ಸೇಮ್‌ ಪಿಂಚ್‌: ಮ್ಯಾಚಿಂಗ್‌ ಡ್ರೆಸ್ಸಲ್ಲಿ ಅಮ್ಮ- ಮಗಳ ಮಿಂಚು


Team Udayavani, Apr 25, 2018, 7:30 AM IST

10.jpg

ಔಟಿಂಗ್‌, ಪಾರ್ಟಿ, ಸಾಂಪ್ರದಾಯಿಕ ಸಮಾರಂಭ… ಹೀಗೆ ಎಲ್ಲ ಕಡೆಯೂ ಅಮ್ಮ-ಮಗಳು “ಸೇಮ್‌ ಪಿಂಚ್‌’ ಡ್ರೆಸ್‌ ಧರಿಸಿ ಮಿಂಚಬಹುದು. ಇಬ್ಬರ ನಡುವಿನ ದೊಡ್ಡ ವಯಸ್ಸಿನ ಅಂತರವನ್ನು ಮರೆಸಿ, ಯಾವ್ಯಾವ ರೀತಿಯ ಡ್ರೆಸ್‌ಗಳನ್ನು ಅಮ್ಮ-ಮಗಳು ಮ್ಯಾಚ್‌ ಮಾಡಬಹುದು ಗೊತ್ತಾ?

ನೂಲಿನಂತೆ ಸೀರೆ, ತಾಯಿಯಂತೆ ಮಗಳು ಅನ್ನೋ ಮಾತಿದೆ. ಹೆಣ್ಮಕ್ಕಳು ಅಮ್ಮನ ಪ್ರತಿ ನಡೆಯನ್ನೂ ಅನುಸರಿಸುತ್ತಾರೆ. ದುಪಟ್ಟಾವನ್ನು ಸೀರೆಯಂತೆ ಸುತ್ತಿಕೊಂಡು, ಅಮ್ಮನಂತೆ ದೊಡ್ಡ ಬಿಂದಿ ಇಟ್ಟು ಕನ್ನಡಿ ಮುಂದೆ ನಾಚಿಕೊಳ್ಳುತ್ತಾರೆ. ಈ ಅನುಕರಣೆಯೇ ಈಗ ಫ್ಯಾಷನ್‌ ಲೋಕದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದೆ. ತಾಯಿ- ಮಗಳಿಬ್ಬರೂ ಒಂದೇ ರೀತಿಯ ಡ್ರೆಸ್‌ ಧರಿಸುವುದೇ ಆ ಟ್ರೆಂಡ್‌. ಔಟಿಂಗ್‌, ಪಾರ್ಟಿ, ಸಾಂಪ್ರದಾಯಿಕ ಸಮಾರಂಭ… ಹೀಗೆ ಎಲ್ಲ ಕಡೆಯೂ ಅಮ್ಮ-ಮಗಳು “ಸೇಮ್‌ ಪಿಂಚ್‌’ ಡ್ರೆಸ್‌ ಧರಿಸಿ ಮಿಂಚಬಹುದು. ಇಬ್ಬರ ನಡುವಿನ ದೊಡ್ಡ ವಯಸ್ಸಿನ ಅಂತರವನ್ನು ಮರೆಸಿ, ಯಾವ್ಯಾವ ರೀತಿಯ ಡ್ರೆಸ್‌ಗಳನ್ನು ಅಮ್ಮ-ಮಗಳು ಮ್ಯಾಚ್‌ ಮಾಡಬಹುದು ಗೊತ್ತಾ?

1. ಸ್ಟ್ರೈಪ್‌ ಡ್ರೆಸಸ್‌
ಕಪ್ಪು- ಬಿಳಿ ಅಥವಾ ಬಣ್ಣಬಣ್ಣದ ಸ್ಟ್ರೈಪ್ಸ್‌ ಇರುವ ಶಾರ್ಟ್‌ ಡ್ರೆಸ್‌ಗಳು, ಟಾಪ್‌ಗ್ಳು ಈಗಿನ ಟ್ರೆಂಡ್‌. ಅಮ್ಮ- ಮಗಳು ಇಬ್ಬರಿಗೂ ಹೊಂದುವಂಥ ಡ್ರೆಸ್‌ಗಳು ಲಭ್ಯವಿದ್ದು, ಔಟಿಂಗ್‌ ಹೋಗುವಾಗ ಸ್ಟ್ರೈಪ್ಡ್ ಟಾಪ್‌ಗ್ಳ ಮೇಲೆ ಜ್ಯಾಕೆಟ್‌ ಧರಿಸಿ ಕೂಲ್‌ ಆಗಿ ಕಾಣಿಸಬಹುದು.

2. ಫ್ರಾಕ್‌ ಸ್ಟೈಲ್‌
ಮಗಳ ಇಷ್ಟದ ಫ್ರಾಕ್‌ ಜೊತೆಗೆ ಈಗ ಅಮ್ಮನೂ ತನ್ನ ಡ್ರೆಸ್‌ ಮ್ಯಾಚ್‌ ಮಾಡಬಹುದು. ಮೋನೊ ಕಲರ್‌, ಮಲ್ಟಿ ಕಲರ್‌, ಫ್ಲೋರಲ್‌ ಪ್ರಿಂಟ್‌ ಹೀಗೆ ಕೇವಲ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಫ್ರಾಕ್‌ನಲ್ಲಿ ಬಹಳಷ್ಟು ವೆರೈಟಿಗಳಿವೆ. 

3. ಫ್ಲೋರಲ್‌ ಡ್ರೆಸ್‌
ಈಗ ಹೂವು ಮುಡಿಯುವವರು ಇದ್ದಾರೋ ಇಲ್ಲವೋ, ಡ್ರೆಸ್‌ನ ಮೇಲೆ ಹೂವಿನ ಚಿತ್ತಾರವನ್ನಂತೂ ಎಲ್ಲರೂ ಇಷ್ಟಪಡುತ್ತಾರೆ. ಒಂದೇ ರೀತಿಯ ಫ್ಲೋರಲ್‌ ಪ್ರಿಂಟ್‌ ಇರುವ ಟಾಪ್‌, ಸ್ಕರ್ಟ್‌, ಫ್ರಾಕ್‌ಗಳನ್ನು ಅಮ್ಮ- ಮಗಳು ಮ್ಯಾಚ್‌ ಮಾಡಬಹುದು. ಅದಕ್ಕೆ ಸರಿ ಹೊಂದುವ ಫ್ಲೋರಲ್‌ ಡಿಸೈನ್‌ನ ಆ್ಯಕ್ಸೆಸರೀಸ್‌ ಹಾಗೂ ಫ್ಲ್ಯಾಟ್ಸ್‌ಗಳು ಡ್ರೆಸ್‌ನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. 

4. ವೈಟ್‌ ಟಾಪ್ಸ್‌
ಇದು ತುಂಬಾ ಸಿಂಪಲ್‌ ಹಾಗೂ ಟ್ರೆಂಡಿ ಸ್ಟೈಲ್‌. ವೈಟ್‌ ಟಾಪ್‌ ಜೊತೆಗೆ ನೀಲಿ ಜೀನ್ಸ್‌ ಅಥವಾ ಜೆಗ್ಗಿನ್ಸ್‌ ಹಾಗೂ ಸರಿ ಹೊಂದುವ ಶೂಸ್‌ ಧರಿಸಿ ಅಕ್ಕ-ತಂಗಿಯಷ್ಟು ಯಂಗ್‌ ಆಗಿ ಕಾಣಿಸಿ

5. ಕ್ಯಾಶುವಲ್‌ ಮ್ಯಾಕ್ಸಿ
ಈ ಬೇಸಿಗೆಯ ಧಗೆಗೆ ಲಾಂಗ್‌ ಮ್ಯಾಕ್ಸಿ ಡ್ರೆಸ್‌ಗಳು ಬಹಳ ಸೂಕ್ತ. ದಪ್ಪಗಿರುವವರಿಗೆ, ತೆಳ್ಳಗಿರುವವರಿಗೆ- ಇಬ್ಬರಿಗೂ ಈ ಡ್ರೆಸ್‌ ಹೊಂದುತ್ತದೆ. ನೋಡೋಕೆ ಸಿಂಪಲ್‌ ಅನ್ನಿಸಿದರೂ ಗೆಟ್‌ ಟುಗೆದರ್‌, ಫ್ಯಾಮಿಲಿ ಫ‌ಂಕ್ಷನ್‌, ಚರ್ಚ್‌, ಔಟಿಂಗ್‌ಗೆ ಮ್ಯಾಕ್ಸಿ ಚೆನ್ನಾಗಿ ಒಪ್ಪುತ್ತದೆ. 

6. ಮ್ಯಾಚಿಂಗ್‌ ಹೆಡ್‌ ಬ್ಯಾಂಡ್ಸ್‌/ ಹೇರ್‌ ಆ್ಯಕ್ಸೆಸರೀಸ್‌
ಇದು ಕೂಲ್‌ ಅಮ್ಮ-ಮಗಳಿಗಾಗಿ ಇರುವಂಥ ಫ್ಯಾಶನ್‌. ಮಗಳ ಹೇರ್‌ ಸ್ಟೈಲ್‌ ಅನ್ನು ಅಮ್ಮನೂ ಕಾಪಿ ಮಾಡಬಹುದು. ಚಿಕ್ಕ ಮಕ್ಕಳ ಹೇರ್‌ ಟೈ, ಬ್ಯಾಂಡ್‌, ಹೇರ್‌ ಬೌಗಳು ಈಗ ಅಮ್ಮನ ಕೂದಲಿಗೂ ಸೈ. ಇಂಥ ಕಲರ್‌ ಕಲರ್‌ ಹೇರ್‌ ಬ್ಯಾಂಡ್‌ ಧರಿಸಿ ಪಾರ್ಟಿ, ಫೋಟೊಶೂಟ್‌ಗಳಲ್ಲಿ ಮಿಂಚಬಹುದು.

ಮ್ಯಾಚ್‌ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳು
ಫಿಟ್‌: ಅಮ್ಮ- ಮಗಳ ನಡುವೆ ವಯಸ್ಸಿನ ಅಂತರ ಇರುವುದರಿಂದ ಧರಿಸುವ ಡ್ರೆಸ್‌ ಇಬ್ಬರಿಗೂ ಫಿಟ್‌ ಮತ್ತು ಕಂಫ‌ರ್ಟಬಲ್‌ ಆಗಿರಬೇಕು.
ಫ್ಯಾಬ್ರಿಕ್‌: ಯಾವ ಫ್ಯಾಬ್ರಿಕ್‌ನ ಬಟ್ಟೆ ಧರಿಸುತ್ತೀರೋ ಅದು ಇಬ್ಬರಿಗೂ ಹೊಂದುವಂತಿರಬೇಕು. ಕಾಟನ್‌ ಬಟ್ಟೆಗಳು ಸಣ್ಣ ಮಕ್ಕಳಿಗೂ ಹೊಂದುತ್ತದೆ.
ಸ್ಟೈಲ್‌: ಮಗಳು ತುಂಬಾ ಸಣ್ಣವಳಾಗಿದ್ದರೆ ಅವಳ ವಯಸ್ಸಿಗೆ ಸರಿ ಹೊಂದುವಂಥ ಡ್ರೆಸ್‌ ಅನ್ನು ಮ್ಯಾಚ್‌ ಮಾಡಿ. ಇಲ್ಲದಿದ್ದರೆ ಮಗು
ಓವರ್‌ಡ್ರೆಸ್‌ ಆದಂತೆ ಅನಿಸಬಹುದು.
ಮ್ಯಾಚ್‌: ತುಂಬಾ ಮುಖ್ಯವಾದ ಸಂಗತಿ ಎಂದರೆ ಅಮ್ಮ- ಮಗಳು ಇಬ್ಬರ ಡ್ರೆಸ್‌ ಕೂಡ ಶೇ.100 ಮ್ಯಾಚ್‌ ಆಗುವಂತಿರಬೇಕು. 

ಪ್ರಿಯಾಂಕಾ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.