Udayavni Special

ಕೊಡೆ ಮೇಲೆ “ಕೇಸ್‌’ ಹಾಕಿಬಿಡಿ!

ಈಗ ಕೊಡೆಗೂ ಸಿಕ್ಕಿದೆ ಗೂಡು...

Team Udayavani, Jul 3, 2019, 5:00 AM IST

5

ಕ್ಯಾಪ್ಸೂಲ್‌ ಗೊತ್ತಲ್ವಾ? ಈ ಮಳೆಗಾಲದಲ್ಲಿ ನೀವೆಲ್ಲರೂ ಮರೆಯದೇ ಒಂದೊಂದು ಕ್ಯಾಪ್ಸೂಲ್‌ ಖರೀದಿಸಿ. ಹಾಂ, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ತೆಗೆದುಕೊಳ್ಳುವ ಕ್ಯಾಪ್ಸೂಲ್‌ ಅಲ್ಲ ಇದು. ಮಳೆಯಲ್ಲಿ ಒದ್ದೆಯಾದ ನಿಮ್ಮ ಛತ್ರಿಯನ್ನು ಜೋಪಾನವಾಗಿ ಇರಿಸುವ ಕ್ಯಾಪ್ಸೂಲ್‌. ಅಂದರೆ, ಛತ್ರಿಯನ್ನು ಇಡಲು ಕ್ಯಾಪ್ಸೂಲ್‌ ಕೇಸ್‌ ಅಂಬ್ರೆಲಾ ಪಾಕೆಟ್‌ …

ಇದು ಮಳೆಗಾಲ. ಆದರೆ, ಮಳೆ ಬರೋದು ಆಗೊಮ್ಮೆ ಈಗೊಮ್ಮೆ ಮಾತ್ರ. ಹಾಗಂತ ಛತ್ರಿ, ರೇನ್‌ಕೋಟ್‌ ಇಲ್ಲದೆ ಮನೆಯಿಂದ ಹೊರಡುವ ಹಾಗಿಲ್ಲ. ಬೆಳಗ್ಗೆ ಇದ್ದ ಬಿಸಿಲನ್ನು ಮರೆಸಿ ಬಿಡುವಂತೆ ಸಂಜೆ ಮಳೆ ಸುರಿಯಬಹುದು. ಹಾಗಾಗಿ ಛತ್ರಿಯನ್ನು ಜೊತೆಯಲ್ಲಿಯೇ ಒಯ್ಯುವುದು ಜಾಣತನ.

ಛತ್ರಿಯಲ್ಲೂ ಫ್ಯಾಷನ್‌
ಮೊದಲೆಲ್ಲ ಛತ್ರಿ ಎಂದ ಕೂಡಲೇ ಕಣ್ಮುಂದೆ ಬರುತ್ತಿದ್ದುದು, ಕಪ್ಪು ಬಣ್ಣದ, ಮಾರುದ್ದದ ಕೊಡೆಗಳು. ಚೀಲದಲ್ಲಿ ಇಡಲಾಗದ ಉದ್ದದ ಕೊಡೆಗಳನ್ನು, ಕೈಯಲ್ಲೇ ಹಿಡಿದುಕೊಳ್ಳಬೇಕಿತ್ತು. ಆದರೆ ಕಪ್ಪು ಬಣ್ಣದ ಅಂಥ ಛತ್ರಿಗಳನ್ನು ಬಣ್ಣ-ಬಣ್ಣದ ಕೊಡೆಗಳು ಯಾವಾಗಲೋ ರಿಪ್ಲೇಸ್‌ ಮಾಡಿಬಿಟ್ಟಿವೆ. ಅದರಲ್ಲೂ ಫ್ಯಾಷನ್‌ ಪ್ರಿಯರು, ಬೋರಿಂಗ್‌ ಬ್ಲಾಕ್‌ ಬದಲಿಗೆ ಬಣ್ಣದ ಛತ್ರಿಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಕಾಮನಬಿಲ್ಲಿನ ಬಣ್ಣದ ಛತ್ರಿಗಳು, ಪಾರದರ್ಶಕ ಛತ್ರಿಗಳು, ಲೇಸ್‌ವರ್ಕ್‌ ಉಳ್ಳ ಕೊಡೆಗಳು, ನ್ಯೂಸ್‌ ಪೇಪರ್‌ (ದಿನ ಪತ್ರಿಕೆ) ಪ್ರಿಂಟ್‌ ಇರುವ ಛತ್ರಿಗಳು, ಎಲ್‌.ಇ. ಡಿ ಲೈಟ್‌ಗಳಿರುವ ಛತ್ರಿಗಳು…ಹೀಗೆ ಅನೇಕ ಪ್ರಕಾರದ ಛತ್ರಿಗಳು ಮಾರುಕಟ್ಟೆಯಲ್ಲಿವೆ.

ಚಿತ್ತಾರದ ಛತ್ರಿಗಳು
ಬೇಡಿಕೆ ಹೆಚ್ಚಾದಂತೆ ಛತ್ರಿಗಳ ಮೇಲೆ ಕ್ರಿಯಾಶೀಲತೆಯ ಪ್ರಯೋಗಗಳೂ ನಡೆದವು. ಪಾರದರ್ಶಕ ಛತ್ರಿಗಳ ಕೆಳಬದಿ, ಲೇಸ್‌ವರ್ಕ್‌, ಬಣ್ಣ ಬಣ್ಣದ ಬಟ್ಟೆ, ಉಣ್ಣೆ, ವೆಲ್ವೆಟ್‌ (ಮಖಲ…), ಮಸ್ಲಿನ್‌ ಬಟ್ಟೆ (ತೆಳು ಹತ್ತಿಬಟ್ಟೆ), ಕ್ರೋಶ (ಕೊಕ್ಕೆ ಸೂಜಿಯಿಂದ ಮಾಡಿದ ದಾರದ ಹೆಣಿಗೆ ಕೆಲಸ) ಹಾಗೂ ಸ್ಯಾಟಿನ್‌ ಬಟ್ಟೆ ಉಳ್ಳ ಪಾರದರ್ಶಕ ಛತ್ರಿಗಳೂ ಸಿಗುತ್ತವೆ. ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ಕೆಳಗಿರುವ ಬಟ್ಟೆ ಒದ್ದೆ ಆಗುವುದಿಲ್ಲ. ಹೂವು, ಹಕ್ಕಿ, ಎಲೆ, ಪೋಲ್ಕಾ ಡಾಟ್ಸ್‌, ಚಿಟ್ಟೆ, ತಾರೆ, ಹೃದಯಾಕಾರ, ಕ್ಯಾಂಡಿ, ನೀರಿನ ಗುಳ್ಳೆ, ಮೀನು, ಪುಗ್ಗ, ಮಿಂಚು, ಮೋಡ, ರಾಕೆಟ್‌, ಚಂದ್ರ, ಸೂರ್ಯ, ನಾಯಿ – ಬೆಕ್ಕಿನ ಹೆಜ್ಜೆ ಗುರುತುಗಳ ಚಿತ್ರಗಳು ಪಾರದರ್ಶಕ ಛತ್ರಿಗಳ ಮೇಲೆ ಈಗಾಗಲೇ ಮೂಡಿಬಂದಿವೆ. 3 ಫೋಲ್ಡ… ಅಥವಾ 4 ಫೋಲ್ಡ… ಛತ್ರಿಗಳಲ್ಲೂ ಪಾರದರ್ಶಕ ಛತ್ರಿಗಳು ಇವೆ!

ಕೊಡೆಗೊಂದು ಗೂಡು
ಒದ್ದೆಯಾದ ಈ ಛತ್ರಿಗಳನ್ನು ಮತ್ತೆ ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ದೊಡ್ಡ ತಲೆನೋವು. ಅದರಿಂದ ಬ್ಯಾಗ್‌ ಕೂಡಾ ಒದ್ದೆಯಾಗುತ್ತದೆ. ಆದರೆ, ಇನ್ಮುಂದೆ ಆ ತೊಂದರೆ ಅನುಭವಿಸಬೇಕಿಲ್ಲ. ಚಿಕ್ಕ ಛತ್ರಿಗಳನ್ನಿಡಲು, ಕೇಸ್‌ಗಳು ಸಿಕ್ಕುತ್ತಿವೆ. ಕನ್ನಡಕ, ಲೆನ್ಸ್‌ಗಳನ್ನು ಇಡಲು ಕೇಸ್‌ಗಳು ಇರುವಂತೆ ಛತ್ರಿಗಳಿಗೂ ಕೇಸ್‌ಗಳಿವೆ. ನೋಡಲು ಕ್ಯಾಪ್ಸೂಲ್‌ನಂತಿರುವ ಈ ಗೂಡಿನೊಳಗೆ ಒದ್ದೆ ಕೊಡೆಯನ್ನು ಇಟ್ಟು, ಚಿಂತೆ ಇಲ್ಲದೆ ಬ್ಯಾಗಿನಲ್ಲಿಡಬಹುದು. ಈ ಮಳೆಗಾಲದಲ್ಲಿ ಟ್ರೆಂಡಿಂಗ್‌ನಲ್ಲಿದೆ ಈ ಕ್ಯಾಪ್ಸೂಲ್‌ ಕೇಸ್‌ ಪಾಕೆಟ್‌ ಅಂಬ್ರೆಲಾ, ಅಂದರೆ 3 ಫೋಲ್ಡ… ಅಥವಾ 4 ಫೋಲ್ಡ… ಛತ್ರಿಗಳ ಗೂಡು! ಇವು ಬಹುತೇಕ ಎಲ್ಲಾ ಕೊಡೆ ಅಂಗಡಿಯಲ್ಲಿ ಮತ್ತು ಆನ್‌ಲೈನ್‌ ತಾಣಗಳಲ್ಲಿ ದೊರಕುತ್ತವೆ.

ಬಹುಬಗೆ ವಿನ್ಯಾಸ
ಕ್ಯಾಪ್ಸೂಲ್‌ ಕೇಸ್‌ಗಳು ಕೇವಲ ಅದೊಂದು ವಿನ್ಯಾಸದಲ್ಲಷ್ಟೇ ಅಲ್ಲ, ಬಾಳೆ ಹಣ್ಣು, ಸೌತೆಕಾಯಿ, ಶೂ, ಬಿದಿರಿನ ತುಂಡು, ಮಿನಿಯನ್‌ ಗೊಂಬೆ, ಪರ್ಫ್ಯೂಮ್‌ ಬಾಟಲ್‌, ಕನ್ನಡಕದ ಬಾಕ್ಸ್‌ ಮುಂತಾದ ವಿನ್ಯಾಸಗಳಲ್ಲೂ ಲಭ್ಯ. ಇದೆಲ್ಲಾ ಓದಿ ಮುಗೀತಿದ್ದಂತೆಯೇ, ಒಂದು ಕ್ಯಾಪ್ಸೂಲ್‌ ಕೇಸ್‌ ತಗೋಬೇಕು ಅಂತ ನಿರ್ಧಾರ ಮಾಡಿದ್ದೀರಾ? ಹಾಗಾದ್ರೆ, ಮಳೆ ನಿಂತು ಹೋದ ಮೇಲೆ…ಕೊಡೆಗೊಂದು ಗೂಡು ರೆಡಿ ಇರುತ್ತೆ ಅಲ್ವಾ?

ಟಿಪ್‌ ಟಿಪ್‌ ಮಳೆಗೆ ಟಿಪ್ಸ್‌
1. ಹೆಚ್ಚು ಚಿತ್ತಾರಗಳಿರುವ, ಬಣ್ಣಬಣ್ಣದ ಛತ್ರಿಗಳು ಎಲ್ಲ ದಿರಿಸಿಗೂ ಒಪ್ಪುವುದಿಲ್ಲ.
2. ನ್ಯೂಟ್ರಲ್‌ ಕಲರ್‌ನ ಛತ್ರಿಗಳು ಬಹುತೇಕ ಎಲ್ಲ ಬಣ್ಣದ ಬಟ್ಟೆಗಳಿಗೂ ಮ್ಯಾಚ್‌ ಆಗುತ್ತವೆ. ಅಂದರೆ, ನಿಮ್ಮ ಛತ್ರಿ ಬೂದು, ಕಂದು, ಕಪ್ಪು, ಬಿಳಿ, ಗಾಢ ನೀಲಿ ಬಣ್ಣದಲ್ಲಿರಲಿ.
3. ನಿಮ್ಮ ಡ್ರೆಸ್‌ನ ಬಣ್ಣ ಮತ್ತು ಚಿತ್ತಾರವುಳ್ಳ ಛತ್ರಿಯನ್ನು ಖರೀದಿಸಿ, ಬಟ್ಟೆ-ಛತ್ರಿಯನ್ನು ಅವಳಿಗಳಂತೆ ಮ್ಯಾಚ್‌ ಮಾಡಬಹುದು
4. 3-4 ಫೋಲ್ಡ್‌ನ ಛತ್ರಿಗಳನ್ನು ಹಿಡಿದುಕೊಳ್ಳಲು, ಬ್ಯಾಗ್‌ನಲ್ಲಿಡಲು ಸುಲಭ
5. ಹೂವು, ಗೊಂಬೆ, ಪೋಲ್ಕಾ ಡಾಟ್ಸ್‌ನಂಥ ಚಿತ್ತಾರಗಳು ಮಕ್ಕಳಿಗೆ ಹೆಚ್ಚು ಸೂಕ್ತ. ಹಾಗಾಗಿ, ಅಡ್ಡ, ಉದ್ದ ಪಟ್ಟೆಗಳ ಅಥವಾ ಪಾರದರ್ಶಕ ಛತ್ರಿಗಳು ಪ್ರೌಢರಿಗೆ ಹೊಂದುತ್ತದೆ.

– ಅದಿತಿಮಾನಸ ಟಿ.ಎಸ್‌.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಕೋವಿಡ್ ಓಡಿಸಲು ಸಿಎಂ ನವಸೂತ್ರ

ಕೋವಿಡ್ ಓಡಿಸಲು ಸಿಎಂ ನವಸೂತ್ರ

iplIPL 2020 : ಆರ್‌ಸಿಬಿ – ಮುಂಬೈ ಕಾದಾಟ : ಮುಂಬೈಗೆ 5 ವಿಕೆಟ್ ಗಳ ಜಯ

IPL 2020 : ಎಡವಿದ ಆರ್‌ಸಿಬಿ; ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಮುಂಬೈ

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

avalu-tdy-4

ಕೊರಗುವುದೇ ಬದುಕಾಗಬಾರದು…

ಕಹಿಯೇ ಜೀವನ ಲೆಕ್ಕಾಚಾರ!

ಕಹಿಯೇ ಜೀವನ ಲೆಕ್ಕಾಚಾರ!

avalu-tdy-2

ಕರೆಂಟ್‌ ಇಲ್ಲದಿದ್ದರೆ..

avalu-tdy-1

ಗೃಹಿಣಿಯೇ ಸಾಧಕಿ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಬಂಟ್ವಾಳ ತಾಲೂಕಿನಲ್ಲಿ ಗುರಿ ಮೀರಿ ಸಾಧನೆ; ಶೇ. 100.05 ಪ್ರಗತಿ

ಬಂಟ್ವಾಳ ತಾಲೂಕಿನಲ್ಲಿ ಗುರಿ ಮೀರಿ ಸಾಧನೆ; ಶೇ. 100.05 ಪ್ರಗತಿ

ಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

ಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

“ವಿವಾದಕ್ಕೆ ಕೊಲೆ ಪರಿಹಾರವಲ್ಲ’

“ವಿವಾದಕ್ಕೆ ಕೊಲೆ ಪರಿಹಾರವಲ್ಲ’

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.