Udayavni Special

ಫ‌ಟಾಫ‌ಟ್‌ ಚಾಟ್‌


Team Udayavani, Aug 7, 2019, 5:56 AM IST

s-9

ಇದು ಮಳೆಗಾಲ. ಸದಾ ಏನಾದರೂ ತಿನ್ನುತ್ತಾ ಇರೋಣ ಅನ್ನಿಸುವ ಕಾಲ. ಮನೆಯಲ್ಲಿ ಮಕ್ಕಳಿದ್ದರಂತೂ, “ಅಮ್ಮಾ, ಚಾಟ್ಸ್‌ ಕೊಡಿಸು’ ಅಂತ ದುಂಬಾಲು ಬೀಳುತ್ತವೆ. ಮಕ್ಕಳಿಗೆ, ಮನೆ ತಿಂಡಿಗಿಂತ ಬೀದಿ ಬದಿಯ ತಿಂಡಿ ಮೇಲೇ ಚಪಲ ಜಾಸ್ತಿ. ಹಾಗಂತ, ದಿನಾ ಹೊರಗಡೆ ತಿಂದರೆ ಆರೋಗ್ಯ ಕೆಡುವ ಭಯ. ಜೊತೆಗೆ, ಆ ತಿನಿಸುಗಳ ಬೆಲೆಯೂ ದುಬಾರಿ. ಇಂಥ ಸಂದರ್ಭಗಳಲ್ಲಿ ಇರುವ ದಾರಿಯೊಂದೇ- ಹೊರಗಡೆ ಸಿಗುವ ತಿಂಡಿಯನ್ನೇ, ಮನೆಯಲ್ಲಿ ತಯಾರಿಸುವುದು. ಸುಲಭವಾಗಿ ತಯಾರಿಸಬಲ್ಲ ಕೆಲವು ಚಾಟ್ಸ್‌ಗಳ ರೆಸಿಪಿ ಇಲ್ಲಿದೆ.

1. ಬ್ರೆಡ್‌ ಬೋಂಡಾ
ಬೇಕಾಗುವ ಸಾಮಗ್ರಿ: ಬ್ರೆಡ್‌ 6 ತುಂಡು, ಕಡಲೆ ಹಿಟ್ಟು- 1ಬಟ್ಟಲು,ಬೆಳ್ಳುಳ್ಳಿ- 2 ಗೆಡ್ಡೆ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಹಸಿಮೆಣಸಿನ ಕಾಯಿ-2, ಎಣ್ಣೆ- ಕರಿಯಲು.
ಮಾಡುವ ವಿಧಾನ: ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸನ್ನು ಒಟ್ಟಿಗೆ ರುಬ್ಬಿ. ಒಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ರುಬ್ಬಿದ ಮಿಶ್ರಣ, ಉಪ್ಪು, ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣವು ಬೋಂಡಾ ಹಿಟ್ಟಿನ ಹದಕ್ಕೆ ಬರಲಿ. ನಂತರ ಬ್ರೆಡ್‌ ಸ್ಲೆ„ಸ್‌ ಅನ್ನು ಚೌಕಾಕಾರದಲ್ಲಿ ಕತ್ತರಿಸಿ, ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ.

2. ಪನೀರ್‌ ಬ್ರೆಡ್‌ ರೋಲ್‌
ಬೇಕಾಗುವ ಸಾಮಗ್ರಿ: ತುರಿದ ಪನೀರ್‌, ಕ್ಯಾರೆಟ್‌ ತುರಿ, ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ- ತಲಾ ಒಂದು ಬಟ್ಟಲು, ಸಣ್ಣಗೆ ಹೆಚ್ಚಿದ ಮಶ್ರೂಮ್‌ ಸ್ವಲ್ಪ, ಕರಿಮೆಣಸು ಪುಡಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಬ್ರೆಡ್‌ ಸ್ಲೆ„ಸ್‌-6, ಎಣ್ಣೆ ಕರಿಯಲು.

ಮಾಡುವ ವಿಧಾನ: ಹೆಚ್ಚಿದ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಯಲ್ಲಿ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉಂಡೆ ಮಾಡಿಕೊಳ್ಳಿ. ಬ್ರೆಡ್‌ ತುಂಡಿಗೆ ಸ್ವಲ್ಪ ನೀರು ಚಿಮುಕಿಸಿ, ಉಂಡೆಯನ್ನು ಮಧ್ಯದಲ್ಲಿಟ್ಟು ಎಣ್ಣೆಯಲ್ಲಿ ಕರಿಯಿರಿ.

3. ಪಾನಿಪೂರಿ
ಬೇಕಾಗುವ ಸಾಮಗ್ರಿ: ತಯಾರಿಸಿಕೊಂಡ ಪೂರಿ, ಆಲೂಗಡ್ಡೆ, ಹೆಸರುಕಾಳು, ಈರುಳ್ಳಿ.
ಸಿಹಿ ಪಾನಿಗೆ ಬೇಕಾದ ಸಾಮಗ್ರಿ: ಬೆಲ್ಲ- ದೊಡ್ಡ ಉಂಡೆ, ಹುಣಸೆ ಹುಳಿ, ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, ಅಚ್ಚ ಖಾರದ ಪುಡಿ, ಸೈಂಧವ ಲವಣ. ಖಾರದ ಪಾನಿಗೆ ಬೇಕಾದ ಸಾಮಗ್ರಿ: ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸು, ಶುಂಠಿ, ಹುಣಸೆ ಹಣ್ಣು, ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, ಸೈಂಧವ ಲವಣ, ಉಪ್ಪು ಹಾಗೂ ನೀರು.

ಮಾಡುವ ವಿಧಾನ: ಮೊದಲು, ಖಾರದ ಪಾನಿಗೆ ಬೇಕಾದ ಸಾಮಗ್ರಿಗಳನ್ನೆಲ್ಲ ಒಟ್ಟಿಗೆ ರುಬ್ಬಿ, ಬೇಕಾಗುವಷ್ಟು ನೀರು, ಉಪ್ಪು ಹಾಕಿ. ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ, ಅದಕ್ಕೆ ಕುಟ್ಟಿ ಪುಡಿ ಮಾಡಿದ ಬೆಲ್ಲ ಹಾಕಿ ಕುದಿಸಿ. ನೀರಿನಲ್ಲಿ ನೆನೆಸಿ ರಸ ತೆಗೆದ ಹುಣಸೆ ಹಣ್ಣನ್ನು ಕುದಿಸಿದ ಬೆಲ್ಲದ ನೀರಿಗೆ ಹಾಕಿ. ಅಚ್ಚ ಖಾರದ ಪುಡಿ, ಸೈಂಧವ ಲವಣ, ಜೀರಿಗೆ ಪುಡಿ ಸೇರಿಸಿ, ಚೆನ್ನಾಗಿ ಕುದಿಸಿ, ಆರಿಸಿ.

ಆಲೂಗಡ್ಡೆ ಮತ್ತು ಹೆಸರುಕಾಳನ್ನು ಬೇಯಿಸಿ. ಈರುಳ್ಳಿ ಸಣ್ಣಗೆ ಕತ್ತರಿಸಿ. ಪೂರಿಯ ತುದಿ ಮಾತ್ರ ಕತ್ತರಿಸಿ, ಸ್ವಲ್ಪ ಪುಡಿ ಮಾಡಿದ ಆಲೂ ಗಡ್ಡೆ, ಹೆಸರು ಕಾಳು ಹಾಗೂ ಈರುಳ್ಳಿ ಹಾಕಿ, ಸಿಹಿ-ಖಾರದ ಪಾನಿ ಹಾಕಿ, ತಿನ್ನಲು ಕೊಡಿ.

4. ಮಂಡಕ್ಕಿ ಚಾಟ್‌
ಬೇಕಾಗುವ ಸಾಮಗ್ರಿ: ಮಂಡಕ್ಕಿ – 3 ಬಟ್ಟಲು, ಕಡಲೆ ಬೀಜ, ಅಚ್ಚ ಖಾರದ ಪುಡಿ- 1 ಚಮಚ, ಕರಿಬೇವು, ಸಾಸಿವೆ, ಎಣ್ಣೆ,
ಸಣ್ಣಗೆ ಹೆಚ್ಚಿದ ಈರುಳಿ, ಆಮ್‌ ಚೂರ್‌ ಪುಡಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್‌ ತುರಿ, ಲಿಂಬೆಹಣ್ಣಿನ ರಸ.

ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೆ ಬೀಜವನ್ನು ಹುರಿಯಿರಿ. ಕಡಲೆ ಬೀಜ ತೆಗೆದು, ಅದೇ ಎಣ್ಣೆಗೆ ಸಾಸಿವೆ, ಕರಿಬೇವು, ಅಚ್ಚ ಖಾರದ ಪುಡಿ ಹಾಗೂ ಮಂಡಕ್ಕಿ ಹಾಕಿ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಆಮ್‌ ಚೂರ್‌ ಪುಡಿ, ಲಿಂಬೆ ರಸ ಮಿಶ್ರಣ ಮಾಡಿ, ತಕ್ಷಣ ತಿನ್ನಲು ಕೊಡಿ. ಹುರಿದ ಮಂಡಕ್ಕಿ ಮಿಶ್ರಣವನ್ನು ಮೊದಲೇ ಮಾಡಿ ಡಬ್ಬಿ ಯಲ್ಲಿ ಹಾಕಿಡಬಹುದು.

5. ಅಮೆರಿಕನ್‌ ಸ್ವೀಟ್‌ ಕಾರ್ನ್ ಚಾಟ್‌
ಬೇಕಾಗುವ ಸಾಮಗ್ರಿ: ಬೇಯಿಸಿದ ಅಮೆರಿಕನ್‌ ಸ್ವೀಟ್‌ ಕಾರ್ನ್- ಒಂದು ಬಟ್ಟಲು, ಅಚ್ಚ ಖಾರದ ಪುಡಿ, ಚಾಟ್‌ ಮಸಾಲ ಸ್ವಲ್ಪ,
ಉಪ್ಪು ರುಚಿಗೆ ತಕ್ಕಷ್ಟು, ಕ್ಯಾರೆಟ್‌ ತುರಿ- ಅರ್ಧ ಕಪ್‌, ಬೆಣ್ಣೆ ಸ್ವಲ್ಪ, ಲಿಂಬೆ ರಸ ಸ್ವಲ್ಪ.

ಮಾಡುವ ವಿಧಾನ: ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ಪೋಷಕಾಂಶಯುಕ್ತ ಚಾಟ್‌ ರೆಡಿ.

ಸಹನಾ ಎಸ್‌. ಭಟ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

haveri

ಹಾವೇರಿ: ಇಂದು 45 ಜನರಿಗೆ ಕೋವಿಡ್ ಪಾಸಿಟಿವ್; 50 ಮಂದಿ ಗುಣಮುಖ

DAVANAGERE

ದಾವಣಗೆರೆಯಲ್ಲಿ ಇಂದು 94 ಜನರಿಗೆ ಸೊಂಕು ದೃಢ: ಓರ್ವ ಸಾವು

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

sudhakar

ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್

devara-gundi

ದೇವರಗುಂಡಿ ಜಲಪಾತದ ಬಳಿ ಅಶ್ಲೀಲ ಪೋಟೋಶೂಟ್: ನಟಿ ಬೃಂದಾ ಅರಸ್ ಕ್ಷಮೆಯಾಚನೆ !

cham-covid19

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಇಳಿಮುಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

avalu-tdy-4

ಕೊರಗುವುದೇ ಬದುಕಾಗಬಾರದು…

ಕಹಿಯೇ ಜೀವನ ಲೆಕ್ಕಾಚಾರ!

ಕಹಿಯೇ ಜೀವನ ಲೆಕ್ಕಾಚಾರ!

avalu-tdy-2

ಕರೆಂಟ್‌ ಇಲ್ಲದಿದ್ದರೆ..

avalu-tdy-1

ಗೃಹಿಣಿಯೇ ಸಾಧಕಿ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

haveri

ಹಾವೇರಿ: ಇಂದು 45 ಜನರಿಗೆ ಕೋವಿಡ್ ಪಾಸಿಟಿವ್; 50 ಮಂದಿ ಗುಣಮುಖ

DAVANAGERE

ದಾವಣಗೆರೆಯಲ್ಲಿ ಇಂದು 94 ಜನರಿಗೆ ಸೊಂಕು ದೃಢ: ಓರ್ವ ಸಾವು

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

sudhakar

ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.