ಮಕ್ಕಳಿಗಿಂತ “ಮೇಷ್ಟ್ರೇ’ ತರ್ಲೆ ಜಾಸ್ತಿ…

Team Udayavani, Oct 30, 2019, 5:12 AM IST

ದೊಡ್ಡವರಿಂದ ಸಣ್ಣವರು ಕಲಿಯುತ್ತಾರೋ, ಸಣ್ಣವರನ್ನು ನೋಡಿ ದೊಡ್ಡವರು ಕಲಿಯುತ್ತಾರೊ ಅರ್ಥವೇ ಆಗದು. ಶಾಲೆಗೆ ಕಳಿಸಿಕೊಡುವಾಗ ಮಕ್ಕಳ ಹಣೆಗೆ ನಾ ಕೊಡುವ ಸಿಹಿಮುತ್ತು ಇವನ ಎದೆಯಲ್ಲೂ ಅಸೂಯೆ ಹುಟ್ಟಿಸಿಬಿಟ್ಟಿದೆ.

ಬೆಳಗ್ಗೆ ಆಗುವುದೇ ತಡ, ಮಕ್ಕಳನ್ನು ಶಾಲೆಗೆ ಕಳಿಸುವ ಧಾವಂತ. “ಹಾಸಿಗೆ ಬಿಟ್ಟು ಏಳೋ’ ಎಂಬ ಸುಪ್ರಭಾತದಿಂದ ಶುರುವಾಗಿ “ಬೇಗ ಬೇಗ ಸ್ನಾನ ಮುಗಿಸ್ರೋ’, “ತಿಂಡಿ ತಿನ್ರೊ’, “ಹಾಲು ಕುಡೀರೋ’… ಹೀಗೆ ನಿರಂತರ ಮಂತ್ರಪಠನೆ ಸಾಗುತ್ತಲೇ ಇರುತ್ತದೆ.

ಸಣ್ಣ ಮಕ್ಕಳನ್ನು ಹೇಗಾದರೂ ಎಬ್ಬಿಸಬಹುದು. ಈ “ದೊಡ್ಡ ಮಗು’ ವನ್ನು ಎಬ್ಬಿಸುವುದೇ ಒಂದು ಸಾಹಸ. “ಇನ್ನೈದು ನಿಮಿಷ ಮಲಗಿಬಿಡ್ತೀನಿ ಕಣೇ’ ಎನ್ನುವವರನ್ನು ಎಷ್ಟೋ ಬಾರಿ ತಟ್ಟಿಯೇ ಎಬ್ಬಿಸಬೇಕಾಗುತ್ತದೆ. ಈ ಕಡೆ ಬಂದ್ರೆ, ಆ ಕಡೆ ಹೆಂಚಿನ ಮೇಲೆರೆದ ದೋಸೆ ಗೋವಿಂದ! ದೋಸೆ ಎಬ್ಬಿಸುವ ಬಿಸಿ ಸಟ್ಟುಗ ಕೈಯಲ್ಲಿ ಹಿಡಿದು ಬಂದರೆ ಮಾತ್ರ ತಡಬಡಾಯಿಸಿ ಏಳುವುದು!

ಕಿರಿಯ ಮಗನನ್ನು ಏಳು ಗಂಟೆಗೆ ವ್ಯಾನ್‌ ಹತ್ತಿಸಿದರೆ ಮೂರನೇ ಒಂದಂಶ ಭಾರ ಇಳಿದಂತೆ. ಆಗ ಎರಡನೇ ಮಗನ ಟಿಕ್‌ಟಿಕ್‌ ಟೈಮರ್‌ ಶುರು. ಏಳೂವರೆಗೆ ಮತ್ತೂಬ್ಬ ಮಗನೂ ಬಸ್‌ ಏರಿದರೆ ಉಳಿಯುವವ ಈ “ದೊಡ್ಡ ಮಗ’ ಮಾತ್ರ.

ಅಪ್ಪನೂ ಸ್ಕೂಲಿಗೇ ಹೋಗ್ತಾರೆ ಅಂತ ಮಕ್ಕಳಿಗೆ ಖುಷಿಯೋ ಖುಷಿ. ಅಮ್ಮ, “ಅಪ್ಪಾಜಿ ಎಷ್ಟನೇ ಕ್ಲಾಸು?’ ಎಂಬ ಮುಗ್ಧ ಪ್ರಶ್ನೆ ಅವರಿಂದ ಬಂದದ್ದುಂಟು. “ನಿಮ್ಮಪ್ಪ ಟೀಚರ್ರು ಕಣೊ’ ಎಂದು ಹೇಳಿದರೆ ನಂಬಿಕೆಯೇ ಬರಲ್ಲ ಅವಕ್ಕೆ. “ಅಪ್ಪಾಜಿ ಟೀಚರ್ರಾ?’ ಅನ್ನುವ ಅವರ ಆಶ್ಚರ್ಯವಾಚಕ ವಾಕ್ಯ ನನಗೇನೂ ಅಚ್ಚರಿ ಮೂಡಿಸಲಿಲ್ಲ. “ನಾನು ಸ್ಕೂಲಲ್ಲಿ ಮಾತ್ರ ಟೀಚರ್‌ ಕಣೊ ಮನೆಯಲ್ಲಿ ನಮಗೆಲ್ಲ ನಿಮ್ಮಮ್ಮನೇ ಟೀಚರು’ ಎಂದು ಬೆನ್ನು ತುರಿಕೆ ಬಂದವರಂತೆ ಮಾತನಾಡುವವರಿಗೆ, ಗುದ್ದದೇ ಇರುವುದಾದರೂ ಹೇಗೆ?

ಸಣ್ಣ ಮಕ್ಕಳೆಲ್ಲ ಮನೆ ಬಿಟ್ಟ ಮೇಲೆ ಈ ದೊಡ್ಡ ಮಗನನ್ನು ಸುಧಾರಿಸುವುದೇ ಆಗುತ್ತದೆ. ಹಿಂದಿನ ರಾತ್ರಿ ಎಲ್ಲಾ ಕೆಲಸ ಮುಗಿಸಿ ತೂಕಡಿಸುತ್ತಲೇ ಗರಿಮುರಿಯಾಗಿ ಇಸ್ತ್ರಿ ಮಾಡಿಟ್ಟ ಪ್ಯಾಂಟ್‌-ಶರ್ಟ್‌ ಏರಿಸಿಕೊಳ್ಳುವಾಗಲೂ ಕೀಟಲೆಯೇ. “ಈ ಪ್ಯಾಂಟಿನ ಹುಕ್‌ ಲೂಸ್‌ ಆಗಿದ್ಯಲ್ಲೇ’ ಅಂತಲೋ “ಶರ್ಟ್‌ ನ ಬಟನ್‌ ಬಿದ್ದು ಹೋಗಿದೆ ಕಣೇ’ ಅಂತಲೋ ಕರೆಯೋದು. ಸೂಜಿ-ದಾರ ಹಿಡ್ಕೊಂಡು ಬಂದ್ರೆ, “ಈಗಾಗಲೇ ಅರ್ಧ ಹಾಕ್ಕೊಂಡು ಬಿಟ್ಟಿದ್ದೀನಿ, ಇಲ್ಲೇ ಹೊಲಿದು ಬಿಡೇ’ ಅಂತ ಕಾಡುವುದು!

ದೊಡ್ಡವರಿಂದ ಸಣ್ಣವರು ಕಲಿಯುತ್ತಾರೋ, ಸಣ್ಣವರನ್ನು ನೋಡಿ ದೊಡ್ಡವರು ಕಲಿಯುತ್ತಾರೊ ಅರ್ಥವೇ ಆಗದು. ಶಾಲೆಗೆ ಕಳಿಸಿಕೊಡುವಾಗ ಮಕ್ಕಳ ಹಣೆಗೆ ನಾ ಕೊಡುವ ಸಿಹಿಮುತ್ತು ಇವನ ಎದೆಯಲ್ಲೂ ಅಸೂಯೆ ಹುಟ್ಟಿಸಿಬಿಟ್ಟಿದೆ. ಟಿಫಿನ್‌ ಬಾಕ್ಸ್ ಮತ್ತು ವಾಟರ್‌ ಬಾಟಲ್‌ ಹಾಕಿಕೊಂಡ ಬ್ಯಾಕ್‌ ಪ್ಯಾಕ್‌ನ್ನು ಸ್ಕೂಲ್‌ ಬ್ಯಾಗ್‌ ಶೈಲಿಯಲ್ಲೇ ಹೆಗಲಿಗೇರಿಸಿಕೊಂಡು ಹೊರಡುವಾಗ ತನ್ನ ಕೆನ್ನೆಯನ್ನು ನನ್ನ ಮುಖದ ಮುಂದೆ ತರುತ್ತಾನೆ. ಅದಕ್ಕೆ ಮೆಲ್ಲನೆ ಒಂದು ಪೆಟ್ಟು ಕೊಟ್ಟೋ, ಚಿವುಟಿಯೋ ಅಥವಾ ಅಪೇಕ್ಷಿತ “ಮಾಮೂಲಿ’ ಕೊಟ್ಟೋ ಈ ದೊಡ್ಡ ಮಗನನ್ನು ಸಾಗಹಾಕಿ ನಿರಾಳತೆಯ ಉಸಿರನ್ನು ಒಳಗೆಳೆದುಕೊಳ್ಳುತ್ತೇನೆ ಸೋಫಾದಲ್ಲಿ ಕುಳಿತು. ಮುಂದಿನ ಕೆಲಸ ನೆನಪಾಗುವಲ್ಲಿಯವರೆಗೆ ಮಾತ್ರ…

ಶರ್ವಾಣಿ ಭಟ್‌, ಗೋವಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪರೀಕ್ಷೆ ಎಂದರೆ, ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಆತಂಕದ ವಿಚಾರ. ಓದಿದ್ದೆಲ್ಲ ಪರೀಕ್ಷೆ ದಿನ ನೆನಪಾಗುತ್ತೋ ಇಲ್ಲವೋ ಎಂದು ಮಕ್ಕಳು ಹೆದರಿದರೆ, ಅವರು ಸರಿಯಾಗಿ...

  • ವಯಸ್ಸಾದ ಮೇಲೆ ಮಕ್ಕಳ ಮನೆಯಲ್ಲಿದ್ದುಕೊಂಡು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಬದುಕಬೇಕೆಂಬುದು ಹೆಚ್ಚಿನವರ ಕನಸು. ಆದರೆ, ಅಂದುಕೊಂಡಂತೆಯೇ ಬಾಳುವ ಅದೃಷ್ಟ...

  • ಎಸ್ಸೆಸ್ಸೆಲ್ಸಿವರೆಗಷ್ಟೇ ಓದಿರುವ ಸುಬ್ಬಲಕ್ಷ್ಮಿ, ಕುಟುಂಬ ನಿರ್ವಹಣೆಗಾಗಿ ಅವಲಕ್ಕಿ ತಯಾರಿಸಿ ಮಾರಲು ಆರಂಭಿಸಿದರು. ಅದೀಗ, ಒಂದು ಫ್ಯಾಕ್ಟರಿಯಾಗಿ ಬೆಳೆದಿದೆ... ಅಕ್ಕಿ...

  • ಕಾಮನಬಿಲ್ಲು ಇದಕೆ ಸಾಟಿಯಲ್ಲ, ಋಷಿಗಳ ಸಂಯಮವೂ ಇದರ ಮುಂದೆ ನಿಲ್ಲೋದಿಲ್ಲ ಅಂತ ಕವಿಗಳಿಂದ ಹೊಗಳಿಸಿಕೊಂಡ ಆಭರಣ ಬಳೆ. ಕೈಗೆ ಸಿಂಗಾರವಾಗಿ, ಶುಭದ ಸಂಕೇತವಾದ ಈ ಬಳೆಗಳನ್ನು...

  • ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ...

ಹೊಸ ಸೇರ್ಪಡೆ