ಆ ಫೋಟೊ ನನ್ನ ದೊಡ್ಡ ಆಸ್ತಿ

ಆ ಫೋಟೋದಲ್ಲಿದೆ ನೂರು ಮಾತು, ಸಾವಿರ ನೆನಪು!

Team Udayavani, Jul 17, 2019, 5:27 AM IST

ಸೆಲೆಬ್ರಿಟಿ ನಟಿಯೊಬ್ಬಳು ಆಗಾಗ ನೆನಪಿಸಿಕೊಳ್ಳುವ ಸಂಗತಿ, ಪದೇ ಪದೆ ನೋಡುವ ಫೋಟೊ ಯಾವುದಿರಬಹುದು? ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಮೊದಲ ರ್‍ಯಾಂಪ್‌ ವಾಕ್‌, ಅದ್ಧೂರಿ ಫೋಟೊಶೂಟ್‌ ಅಥವಾ ಯಾವುದಾದರೂ ಪ್ರಶಸ್ತಿ ಸ್ವೀಕರಿಸುವ ಸಂದರ್ಭದ ಫೋಟೊ ಅಂದುಕೊಂಡಿರಾ? ಉಹೂಂ, ಬಾಲ್ಯದಲ್ಲಿ ಅಪ್ಪ-ಅಮ್ಮನ ಜೊತೆಗೆ ತೆಗೆಸಿಕೊಂಡ ಆ “ಒಂದು ಫೋಟೊ’ವೇ ನನ್ನ ಪಾಲಿನ ಬಹು ದೊಡ್ಡ ಆಸ್ತಿ ಅಂತಿದ್ದಾರೆ ಬಾಲಿವುಡ್‌ ನಟಿ ದಿಯಾ ಮಿರ್ಜಾ.

ಸಣ್ಣ ಮಗುವಾಗಿದ್ದಾಗ ಅಪ್ಪ-ಅಮ್ಮನ ಜೊತೆ ತೆಗೆಸಿಕೊಂಡ ಒಂದು ಫೋಟೊ, ದಿಯಾ ಜೀವನದ ಅತ್ಯಂತ ಬೆಲೆಬಾಳುವ ವಸ್ತುವಂತೆ. ಯಾಕಂದ್ರೆ, ಬೇಬಿ ದಿಯಾ ಹಾಗೂ ಅಪ್ಪ-ಅಮ್ಮ ಜೊತೆಯಾಗಿ ಇರುವ ಫೋಟೊ ಅದೊಂದೇ ಅಂತೆ. “ಮುಂಬೈ ಮಿರರ್‌’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ದಿಯಾ ಈ ವಿಷಯವನ್ನು ಹೇಳಿಕೊಂಡಿದ್ದಾರೆ. “ಅಪ್ಪ-ಅಮ್ಮನ ಜೊತೆಗಿರೋ ಬಾಲ್ಯದ ಒಂದೇ ಒಂದು ಫೋಟೊ ನನ್ನಲ್ಲಿದೆ. ಆ ಫೋಟೊವೇ ನನ್ನ ಬಳಿ ಇರುವ ಬೆಲೆ ಕಟ್ಟಲಾಗದ, ಅಮೂಲ್ಯ ವಸ್ತು. ಅದನ್ನು ತುಂಬಾ ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ನನ್ನ ರೀತಿ, ಅಪ್ಪ-ಅಮ್ಮನ ಜೊತೆಗೆ ಒಂದೇ ಒಂದು ಫೋಟೊ ಇದೆ ಅಂತ ಹೇಳುವವರ ಸಂಖ್ಯೆ ಬಹಳ ಇರಲಾರದು ಅಂತ ನನ್ನ ಅನಿಸಿಕೆ. ಆ ಒಂದು ಫೋಟೊದಲ್ಲಿ ಸಾವಿರ ಮಾತುಗಳು, ನೆನಪುಗಳು ಅಡಗಿವೆ’ ಅಂತ ಅವರು ಹಂಚಿಕೊಂಡಿದ್ದಾರೆ.

ದಿಯಾ ತಂದೆ ಫ್ರಾಂಕ್‌ ಹ್ಯಾಂಡ್ರಿಚ್‌ ಜರ್ಮನಿಯವರು, ತಾಯಿ ದೀಪಾ ಮಿರ್ಜಾ, ಬಂಗಾಳಿಯವರು. ನನ್ನ ಅಪ್ಪ ಉತ್ತಮ ಫೋಟೋಗ್ರಾಫ‌ರ್‌ ಆಗಿದ್ದರು. ಅವರು, ನನ್ನ ಮತ್ತು ಅಮ್ಮನ ಫೋಟೊಗಳನ್ನು ತೆಗೆಯುತ್ತಿದ್ದುದು ನೆನಪಿದೆ. ಆದರೆ, ನನಗೆ ಐದು ವರ್ಷವಾಗಿದ್ದಾಗ ಅಪ್ಪ-ಅಮ್ಮ ವಿಚ್ಛೇದನ ಪಡೆದರು. ಒಂಬತ್ತು ವರ್ಷವಾಗಿದ್ದಾಗ ಅಪ್ಪ ತೀರಿಕೊಂಡರು. ಹಾಗಾಗಿ, ಅವರೊಂದಿಗೆ ಇರುವ ಫೋಟೊ ಅದೊಂದೇ ಅಂತಲೂ ದಿಯಾ ನೆನಪಿಸಿಕೊಂಡಿದ್ದಾರೆ.

ದಿಯಾ, ಕಳೆದ ವರ್ಷ ತೆರೆ ಕಂಡ “ಸಂಜು’ ಚಿತ್ರದಲ್ಲಿ ನಟಿಸಿದ್ದು, ಸದ್ಯ ವೆಬ್‌ಸೀರೀಸ್‌ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರಕೃಪೆ: ಮುಂಬೈ ಮಿರರ್‌

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಮನೆಯಲ್ಲಿ ಕಡು ಬಡತನ. ಐದು ಜನ ಹೆಣ್ಣು ಮಕ್ಕಳನ್ನು ಸಾಕಲು ಹೆತ್ತವರು ಪರದಾಡಬೇಕಾದ ಪರಿಸ್ಥಿತಿ. ಚೆನ್ನಾಗಿ ಓದಿ, ಜಿಲ್ಲಾಧಿಕಾರಿ ಆಗುವ ಕನಸು ಕಂಡಿದ್ದ ಹಿರಿಯ...

  • ಯಥೇಚ್ಛ ಬೆಳೆಯನ್ನು ಕೊಟ್ಟ ಭೂಮಿತಾಯಿಗೆ, ಬೆಳೆ ತೆಗೆಯಲು ಸಹಕರಿಸಿದ ಜಾನುವಾರುಗಳಿಗೆ ಕೃತಜ್ಞತೆ ಹೇಳಲೆಂದು ಆಚರಿಸುವ ಹಬ್ಬ-ಸಂಕ್ರಾಂತಿ. "ಎಳ್ಳು-ಬೆಲ್ಲ ತಿಂದು...

  • ಅವರು ಎಲ್ಲರ ಮುಂದೆ ಅವಮಾನ ಮಾಡಲು ಬಂದಾಗ, ಅಮ್ಮ -"ನಿಮ್ಮ ವಸ್ತುವನ್ನು ನಾವು ಕದ್ದಿಲ್ಲ. ಅನುಮಾನವಿದ್ದರೆ ನೀವೇ ಮನೆಯೊಳಗೆ ಬಂದು ಹುಡುಕಿ' ಅಂತಷ್ಟೇ ಹೇಳಿ, ಬಾಗಿಲಿನಿಂದ...

  • "ಗಂಡಿನವರು ಕುಳಿತಿದ್ದಾರೆ ಬಾರೇ...'ಎಂದು ಎಷ್ಟು ಹೇಳಿದರೂ ಕೇಳದೆ, ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು...

  • ಸೀರಿಯಲ್‌ಗ‌ಳಿಗೂ ಹೆಣ್ಣುಮಕ್ಕಳಿಗೂ ಬಿಡದ ನಂಟು. ಅದೆಷ್ಟೋ ಮಂದಿ, ಸೀರಿಯಲ್‌ನ ಪಾತ್ರಗಳಲ್ಲಿ ತಮ್ಮನ್ನೇ ಕಾಣುವುದುಂಟು! ಒಂದು ಧಾರಾವಾಹಿ ಮುಗಿದರೆ, "ಅಯ್ಯೋ, ಮುಗಿದೇ...

ಹೊಸ ಸೇರ್ಪಡೆ