ಮೊಸರು ಮಹಾತ್ಮೆ

Team Udayavani, Nov 6, 2019, 4:03 AM IST

ಊಟದ ಜೊತೆಗೆ ಮೊಸರು ಇರಲೇಬೇಕು ಅಂತಾರೆ ಕೆಲವರು. ಆಯುರ್ವೇದದ ಪ್ರಕಾರವೂ ಮೊಸರಿನಲ್ಲಿ ಹತ್ತಾರು ಪೋಷಕಾಂಶಗಳು, ಔಷಧೀಯ ಗುಣಗಳು ಅಡಗಿವೆ. ಆದರೆ, ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಉಪಯೋಗವಾಗುತ್ತದೆ. ಹಾಗಾದ್ರೆ, ಮೊಸರನ್ನು ಸೇವಿಸುವ ಸರಿಯಾದ ಕ್ರಮ ಯಾವುದು ಗೊತ್ತಾ?

ಸಕ್ಕರೆ, ಉಪ್ಪು: ಮೊಸರಿನ ಜೊತೆಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ, ಸಂಸ್ಕರಿಸಿದ ಸಕ್ಕರೆ ಹಾಗೂ ಉಪ್ಪಿನಲ್ಲಿರುವ ರಾಸಾಯನಿಕ ಅಂಶಗಳಿಂದ ಮೊಸರಿನ ಪೋಷಕಾಂಶಗಳು ನಷ್ಟವಾಗುತ್ತವೆ. ಅದರ ಬದಲಿಗೆ, ರಾಕ್‌ಸಾಲ್ಟ್/ ಬ್ಲಾಕ್‌ಸಾಲ್ಟ್ ಮತ್ತು ಬೆಲ್ಲ ಬಳಸಿ.

ರಾತ್ರಿ ಊಟದ ಜೊತೆ: ಆಯುರ್ವೇದ ಹೇಳುವಂತೆ, ಸೂರ್ಯಾಸ್ತದ ನಂತರ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಶೀತ ಉಂಟು ಮಾಡುವ ಮೊಸರನ್ನು ಸಂಜೆ ನಂತರ ಸೇವಿಸಿದರೆ ಸೈನಸ್‌, ಜ್ವರ, ಕೆಮ್ಮು ಬರಬಹುದು. ಆ ಸಮಯದಲ್ಲಿ ಮೊಸರಿನ ಬದಲು ಮಜ್ಜಿಗೆ ಬಳಸಿ. ಬೆಳಗ್ಗಿನ ಉಪಾಹಾರದಲ್ಲಿ ಮೊಸರು ಇದ್ದರೆ ಒಳ್ಳೆಯದು.

ಸೌತೆಕಾಯಿ, ಬೂಂದಿಕಾಳು, ವಡೆ: ಮೊಸರಿನ ಜೊತೆ ಸೌತೆಕಾಯಿ ಹಾಕುವುದು ಆಯುರ್ವೇದದ ಪ್ರಕಾರ ಇದು ಒಳ್ಳೆಯದಲ್ಲ. ಸೌತೆಕಾಯಿಯ ಬದಲು ಸೋರೆಕಾಯಿ ಬಳಸಬಹುದಂತೆ. ಇನ್ನು, ಬೂಂದಿಕಾಳು ಅಥವಾ ವಡೆ (ಮೊಸರಲ್ಲಿ ಅದ್ದಿದ ವಡೆ)ಯ ಎಣ್ಣೆಯು, ಮೊಸರಿನೊಡನೆ ಸೇರಿದಾಗ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಚರ್ಮ ಸಮಸ್ಯೆ: ಮೊಡವೆ, ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ಮೊಸರನ್ನು ಅತಿಯಾಗಿ ಸೇವಿಸಬಾರದು. ಬದಲಿಗೆ ಮಜ್ಜಿಗೆ ಬಳಸಬಹುದು ಅಥವಾ ಮೊಸರನ್ನು ಚೆನ್ನಾಗಿ ಚಮಚದಿಂದ ಕಲಸಿ, ಸೇವಿಸಬಹುದು.

ಬಿಸಿ ಮಾಡುವುದು: ಕೆಲವು ಪದಾರ್ಥಗಳನ್ನು ತಯಾರಿಸು ವಾಗ, ಮೊಸರನ್ನು ಬಿಸಿ ಮಾಡುವುದಿದೆ. ಹಾಗೆ ಮಾಡಿದಾಗ, ಅದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಾಶವಾಗಿ, ಪೌಷ್ಟಿಕ ಅಂಶ ನಷ್ಟವಾಗುತ್ತದೆ.

ವರ್ಷಪೂರ್ತಿ ಸೇವಿಸುವುದು: ಪ್ರತಿನಿತ್ಯವೂ ಊಟದ ಜೊತೆಯಲ್ಲಿ ಮೊಸರು ಸೇವಿಸುವ ಅಭ್ಯಾಸ ಹಲವರಿಗಿದೆ. ಆದರೆ, ಚಳಿಗಾಲ ಮತ್ತು ಬೇಸಿಗೆ ಯಲ್ಲಿ ಮೊಸರು ಸೇವಿಸಿ, ಮಳೆಗಾಲದಲ್ಲಿ ಆದಷ್ಟು ಕಡಿಮೆ ಮಾಡುವುದು ಒಳ್ಳೆ­ಯದು ಅನ್ನುತ್ತದೆ ಆಯುರ್ವೇದ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೆದರಿಕೆಗೆ ಕಾರಣಗಳೇ ಇರುವುದಿಲ್ಲ. ಹಾಗಿದ್ದರೂ,ಹೆಣ್ಣುಮಕ್ಕಳಿಗೆ ಕೆಲವೊಮ್ಮೆ ಭಯವಾಗುತ್ತದೆ. ಗಂಡನಿಗೆ ಆ್ಯಕ್ಸಿಡೆಂಟ್‌ ಆಗಿಬಿಟ್ಟರೆ, ಮಕ್ಕಳಿಗೆ ಆರೋಗ್ಯ...

  • "ಅವನು ಬಿಡ್ರೀ,ಕಲ್ಲು ಬಂಡೆಯಂಥ ಆಸಾಮಿ. ಯುದ್ಧ ಬೇಕಾದ್ರೂ ಗೆದ್ಕೊಂಡು ಬರ್ತಾನೆ. ಅವನ ಬಗ್ಗೆ ಯಾವುದೇ ಯೋಚನೆ ಇಲ್ಲ. ಮಗಳ ಕಥೆ ಹೇಳಿ, ಇವಳದೇ ಚಿಂತೆ ನನಗೆ...' ಮಕ್ಕಳನ್ನು...

  • ಕೈಯಲ್ಲೊಂದು ಕೆಲಸ, ಕೈ ತುಂಬಾ ಸಂಬಳ ಪಡೆವ ಜನ ಪಾರ್ಟ್‌ ಟೈಮ್‌ ಜಾಬ್‌ ಮಾಡುವುದು ಅಪರೂಪ. ಹೇಗೂ ವಾರವಿಡೀ ದುಡಿದಿರುತ್ತೇವೆ. ರಜೆ ಸಿಕ್ಕಾಗ ಆರಾಮಾಗಿರಬೇಕು ಅಂತ...

  • "ನಿಮ್ಮ ಮನೆಯಲ್ಲಿ ಏನಡುಗೆ ಇವತ್ತು?' ಎಂದು ಪಕ್ಕದ ಮನೆಯ ಹೆಂಗಸು ನನ್ನನ್ನು ಕೇಳುವುದಕ್ಕೂ, ನಾನು ಮಾಡುವ ಅಡುಗೆಗೂ ಏನೋ ಸಂಬಂಧವಿರುವುದು ನಿಜ. ಅವರು ಹಾಗೆ ಕೇಳಿದ...

  • ಬೇಕೆಂದರೂ ಸಿಗದ, ದೂರದಲ್ಲಿ ಬದುಕುತ್ತಿರುವ ಅಕ್ಕ-ತಂಗಿ-ತಮ್ಮಂದಿರು, ಬಾಲ್ಯ ಸ್ನೇಹಿತೆಯರು. ಸತ್ತು ಸ್ವರ್ಗ ಸೇರಿದ ಅಪ್ಪ-ಅಮ್ಮ- ಮಾಮ-ಅಣ್ಣ, ನನ್ನ ಪ್ರೀತಿಪಾತ್ರವಾಗಿ...

ಹೊಸ ಸೇರ್ಪಡೆ