನು ಫಿಟ್‌ ಆಗಿ ಇರಿಸಿಕೊಂಡಿದ್ದೇನೆ. ವಯಸ್ಸು 67 ಆದರೂ, ಈಗಲೂ ಸತತವಾಗಿ 3 ಗಂಟೆ ಡ್ಯಾನ್ಸ್‌ ಮಾಡುವ ಸಾಮರ್ಥ್ಯ ನನಗಿದೆ. ದೇಹಕ್ಕೆ ವಯಸ್ಸಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.

ನಾನು ಯಾವಾಗಲೂ ಸ್ಟೈಲ್‌ ಐಕಾನ್‌
ನಾನು ಶಾಲೆ, ಕಾಲೇಜಿನಲ್ಲಿದ್ದಾಗಲೇ ಮೈಕ್ರೊ, ಮಿನಿ ಸ್ಕರ್ಟ್ಸ್, ಲೆಗ್ಗಿಂಗ್ಸ್‌ ಧರಿಸುತ್ತಿದ್ದೆ. ಆಯಾಯ ಕಾಲಕ್ಕೆ ಬಂದ ಎಲ್ಲಾ ಫ್ಯಾಷನ್‌ ಟ್ರೆಂಡ್‌ಗಳನ್ನೂ ಪ್ರಯತ್ನಿಸಿದ್ದೇನೆ. ನಾನು ಎಲ್ಲಾ ಕಾಲಕ್ಕೂ ಅಪ್‌ ಡೇಟೆಡ್‌. ಈಗಲೂ ಅಷ್ಟೇ, ನಾನು ಪ್ರಯೋಗ ಮಾಡದ ಫ್ಯಾಷನ್‌ ಟ್ರೆಂಡ್‌ ಯಾವುದೂ ಇಲ್ಲ. ನನ್ನ ಸ್ಟೈಲನ್ನು ಈಗಲೂ ಕಾಪಿ ಮಾಡುವವರಿದ್ದಾರೆ. ಕೆಲವರು ಫ್ಯಾಷನ್‌ ಅಂತ ತಮಗೆ ಚಂದ ಕಾಣದ ಬಟ್ಟೆಗಳನ್ನೂ ಧರಿಸುತ್ತಾರೆ. ಅವರಿಗೆ ನಾನು ಹೇಳುವುದಿಷ್ಟೆ, ನಿಮಗೆ ಯಾವ ವಸ್ತ್ರ ಹೊಂದುತ್ತದೆಯೋ ಅದನ್ನೇ ಧರಿಸಿ ಅಂತ. ನನಗೆ
ಎಲ್ಲಾ ರೀತಿಯ ವಸ್ತ್ರಗಳೂ ಒಪ್ಪುತ್ತವೆ. ಸಂದರ್ಭಕ್ಕೆ ತಕ್ಕಂತೆ ಡ್ರೆಸ್‌ಗಳನ್ನು ಹಾಕುತ್ತೇನೆ. ಮಗಳು ಅಮೆರಿಕದಲ್ಲಿದ್ದಾಳೆ. ಅಲ್ಲಿಗೆ ಹೋದಾಗ ಪ್ಯಾಂಟ್‌ -ಟಾಪ್‌ ಹಾಕುತ್ತೇನೆ.

ನಾನೇ ನಮ್ಮನೆ ಕಾರ್‌ ಡ್ರೈವರ್  
ನಾನು ಡ್ರೈವಿಂಗ್‌ಅನ್ನು ತುಂಬಾ ಎಂಜಾಯ್‌ ಮಾಡುತ್ತೇನೆ. ತೀರಾ ಇತ್ತೀಚಿನವರೆಗೂ ನಾನೇ ನಮ್ಮನೆಯ ಮುಖ್ಯ ಡ್ರೈವರ್‌ ಆಗಿದ್ದೆ. ಕಾರಿನ ಬಾಗಿಲು ತೆಗೆಯುತ್ತಲೇ ಜೋರಾಗಿ ಹಾಡು ಹಾಕುತ್ತಿದ್ದೆ. ಎಲ್ಲರೂ ಕೇಳುತ್ತಿದ್ದರು, ಇಷ್ಟು ಜೋರಾಗಿ ಹಾಡು ಹಾಕಿಕೊಂಡು ಹೇಗೆ ಪಫೆìಕ್ಟ್ ಆಗಿ ಡ್ರೆçವ್‌ ಮಾಡ್ತೀಯ ಅಂತ. ಸಂಗೀತ ಇಲ್ಲದಿದ್ದರೆ ನನಗೆ ಡ್ರೈವ್‌ ಮಾಡಲು ಅಗಲ್ಲ ಅಂತ ಹೇಳ್ತಿದ್ದೆ. ಶೂಟಿಂಗ್‌ಗೆ ಹೋಗುವಾಗಲೆಲ್ಲ ನಾನೇ ಡ್ರೈವ್‌ ಮಾಡುತ್ತಿದ್ದದ್ದು. ಶ್ರೀನಾಥ್‌ ಪಕ್ಕದಲ್ಲಿ ಕುಳಿತಿರುತ್ತಿದ್ದರು. ಇಲ್ಲವೇ ಹಿಂದಿನ ಸೀಟಿನಲ್ಲಿ ಮಲಗಿರುತ್ತಿದ್ದರು. ಬರಿ ಶೂಟಿಂಗ್‌ ಮಾತ್ರ ಅಲ್ಲ, ಸುತ್ತಾಡಲು ಹೋಗುವಾಗಲೂ ಶ್ರೀನಾಥ್‌, ನೀನೇ ಡ್ರೈವ್‌ ಮಾಡು ಅಂತ ಹೇಳ್ತಾ ಇದ್ದರು.

ಚೇತನ ಜೆ.ಕೆ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.