ಥ್ರಿಲ್‌ ನೀಡೋ ಫ್ರಿಲ್ಸ್  

Team Udayavani, Jul 18, 2018, 6:00 AM IST

5.jpg

ಫ್ಯಾಷನ್‌ ಜಗತ್ತಿಗೆ “ರಫೆಲ್‌’ ಪದ ಹೊಸತಲ್ಲ. ರಫೆಲ್‌ ಎಂದರೆ “ಮಡಿಕೆ'(ಫೋಲ್ಡ್‌) ಎಂದರ್ಥ. ಸೀರೆ ಉಡುವಾಗ ಕಡೆಯ ಹಂತದಲ್ಲಿ ಸೀರೆಯನ್ನು ಒಂದಿನ್ನೊಂದರ ಮೇಲೆ ಮಡಚುತ್ತಾ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತೇವಲ್ಲ. ಆ ಥರದ ಮಡಿಕೆ. “ರಫೆಲ್ಡ್‌ ಡ್ರೆಸ್‌’ ಎಂದರೆ ಒಂದಲ್ಲ ಒಂದು ಥರದಲ್ಲಿ ಬಟ್ಟೆ ಮೇಲೆ ಮಡಿಕೆಗಳನ್ನು ಮೂಡಿಸಿದ ದಿರಿಸು. ಒಂದು ಕಾಲದಲ್ಲಿ ಮಿನುಗುತಾರೆ ಕಲ್ಪನಾರಿಂದ ಹಿಡಿದು ಬಾಲಿವುಡ್‌ನ‌ ಶ್ರೀದೇವಿ, ಮಧುಬಾಲಾರಂಥ ನಾಯಕಿಯರನ್ನು ನೋಡಿ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದುದರ ಹಿಂದೆ ಈ ರಫೆಲ್ಡ… ಉಡುಗೆಗಳ ಪಾತ್ರವೂ ಇತ್ತು. ಈಗ ಮತ್ತೆ ಅದೇ ಫ್ರಿಲ್ಸ್ ಇರೋ ರಫೆಲ್ಡ್‌ ಡ್ರೆಸ್‌ ಗಳು ಫ್ಯಾಷನ್‌ ಲೋಕವನ್ನು ಆಳುತ್ತಿವೆ. ವಿವಿಧ ಬಗೆಗಳಲ್ಲಿ, ಇನ್ನಷ್ಟು ಆಕರ್ಷಕ ರೂಪಗಳಲ್ಲಿ ಆ ಡ್ರೆಸ್‌ ಕಾಲಿಟ್ಟಿದೆ.    

ರಫೆಲ್ಡ್ ಸ್ಲಿವ್ಸ್  
ಶಾರ್ಟ್‌ ಸ್ಲಿವ್ಸ್ ಇಷ್ಟಪಡುವವರಾಗಲಿ, ನೀಳವಾದ ತೋಳುಗಳನ್ನೇ ಬಯಸುವವರಿಗಾಗಲಿ ಇದು ಚೆನ್ನಾಗಿ ಹೊಂದುತ್ತದೆ. ರಫೆಲ್ಡ್ ಸ್ಲಿವ್ಸ್ ನಲ್ಲಿ ಎರಡು ಬಗೆಯಿದೆ. ಒಂದರಲ್ಲಿ ಭುಜದ ಭಾಗದಲ್ಲೇ ಫ್ರಿಲ್ಸ್ ಗಳಿದ್ದರೆ, ಮತ್ತೂಂದರಲ್ಲಿ ಸ್ಲಿವ್ಸ್ ನ ಕೆಳಭಾಗದಲ್ಲಿ (ಬೆಲ್‌ ಸ್ಲಿವ್ಸ್) ಇರುತ್ತವೆ. ಇವೆರಡೂ ನಿಮಗೆ ಪರಿಪೂರ್ಣ ಲುಕ್‌ ಕೊಡುವುದರಲ್ಲಿ ಸಂಶಯವಿಲ್ಲ. ಇನ್ನು ನೀವು ಬಯಸಿದರೆ, ಪೂರ್ಣ ಸ್ಲಿವ್ಸ್ ಗೆ ಪದರ ಪದರಗಳಂತೆ ಬಟ್ಟೆಯನ್ನು ಜೋಡಿಸಿ ಹೊಸ ಪ್ರಯೋಗವನ್ನೂ ಮಾಡಬಹುದು.    

ಶರ್ಟ್‌  
ಕಚೇರಿಗೆ ಹೋಗುವವರಿಗೆ ರಫೆಲ್ಡ… ಶರ್ಟ್‌ ಒಳ್ಳೆಯ ಆಯ್ಕೆ. ಇದು ಕ್ಲಾಸಿ ಲುಕ್‌ ಕೊಡುತ್ತದೆ. ಶರ್ಟ್‌ನ ಕುತ್ತಿಗೆ ಭಾಗದಲ್ಲಿ ಅಥವಾ ಕಾಲರ್‌ನಲ್ಲಿ ಫ್ರಿಲ್ಸ್ ಇರುತ್ತದೆ. ಹತ್ತಿಪ್ಪತ್ತು ಮಂದಿಯ ನಡುವೆ ಡಿಫ‌ರೆಂಟ್‌ ಆಗಿ ಸ್ಮಾರ್ಟ್‌, ಕ್ಯಾಶುವಲ್‌ ಆಗಿ ಕಾಣಬೇಕೆಂದು ಬಯಸುವವರ ಮೊದಲ ಆಯ್ಕೆ ಇದೇ ಆಗಿರುತ್ತದೆ.    

ಟ್ರಾಸರ್‌
ಟ್ರಾಸರ್‌ಗಳಲ್ಲಂತೂ ಹೊಸ ಹೊಸ ಟ್ರೆಂಡ್‌ಗಳಿಗೆ ಬರವಿಲ್ಲ. ರಫೆಲ್ಡ… ಟ್ರಾಸರ್‌, ಕಾರ್ಪೊರೇಟ್‌ ಮಹಿಳೆಯರ ಗಮನ ಸೆಳೆಯುತ್ತಿದೆ. ಇದರ ಕೆಳಭಾಗದಲ್ಲಿ ಫ್ರಿಲ್ಸ್ ಗಳಿರುತ್ತವೆ. ಕೆಲವೊಂದರಲ್ಲಿ ಪ್ಯಾಂಟ್‌ನ ಮೇಲಿಂದ ಕೆಳತುದಿಯವರೆಗೂ ಪುಟ್ಟ ಪುಟ್ಟ ಫ್ರಿಲ್ಸ್ ಗಳು ಆವರಿಸಿದ್ದರೆ, ಇನ್ನು ಕೆಲವು ಟ್ರಾಸರ್‌ಗಳಲ್ಲಿ ತುದಿ ಭಾಗವಷ್ಟೇ ರಫೆಲ್ಡ್ ಆಗಿರುತ್ತದೆ. ಈಗೀಗ ತ್ರೀ ಫೋರ್ತ್‌ ಜೀನ್ಸ್, ಡೆನಿಮ್‌ಗಳಲ್ಲೂ ಈ ಟ್ರೆಂಡ್‌ ಕಾಣಿಸಿಕೊಳ್ಳತೊಡಗಿದೆ.    

ರಫೆಲ್ಡ್ ಡ್ರೆಸ್‌  
ರಫೆಲ್ಡ್‌ ಡ್ರೆಸ್‌ಗಳಲ್ಲಿ ಹಲವು ವಿಧಗಳಿವೆ. ಮುಖ್ಯವಾಗಿ, ಒನ್‌ ಶೋಲ್ಡರ್‌(ಒಂದು ಭುಜ ಕಾಣುವಂಥ) ಅಥವಾ ಆಫ್ ಶೋಲ್ಡರ್‌ (ಎರಡೂ ಭುಜಗಳು ಕಾಣುವಂಥ) ವೆರೈಟಿಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಕೇವಲ ಟಾಪ್‌ಗ್ಳನ್ನಷ್ಟೇ ಇಷ್ಟಪಡುವವರು ಮೂರು ನಾಲ್ಕು ಪದರಗಳುಳ್ಳ ಡ್ರೆಸ್‌ಅನ್ನು ಆಯ್ಕೆ ಮಾಡಬಹುದು. ಮಧ್ಯಭಾಗದಲ್ಲಿ, ಕೆಳತುದಿಯಲ್ಲಿ ಅಥವಾ ವಿ-ನೆಕ್‌ನ ಸುತ್ತಲೂ ಫ್ರಿಲ್ಸ್ ಗಳಿರುವ ಟಾಪ್‌ಗ್ಳೂ ಲಭ್ಯ. ಇನ್ನು ಉದ್ದಕ್ಕೂ ಫ್ರಿಲ್ಸ್ ಗಳೇ ತುಂಬಿ ತುಳುಕುತ್ತಿರುವ ಗೌನ್‌ಗಳೂ ಈಗಿನ ಟಾಪ್‌ ಟ್ರೆಂಡ್‌. ಮೇಲಿಂದ ಕೆಳಗಿನವರೆಗೂ ಉದ್ದನೆಯ ರಫೆಲ್ಡ್ ಉಡುಗೆ ತೊಟ್ಟು, ಡಿಸೈನರ್‌ ಬೆಲ್ಟ್  ಒಂದನ್ನು ತೊಟ್ಟು ಹೋದರೆ ಆಕರ್ಷಣೀಯವಾಗಿರುತ್ತದೆ.    

ರಫೆಲ್ಡ್ ಬ್ಲೌಸ್‌  
ಈ ಬಗೆಯಲ್ಲಿ ಸ್ಲಿವ್‌ ಲೆಸ್‌, ಶಾರ್ಟ್‌ ಸ್ಲಿವ್‌ ಹಾಗೂ ಲಾಂಗ್‌ ಸ್ಲಿವ್‌ಗಳಿರುವ ಬ್ಲೌಸ್‌ಗಳು ಬರುತ್ತವೆ. ಬೆನ್ನಿನ ಭಾಗದಲ್ಲಿ ಫ್ರಿಲ್ಸ್ ಇರುವಂಥ ಬ್ಲೌಸ್‌ಗಳೂ ಸಿಗುತ್ತವೆ. ಪ್ಲೇನ್‌ ಸೀರೆಗಳಿಗೆ ರಫೆಲ್ಡ್ ಬ್ಲೌಸ್‌ ಚೆನ್ನಾಗಿ ಸೂಟ್‌ ಆಗುತ್ತದೆ. ಅಂದ ಹಾಗೆ, ಈ ರಫೆಲ್‌ ಟ್ರೆಂಡ್‌ ಕೇವಲ ಉಡುಪುಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗೀಗ ಶೂಗಳು, ಹ್ಯಾಂಡ್‌ ಬ್ಯಾಗ್‌ ಗಳು, ಆಭರಣಗಳಲ್ಲೂ ರಫೆಲ್‌ ಪ್ಯಾಟರ್ನ್ಗಳನ್ನು ಕಾಣಬಹುದು. 

– ಹಲೀಮತ್‌ ಸಾ ಅದಿಯಾ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.