ಅದೆಂತದೋ ಕ್ಯಾನ್ಸರ್‌ ಅಂಬ್ರಪ…


Team Udayavani, Apr 18, 2018, 5:06 PM IST

adentado.jpg

ಕೆಲಸ ರಾಶಿ ಬಿಜ್ಜು. ಅಡ್ಕೆ ಕೊಯ್ಯಲೆ ಹೋಗವ್ವು. ಸಂತೀಗೆ ಪಪ್ಪಾಯಿ ಹಣ್ಣು ತಗಂಡು ಹೋಗವ್ವು. ಇದರ ಮಧ್ಯೆ ಬಾಯಿ ಹುಣ್ಣು ಆಗೋಜು ಹೇಳಿ ಡಾಕ್ಟ್ರ ಹತ್ರ ಹೋದ್ರೆ ಅದೆಂತಧ್ದೋ ಕ್ಯಾನ್ಸರು ಹೇಳಿಗಿದ ಮಾರಾಯ…ಅಂದಳು!

ಬಾಯಿ ಕಿರಿದು ನಕ್ಕಾಗ ಮೂರು ನಾಲ್ಕು ಹಲ್ಲು ಕಂಡರೆ ಪುಣ್ಯ! ಅದನ್ನೆಲ್ಲ ಯೋಚಿಸುವವರ್ಯಾರು ಎಂಬಂತೆ ಬಾಯಿ ಬಿಟ್ಟು ನಗುತ್ತಾಳೆ. “ಅಪ್ಪಿ, ಯಾವಾಗ ಬಂದೀರಿ? ನಾಲ್ಕು ದಿನ ಆದ್ರೂ ಉಳ್ಕಂಲೆ? ಎಂತಾ ಸಾಲಿಯೇ ನಿಮ್ದು?’ ಎಂದು ಬೊಚ್ಚು ಬಾಯಿ ಅಗಲಿಸಿ ಮತ್ತೆ ತನ್ನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾಳೆ. ಶಾಲೆ, ಕಾಲೇಜು ಎಂದು ಯಾವಾಗಲೂ ಹಾಸ್ಟೆಲಿನಲ್ಲಿದ್ದು ಅಪರೂಪಕ್ಕೊಮ್ಮೆ ಮನೆಗೆ ಹೋದರೆ ಅವಳ ಈ ಪ್ರಶ್ನೆ ಕಾದಿರುತ್ತದೆ.

“ನಾ ಅಕ್ಕನಾ? ತಂಗಿನಾ? ಹೇಳು ಕಾಂಬ’ ಎಂದು ಅವಳನ್ನು ಸತಾಯಿಸುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಅವಳು ಎಷ್ಟೋ ಬಾರಿ ನನ್ನನ್ನು ನನ್ನ ತಂಗಿಯೆಂದೂ, ನನ್ನ ತಂಗಿಯನ್ನು ನಾನೆಂದು ಯೋಚಿಸಿ ಮಾತನಾಡುವುದುಂಟು. “ಕಣ್ಣು ಸಮ ಹೊಳುದಿಲ್ಯೆ. ಅಕ್ಕ ಅಮಾಗದ್ಯಪ್ಪ. ಹಾಂಗೆ ಗೊತ್ತಾಪ್ಪುದಿಲ್ಯೆ ಅಂದ್ಕಂಡಿರ್ಯಾ? ಕಪ್ಪಾಯ್ತು. ಒಂದು ಕವಳಕ್ಕೆ ಕೊಡ್ರೆ’ ಎನ್ನುತ್ತಿರುತ್ತಾಳೆ. ಅವಳು ಕವಳ ಪ್ರಿಯೆ.

ಊರೆಲೆಗೆ ಸುಣ್ಣ ಹಚ್ಚಿ ಅಡಕೆ ಹೊಗೆಸೊಪ್ಪಿನ ಕವಳ ಕೊಟ್ಟರೆ, “ನಿಮ್ಮ ಅಜ್ಜಿ ಹೀಂಗೇ ಕವಳ ಕೊಡ್ತಿರು’ ಎಂದು ಅಜ್ಜಿಯ ನೆನಪಿಸುವಳು. “ಸುಣ್ಣ ಹಾಕಂಡು ಕವಳ ಹಾಕಕರೆ ಬಾಯಿ ಉರುದಿಲ್ಯೆ ಅಲಾ ನಿಂಗೆ ? ಹುಳಿ ಬಗೀಲ್‌ ಖಾರ ಆದ್ರೂ ಖಾರ ಖಾರ ಅಂತ್ಯಲೆ’ ಕವಳ ಕೊಡುವಾಗ ನನ್ನ ಈ ಮಾತು ಕೇಳಿ ಕೇಳಿ ಅವಳಿಗೂ ಅಭ್ಯಾಸವಾಗಿ ಹೋಗಿದೆ. “ಕವಳ ಒಂದಿದ್ರೆ ಕೆಲ್ಸ ಮಾಡ್ಲಕ್ಕು, ಇಲ್ದಿದ್ರೆ ಅಪ್ಪುದಿಲ್ಯೆ.

ಯಾರ್‌ ಅವ್ರೆ ನಂಗೆ? ಗಂಡ ಸಾರಾಯ್‌ ಕುಡುª ಕುಡುª ನಮ್ಮನ್‌ ಹಾದಿ ಮೇಲ್‌ ಹಾಕ್ದ. ಮಗ ಮದೀನೂ ಆಗ್ಲಿಲ್ಲ. ಅವ್ನೂ ಅಪ್ಪನಾಂಗೆ ಮಾಡಿ ಹೊಟ್ಟೆಗ್‌ ಬೆಂಕಿ ಹಾಕ್ದ. ಮಗ ಕುಡ್ಕಂದು ಬಂದು ನಂಗ್‌ ಬಯ್ತಿದ್ದ. ಆದ್ರೂ ಕಣ್‌¡ ಮುಂದಿದ್ದಿದ್ದ. ನಾನೇ ಕೂಳು ಹಾಕಿ ಸಾಕ್ತಿದ್ದೆ. ಅವ್ನೂ ಹೋದ. ಎಂತಾ ಮಾಡುದು? ನಾ ಒಬ್ಳು ಯಾವಾಗ ಹೋತೆ ಅಂತ್‌ ಕಾಂತವೆ°’ ಎಂದು ನಿಟ್ಟುಸಿರಿಡುವಳು.

ದಿನವೂ ಸಣ್ಣ ಸಣ್ಣ ವಿಷಯಕ್ಕೇ ಬೇಜಾರು ಮಾಡಿಕೊಳ್ಳುವ ನಾನೆಲ್ಲಿ? ಬಂದದ್ದನ್ನು ಅದೇ ರೀತಿ ಸ್ವೀಕರಿಸುವ ಅವಳೆಲ್ಲಿ? ಬದುಕಿನಲ್ಲಿ ಅತಿ ಘೋರವಾದ್ದೆಂದರೆ ಇದೇ ಇರಬಹುದು. ಆಕೆಗೆ ನನ್ನವರು ಎನ್ನುವವರು ಯಾರೂ ಇಲ್ಲ. ಜೀವನ ಪೂರ್ತಿ ಜೊತೆಯಲ್ಲಿರುತ್ತೇನೆಂದು ಬಂದಾತನ ಪಯಣ ಅರ್ಧಕ್ಕೇ ಮುಗಿದಿತ್ತು. ಹೆಣ್ಣು ಮಗಳು ಆಸ್ತಿಗಾಗಿ ಪೀಡಿಸಿದಳು ಎಂದು ತವರು ದೂರಾಯ್ತು.

ಕುಡುಕ ಗಂಡನ ಬಗ್ಗೆ ಚಿಂತಿಸದಿದ್ದರೂ ಹೆತ್ತ ಮಗನ ಹೊಟ್ಟೆಗೆ ಹಿಟ್ಟು ಬೇಯಿಸಬೇಕಿತ್ತಲ್ಲವೆ? ಹೆಣ್ಣು ಮಗಳು ಆಸ್ತಿಯಲ್ಲಿ ಪಾಲು ಕೇಳಿದ್ದು ತಪ್ಪೇ? ತನ್ನ ಮಗನ ಹಸಿವೆ ನೀಗಿಸಲು ಹುಟ್ಟಿ ಬೆಳೆದ ತವರೂರಿನ ಸಂಬಂಧ ಕಡಿದುಕೊಳ್ಳಲು ಸಿದ್ಧಳಾಗಿದ್ದಳೇ? ಮಾತೃ ಹೃದಯವೆಂದರೆ ಇದೇ! ಅವಳಿಗೆ ಗಂಡನ ಮೇಲಿನ ಪ್ರೀತಿ ಮರೆಯಾದದ್ದೇಕೆ? ಅವನು ಕುಡುಕನೆಂದೇ? ಕೆಲಸ ಮಾಡದ ಬೇಜವಾಬ್ದಾರಿಯೆಂದೇ ಅಥವಾ ಪ್ರೀತಿ-ಪ್ರೇಮ ಭಾವಗಳ ಬಗ್ಗೆ ಅವಳು ಯೋಚಿಸಿದ್ದಳೇ? ಕೆಲವೊಮ್ಮೆ ಇದೆಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.

ಹಳತಾದ ಗಾಯಗಳ ಹುಡುಕಿ ಹುಡುಕಿ ಕೆರೆಯಬಾರದೆಂದು ಸುಮ್ಮನಾಗುತ್ತೇನೆ. “ಥೂ, ಕಪ್‌ ಕಪ್‌ ಆಪ್ಪತಿಗೆ ಎಂತ ಹಾಂಗೆಲ್ಲ ಮಾತಾಡ್ತೆ. ಬಾಯಿ ಹುಣ್ಣು ಡಾಕ್ಟ್ರಿಗೆ ತೋರ್ಸಿದ್ಯ?’ ಎಂದೆ. “ಹೌದೇ. ಹಂಬ್ಲೇ ಇಲ್ಯೆ ಹೇಳುಕೆ. ಅದೆಂತದೋ ಕ್ಯಾನ್ಸರ್‌ ಅಂಬ್ರಪ. ಒಂದು ತಿಂಗ್ಳೂ ಮಂಗಳೂರಿಗೆ ಹೂಬೇಕಂಬ್ರು. ಮುಂದನ್‌ ತಿಂಗ್ಳೂ ಹುಂಡಿಮನೆಗೆ ಅಡ್ಕೆ ಸೊಲುಕ್‌ ಹೋಬೇಕಿತ್ತು. ಡಾಕ್ಟ್ರು ಅಷ್ಟ್ರಲ್ಲಿ ಬಿಟ್ರ ಸಾಕೇ ನನ್ನ. ನಾಳೆ ಸಂತಿಗ್‌ ಪಪ್ಪಳೆಕಾಯಿ ತಕಂಡು ಹೋಬೇಕು.

ಬತ್ತೆ ಅಕಾ’ ಎನ್ನುತ್ತಾ ಹೊರಟೇ ಬಿಟ್ಟಳು ನಸುಗಪ್ಪಿನಲ್ಲಿಯೇ, ಪಪ್ಪಾಯಿ ಹಣ್ಣುಗಳನ್ನು ಕೊಯ್ದು ಭಾನುವಾರದ ಸಂತೆಗೆ ತೆಗೆದುಕೊಂಡು ಹೋಗುವ ತರಾತುರಿಯಲ್ಲಿ. ಅಷ್ಟು ಸುಲಭವಾಗಿ ಕ್ಯಾನ್ಸರ್‌ ಎಂದಳಲ್ಲವೇ. ಕ್ಯಾನ್ಸರ್‌ನ ಭೀಕರತೆ ಅವಳಿಗೆ ಗೊತ್ತಿಲ್ಲವೇ? ಯಾರೂ ಇಲ್ಲದ ಅನಾಥೆ, ಅತ್ತರೆ ಕೇಳುವವರ್ಯಾರು ಎಂಬ ಕಠೊರ ದುಃಖವೇ? ಆಶಾಜೀವಿ ಅವಳು, ವಿಧಿಚಿತ್ತವ ಹಲುಬದೇ ಪಾಲಿಸುವವಳೆ?….

* ವಾರಿಜಾ ಹೆಬ್ಟಾರ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.