ಮಗೂನಾ? ಆಫೀಸ್ಸಾ?


Team Udayavani, Oct 10, 2018, 6:00 AM IST

4.jpg

ಹೆರಿಗೆಯ ಆರು ತಿಂಗಳು ರಜೆ ಮುಗಿಯಿತು. ಚೈತ್ರಾ ಮತ್ತೆ ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು ಡೇ ಕೇರ್‌ ಬದಲಿಸಿದ್ದೂ ಆಯಿತು…

ತರಕಾರಿ ತರೋಣ ಎಂದು ಸಂತೆಗೆ ಹೋಗಿ ತರಕಾರಿಗಳನ್ನೆಲ್ಲ ಆರಿಸಿ ತೆಗೆದುಕೊಳ್ಳುತ್ತಿರುವಾಗ ಗೆಳತಿ ಚೈತ್ರಾ ಸಿಕ್ಕಿದಳು. ನನ್ನ ಶಾಲಾದಿನಗಳ ಗೆಳತಿ ಅವಳು. ಓದಿನಲ್ಲಿ ಬಹಳ ಮುಂದು. ಪರೀಕ್ಷೆ ಬಂತೆಂದರೆ ನಮ್ಮೊಂದಿಗೆ ಮಾತು ಕೂಡ ಆಡುತ್ತಿರಲಿಲ್ಲ. ಓದಿನಲ್ಲಿ ಅಷ್ಟು ಮುಳುಗುತ್ತಿದ್ದಳು. ಎಂಜಿನಿಯರಿಂಗ್‌ ಮುಗಿಸಿ, ಎಂ.ಎಸ್‌ ಮಾಡುತ್ತೇನೆಂದು ಮನೆಯಲ್ಲಿ ಹಠ ಹಿಡಿದು ಕುಳಿತು ಅದನ್ನೂ ಮಾಡಿ ಮುಗಿಸಿದ್ದಳು. ಎಂ.ಎಸ್‌. ಮುಗಿದ ನಂತರ ಕೇಳಬೇಕೇ? ಒಳ್ಳೆಯ ಕಂಪನಿಯಲ್ಲಿ ಉದ್ಯೋಗ, ಕೈತುಂಬಾ ಸಂಬಳ. ನಂತರ ಎರಡು ಮೂರು ವರ್ಷ ಮದುವೆಯ ಮಾತುಕತೆ ಎತ್ತದಂತೆ ಮನೆಯವರಿಗೆಲ್ಲ ಹೇಳಿದವಳು, ಮೂರು ವರ್ಷ ಚೆನ್ನಾಗಿ ದುಡಿದು ಅವಳಷ್ಟೇ ಓದಿ, ಸಂಪಾದಿಸುತ್ತಿರುವ ಹುಡುಗನನ್ನು ಮದುವೆಯಾದಳು. ನಂತರ ಎರಡು ಮೂರು ವರ್ಷ ಕೆಲಸದಲ್ಲಿ ಒಂದರ ಮೇಲೆ ಒಂದು ಬಡ್ತಿ ಸಿಗುತ್ತಿದ್ದ ಆಸೆಯ ಹಿಂದೆ, ಮಗುವಿನ ವಿಚಾರವನ್ನೇ ಮಾಡಲಿಲ್ಲ. ವಯಸ್ಸು ನಿಲ್ಲುತ್ತದೆಯೇ? ಮೂವತ್ತು ದಾಟಿತ್ತು! 

ಪೂರ್ಣಪ್ರಮಾಣದ ಅಮ್ಮ
ಕೊನೆಗೆ ಐದಾರು ವೈದ್ಯರ ಬಳಿ ಓಡಾಡಿ ಮಗು ಪಡೆದಳು. ಹೆರಿಗೆಯ ಆರು ತಿಂಗಳು ರಜೆ ಮುಗಿಸಿ, ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು ಡೇ ಕೇರ್‌ ಬದಲಿಸಿದ್ದೂ ಆಯಿತು. ಒಂದು ದಿನ ಡೇ ಕೇರ್‌ನ ಆಯಾ ನೋಡುವ ಧಾರಾವಾಹಿಯನ್ನೇ ಮನೆಯಲ್ಲೂ ಹಾಕುವಂತೆ ಮಗು ಹಠ ಹಿಡಿಯಿತು! ಇನ್ನೊಂದರಲ್ಲಿ ಮಗುವನ್ನು ಯಾರೋ ಒಬ್ಬ ಹೊಡೆಯುತ್ತಿದ್ದನಂತೆ.

   ಮಗುವಿನ ಹಿತಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿ, ಯಾರ ಬಳಿಯೂ ಸಲಹೆ ಕೇಳದೇ ರಾಜೀನಾಮೆ ನೀಡಿ 3 ತಿಂಗಳ ನೋಟೀಸ್‌ ಮುಗಿದ ಮೇಲೆಯೇ ಎಲ್ಲರಿಗೂ ತಿಳಿಸಿದಳು. ತದನಂತರ ಅವಳು ಪೂರ್ಣ ಪ್ರಮಾಣದ ಗೃಹಿಣಿ. ಬೆಳಗ್ಗೆ ಎದ್ದು ಮಗುವನ್ನು ಪ್ಲೇ ಸ್ಕೂಲ್‌ಗೆ ಸಿದ್ಧಪಡಿಸಿ, ಪತಿಯನ್ನು ಆಫೀಸ್‌ಗೆ ಕಳುಹಿಸಿ, ಮಧ್ಯಾಹ್ನ ಮನೆಗೆ ಬಂದ ಪಾಪುಗೆ ಊಟ ಮಾಡಿಸಿ, ಮಲಗಿಸಿ, ಎದ್ದ ಮೇಲೆ ಅವನನ್ನು ಪಾರ್ಕ್‌ಗೆ ಆಟ ಆಡಲು ಕರೆದುಕೊಂಡು ಹೋಗುವುದು. ರಾತ್ರಿ ರುಚಿ ರುಚಿ ಅಡುಗೆ ಮಾಡಿ, ಮಗುವಿಗೆ ಊಟ ಮಾಡಿಸಿ, ಕಥೆ ಹೇಳುತ್ತಾ ಮಗುವನ್ನು ಮಲಗಿಸುವ ಅವಕಾಶ ಅವಳದಾಯಿತು.

ಪಾಕೆಟ್‌ ಮನಿ ಆಸೆಯೇತಕೆ?
ಚೈತ್ರಾಳ ಮುಖದಲ್ಲಿ ಅಂದಿನಿಂದ ಯಾವಾಗಲೂ ಮಂದಹಾಸ, ತೃಪ್ತಿ ಎದ್ದು ಕಾಣುತ್ತಿರುತ್ತದೆ. ಮನೆಯಲ್ಲಿ ಮಗುವಿನೊಂದಿಗೆ ಕಳೆದ ಸಮಯದಲ್ಲೇ ಜಾಸ್ತಿ ಆನಂದ ಸಿಗುತ್ತದೆ ಎನ್ನುವುದು ಅವಳ ಭಾವನೆ. ದುಡಿತದ ಅನಿವಾರ್ಯತೆ ಇದ್ದರೆ ಪರವಾಗಿಲ್ಲ. ಪತಿರಾಯನ ದುಡಿಮೆ ಚೆನ್ನಾಗಿದೆ. ಪಾಕೆಟ್‌ ಮನಿಗಾಗಿ ದುಡಿದು ಮಗುವಿನ ಪೋಷಣೆಯ ಹೊಣೆಯನ್ನು ಯಾರಿಗೋ ವಹಿಸಿ ಕೆಲಸದ ಒತ್ತಡದಲ್ಲಿ ಮಗುವಿನ ಕಡೆ ನಿರ್ಲಕ್ಷ್ಯ ತೋರಿದರೆ ಏನು ಪ್ರಯೋಜನ ಎನ್ನುತ್ತಾಳೆ. ಈಗ ಆಕೆಯ ಮಗ ಎರಡನೇ ತರಗತಿ ಓದುತ್ತಿದ್ದಾನೆ. ಅವಳು ಮನೆಯ ಪಕ್ಕದಲ್ಲೇ ಇರುವ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಸೇರಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ.

ಅವಕಾಶವಿದ್ದೇ ಇರುತ್ತೆ…
ಕಚೇರಿ ಕೆಲಸಕ್ಕೆ ಹೋಗಲು ನಿದ್ರೆ, ಊಟ ಉಪಹಾರಗಳನ್ನು ನಿರ್ಲಕ್ಷಿಸಿದರೆ ಆರೋಗ್ಯವೂ ಕೆಡುತ್ತದೆ. ಕೆಲಸದ ಒತ್ತಡದಲ್ಲಿ ಪತಿರಾಯನೊಂದಿಗೆ ಜಗಳ, ಮಗುವನ್ನು ಹೊಡೆದು ಬಡಿದು ಮಾಡುವವರೂ ಇದ್ದಾರೆ. ಮಗುವನ್ನು ಕೋಣೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ಹೋಗುವ ತಾಯಂದಿರೂ ಕೆಲವರು. ತಮ್ಮ ಕೆಲಸವನ್ನು ಮಾಡಿಕೊಳ್ಳಲು ಮಗುವಿನ ಕೈಗೆ ಮೊಬೈಲ್‌ ನೀಡುವುದು, ಕಾರ್ಟೂನ್‌ ಇತ್ಯಾದಿ ಆಮಿಷಗಳ ಮೊರೆ ಹೋಗಿ ಕೆಲವು ತಾಯಂದಿರ ಕಥೆಯನ್ನು ಈಗಾಗಲೇ  ಕೇಳಿರಬಹುದು. ಮಕ್ಕಳನ್ನು ಆಯಾ, ಡೇ ಕೇರ್‌ ಎಂದು ಸೇರಿಸಿ ಈ ಕಡೆ ಕೆಲಸದಲ್ಲೂ ಆಸಕ್ತಿ ತೋರಲಾಗದೆ, ಆ ಕಡೆ ಮಕ್ಕಳ ಲಾಲನೆ ಪಾಲನೆಯಲ್ಲೂ ನ್ಯೂನತೆ ಉಂಟಾಗುವ ಸಂದರ್ಭಗಳಿಗಿಂತ ಮಗುವಿನ ಲಾಲನೆಗಾಗಿ ಅವಳು ತೆಗೆದುಕೊಂಡ ನಿರ್ಧಾರ ಸರಿಯೆನಿಸಿತು. 

 ಕೆಲಸಕ್ಕೆ ರಾಜೀನಾಮೆ ನೀಡಿದ ತಕ್ಷಣ ಪೂರ್ಣವಿರಾಮವೆಂದು ಭಾವಿಸಬೇಕೆಂದಿಲ್ಲ. ಮಗುವಿನ ಹಿತಾಸಕ್ತಿಗಾಗಿ ಕೆಲಸಕ್ಕೆ ಅಲ್ಪವಿರಾಮ ನೀಡಿ, ಮಗು ಶಾಲೆಗೆ ಹೋಗುವಾಗ, ಆ ಸಮಯದಲ್ಲಿ ಮಾಡುವ ಯಾವುದಾದರೂ ಕೆಲಸವನ್ನೋ, ಯಾವುದಾದರೂ ಸಣ್ಣಪುಟ್ಟ ವ್ಯವಹಾರವನ್ನೋ ಶುರುಮಾಡಿಕೊಳ್ಳಬಹುದು. ಹಿಂದೆ ಕೆಲಸ ಮಾಡಿದ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಆ ಕ್ಷೇತ್ರದಲ್ಲಿ ಮುಂದುವರಿಯಲೂಬಹುದು. ಮಗುವಿನ ಆರೈಕೆಗಾಗಿ ರಾಜೀನಾಮೆ ನೀಡಿದ ಮಹಿಳೆಯರಿಗೆ ಕೆಲವು ಕಂಪನಿಗಳು ಆದ್ಯತೆ ನೀಡಿ ಉದ್ಯೋಗ ನೀಡುತ್ತಿರುವುದನ್ನು ಗಮನಿಸಬಹುದು. 

– ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದಲ್ಲಿ ಆನ್ ಲೈನ್ ತರಗತಿ: ದಕ್ಷಿಣಕನ್ನಡ ಡಿ.ಸಿ

ಮಂಗಳೂರು : ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದರೆ ಭೌತಿಕ ತರಗತಿ ರದ್ದು ; ಡಿ.ಸಿ

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

Covid test

ರಾಜ್ಯದಲ್ಲಿ ಇಂದೂ 40 ಸಾವಿರ ದಾಟಿದ ಕೋವಿಡ್ ಕೇಸ್ : 21 ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

nirani

ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ: ಸಚಿವ ನಿರಾಣಿ

CM @ 2

ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಮುನ್ನೆಲೆಗೆ : ಈ ವಾರ ಸಿಎಂ ದೆಹಲಿಗೆ ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

1-fffas

ಭಟ್ಕಳ: ಕಾರಿನ ನಾಮ ಫಲಕ ತೆರವು ; ಪುರಸಭಾ ಅಧ್ಯಕ್ಷರ ಖಂಡನೆ

ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ

ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ

1-fffdf

ಡಾ| ಸೋಮಶೇಖರ ಇಮ್ರಾಪೂರ ಅವರಿಗೆ 2022ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿ

1-asewewewe

ಗೋವಾ ಮಹಾಘಟಬಂಧನ : ಮೈತ್ರಿ ಘೋಷಿಸಿದ ಶಿವಸೇನೆ ಮತ್ತು ಎನ್‍ಸಿಪಿ; ಕಾಂಗ್ರೆಸ್ ಇಲ್ಲ

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.