ಮದುವೆಯ ಈ ಬಂಧನ

ನಿನ್ನ ನೀನು ಮರೆತರೇನು ಸುಖವಿದೆ?

Team Udayavani, Feb 26, 2020, 5:59 AM IST

ಮದುವೆ ಎನ್ನುವುದು ಹೆಣ್ಣಿನ ಬದುಕಿನ ಅಸಲೀ ತಿರುವು. ತಾನು ಎನ್ನುವ ಸ್ವಂತಿಕೆಯನ್ನು ಬದಿಗಿಟ್ಟು, ತನ್ನದು ಎನ್ನುವುದಕ್ಕೆ ಜೋತು ಬೀಳಬೇಕಾದ ಸಂಧಿಕಾಲ. ಮದುವೆ, ಸಂಸಾರ, ಮಗು, ಕುಟುಂಬ ಕೊಡುವ ಅವರ್ಣನೀಯ ಬೆಚ್ಚನೆಯ ಸುಖದಲ್ಲಿ ಅವಳು ಮೈಮರೆತಿರುವಾಗ, ತನ್ನದೆನ್ನುವ ವ್ಯಕ್ತಿತ್ವವನ್ನು ತಾನು ನಿಧಾನಕ್ಕೆ ಕಳೆದುಕೊಳ್ಳುತ್ತಿರುವುದು ಗೊತ್ತೇ ಆಗುವುದಿಲ್ಲ.

ಹದಿನಾರು ತುಂಬುತ್ತಿದ್ದಂತೆ ಪೊರೆ ಕಳಚಿದ ಬಣ್ಣದ ಚಿಟ್ಟೆಯಂತೆ ಹಾರಾಡುವ ಅವಳು, ಮದುವೆಯಾದ ಕೂಡಲೇ ಮತ್ತದೇ ಪೂರ್ವಾವಸ್ಥೆಗೆ ತನ್ನನ್ನು ತಾನೇ ದೂಡಿಕೊಂಡು ಬಿಡುತ್ತಾಳೆ. ಯಾವ ಅನಿವಾರ್ಯತೆಗಳು, ಒತ್ತಡಗಳು ಅವಳಲ್ಲಿನ ಜೀವನೋತ್ಸಾವನ್ನು ಹೀಗೆ ಬಗ್ಗುಬಡಿಯುತ್ತವೆ? ಅಷ್ಟಕ್ಕೂ ಮದುವೆ ಎಂಬ ಮೂರಕ್ಷರ ಅವಳ ಬದುಕನ್ನು ಈ ಪರಿಯಾಗಿ ಬದಲಾಯಿಸಬೇಕಾದರೂ ಯಾಕೆ? ಅಥವಾ ತನಗೇ ಗೊತ್ತಿಲ್ಲದಂತೆ ಅವಳೇ ಬದಲಾಗಿ ಬಿಡುತ್ತಾಳಾ?

ಅರವತ್ತು ನಿಮಿಷಕ್ಕೆ ಅರವತ್ತೈದು ಕನಸು ಕಾಣುತ್ತಿದ್ದ ಅವಳು, ಗಂಟೆಗೊಂದು ಸಲ ಎಲ್ಲರೊಂದಿಗೂ ಜಗಳ ಕಾಯುತ್ತಿದ್ದ ಅವಳು, ಚಟಾಕಿಯಂತೆ ಗಲಗಲ ಮಾತಾಡುತ್ತಿದ್ದ ಅವಳು, ಕಾಫಿ ಲೋಟ ಕಾಲ ಬುಡದಲ್ಲಿ ಉರುಳಾಡಿದರೂ ಎತ್ತಿಡದ ಅವಳು, ಹಠ ಸಾಧಿಸಿಯೇ ಎಲ್ಲವನ್ನೂ ಗೆಲ್ಲುತ್ತಿದ್ದ ಅವಳು, ತನ್ನ ಸೌಂದರ್ಯದ ಬಗ್ಗೆ ಅಪರಿಮಿತ ಜಂಭವಿದ್ದ ಅವಳು, ಅಮ್ಮನ ನೀರಸ ಬದುಕಿನ ಕುರಿತು ತಮಾಷೆ ಮಾಡುತ್ತಿದ್ದ ಅವಳು, ಮದುವೆಯಾದ ಕೂಡಲೇ ಅಮ್ಮನ ಅದೇ ದೈನೇಸಿತನದ ಪ್ರತಿಬಿಂಬವಾಗಿ ಥೇಟ್‌ ಅಂಥದ್ದೇ ಬದುಕನ್ನು ಅಪ್ಪಿಬಿಡುವುದಾದರೂ ಯಾಕೆ? ಹೆತ್ತರವರ ಮಾತಿಗೆ “ಎಸ್‌’ ಎಂದೇ ಗೊತ್ತಿರದ ಅವಳ್ಯಾಕೆ “ನೋ’ ಎನ್ನುವುದನ್ನೇ ಮರೆತು ಬಿಡುತ್ತಾಳೆ.

ಸ್ವಂತಿಕೆ ಮರೆಯಾಗಿ…
ಮದುವೆ ಎನ್ನುವುದು ಹೆಣ್ಣಿನ ಬದುಕಿನ ಅಸಲೀ ತಿರುವು. ತಾನು ಎನ್ನುವ ಸ್ವಂತಿಕೆಯನ್ನು ಬದಿಗಿಟ್ಟು, ತನ್ನದು ಎನ್ನುವುದಕ್ಕೆ ಜೋತು ಬೀಳಬೇಕಾದ ಸಂಧಿಕಾಲ. ಮದುವೆ, ಸಂಸಾರ, ಮಗು, ಕುಟುಂಬ ಕೊಡುವ ಅವರ್ಣನೀಯ ಬೆಚ್ಚನೆಯ ಸುಖದಲ್ಲಿ ಅವಳು ಮೈಮರೆತಿರುವಾಗ, ತನ್ನದೆನ್ನುವ ವ್ಯಕ್ತಿತ್ವವನ್ನು ತಾನು ನಿಧಾನಕ್ಕೆ ಕಳೆದುಕೊಳ್ಳುತ್ತಿರುವುದು ಗೊತ್ತೇ ಆಗುವುದಿಲ್ಲ. ಇಷ್ಟದ ಹವ್ಯಾಸಗಳು ಮೆಲ್ಲಗೆ ಅಟ್ಟ ಸೇರುತ್ತವೆ. ಸೌಂದರ್ಯದ ಬಗೆಗೊಂದು ದಿವ್ಯ ನಿರ್ಲಕ್ಷ್ಯ ಮೂಡುತ್ತದೆ. ಸ್ನೇಹಿತರೊಂದಿಗೆ ಸುತ್ತುವ ಆಸಕ್ತಿಯೇ ಹೊರಟು ಹೋಗಿರುತ್ತದೆ. ಎಲ್ಲಿ ಹೋದರೂ ನೆನಪಾಗುವ ಮನೆಯ ಜವಾಬ್ದಾರಿಗಳು ಆಕೆಯನ್ನು ಕಂಗೆಡಿಸುತ್ತವೆ. ಗಂಡ-ಮಕ್ಕಳ ಬೇಕು ಬೇಡಗಳನ್ನು ಪೂರೈಸುವ ಧಾವಂತದಲ್ಲಿ ತನಗೇನು ಬೇಕಿತ್ತು ಎನ್ನುವುದನ್ನೇ ಮರೆತು ಬಿಟ್ಟಿರುತ್ತಾಳೆ. ಅದು ಅರಿವಾಗುವ ಹೊತ್ತಿಗೆ ಬದುಕು ಅವಳನ್ನು ಮತ್ತೂಂದು ನಿರ್ಲಿಪ್ತ ದಡಕ್ಕೆ ಸದ್ದಿಲ್ಲದೇ ಸಾಗಿಸಿಬಿಟ್ಟಿರುತ್ತದೆ.

ಅವಳು ಮುಗ್ಗರಿಸುವುದೆಲ್ಲಿ?
ಹೊಸತನದ ಹುಮ್ಮಸ್ಸಿನಲ್ಲಿ ಗಂಡನನ್ನು ಒಲಿಸಿಕೊಳ್ಳಲು, ಹಿರಿಯರನ್ನು ಮೆಚ್ಚಿಸಲು ಅವರ ಕೆಲಸಗಳನ್ನು ಬೇಡವೆಂದರೂ ಮಾಡಿಕೊಡುವುದು ಆರಂಭದಲ್ಲಿ ಖುಷಿಕೊಟ್ಟರೂ, ಜವಾಬ್ದಾರಿ ಹೆಚ್ಚಿದಂತೆಲ್ಲಾ ಅವು ಹೊರೆಯಾಗಿ ಬಿಡುತ್ತವೆ. ನಂತರ ಎಲ್ಲರೂ ಹೇಳುವ ಕೆಲಸಗಳನ್ನು ಇಷ್ಟವಿರಲಿ, ಇಲ್ಲದಿರಲಿ “ನೋ” ಎನ್ನದೇ ಮಾಡಬೇಕಾಗುತ್ತದೆ. ಮನೆಯವರು ಎಲ್ಲದ್ದಕ್ಕೂ ತನ್ನನ್ನೇ ಅವಲಂಬಿಸುವ ಸ್ಥಿತಿಯನ್ನು ಹೆಣ್ಣು ತಾನಾಗಿಯೇ ರೂಢಿ ಮಾಡಿಸಿಬಿಡುತ್ತಾಳೇನೋ! ಅವರವರ ಕೆಲಸಗಳನ್ನು ಸಾಧ್ಯವಾದಷ್ಟು ಅವರೇ ಮಾಡಿಕೊಳ್ಳಲು ಬಿಟ್ಟರೆ, ಒಂದು ಕಪ್‌ ಬಿಸಿಬಿಸಿ ಕಾಫಿ ಕುಡಿಯುತ್ತಾ ಒಂದೊಳ್ಳೆ ಪುಸ್ತಕ ಓದುವುದಕ್ಕೋ, ಚಂದದ ಸಿನೆಮಾ ನೋಡುವುದಕ್ಕೋ ಹೆಣ್ಣಿಗೆ ಸಮಯ ಸಿಕ್ಕೀತು.

ಬಾಗಿಲನ್ನೊಮ್ಮೆ ತೆರೆದು ನೋಡು..
-ಗೃಹಕೃತ್ಯಗಳಲ್ಲಿ ಕಳೆದು ಹೋಗುವ ನಡುವೆ, ನಿಮಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡಿ. ಒಳ್ಳೆಯ ಸಂಗೀತ ಕೇಳುವುದು, ಉತ್ತಮ ಸಾಹಿತ್ಯ ಓದುವುದು ದಿನಚರಿಯ ಭಾಗವಾಹಗಲಿ.
-ವ್ಯಕ್ತಿತ್ವ, ಅಭಿರುಚಿಗೆ ತಕ್ಕಂತೆ ಹೆಂಗಸರ ಗುಂಪು ಕಟ್ಟಿಕೊಂಡು ಪ್ರವಾಸ, ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಿ.
-ಕಲಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಬಹಳ ವರ್ಷಗಳಿಂದ ಕಲಿಯಬೇಕು ಅಂತ ಕನಸು ಕಂಡ ವಿದ್ಯೆಯನ್ನು ಕಲಿಯಲು ಸಮಯ ಮೀಸಲಿಡಿ.
-ನಲವತ್ತು ವರ್ಷ ದಾಟಿ, ಎರಡು ಮಕ್ಕಳ ತಾಯಿಯಾದ ಕೂಡಲೇ ಬದುಕು ಮುಗಿದು ಹೋಗಿದೆ ಎಂಬ ವೈರಾಗ್ಯ ಸಲ್ಲ. ಅದರಿಂದ ಆದಷ್ಟು ಬೇಗ ಆಚೆ ಬನ್ನಿ. ಸಿಗುವ ಸ್ವಾತಂತ್ರ್ಯದ ಮಿತಿಯೊಳಗಿನ ಎಲ್ಲ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ.
-ಮದುವೆ ಎನ್ನುವುದು ಕೇವಲ ಜವಾಬ್ದಾರಿಗಳ ಹೊರೆಯಲ್ಲ. ಅಲ್ಲಿ ನಮಗೂ ನಮ್ಮದೇ ಆದ ಸ್ಥಾನವಿದೆ. ಒಂದು ವ್ಯಕ್ತಿತ್ವವಿದೆ. ಅದನ್ನು ಚಂದವಾಗಿ ರೂಪಿಸಿಕೊಳ್ಳುವುದೂ ನಮ್ಮ ಕೈಯಲ್ಲೇ ಇದೆ. ಅದಕ್ಕೆ, ನಾವಾಗಿಯೇ ಭದ್ರ ಪಡಿಸಿಕೊಂಡ ಸಂಸಾರದ ಕೋಟೆಯ ಬಾಗಿಲನ್ನು ತೆರೆದು ನೋಡಬೇಕು.
-ಹೊಸ ಮನೆಯನ್ನು ಸೇರಿದ ದಿಗಿಲಿನಿಂದಲೋ, ದಾಕ್ಷಿಣ್ಯದಿಂದಲೋ ನಿಮ್ಮ ಇಷ್ಟಾನಿಷ್ಟಗಳನ್ನು ಮರೆಮಾಚಬೇಡಿ. ನಿಮ್ಮ ಆಸಕ್ತಿ, ಹವ್ಯಾಸ, ಆಸೆ-ಆಕಾಂಕ್ಷೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ.

– ಕವಿತಾ ಭಟ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಯುಗಾದಿಯೂ ಒಂದು. ಪ್ರತಿ ಬಾರಿಯೂ ಹಸಿರನ್ನು, ಆ ನೆಪದಲ್ಲಿ, ಸಂಭ್ರಮ, ಸಂತೋಷ, ಸಡಗರವನ್ನು ಹೊತ್ತು ತರುವುದು ಯುಗಾದಿಯ ವಿಶೇಷ....

  • ಚಂದದ ದಿರಿಸಿಗೆ ಅಂದದ ಒಡವೆ ಧರಿಸಿದರೇ ಚೆನ್ನ. ಒಡವೆ ಅಂದರೆ ಬಂಗಾರದ್ದೇ ಆಗಬೇಕಿಲ್ಲ. ಚಿನ್ನವನ್ನೇ ನಾಚಿಸುವಷ್ಟು ಚೆನ್ನಾಗಿರುವ ಕೃತಕ ಆಭರಣಗಳು ಈಗ ಎಲ್ಲರ ಮೆಚ್ಚುಗೆ...

  • ಹಬ್ಬದ ಸಂಭ್ರಮವನ್ನು ಕೊರೊನಾ ನುಂಗಿಬಿಟ್ಟಿದೆ. ಮನೆಯಿಂದ ಹೊರಗೆ ಹೋಗುವಂತಿಲ್ಲ. ಯುಗಾದಿ ಶಾಪಿಂಗ್‌ ಮಾಡೇ ಇಲ್ಲ ಅಂತಿದ್ದೀರಾ? ಚಿಂತೆ ಬೇಡ. ವಾರ್ಡ್‌ರೋಬ್‌ನಲ್ಲಿರುವ...

  • ಬಾಡಿಗೆ ತಾಯ್ತನ ನಮ್ಮ ದೇಶಕ್ಕೆ ಹೊಸದೇನಲ್ಲ. ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿರುವವರು ಹಾಗೂ ನವಮಾಸ ಗರ್ಭ ಹೊತ್ತು ಪ್ರಸವೋತ್ತರ ವಿಶ್ರಾಂತಿಗೆ ಸಮಯದ ಕೊರತೆ...

  • ಬದುಕಿನಲ್ಲಿ ಸಿಹಿ-ಕಹಿಗಳು ಸಮಾನವಾಗಿ ಬರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ ಎಂಬುದರ ಸಂಕೇತವಾಗಿ ಯುಗಾದಿ ದಿನ, ಬೇವು-ಬೆಲ್ಲ ತಿನ್ನುತ್ತೇವೆ....

ಹೊಸ ಸೇರ್ಪಡೆ

  • ಬೆಂಗಳೂರು: ಕೋವಿಡ್‌ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು...

  • ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು...

  • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

  • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

  • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...