ಆ್ಯಂಗ್ರಿ ಬ್ರೈಡ್‌…ವಧುಪರೀಕ್ಷೆಯೂ, ನನ್ನ ಕೋಪವೂ…

Team Udayavani, Feb 26, 2020, 5:15 AM IST

ಸಂಜೆ ನಾಲ್ಕು ಗಂಟೆಯಾದರೂ ಹುಡುಗನ ಕಡೆಯವರು ಬರದೇ ಇದ್ದಾಗ, ಮನೆಯಲ್ಲಿ ನೆರೆದವರು ತಲೆಗೊಂದು ಮಾತನಾಡತೊಡಗಿದರು. ಲವ್‌ ಮಾಡಿದರೆ ಹೀಗೇ ಆಗುವುದು. ಹುಡುಗ ನಂಬಿಸಿ ಮೋಸ ಮಾಡಿದ್ದಾನೆ. ಇನ್ನು ಅವನು ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದರು.

ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಮದುವೆಯಾದರೆ ಇಬ್ಬರ ಮನೆಯವರನ್ನೂ ಒಪ್ಪಿಸಿಯೇ ಆಗುವುದೆಂದು ನಿರ್ಧರಿಸಿದ್ದೆವು. ಇಬ್ಬರ ಕಡೆಯವರನ್ನು ಒಪ್ಪಿಸಿಯೂ ಆಯಿತು. ಪ್ರೇಮ ವಿವಾಹವಾದರೂ, ಮದುವೆಯ ಎಲ್ಲಾ ಶಾಸ್ತ್ರಗಳೂ ನಡೆಯಬೇಕೆಂದು ಹಿರಿಯರ ಆಸೆಯಾಗಿತ್ತು. ಅದೇ ರೀತಿ, ಮೊದಲು ವಧು ಪರೀಕ್ಷೆಯ ಶಾಸ್ತ್ರ ಇಂಥ ದಿನ, ಇಷ್ಟು ಗಂಟೆಗೆ ಎಂದು ನಿರ್ಧಾರವಾಯ್ತು.

ಆ ದಿನ ಬೆಳಗ್ಗೆಯಿಂದಲೇ ನಮ್ಮ ಮನೆಯಲ್ಲಿ ಹುಡುಗನ ಕುಟುಂಬದವರನ್ನು ಸ್ವಾಗತಿಸಲು ತಯಾರಿ ನಡೆದಿತ್ತು. 11 ಗಂಟೆಯ ಸುಮಾರಿಗೆ ಬರುತ್ತೇವೆಂದು ಅವರು ಹೇಳಿದ್ದರು. ನಮ್ಮ ಸಂಬಂಧಿಕರು, ನೆರೆ-ಹೊರೆಯವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನೆಯಲ್ಲಿ ಸೇರಿದ್ದರು. ಗಂಟೆ 12 ಕಳೆದು, ಮಧ್ಯಾಹ್ಯ 2 ಗಂಟೆಯಾದರೂ ಹುಡುಗನ ಕಡೆಯವರ ಪತ್ತೆ ಇಲ್ಲ. ಆಗ ಮೊಬೈಲ್‌ ಕೂಡಾ ಇರಲಿಲ್ಲ. ನಮ್ಮ ಹಾಗೂ ಅವರ ಮನೆಯಲ್ಲಿ ಲ್ಯಾಂಡ್‌ ಫೋನ್‌ ಕೂಡ ಇರಲಿಲ್ಲ. ಹೀಗಾಗಿ, ಎಲ್ಲರಲ್ಲೂ ಒಂದು ರೀತಿಯ ದುಗುಡ ಆರಂಭವಾಗಿತ್ತು.

ಸಂಜೆ ನಾಲ್ಕು ಗಂಟೆಯಾದರೂ ಹುಡುಗನ ಕಡೆಯವರು ಬರದೇ ಇದ್ದಾಗ, ಮನೆಯಲ್ಲಿ ನೆರೆದವರು ತಲೆಗೊಂದು ಮಾತನಾಡತೊಡಗಿದರು. ಲವ್‌ ಮಾಡಿದರೆ ಹೀಗೇ ಆಗುವುದು. ಹುಡುಗ ನಂಬಿಸಿ ಮೋಸ ಮಾಡಿದ್ದಾನೆ. ಇನ್ನು ಅವನು ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದರು. ನನಗೆ ಅಳುವುದೊಂದೇ ಬಾಕಿ. ಆದರೆ, ಹುಡುಗನ ಬಗ್ಗೆ ನನಗೆ ವಿಶ್ವಾಸವಿತ್ತು. ಅದನ್ನು ಅವರಿಗೆಲ್ಲ ತಿಳಿಸಿ ಹೇಳುವುದು ಹೇಗೆ? ನಮ್ಮ ಮನೆಯವರು ಅವಮಾನದಿಂದ ಕುಗ್ಗಿ ಹೋಗಿದ್ದರು. “ನಿನಗೇಕೆ ಬೇಕಿತ್ತು ಪ್ರೇಮ-ಗೀಮ’ ಅಂತ ಬೈಯತೊಡಗಿದರು. ಬಂದವರೆಲ್ಲ ತಮ್ಮ ತಮ್ಮ ಮನೆಗೆ ಹೊರಟು ನಿಂತು “ಆದದ್ದು ಆಯಿತು. ಮನೆಯಲ್ಲಿ ಬೇರೆ ಹುಡುಗನನ್ನು ಹುಡುಕುತ್ತಾರೆ. ಅವನನ್ನು ಮರೆತು ಬಿಡು’ ಎಂದು ಬುದ್ಧಿವಾದ ಹೇಳಿ ಹೊರಟು ಹೋದರು.

ಎಲ್ಲರೂ ಅತ್ತ ಹೊರಟು ಹೋದ ಮೇಲೆ, ಸಂಜೆ 5 ಗಂಟೆ ನಂತರ ಹುಡುಗ ಹಾಗೂ ಅವರ ಕಡೆಯವರೆಲ್ಲ ಬಂದಿಳಿದರು. ನಾನು ಕೋಪದಿಂದ ಹೊರಗೆ ಬರಲೇ ಇಲ್ಲ. ಬೆಳಗ್ಗೆ ಮಾಡಿಕೊಂಡಿದ್ದ ಅಲಂಕಾರವನ್ನೆಲ್ಲ ತೆಗೆದು ಹಾಕಿ ಮಂಕಾಗಿ ಕುಳಿತುಬಿಟ್ಟಿದ್ದೆ. ತಡವಾಗಿ ಬಂದುದಕ್ಕೆ ಅವರು ಕೊಟ್ಟ ಕಾರಣ ಕೇಳಿ, ನನ್ನ ಕೋಪ ಇನ್ನೂ ಜಾಸ್ತಿಯಾಗಿತ್ತು. ಅವತ್ತು ಏನಾಗಿತ್ತೆಂದರೆ, ಅವರ ಕಡೆಯ ಹಿರಿಯರನ್ನು ಕರೆ ತರಲು 20 ಕಿ.ಮೀ ದೂರದ ಊರಿಗೆ ಹುಡುಗ ಹೋಗಿದ್ದ. ತುಂಬಾ ವರ್ಷಗಳ ನಂತರ ಬಂದ ಇವರಿಗಾಗಿ ವಿಶೇಷ ಅಡುಗೆ ಮಾಡಿ ಬಡಿಸಿ, ಅವರು ಅಲ್ಲಿಂದ ಹೊರಡುವಷ್ಟರಲ್ಲಿ ಮೂರು ಗಂಟೆಯಾಗಿದೆ. ಅಲ್ಲಿಂದ ಬರುವಾಗ ಬಸ್‌ ಕೂಡಾ ಪಂಕ್ಚರ್‌! ಬೇರೊಂದು ವಾಹನದಲ್ಲಿ ಬಂದು ನಮ್ಮ ಮನೆ ಸೇರುವಾಗ ಸಂಜೆ ಐದು ಗಂಟೆ ದಾಟಿತ್ತು.

ಹೀಗೆ, ಗಾಬರಿ, ದುಗುಡದಲ್ಲಿ ನನ್ನ ವಧು ಪರೀಕ್ಷೆಯ ಶಾಸ್ತ್ರ ಮುಗಿದಿತ್ತು. ಅವತ್ತು ಸಿಟ್ಟಿನಲ್ಲಿ ನಾನು ನನ್ನ ಹುಡುಗನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಗೆ ಬೀಳ್ಕೊಡುವಾಗ ಅವರನ್ನು ಮಾತನಾಡಿಸಲೂ ಇಲ್ಲ. ಅವರು ಅಲ್ಲಿಂದ ತೆರಳಿ ನಾಲ್ಕಾರು ಪತ್ರಗಳನ್ನು ಬರೆದು ಕ್ಷಮೆ ಕೇಳಿದಾಗ ನನ್ನ ಮನಸ್ಸು ಕರಗಿತ್ತು. ನಂತರ ಒಂದು ತಿಂಗಳಲ್ಲಿ ಎಲ್ಲರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯೂ ಮುಗಿದಿತ್ತು.

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ [email protected]ಗೆ ಬರೆದು ಕಳಿಸಿ.)

-ಗೌರಿ ಚಂದ್ರಕೇಸರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಯುಗಾದಿಯೂ ಒಂದು. ಪ್ರತಿ ಬಾರಿಯೂ ಹಸಿರನ್ನು, ಆ ನೆಪದಲ್ಲಿ, ಸಂಭ್ರಮ, ಸಂತೋಷ, ಸಡಗರವನ್ನು ಹೊತ್ತು ತರುವುದು ಯುಗಾದಿಯ ವಿಶೇಷ....

  • ಚಂದದ ದಿರಿಸಿಗೆ ಅಂದದ ಒಡವೆ ಧರಿಸಿದರೇ ಚೆನ್ನ. ಒಡವೆ ಅಂದರೆ ಬಂಗಾರದ್ದೇ ಆಗಬೇಕಿಲ್ಲ. ಚಿನ್ನವನ್ನೇ ನಾಚಿಸುವಷ್ಟು ಚೆನ್ನಾಗಿರುವ ಕೃತಕ ಆಭರಣಗಳು ಈಗ ಎಲ್ಲರ ಮೆಚ್ಚುಗೆ...

  • ಹಬ್ಬದ ಸಂಭ್ರಮವನ್ನು ಕೊರೊನಾ ನುಂಗಿಬಿಟ್ಟಿದೆ. ಮನೆಯಿಂದ ಹೊರಗೆ ಹೋಗುವಂತಿಲ್ಲ. ಯುಗಾದಿ ಶಾಪಿಂಗ್‌ ಮಾಡೇ ಇಲ್ಲ ಅಂತಿದ್ದೀರಾ? ಚಿಂತೆ ಬೇಡ. ವಾರ್ಡ್‌ರೋಬ್‌ನಲ್ಲಿರುವ...

  • ಬಾಡಿಗೆ ತಾಯ್ತನ ನಮ್ಮ ದೇಶಕ್ಕೆ ಹೊಸದೇನಲ್ಲ. ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿರುವವರು ಹಾಗೂ ನವಮಾಸ ಗರ್ಭ ಹೊತ್ತು ಪ್ರಸವೋತ್ತರ ವಿಶ್ರಾಂತಿಗೆ ಸಮಯದ ಕೊರತೆ...

  • ಬದುಕಿನಲ್ಲಿ ಸಿಹಿ-ಕಹಿಗಳು ಸಮಾನವಾಗಿ ಬರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ ಎಂಬುದರ ಸಂಕೇತವಾಗಿ ಯುಗಾದಿ ದಿನ, ಬೇವು-ಬೆಲ್ಲ ತಿನ್ನುತ್ತೇವೆ....

ಹೊಸ ಸೇರ್ಪಡೆ

  • ಬೆಂಗಳೂರು: ಕೋವಿಡ್‌ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು...

  • ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು...

  • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

  • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

  • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...