ಬೆಚ್ಚನೆಯ ಮನೆಯಿರಲು…

ಏನೇನ್‌ ಮಾಡ್ಬೇಕು ಗೊತ್ತಾ?

Team Udayavani, Nov 20, 2019, 6:01 AM IST

ಬೇಸಿಗೆಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ಗೊತ್ತಾ? ಅದು ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟಿನ ಎತ್ತರದ ಕಟ್ಟಡದ ಗೋಡೆಗಳ ನಡುವೆ ವಾಸಿಸುವ ನಮಗೆ, ಹವಮಾನದ ವೈಪರೀತ್ಯವನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಬೇಸಿಗೆಗಾಲದಲ್ಲಿ ಫ್ಯಾನ್‌, ಎ.ಸಿಗಳ ಮೊರೆ ಹೋದರೆ, ಚಳಿಗಾಲದಲ್ಲಿ ರೂಮ್‌ಹೀಟರ್‌ಗಳನ್ನು ಬಳಸುತ್ತೇವೆ. ಹೀಟರ್‌ಗಳನ್ನು ಬಳಸದೆಯೂ ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರಿಸಬಹುದು. ಹೇಗೆ ಗೊತ್ತಾ?

ದಪ್ಪನೆಯ, ಭಾರದ ಪರದೆ ಅಡ್ಡಬಿಡಿ: ಚಳಿಗಾಲದಲ್ಲಿ ಮನೆಯ ಕಿಟಕಿಗಳಿಗೆ ದಪ್ಪನೆಯ, ಭಾರದ ಮತ್ತು ಗಾಢವರ್ಣದ ಬಟ್ಟೆಯ ಪರದೆಗಳನ್ನು ಹಾಕಿ. ಇದು ಸೂರ್ಯನ ಬೆಳಕನ್ನು ಹೀರಿ ಬೆಚ್ಚಗಿರುವುದು ಮಾತ್ರವಲ್ಲದೇ ಹೊರಗಿನ ತಣ್ಣನೆಯ ಗಾಳಿ ಮನೆಯೊಳಗೆ ಬಾರದಂತೆ ತಡೆಯುತ್ತದೆ.

ಗವಾಕ್ಷಿಗಳನ್ನು ತೆರೆದಿಡಿ: ಕಿಟಕಿಯ ಮೇಲ್ಭಾಗದ ಗವಾಕ್ಷಿಗಳನ್ನು ದಿನದ ಹೊತ್ತಿನಲ್ಲಿ ತೆರೆದಿಡುವ ಮೂಲಕ, ಸೂರ್ಯನ ಬೆಳಕು ಮನೆಯೊಳಗೆ ಬರುವಂತೆ ಮಾಡಿ. ಇದು ಮನೆಯೊಳಗಿನ ವಾತಾವರಣವನ್ನು ಬಿಸಿ ಮಾಡಿ, ರಾತ್ರಿಯಿಡೀ ಬೆಚ್ಚಗಿರಿಸಲು ಸಹಕರಿಸುತ್ತದೆ.

ಕಾರ್ಪೆಟ್‌ ಹಾಸಿ: ಮನೆಯ ನೆಲದ ಮೇಲೆ ದಪ್ಪನೆಯ ಮತ್ತು ಭಾರದ ಕಂಬಳಿಯನ್ನು ಹರಡುವ ಮೂಲಕವೂ ಮನೆಯನ್ನು ಬೆಚ್ಚಗಿಡಬಹುದು. ಇದು ನೆಲದ ಮಣ್ಣಿನಿಂದ ಮೇಲಕ್ಕೇರುವ ತಣ್ಣನೆಯ ತಾಪಮಾನವನ್ನು ಮನೆಯೊಳಗೆ ಬಾರದಂತೆ ತಡೆಯುತ್ತದೆ. ಆದರೆ ಈ ದುಬಾರಿ ಕಾರ್ಪೆಟ್‌ ಮೇಲೆ ಹೊರಗಿನ ಪಾದರಕ್ಷೆ ಅಥವಾ ಕೊಳಕು ಪಾದಗಳಿಂದ ತುಳಿಯದಂತೆ ಎಚ್ಚರವಹಿಸಬೇಕು.

ಮೇಣದ ಬತ್ತಿ ಹಚ್ಚಿ: ಸಂಜೆಯಾಗುತ್ತಿದ್ದಂತೆ, ಮನೆಯ ವಿವಿಧ ಕೋಣೆಗಳಲ್ಲಿ ಒಂದೆರಡು ಮೇಣದ ಬತ್ತಿಗಳನ್ನು ಹಚ್ಚಬೇಕು. ಅವುಗಳಲ್ಲಿ ಒಂದೆರಡು ಸುವಾಸನಾ ಭರಿತ ಮೇಣದ ಬತ್ತಿ ಇದ್ದರೆ ಉತ್ತಮ. ಮೇಣದ ಬತ್ತಿ ಅಲ್ಲದೆ ಎಣ್ಣೆಯ ದೀಪವನ್ನೂ ಉಪಯೋಗಿಸಬಹುದು. ಇದು ಮನೆಯನ್ನು ಬೆಚ್ಚಗಿಡುವಲ್ಲಿ ಸಹಕರಿಸುತ್ತದೆ.

ಸೂಕ್ತ ವಿದ್ಯುತ್‌ ದೀಪಗಳನ್ನು ಬೆಳಗಿಸಿ: ಟ್ಯೂಬ್‌ಲೈಟ್‌ ಮತ್ತು ಎಲ್‌ಇಡಿ ಬಲ್ಬ್ಗಳು ಶಾಖರಹಿತ ಅಥವಾ ಕಡಿಮೆ ಶಾಖ ನೀಡುವುದರಿಂದ ಅವುಗಳ ಬದಲಿಗೆ ಸಾಂಪ್ರದಾಯಿಕ ಟಂಗ್ಸ್‌ಟನ್‌ ಲಮೆಂಟ್‌ಬಲ್ಬ್ಗಳನ್ನು ಉಪಯೋಗಿಸಿ. ಇದು ಕೋಣೆಗೆ ಬೆಳಕಿನ ಜೊತೆಗೆ ಶಾಖವನ್ನೂ ನೀಡುತ್ತದೆ. ಈ ಬಲ್ಬ್ಗಳಿರುವಲ್ಲಿ ಸೀಲಿಂಗ್‌ ಫ್ಯಾನ್‌ ಅನ್ನು ನಿಧಾನಗತಿಯಲ್ಲಿ ಚಲಾಯಿಸುವ ಮೂಲಕ ಬೆಚ್ಚನೆಯ ಗಾಳಿ ಇಡೀ ಕೋಣೆಗೆ ಹರಡುವಂತೆ ಮಾಡಬಹುದು.

* ಸುಲಭಾ ಆರ್‌. ಭಟ್‌


ಈ ವಿಭಾಗದಿಂದ ಇನ್ನಷ್ಟು

  • ನಯನಾಗೆ 27 ವರ್ಷಕ್ಕೆ ಮದುವೆಯಾಯ್ತು. ಎಂಜಿನಿಯರಿಂಗ್‌ ಮುಗಿಸಿ ಮೂರು ವರ್ಷ ಸಣ್ಣ ಕಂಪನಿಯಲ್ಲಿ, ಕಡಿಮೆ ಸಂಬಳಕ್ಕೆ ದುಡಿದಿದ್ದ ಆಕೆಗೆ ಆಗಷ್ಟೇ ಹೆಸರಾಂತ ಎಂಎನ್‌ಸಿಯಲ್ಲಿ...

  • ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು...

  • ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು...

  • ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ...

  • ಬದುಕು ಕೆಲವೊಮ್ಮೆ ಸೈಕಲ್‌ ಹೊಡಿಸುತ್ತೆ, ನೂರಾರು ಕಷ್ಟಗಳನ್ನು ತಲೆಯ ಮೇಲೆ ಸುರಿಯುತ್ತೆ. ಕೆಲವರು ಕಷ್ಟಗಳಿಗೆ ಶರಣಾಗಿ ಬಿಡುತಾರೆ. ಇನ್ನೂ ಕೆಲವರು ಕಷ್ಟಗಳಿಗೇ...

ಹೊಸ ಸೇರ್ಪಡೆ