ಜ್ಯೋತಿ ಬೆಳಗುತಿದೆ…

ವಿದೇಶಿಗರಿಗೆ ಪಾಠ ಮಾಡುವ ವಿಶೇಷಚೇತನೆ

Team Udayavani, Jan 8, 2020, 6:43 AM IST

3

ದೈಹಿಕ ನ್ಯೂನತೆಗಳಿರುವ ಜನರೂ, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಮನೆಯಲ್ಲಿ ಕುಳಿತೇ ಸ್ವಾವಲಂಬಿ ಜೀವನ ನಡೆಸಬಹುದು ಎಂಬುದಕ್ಕೆ ಜ್ಯೋತಿ ಅವರೇ ಉದಾಹರಣೆ. ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದಕ್ಕೂ ಇವರು ಮಾದರಿಯಾಗಲಿ.

ಕೈಯಲ್ಲಿ ಡಿಗ್ರಿ ಇದೆ, ದೇಹದಲ್ಲಿ ಕಸುವೂ ಇದೆ; ಆದರೂ ಕೆಲವರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಅದಕ್ಕೆ ಪ್ರತಿಭೆಯ ಕೊರತೆ ಕಾರಣವೋ, ಇಚ್ಛಾಶಕ್ತಿಯ ಕೊರತೆಯೋ ಗೊತ್ತಿಲ್ಲ. ಆದರೆ, ಜ್ಯೋತಿಯಂಥ ಕೆಲವರು, ತಮ್ಮೆಲ್ಲ ಇತಿಮಿತಿಗಳನ್ನು ಮೀರಿ, ಮನೆಯಲ್ಲಿ ಕುಳಿತೇ ಸಾಧನೆಗೆ, ಸಂಪಾದನೆಗೆ ಹಾದಿ ಕಂಡುಕೊಂಡಿದ್ದಾರೆ. ಕಾಲು ಮತ್ತು ಬೆನ್ನು ಸ್ವಲ್ಪ ಊನವಾಗಿದ್ದರೂ, ಕಲಿತಿರುವ ವಿದ್ಯೆಯ ನೆರವಿನಿಂದ ವಿದೇಶಿ ಮಕ್ಕಳಿಗೆ ಟೀಚರ್‌ ಆಗಿದ್ದಾರೆ!

ಬಾಗಲಕೋಟ ಜಿಲ್ಲೆಯ ತೇರದಾಳದವರಾದ ಜ್ಯೋತಿ ಮಲ್ಲಪ್ಪ ಬೀಳಗಿ, ಸ್ನಾತಕೋತ್ತರ ಪದವೀಧರೆ. ದೈಹಿಕ ನ್ಯೂನತೆಗಳ ನಡುವೆಯೂ, ಡಿ.ಇಡಿ, ಬಿ.ಎಡಿ ಪೂರ್ಣಗೊಳಿಸಿರುವ ಈಕೆಗೆ, ಸರ್ಕಾರಿ ಕೆಲಸ ಪಡೆಯಬೇಕೆಂಬ ಹಂಬಲವಿತ್ತು. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ, ಕೆಲಸ ಸಿಗಲಿಲ್ಲ. ಅಷ್ಟೇ ಅಲ್ಲದೆ, ಸರ್ಕಾರದಿಂದ ಇದುವರೆಗೆ ಯಾವುದೇ ರೀತಿಯ ಸಹಾಯ ಕೂಡಾ ಸಿಕ್ಕಿಲ್ಲ. ಮಾಸಾಶನವಿರಲಿ, ಒಂದು ಟ್ರೈಸಿಕಲ್‌ ಕೂಡಾ ಅವರಿಗೆ ದೊರೆತಿಲ್ಲ. ಸ್ವಂತ ಹಣದಲ್ಲೇ ಟ್ರೈಸಿಕಲ್‌ ಖರೀದಿಸಿದ್ದಾರೆ. ಸರಕಾರಿ, ಖಾಸಗಿ ಶಾಲೆಗಳಲ್ಲಿ ಅತಿಥಿ ಶಿಕ್ಷಕಿಯಾಗಿ, ಜೀವನೋಪಾಯ ಕಂಡುಕೊಂಡಿದ್ದರು. ಬೋಧನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಜ್ಯೋತಿ, ಬೇರೆ ಕಡೆಗಳಲ್ಲಿ ಕೆಲಸ ಪಡೆಯಲು ತಯಾರಿ ನಡೆಸತೊಡಗಿದರು.

ಆನ್‌ಲೈನ್‌ ಟೀಚಿಂಗ್‌
ಹೀಗೇ ಒಮ್ಮೆ, ನೌಕರಿ ಡಾಟ್‌ಕಾಂ ವೆಬ್‌ಸೈಟ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದಾಗ, ಹೈದರಾಬಾದ್‌ ಮೂಲದ ಸಂಸ್ಥೆಯೊಂದರಲ್ಲಿ ಆನ್‌ಲೈನ್‌ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ಖಾಲಿಯಿರುವ ಬಗ್ಗೆ ತಿಳಿಯಿತು. ಮನೆಯಲ್ಲಿಯೇ ಕುಳಿತು ಮಾಡುವ ಕೆಲಸವಾದ್ದರಿಂದ, ಟ್ರೈ ಮಾಡೋಣ ಅಂತ ಅರ್ಜಿ ಸಲ್ಲಿಸಿದರು. ಇವರ ಅರ್ಜಿ ಸ್ವೀಕೃತವಾಗಿ, ಸಂದರ್ಶನಕ್ಕೆ ಆಹ್ವಾನವೂ ಬಂತು. ಆನ್‌ಲೈನ್‌ನಲ್ಲೆ ಇಂಟರ್‌ವ್ಯೂ ಕೂಡಾ ನಡೆಯಿತು. ಪರಸ್ಪರ ಮುಖ ನೋಡದೇ ನಡೆದ ಸಂದರ್ಶನದಲ್ಲಿ ಜ್ಯೋತಿ ಆಯ್ಕೆಯಾಗಿಬಿಟ್ಟರು.

ವಿದೇಶಿಯರಿಗೆ ಪಾಠ
ಹೈದರಾಬಾದ್‌ನ ಆ ಸಂಸ್ಥೆಗೆ ಅಮೆರಿಕ, ಜರ್ಮನ್‌, ರಷ್ಯಾ ಹಾಗೂ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ಸಬ್‌ಸೆð„ ಬ್‌ ಆಗಿದ್ದಾರೆ. ಈಗ ಜ್ಯೋತಿ ಮನೆಯಲ್ಲಿ ಕುಳಿತೇ ಆ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರ, ರಸಾಯನಶಾಸ್ತ್ರ ದ ಪಾಠ ಮಾಡುತ್ತಿದ್ದಾರೆ. ಪಾಠ ನಡೆಯುವುದು ಬರವಣಿಗೆ ಮೂಲಕ ಮಾತ್ರ. ವಿಡಿಯೋ ಕಾಲ್‌ ಮಾಡಲು ಕೂಡ ಅವಕಾಶ ಇಲ್ಲ. ವಿದ್ಯಾರ್ಥಿಗಳಿಗೆ ಪಾಠ ಇಷ್ಟವಾಗದಿದ್ದರೆ, ಅದನ್ನು ಅವರು ಪ್ರತಿಕ್ರಿಯೆ ಮೂಲಕ ತಿಳಿಸುತ್ತಾರೆ.

ನಾಲ್ಕು ಗಂಟೆ ಪಾಠ
ಜ್ಯೋತಿಯವರ ಕ್ಲಾಸ್‌, ಬೆಳಗ್ಗೆ 4.30- 8.30ರವರೆಗೆ ನಡೆಯುತ್ತದೆ. ಪ್ರತಿದಿನ ಕನಿಷ್ಠ ನಾಲ್ಕು ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ. ಅವತ್ತಿನ ಪಾಠ ಇಷ್ಟವಾದರೆ ಮರುದಿನ ಆ ವಿದ್ಯಾರ್ಥಿಗಳು ಮತ್ತೆ ಜ್ಯೋತಿ ಅವರ ಅಪಾಯಿಂಟ್‌ಮೆಂಟ್‌ ಪಡೆಯುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪಾಠ ಹೇಳಿದ್ದಕ್ಕೆ, ಒಂದು ಗಂಟೆಗೆ 175 ರೂ. ವೇತನವನ್ನು ಸಂಸ್ಥೆ ನೀಡುತ್ತಿದೆ. ಹೀಗೆ, ಅವರು ಪ್ರತಿ ತಿಂಗಳು 30-35 ಸಾವಿರ ರೂ. ಅನ್ನು ದುಡಿಯುತ್ತಿದ್ದಾರೆ. 2018ರ ಅಕ್ಟೋಬರ್‌ನಿಂದ ಜ್ಯೋತಿ ಈ ಕೆಲಸ ಮಾಡುತ್ತಿದ್ದಾರೆ.

ಓದಿದ್ದು ಆರ್ಟ್ಸ್, ಕಲಿಸೋದು ಸೈನ್ಸ್‌
ಇಂಗ್ಲಿಷ್‌ನಲ್ಲಿ ಎಂ.ಎ ಮಾಡಿರುವ ಜ್ಯೋತಿ, ಪಾಠ ಮಾಡುತ್ತಿರುವುದು ವಿಜ್ಞಾನವನ್ನು. ಇದು ಸಾಧ್ಯವಾಗಲು ಕಾರಣ, ಪಿಯುಸಿಯಲ್ಲಿ ಅವರು ಸೈನ್ಸ್‌ ಓದಿರುವುದು. ನಂತರವೂ ಅವರು, ವಿಜ್ಞಾನದ ಜ್ಞಾನ ಹೆಚ್ಚಿಸಿಕೊಳ್ಳಲು ಅನೇಕ ಪುಸ್ತಕಗಳನ್ನು ಓದಿದ್ದಾರೆ, ಓದುತ್ತಿದ್ದಾರೆ. ಬೇರೆಯವರಿಗೆ ಪಾಠ ಮಾಡುವ ಮುನ್ನ, ನಾವು ವಿಷಯದ ಕುರಿತು ಆಳವಾದ ಜ್ಞಾನ ಪಡೆದಿರಬೇಕು ಅಂತಾರೆ ಜ್ಯೋತಿ.

ಇವರೇ ಮೊದಲು
ಆನ್‌ಲೈನ್‌ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಮೊದಲ ಕನ್ನಡತಿ ಈಕೆಯಂತೆ. ಈ ಬಗ್ಗೆ ಜ್ಯೋತಿ ಅವರಿಗೆ ಗೊತ್ತಾಗಿದ್ದು ಸಂದರ್ಶನದ ವೇಳೆಯಲ್ಲಿ. ಆನಂತರ, ಇಬ್ಬರು ಸ್ನೇಹಿತರನ್ನೂ ಇದೇ ಸಂಸ್ಥೆಗೆ ಸೇರಿಸುವಲ್ಲಿಯೂ ನೆರವಾಗಿದ್ದಾರೆ ಇವರು. ಇವರ ಸಲಹೆಯಂತೆ ಅತ್ತಿಗೆ ನಿವೇದಿತಾ ಬೀಳಗಿ ಹಾಗೂ ವಿಜಯಪುರದ ರೇವಣಸಿದ್ದ ಹಿರೇಮಠ, ಎಂಬವರು ಉದ್ಯೋಗ ಪಡೆದಿದ್ದಾರೆ.

“ನನಗೆ ಕಾಲು ಮತ್ತು ಬೆನ್ನು ಸ್ವಲ್ಪ ಊನವಾಗಿದೆ. ವೈದ್ಯರಿಂದ ಸಾಕಷ್ಟು ಚಿಕಿತ್ಸೆ ಪಡೆದರೂ, ಅದರಿಂದ ಪ್ರಯೋಜನವಾಗಿಲ್ಲ. ಯಾರಿಗೂ ಭಾರವಾಗದೆ, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬು ಆಸೆಯಿತ್ತು. ಎಷ್ಟು ಪ್ರಯತ್ನಿಸಿದರೂ, ಸರ್ಕಾರಿ ಕೆಲಸ ಸಿಗಲಿಲ್ಲ. ಕೊನೆಗೆ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಈ ಕೆಲಸ ಸಿಕ್ಕಿತು. ವಿದೇಶಿ ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ ಅಂತ ಖುಷಿ ಇದೆ. ನನ್ನ ಹಾಗೇ ಇತರರೂ, ಅಂತರ್ಜಾಲದ ಸಹಾಯ ಪಡೆದು ಬದುಕು ರೂಪಿಸಿಕೊಳ್ಳುವಂತಾಗಲಿ.’
-ಜ್ಯೋತಿ ಮಲ್ಲಪ್ಪ ಬೀಳಗಿ

-ಬಿ.ಟಿ. ಪತ್ತಾರ್‌

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.