ಹಾಡೊಂದು ನಾ ಹಾಡುವೆನು…

Team Udayavani, Sep 9, 2020, 6:01 PM IST

ಹಾಡೊಂದು ನಾ ಹಾಡುವೆನು…

ಚಿಕ್ಕಂದಿನಿಂದಲೂ ನನಗೆ ಹಾಡುವುದೆಂದರೆ ಬಹಳ ಇಷ್ಟ. ಅಮ್ಮ, ದಿನವೂ ದೇವರನಾಮಗಳನ್ನು ಹಾಡುತ್ತಿದ್ದಳು. “ಗಜಮುಖನೆ ಗಣಪತಿಯೇ…’, “ಶರಣುಶರಣಯ್ಯ…’ ಹೀಗೆ ದಿನಾ ಸಂಜೆ ಅವಳು ದೇವರಿಗೆ ದೀಪ ಹಚ್ಚಿ ಐದಾರು ಹಾಡುಗಳನ್ನು ಹಾಡುತ್ತಿದ್ದರೆ, ನಾನೂ- ತಂಗಿಯೂ ಅವಳೊಂದಿಗೆ ದನಿಗೂಡಿಸುತ್ತಿದ್ದೆವು. ಹೀಗಾಗಿ ನನಗೆ ಈ ಹಾಡುಗಳೆಲ್ಲ ಬಾಯಿಪಾಠವಾಗಿದ್ದವು. ಹಾಡಿನ ಪ್ರತಿಭೆಯನ್ನು ತೋರಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೆ.

ನಾನಾಗ 5ನೇ ತರಗತಿಯಲ್ಲಿದ್ದೆ. ಅವತ್ತು ಕೊನೆಯ ಪಿರಿಯಡ್‌ನ‌ ಸಬ್ಜೆಕ್ಟ್ ಟೀಚರ್‌ ಬಂದಿರಲಿಲ್ಲ. ಅವರ ಬದಲಿಗೆ ಬಂದ ಸರ್‌, “ಯಾರಾದರೂ ಹಾಡು ಹಾಡುವವರಿದ್ರೆ ಹಾಡಿ’ ಎಂದರು. ಒಂದಿಬ್ಬರು ಹುಡುಗರು ಬಂದು ಯಾವುದೋ ಸಿನಿಮಾ ಹಾಡಿನ ಎರಡು ಸಾಲುಗಳನ್ನು ಹಾಡಿದರು. ಅವರಿಗೆ ಮುಂದಿನ ಸಾಲು ಗೊತ್ತಿರಲಿಲ್ಲ. ನಾನು ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ. ಕೈ ಎತ್ತಿದೆ. ಸರ್‌ ಕರೆದು ಹಾಡೆಂದರು. “ಗಜಮುಖನೆ ಗಣಪತಿಯೇ..’ ಹಾಡು ಹಾಡಿದೆ. ಮೇಷ್ಟ್ರಿಗೆ ಖುಷಿಯಾಯಿತು. “ಮುಂದಿನವಾರ ಹಾಡಿನ ಸ್ಪರ್ಧೆ ಇದೆ. ಹೆಸರು ಕೊಡಮ್ಮ’ ಎಂದರು. ನನಗೆ ಬಹುಮಾನ ಬಂದಷ್ಟೇ ಖುಷಿಯಾಯಿತು! ಸ್ಪರ್ಧೆಯ ದಿನ ಬಂತು. ನನ್ನ ಸರದಿಯೂ ಬಂತು. ನಾನು ಮೈಕ್‌ ಎದುರು ನಿಂತು ಶರಣು ಶರಣಯ್ಯ ಶರಣು ಬೆನಕ.. ಎಂದು ಇನ್ನೂ ಶುರು ಮಾಡಿದ್ದಷ್ಟೇ, ಅಷ್ಟೊತ್ತಿಗೆ ಮೂವರು ತೀರ್ಪುಗಾರರಲ್ಲಿ ಒಬ್ಬ ಮೇಡಂ ಪಟ್ಟನೆ ಬೆಲ್‌ ಹೊಡೆದುಬಿಟ್ಟರು.

ಪಕ್ಕದಲ್ಲಿದ್ದ ಸರ್‌- “ಯಾಕ್ರೀ ಬೆಲ್‌ ಒತ್ತಿದ್ರಿ? 3 ನಿಮಿಷ ಟೈಂ ಇದೆಯಲ್ಲ. ಹಾಡ್ಲಿ ಬಿಡ್ರಿ…’ ಎಂದರು ಪಾಪ. ಆದರೆ ಆ ಮೇಡಂ ಅದೇನ್‌ ದನೀರಿ… ದಪ್ಪ ಎಮ್ಮಿ ಹಂಗ್ ಅಂದಾಗ ಮುಂದಿನ ಸಾಲಿನಲ್ಲಿ ಕುಳಿತವರೆಲ್ಲ ಘೊಳ್ಳನೆ ನಕ್ಕುಬಿಟ್ಟರು. ನನಗೆ ಅವಮಾನದಿಂದ ನಾಲಿಗೆಯ ದ್ರವವೆಲ್ಲ ಆರಿ ಹೋಗಿತ್ತು! ಮನೆಗೆ ಬಂದು ಮನಸೋ ಇಚ್ಛೆ ಅತ್ತೆ!. ಅದೇ ಕೊನೆ. ಆಮೇಲೆ ನಾನೆಂದೂ ಹಾಡುವ ಸ್ಪರ್ಧೆಗೆ ಹೋಗಲೇ ಇಲ್ಲ. ದೊಡ್ಡವ ಳಾದ ಮೇಲೂ ಹಾಡುತ್ತಿರಲಿಲ್ಲ. ಯಾರದಾ ದರೂ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದರೆ ಅಮ್ಮ ಹಾಡುತ್ತಿದ್ದರು. ಅವರ ಜೊತೆಗೆ ನನಗೂ ಹಾಡೆಂದು ಒತ್ತಾಯಿಸಿದರೂ ನಾನು ಮಾತ್ರ ಹಾಡುತ್ತಿರಲಿಲ್ಲ. “ನನ್ನ ಧ್ವನಿ ಚೆನ್ನಾ ಗಿಲ್ಲ’ ಎಂದು ಬಾಲ್ಯ ದಲ್ಲಿ ಆ ಮೇಡಂ ನುಡಿದ ಕಹಿನುಡಿ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದು ಹೋಗಿತ್ತು! ಮುಂದೆ ನನಗೆ ಮದುವೆಯಾಯಿತು. ಮಗಳೂ ಹುಟ್ಟಿದಳು. ಎಷ್ಟು ಮುದ್ದೋ, ಅಷ್ಟೇ ಹಠಮಾರಿ ಮಗು! ಯಾರು ಎಷ್ಟು ತೊಟ್ಟಿಲು ತೂಗಿದರೂ ನಿದ್ದೆ ಮಾಡುತ್ತಿರಲಿಲ್ಲ. ನನ್ನಮ್ಮ ದೇವರಿಗೆ ಹಾಡಿದ್ದಕ್ಕಿಂತ ದುಪ್ಪಟ್ಟು ಹಾಡು ಹಾಡಿದರೂ ಮಗು ಮಲಗಲೊಲ್ಲದು! ಎಲ್ಲರೂ ಸುಸ್ತಾಗಿ, “ನಿನ್ನ ಮಗಳಿಗೆ ನೀನೇ ಹಾಡಿ ಮಲಗಿಸು..’ ಎಂದಾಗ, ” ಶ್ರೀ ಚಕ್ರಧಾರಿಗೆ ಶಿರಬಾಗಿ

ಲಾಲಿ…’ ಎಂದು ನನ್ನೆದೆಯ ಪ್ರೀತಿಯನ್ನೆಲ್ಲ ಧಾರೆಯೆರೆದು ಹಾಡಿದ್ದೇ ತಡ; ನನ್ನ ಮಗಳು ನಿದ್ದೆಗೆ ಜಾರಿದ್ದಳು! ಅದರ ಮೇಲೆ ಅವಳು ನನ್ನ ಹಾಡಿಗೆ ಮಾತ್ರ ಮಲಗುತ್ತಿದ್ದಳು. ನನ್ನ ಸ್ವರವೂ ಇಂಪಾಗಿದೆ ಅಥವಾ ಕೇಳಲು ಪರವಾಗಿಲ್ಲ ಎಂದು ನನಗೆ ತಿಳಿಯಲು ನನ್ನ ಮಗಳು ಹುಟ್ಟಿ ಬರಬೇಕಾಯಿತು!

– ಸವಿತಾ ಮಾಧವ ಶಾಸ್ರ್ತೀ, ಗುಂಡ್ಮಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.