ಇವರೇ “ರಿಯಲ್‌ ಹೀರೋ’!

Team Udayavani, Dec 11, 2019, 5:23 AM IST

ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ ಹಿಂದೆ ಕುಳಿತವನು ಮೈ ಮುಟ್ಟಿದರೆ… ಹೀಗೆ ಭಯದಲ್ಲಿಯೇ ಆಕೆ ಪ್ರಯಾಣ ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ, ಕತ್ತಲ ರಾತ್ರಿಯಲ್ಲಿ “ಹೆದರಬೇಡ ಮಗಳೇ’ ಎಂದು ಭದ್ರತೆ ಮೂಡಿಸುವವರೂ ಇದ್ದಾರೆ ಅಂತ ಹೇಳಿದರೆ ಅಚ್ಚರಿಯಾಗುತ್ತದೆ. ಅಂಥ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.

ಎಲ್ಸಿನಾ ಎಂಬ ಯುವತಿ (ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ವಿದ್ಯಾರ್ಥಿನಿ) ಎರ್ನಾಕುಲಂ- ಮಧುರೈ ಬಸ್‌ನಲ್ಲಿ ಪೋಡಿಯಟ್ಟಂ ಎಂಬಲ್ಲಿಗೆ ಹೊರಟಿದ್ದಳು. ಆಕೆ ಕಂಜರಪಲ್ಲಿ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಬಸ್ಸು ಅಲ್ಲಿಗೆ ಹತ್ತು ನಿಮಿಷ ಮುಂಚಿತವಾಗೇ ತಲುಪಿತು. ಎಲ್ಸಿನಾಳನ್ನು ಕರೆದೊಯ್ಯಲು ಬರಬೇಕಾದವರು, ಇನ್ನೂ ಬಂದಿರಲಿಲ್ಲ. ಆಗ ಸಮಯ ರಾತ್ರಿ 11 ಗಂಟೆ. ನಿಲ್ದಾಣ ನಿರ್ಜನವಾಗಿತ್ತು. ಬಂದ್‌ನ ಕಾರಣದಿಂದ ಎಲ್ಲ ಅಂಗಡಿಗಳ ಬಾಗಿಲುಗಳು ಮುಚ್ಚಿದ್ದವು. ಬಸ್‌ ನಿರ್ವಾಹಕ ಪಿ. ಶಜುದ್ದೀನ್‌ಗೆ, ಆಕೆಯೊಬ್ಬಳನ್ನೇ ಅಲ್ಲಿ ಇಳಿಸಿ ಹೋಗುವುದು ಸರಿಯಲ್ಲ ಅನ್ನಿಸಿತು. ತಕ್ಷಣ, ಚಾಲಕ ಡೆನ್ನಿಸ್‌ ಕ್ಸೇವಿಯರ್‌ಗೆ ವಿಷಯ ತಿಳಿಸಿ, ಬಸ್‌ ನಿಲ್ಲಿಸಲು ಹೇಳಿದರು. ಆಕೆಯ ಸಂಬಂಧಿಕರು ಬರುವವರೆಗೂ ಬಸ್‌ ನಿಲ್ಲಿಸುತ್ತೇವೆ ಅಂತ ಡೆನಿಸ್‌ ಹೇಳಿದಾಗ, ಪ್ರಯಾಣಿಕರ್ಯಾರೂ ತಕರಾರು ಎತ್ತಲಿಲ್ಲ. ಹದಿನೈದು ನಿಮಿಷಗಳ ನಂತರ ಎಲ್ಸಿನಾಳ ಸಂಬಂಧಿ ಬಂದರು. ಅಲ್ಲಿಯವರೆಗೂ ಆಕೆಗೆ ಕಾವಲಾಗಿ ಇಡೀ ಬಸ್ಸು ನಿಂತಿತ್ತು. ಕೇರಳ ಬಸ್‌ ಸಾರಿಗೆ ಸಿಬ್ಬಂದಿಯ ಈ ನಡೆ ಎಲ್ಲರಿಗೂ ಮಾದರಿಯಾಗಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...

  • ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ...

  • ಗಣಿತ ಶಿಕ್ಷಕಿ ಮೇಧಾ, ರಾಗಬದ್ಧವಾಗಿ ಗಣಪತಿಯ ಭಜನೆಯಲ್ಲಿ ತನ್ಮಯರಾಗಿದ್ದರೆ, ಅವರ ಮುಂದೆ ಬಿಳಿಯ ಕ್ಯಾನ್ವಾಸ್‌ ಮೇಲೆ ಕಪ್ಪು ಶಾಯಿಯ ಜೆಲ್‌ ಪೆನ್‌ ಹಿಡಿದು ಸರಸರನೆ...

  • ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ. ಆದರೆ, ಹನಿಮೂನ್‌/ ಮಧುಚಂದ್ರ ಮಾತ್ರ ಇಂಥದ್ದೇ ಸ್ಥಳ, ದೇಶದಲ್ಲಿ ನಡೆಯಬೇಕು ಅಂತ ಇಂದಿನ ಜೋಡಿಗಳು ಬಯಸುತ್ತವೆ. ಮಧುಚಂದ್ರದ...

ಹೊಸ ಸೇರ್ಪಡೆ