Udayavni Special

ದಾಂಪತ್ಯ ಪಾಠ!

ಸಂಸಾರದ ಸರಿಗಮವನ್ನು ಕ್ಲಾಸ್‌ರೂಮಲ್ಲಿ ಕಲಿಸೋಕಾಗುತ್ತಾ?

Team Udayavani, Sep 18, 2019, 5:04 AM IST

e-25

“ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ “ಅವರು’ ಅನಬಾರದು, “ಇವರು’ ಅನಬೇಕು. ನಿಮ್ಮತ್ತಿ ಏನು ಹೇಳಿದರೂ, “ಹೂಂ’ ಅಂದು ಬಿಡು ಮೊದಲ, ಹೂಂ ಅಂದ್ರ ಹರದಾರಿ…’

ಹೈದ್ರಾಬಾದ್‌ನ ಇನ್ಸ್‌ಟಿಟ್ಯೂಟ್‌ ಒಂದರಲ್ಲಿ “ದುಲ್ಹನ್‌ ಕೋರ್ಸ್‌’ ಆರಂಭಿಸಿದ್ದಾರೆ. ಮದುವೆಯ ನಂತರದ ಬದುಕಿಗೆ ಯುವಕ- ಯುವತಿಯರನ್ನು ತಯಾರು ಮಾಡುವ ಕೋರ್ಸ್‌ ಅದು ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತಿದ್ದಂತೆ ನಗು ಉಕ್ಕಿ ಬಂತು. ಇಪ್ಪತ್ತೇಳು ವರ್ಷಗಳ ಹಿಂದೆ ಓಡಿತು ಮನಸ್ಸು. ನನ್ನ ವಧುಪರೀಕ್ಷೆ ನೆನಪಾಯಿತು.

“ಏನೇನ ಅಡಿಗಿ ಬರತದವಾ ನಿನಗ? ಭಕ್ಕರೀ?ಹೋಳಿಗಿ?…’ ನನ್ನ ಭಾವೀ ಅತ್ತೆ ಕೇಳುತ್ತಿದ್ದರು. ಹಿಂದೆ ಕುಳಿತ ನನ್ನ ಸೋದರತ್ತೆ “ಹೂಂ, ಬರತದ ಅನ್ನೇ.. ‘ ಎಂದು ತಿವಿಯುತ್ತಿದ್ದಳು. “ಏನೇನೂ ಅಡಿಗಿ ಬರಂಗಿಲ್ಲರೀ ನನಗ. ಚಾ ಅವಲಕ್ಕಿ ಅಷ್ಟೇ ಬರತದ…’ ಸತ್ಯವಾದಿ ನಾನು. “ಆತು. ಒಂದು ಹಾಡರ ಹಾಡವಾ…’ “ಬರಂಗಿಲ್ಲರೀ ನನಗ…’ ಎಲ್ಲರೂ ಗೊಳ್‌ ಎಂದು ನಕ್ಕರು. ಸೋದರತ್ತೆ ಹಣೆಹಣೆ ಬಡಿದುಕೊಂಡಳು. ಹೀಗೆ ಯಾವುದೇ ಪೂರ್ವಸಿದ್ಧತೆಯಿಲ್ಲದ ಒಂದು ವಧುಪರೀಕ್ಷೆ ಮುಗಿದಿತ್ತು. ಮುಂದೆ ವಾರದಲ್ಲಿ “ಹುಡುಗಿ ನಮಗೆ ಒಪ್ಪಿಗೆ. ಆದಷ್ಟು ಬೇಗ ನಿಶ್ಚಿತಾರ್ಥ ಇಟ್ಟುಕೊಳ್ಳೋಣ’ ಎಂದು ಪತ್ರ ಬಂದೇಬಿಟ್ಟಿತ್ತು. ಸಂತೋಷಕ್ಕಿಂತ ಹೆಚ್ಚು ದಿಗಿಲು ಎಲ್ಲರಿಗೂ. ಹತ್ತೂಂಬತ್ತರ ನಾನೋ ಒಡ್ಡೊಡ್ಡು. ಜಗಳಗಂಟಿ. ಮನೆಗೆಲಸ, ಅಡುಗೆ ಒಂದೂ ಬರುತ್ತಿರಲಿಲ್ಲ. “ಅತ್ತೆಯ ಮನೆಯಲ್ಲಿ ಹೇಗೆ ಜೀವನ ಮಾಡೀತು ಈ ಹುಡುಗಿ’ಎಲ್ಲರಿಗೂ ಚಿಂತೆ. ಸರಿ, ನೂತನ ವಧುವಿಗೆ ಟ್ರೈನಿಂಗ್‌ ಕೊಡಲು ಊರಿನಿಂದ ಅಜ್ಜಿಯ ಆಗಮನವಾಯಿತು.

“ನೋಡು, ಅತ್ತೀ ಮನಿ ಬಾಳೇವು… ಇಲ್ಲಿ ಇದ್ದಂಗ ಅಲ್ಲೂ ಚಂಗ್ಯಾ ಮಂಗ್ಯಾನಂಗ ಇದ್ದರ ನಡೆಯಂಗಿಲ್ಲಾ. ಮುಂಜಾನೆ ಎಲ್ಲರಿಗಿಂತ ಮೊದಲು ಏಳಬೇಕು. ಅಂಗಳ ಕಸ, ಥಳಿ, ರಂಗೋಲಿ ಹೇಳಿಸಿಕೊಳ್ಳಲಾರದಂಗ ಮಾಡಬೇಕು. ಚಾ ಮಾಡಿ ಎಲ್ಲಾರನೂ ಎಬ್ಬಿಸಬೇಕು…’ ಡಿಗ್ರಿ ಓದುತ್ತಿದ್ದ ನಾನು, ಕೈಯಲ್ಲಿ ಪುಸ್ತಕ ಹಿಡಿದೇ ಹೂಂಗುಟ್ಟುತ್ತಿದ್ದೆ. ನಾನು ಒಂದಕ್ಷರವನ್ನೂ ಕೇಳಿಸಿಕೊಂಡೇ ಇಲ್ಲವೆಂಬುದು ಗೊತ್ತಾಗುತ್ತಿದ್ದಂತೆ ಅಜ್ಜಿಗೆ ಸಿಟ್ಟು ಬರುತ್ತಿತ್ತು. “ಸುಡಗಾಡು ಪರೀಕ್ಷಾದಾಗೂ ಈ ವಿಷಯ ಇಡಬೇಕಾಗಿತ್ತು, ನೋಡು. ಅಂದ್ರ ಜಕ್ಖಸ್ತ ಲಕ್ಷಗೊಟ್ಟು ಕಲಕೋತಿದ್ದಿ. ಏನು ಜೀವನಾ ಮಾಡತಾವೋ ಏನೋ ಈಗಿನ ಹುಡುಗರು…’ ಗೊಣಗುತ್ತಿದ್ದಳು. ಅವಳಿಗೆ ಸಿಟ್ಟು ಬಂದಿರುವುದು ಗೊತ್ತಾಗುತ್ತಿದ್ದಂತೆ ಅವಳ ತೊಡೆಯ ಮೇಲೆ ತಲೆ ಇಟ್ಟು, “ಹೇಳಜ್ಜಿ, ಹೆಂಗಿರಬೇಕು ಅವರ ಮನೀವಳಗ?’ ಎನ್ನುತ್ತಿದ್ದೆ. “ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ “ಅವರು’ ಅನಬಾರದು, “ಇವರು’ ಅನಬೇಕು. ನಿಮ್ಮತ್ತಿ ಏನು ಹೇಳಿದರೂ, “ಹೂಂ’ ಅಂದು ಬಿಡು ಮೊದಲ, ಹೂಂ ಅಂದ್ರ ಹರದಾರಿ. ಸಿಟ್ಟು ಬಂದರೂ ಮಾರಿ ಗಂಟು ಹಾಕ್ಕೋಬಾರದು, ತಿಳ್ಕೊ. ಕೆಲಸದಾಗ ವಾರಣ, ಒಪ್ಪ ಇರಬೇಕು. ನಿನಗ ಮನೀವಳಗ ಒಂದು ಭಾಂಡೇದ ಜಾಗಾ ಬದಲು ಮಾಡಬೇಕು ಅನಿಸಿದರೂ ಅವರನ ಕೇಳಿ ಮಾಡಬೇಕು…’ಅವಳ ಮಾತನ್ನು ಅರ್ಧಕ್ಕೇ ತುಂಡರಿಸಿದ್ದೆ. “ಅಲ್ಲಾ ನನ್ನ ಮನೆ ಅಂತ ತಿಳಕೋ ಅಂತೀಯಾ, ಅವರನ

ಕೇಳಿನೇ ಎಲ್ಲಾ ಮಾಡು ಅಂತೀಯಾ. ಇದ್ಹೆಂಗ?’ ನನ್ನ ಮಾತಿಗೆ ನಸುನಕ್ಕಿದ್ದಳು ಅಜ್ಜಿ. “ನೀ ಏನೋ ನನ್ನ ಮನಿ ಅಂತ ತಿಳಕೋತಿಯವಾ, ಆದ್ರ ಅವರಿಗೂ ನೀ ತಮ್ಮಾಕಿ ಅಂತ ತಿಳಕೋಳಿಕ್ಕೆ ವ್ಯಾಳಾಕೊಡಬೇಕು ನೀನು…’

ಅಜ್ಜಿ ಸರಳವಾದ ಮಾತುಗಳಲ್ಲಿ ಎಂಥಾ ಜೀವನರಹಸ್ಯವನ್ನು ಹೇಳಿಕೊಟ್ಟಿದ್ದಳು ಎಂದು ಈಗ ತಿಳಿಯುತ್ತಿದೆ. ಮದುವೆ ಎಂಬುದು ಬರೀ ಗಂಡು, ಹೆಣ್ಣಿನ ಸಂಬಂಧವಲ್ಲ. ಎರಡು ವಿಭಿನ್ನ ಪರಿಸರದ ಮನೆತನಗಳ ಸಂಬಂಧ. ತಾಯಿಯ ಮನೆಯಲ್ಲಿ ಮುಚ್ಚಟೆಯಿಂದ ಬೆಳೆದು, ಸ್ವತ್ಛಂದವಾಗಿ ಓಡಾಡಿಕೊಂಡಿರುವ ಬಾನಾಡಿಗೆ ಒಂದು ಹೊಸ ಪರಿಸರದಲ್ಲಿ, ಪಂಜರದಲ್ಲಿ ಇರುವ ಅನುಭವವಾಗುವುದು ಸಹಜವೇ. ಆದರೆ ಸಮಯ ಎಲ್ಲದಕ್ಕೂ ಮದ್ದು. ನಿಧಾನವಾಗಿ ಆ ಮನೆಯ ರೀತಿ, ನೀತಿಗಳು, ಅಲ್ಲಿಯ ಜನರ ಸ್ವಭಾವ, ಎಲ್ಲವನ್ನೂ ಅರಿಯಲು ಪ್ರಯತ್ನಿಸಬೇಕು. ಈ ವಿಷಯದಲ್ಲಿ ಪತಿಯ ಸಹಾಯ ಪಡೆಯಬೇಕು. ಸಾಧ್ಯವಾದಷ್ಟೂ ಹೊಂದಿಕೊಳ್ಳಲು ಪ್ರಯತ್ನಿಸಬೇಕು. ಹಿರಿಯರೊಂದಿಗೆ ಗೌರವದಿಂದ, ಸಮವಯಸ್ಕರೊಂದಿಗೆ ಸ್ನೇಹದಿಂದ, ಮಕ್ಕಳೊಂದಿಗೆ ಮುದ್ದಿನಿಂದ ವ್ಯವಹರಿಸಬೇಕು. ಇತ್ತೀಚೆಗೆ ವಿಭಕ್ತ ಕುಟುಂಬಗಳೇ ಇರುವುದರಿಂದ ಇಷ್ಟು ಮಟ್ಟಿನ ಹೊಂದಾಣಿಕೆಯು ಇನ್ನೂ ಸರಳ. ಅಜ್ಜಿಯ ಆ ಮಾತುಗಳೆಷ್ಟು ಸತ್ಯ…

ಈಗ ನನ್ನ ಮಗಳಿಗೆ ಪಾಠ ಹೇಳಿಕೊಡುವ ಸಮಯ. “ಹೊಂದಿಕೊಳ್ಳುವುದೇನೋ ಸರಿ. ಸಂಪೂರ್ಣ ವ್ಯಕ್ತಿತ್ವದ ಪರಿವರ್ತನೆ ಒಪ್ಪದ ಮಾತು’ ಇಪ್ಪತ್ತರ ಮಗಳು ನುಡಿದಾಗ, ನಿಜವೆನಿಸಿ “ಕಾಲಾಯ ತಸ್ಮೈ ನಮಃ’ ಎಂದು ಒಪ್ಪಿಕೊಂಡಿದ್ದೆ.

ಮದುವೆಯಾಗಿ ತಿಂಗಳ ನಂತರ ತವರಿಗೆ ಬಂದಾಗ, ಮರಳಿ ಹೋಗಲು ತಕರಾರೆತ್ತಿದ್ದೆ. “ಅಲ್ಲೇನಾದರೂ ನಿನ್ನ ಉಪವಾಸ ಹಾಕುತ್ತಾರಾ? ಸಿಕ್ಕಾಪಟ್ಟೆ ಕೆಲಸವಾ?’ ಅಮ್ಮನ ಆತಂಕದ ಮಾತಿಗೆ ನಕ್ಕು ಬಿಟ್ಟಿದ್ದೆ. “ಅಯ್ಯೋ, ಅಡಿಗಿಯವರಿದ್ದಾರ ಅಲ್ಲಿ. ಕೆಲಸ ಏನೇನೂ ಇಲ್ಲ. ಆದರೆ ಅಲ್ಲಿ ದಿನಾ ಸೀರೀ ಉಡಬೇಕು, ಕೈತುಂಬಾ ಬಳೀ ಇರದಿದ್ದರ ಬೈಯ್ತಾರ. ಜೋರಾಗಿ ರೇಡಿಯೋ ಕೇಳಂಗಿಲ್ಲಾ. ಮತ್ತೆ… ಅಲ್ಲಿ ಪಾಯಖಾನಿ ದೂರ ಹಿತ್ತಲದಾಗ ಅದ….’ “ಮಂಗ್ಯಾ, ಕಾಲು ಮುರದಬಿಟ್ಟೇನು. ನಾಳೆ ನಿನ್ನ ಗಂಡ ಬರ್ತಾರ. ಸೀದಾ ವಾಪಸ್‌ ನಡೀ ಅವರ ಜೋಡಿ…’

ಈ ಪರಿಯ ಬಾಳುಕಟ್ಟುವ ಅನಿವಾರ್ಯದ ದಾರ್ಷ್ಟ್ಯ ಯಾವ ಸ್ಕೂಲೂ ಕಲಿಸದು. ಅಮ್ಮನಿಗೆ ಮಾತ್ರ ಸಾಧ್ಯವದು. ವಧುವಾಗುತ್ತಿರುವ ಹುಡುಗಿಯನ್ನು ಭಾವನಾತ್ಮಕವಾಗಿ, ಗಟ್ಟಿಗಿತ್ತಿಯಾಗಿ ಸಜ್ಜುಗೊಳಿಸಬೇಕೇ ಹೊರತು ರೋಬೋಟ್‌ ಆಗಿಸುವ ಪ್ರಯತ್ನ ಖಂಡಿತಾ ಸಲ್ಲ.

– ದೀಪಾ ಜೋಶಿ, ಧಾರವಾಡ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಮಂಗಳೂರಿನಿಂದ ಬೆಂಗಳೂರಿಗೆ ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagamaga-jacket

ಜಗಮಗ ಜಾಕೆಟ್‌!

miss fee

ಸ್ವೀಟ್‌ ಮಿಸ್‌ ಆದರೂ ಗಿಫ್ಟ್ ಮಿಸ್‌ ಆಗಲಿಲ್ಲ!‌

speaking-stri

ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?

hendati

ಹೆಂಡತಿಯ ಅನುಮಾನವೂ ಕಾಡುವ ಪಾಪಪ್ರಜ್ಞೆಯೂ…

yellavu

ಎಲ್ಲವೂ ಸರಿ ಇದ್ದಿದ್ದರೆ…

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

25-May-5

ಲಾಕ್‌ ಡೌನ್‌: ಜಿಲ್ಲೆ ಸಂಪೂರ್ಣ ಸ್ತಬ್ಧ

ಜಿಲ್ಲೆಯಲ್ಲಿ ದೇಶಿ ವಿಮಾನ ಸೇವೆಗೆ ಸಿದ್ಧತೆ

ಜಿಲ್ಲೆಯಲ್ಲಿ ದೇಶಿ ವಿಮಾನ ಸೇವೆಗೆ ಸಿದ್ಧತೆ

25-May-4

ಕ್ವಾರಂಟೈನ್‌ಗೆ ಜನರ ವಿರೋಧ

25-May-3

ನಾಲ್ವರಿಗೆ ಕೋವಿಡ್ -18 ಮಂದಿ ಡಿಸ್ಚಾರ್ಜ್‌

ಮಹಾರಾಷ್ಟ್ರ ರಾಜ್ಯದಲ್ಲಿರುವವರು ನಮ್ಮ ಸಹೋದರರೆ ; ಕಟೀಲ್ 

ಮಹಾರಾಷ್ಟ್ರ ರಾಜ್ಯದಲ್ಲಿರುವವರು ನಮ್ಮ ಸಹೋದರರೆ ; ಕಟೀಲ್ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.